ಕೋವಿಡ್-19 ಮುಕ್ತದತ್ತ ಉಡುಪಿ ಜಿಲ್ಲೆ
ಇಬ್ಬರು ಸೋಂಕಿತರು ಚೇತರಿಕೆ; ಮೊದಲ ವರದಿ ನೆಗೆಟಿವ್
Team Udayavani, Apr 13, 2020, 12:09 PM IST
ಉಡುಪಿ: ಉಡುಪಿ ಜಿಲ್ಲೆ ಕೋವಿಡ್-19 ಸೋಂಕಿನಿಂದ ಮುಕ್ತವಾಗುವ ಎಲ್ಲ ಲಕ್ಷಣಗಳೂ ಗೋಚರಿಸುತ್ತಿವೆ. ಜಿಲ್ಲೆಯ ಪ್ರಥಮ ಸೋಂಕಿತ ವ್ಯಕ್ತಿ ಗುಣಮುಖರಾಗಿ ಶನಿವಾರ ಬಿಡುಗಡೆಗೊಂಡಿದ್ದು, ಇನ್ನಿಬ್ಬರು ಸಂಪೂರ್ಣ ಚೇತರಿಸಿಕೊಂಡಿದ್ದಾರೆ. ಇವರ ಗಂಟಲು ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಒಬ್ಬರ ವರದಿ ಕೈಸೇರಿದ್ದು, ನೆಗೆಟಿವ್ ಆಗಿದೆ. ಇನ್ನೊಬ್ಬರ ವರದಿ ಬರಲು ಬಾಕಿ ಇದೆ. ಇನ್ನೊಂದು ವರದಿ ಬಂದ ಬಳಿಕ ಎರಡನೆಯ ಮಾದರಿಯನ್ನು ಕಳುಹಿಸಬೇಕಾಗಿದೆ. ಇಬ್ಬರ ವರದಿ ಎರಡನೆಯ ಬಾರಿ ನೆಗೆಟಿವ್ ಬಂದ ಬಳಿಕ ಆಸ್ಪತ್ರೆಯಿಂದ ಬಿಡುಗಡೆಗೊಳಿಸುವ ನಿರೀಕ್ಷೆ ಇದೆ.
ಈ ಇಬ್ಬರು ಆಸ್ಪತ್ರೆಯಿಂದ ಬಿಡುಗಡೆಯಾದರೆ ಉಡುಪಿ ಜಿಲ್ಲೆಯಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಶೂನ್ಯಕ್ಕಿಳಿಯಲಿದೆ. ಲಾಕ್ ಡೌನ್ ಪರಿಣಾಮಕಾರಿ ಅನುಷ್ಠಾನದಿಂದ ಇಂಥ ಫಲಿತಾಂಶ ಸಾಧ್ಯವಾಗಿದೆ ಎನ್ನಬಹುದು. ರವಿವಾರ ಜಿಲ್ಲೆಯಲ್ಲಿ ಇಬ್ಬರು ಕೋವಿಡ್-19 ಶಂಕಿತರು ಆಸ್ಪತ್ರೆಯ ಐಸೊಲೇಶನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಪ್ರಸ್ತುತ 31 ಮಂದಿ ಐಸೊಲೇಶನ್ ವಾರ್ಡ್‌ನಲ್ಲಿದ್ದಾರೆ.
ಹಾಟ್‌ಸ್ಪಾಟ್ ಸಂಪರ್ಕ
ತೀವ್ರ ಉಸಿರಾಟದ ಸಮಸ್ಯೆ ಇರುವ ಇಬ್ಬರು, ಕೋವಿಡ್-19 ಸಂಪರ್ಕದ 29 ಮಂದಿ, ಜ್ವರ ಇರುವ ಮೂವರು, ತಬ್ಲಿ ಜಮಾಅತ್ ಹಾಟ್‌ಸ್ಪಾಟ್ ಸಂಪರ್ಕದ ಇಬ್ಬರು ಸಹಿತ ಒಟ್ಟು 36 ಜನರ ಗಂಟಲು ದ್ರವವನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ರವಿವಾರ ಒಟ್ಟು 33 ವರದಿ ಕೈಸೇರಿದ್ದು, ಎಲ್ಲವೂ ನೆಗೆಟಿವ್ ಆಗಿವೆ. ಇನ್ನೂ 44 ವರದಿಗಳು ಬರಬೇಕಾಗಿವೆ.
ರವಿವಾರ 10 ಮಂದಿ ನೋಂದಣಿ ಮಾಡಿ
ಕೊಂಡಿದ್ದಾರೆ. 105 ಮಂದಿ 28 ದಿನಗಳ ನಿಗಾವನ್ನು, 51 ಮಂದಿ 14 ದಿನಗಳ ನಿಗಾ ಮುಗಿಸಿದ್ದಾರೆ. ಪ್ರಸ್ತುತ 86 ಮಂದಿ ಗೃಹ ಹಾಗೂ 24 ಮಂದಿ ಆಸ್ಪತ್ರೆ ಕ್ವಾರಂಟೈನ್‌ಗೆ ದಾಖಲಾಗಿದ್ದು, 9 ಮಂದಿ ಬಿಡುಗಡೆಗೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
ಐತಿಹಾಸಿಕ ಮುಡಗೇರಿ ಗ್ರಾಮ ನಿರ್ಲಕ್ಷ್ಯ; ಸೋದೆ ಅರಸರ ಕೋಟೆ ಪಳೆಯುಳಿಕೆ
BGT Series: ಚೇತೇಶ್ವರ ಪೂಜಾರ ಅಂದು ತಿಂದ ಪೆಟ್ಟಿನ ನೋವು ಭಾರತೀಯರು ಮರೆಯುವುದುಂಟೇ?
Muddebihal: ವಕ್ಫ್ ಆಸ್ತಿ ವಿವಾದ: ಸಿಎಂಗೆ ಬುದ್ದಿಭ್ರಮಣೆ ಆಗಿದೆ… ನಡಹಳ್ಳಿ ವಾಗ್ದಾಳಿ
ಹಾವೇರಿ-ಸಿದ್ದರಾಮಯ್ಯ ಪಂಜರದ ಗಿಳಿ: ಕೇಂದ್ರ ಸಚಿವ ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.