ಮಗುವಿಗೆ ಒಂಟೆ ಹಾಲು ತಲುಪಿಸಿದ ರೈಲ್ವೇ

Team Udayavani, Apr 13, 2020, 12:18 PM IST

ಮಗುವಿಗೆ ಒಂಟೆ ಹಾಲು ತಲುಪಿಸಿದ ರೈಲ್ವೇ

ಸಾಂದರ್ಭಿಕ ಚಿತ್ರ

ಮುಂಬಯಿ: ಮೇಕೆ, ಹಸು ಮತ್ತು ಎಮ್ಮೆ ಹಾಲಿಗೆ ಅಲರ್ಜಿ ಹೊಂದಿರುವ ತನ್ನ ಮೂರೂವರೆ ವರ್ಷದ ಮಗುವಿಗೆ ಹಾಲು ಲಭ್ಯವಿಲ್ಲದಿರುವ ಬಗ್ಗೆ ಮಹಿಳೆಯೊಬ್ಬರು ಟ್ವೀಟ್‌ ಮಾಡಿದ ಅನಂತರ ರೈಲ್ವೆ ಮುಂಬಯಿಯ ಕುಟುಂಬವೊಂದಕ್ಕೆ 20 ಲೀಟರ್‌ ಒಂಟೆ ಹಾಲನ್ನು ಸಾಗಿಸಿ ಸಹರಿಸಿದೆ.
ಹಿರಿಯ ಐಪಿಎಸ್‌ ಅಧಿಕಾರಿ ಅರುಣ್‌ ಬೋತ್ರಾ ಈ ಬಗ್ಗೆ ಟ್ವೀಟ್‌ ಮಾಡಿದಾಗ ರೈಲ್ವೆಯ ಈ ಒಳ್ಳೆಯ ಕಾರ್ಯ ಶನಿವಾರ ಬೆಳಕಿಗೆ ಬಂದಿದೆ.

20 ಲೀ. ಒಂಟೆ ಹಾಲು ರಾತ್ರಿ ರೈಲಿನಲ್ಲಿ ಮುಂಬಯಿಗೆ ತಲುಪಿತು. ಕುಟುಂಬವು ಅದರ ಭಾಗವನ್ನು ನಗರದ ಇನ್ನೊಬ್ಬ ನಿರ್ಗತಿಕ ವ್ಯಕ್ತಿಯೊಂದಿಗೆ ಹಂಚಿಕೊಂಡಿದೆ. ಕಂಟೇನರ್‌ ಅನ್ನು ತೆಗೆದುಕೊಳ್ಳಲು ನಿಗದಿತ ಸಮಯವನ್ನು ನಿಲ್ಲಿಸಿದ ಸಿಪಿಟಿಎಂ, ವಾಯುವ್ಯ ರೈಲ್ವೆಯ ಎಸ್‌. ತರುಣ್‌ ಜೈನ್‌ ಅವರಿಗೆ ಧನ್ಯವಾದಗಳು ಎಂದು ಬೋತ್ರಾ ಟ್ವೀಟ್‌ ನಲ್ಲಿ ತಿಳಿಸಿದ್ದಾರೆ.

ಮಗುವಿನ ತಾಯಿ ರೇಣು ಕುಮಾರಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಟ್ವೀಟ್‌ ನಲ್ಲಿ ಟ್ಯಾಗ್‌ ಮಾಡಿದ್ದು, ಅದರಲ್ಲಿ ಅವರು ತಮ್ಮ ಮಗನ ದುಃಸ್ಥಿತಿಯ ಬಗ್ಗೆ ಹೇಳಿಕೊಂಡಿದ್ದರು. ಸರ್‌ ನನ್ನ 3.5 ವರ್ಷ ವಯಸ್ಸಿನ ಮಗು ಸ್ವಲೀನತೆ ಮತ್ತು ತೀವ್ರ ಆಹಾರ ಅಲರ್ಜಿಯಿಂದ ಬಳಲುತ್ತಿದೆ. ಮಗು ಒಂಟೆ ಹಾಲು ಮತ್ತು ಸೀಮಿತ ಪ್ರಮಾಣದ ದ್ವಿದಳ ಧಾನ್ಯಗಳ ಮೇಲೆ ಬದುಕುಳಿಯುತ್ತಿದೆ. ಲಾಕ್‌ಡೌನ್‌ ಪ್ರಾರಂಭವಾದಾಗ ದೀರ್ಘ‌ಕಾಲ ಉಳಿಯಲು ನನಗೆ ಸಾಕಷ್ಟು ಒಂಟೆ ಹಾಲು ಇರಲಿಲ್ಲ. ಕ್ಯಾಮೆರಿ ಹಾಲು ಅಥವಾ ಅದರ ಪುಡಿಯನ್ನು ರಾಜಸ್ಥಾನದಿಂದ ಪಡೆಯಲು ನನಗೆ ಸಹಾಯ ಮಾಡಿ ಎಂದು ಅವರು ಟ್ವೀಟ್‌ನಲ್ಲಿ ತಿಳಿಸಿದ್ದಾರೆ.

ರಾಜಸ್ಥಾನ ಮೂಲದ ಒಂಟೆ ಹಾಲಿನ ಉತ್ಪನ್ನಗಳ ಮೊದಲ ಬ್ರಾಂಡ್‌ ಅಡ್ವಿಕ್‌ ಫ‌ುಡ್ಸ್‌ ಅವರನ್ನು ಸಂಪರ್ಕಿಸಿದ ಬೋತ್ರಾ ಸೇರಿದಂತೆ ದೇಶಾದ್ಯಂತದ ಜನರು ಟ್ವಿಟರ್‌ನಲ್ಲಿ ಹಲವಾರು ಸಲಹೆಗಳನ್ನು ನೀಡಿದ್ದಾರೆ. ಕಂಪೆನಿಯು ತನ್ನ ಒಂಟೆ ಹಾಲಿನ ಪುಡಿಯನ್ನು ಮಗುವಿಗೆ ನೀಡಿತು. ಆದರೆ ಅದನ್ನು ಮುಂಬಯಿಗೆ ಕಳುಹಿಸುವುದು ಸಮಸ್ಯೆಯಾಗಿತ್ತು. ಬೋತ್ರಾ ಈ ಬಗ್ಗೆ ಟ್ವೀಟ್‌ ಮಾಡಿದಾಗ ಈ ವಿಷಯ ನಮ್ಮ ಗಮನಕ್ಕೆ ಬಂದಿತು. ನಾನು ಹಿರಿಯ ಡಿಸಿಎಂ, ಅಜ್ಮಿರ್‌, ಮಹೇಶ್‌ ಚಂದ್‌ ಜುವೆಲಿಯಾ ಅವರೊಂದಿಗೆ ಚರ್ಚಿಸಿದೆ. ಪಾರ್ಸೆಲ್‌ ಸರಕು ರೈಲಿನಲ್ಲಿ ಸಾಗಿಸುವ ಬಗ್ಗೆ ನಾವು ನಿರ್ಧರಿಸಿದ್ದೇವೆ. ಮುಂಬೈನ ಲುಧಿಯಾನ ಮತ್ತು ಬಾಂದ್ರಾ ನಡುವೆ ಓಡುತ್ತಿರುವ ರೈಲು ಅನ್ನು ರಾಜಸ್ಥಾನದ ಫಾಲಾ° ನಿಲ್ದಾಣದಲ್ಲಿ ನಿಲ್ಲಿಸಲಾಯಿತು. ಅಲ್ಲಿ ನಿಗದಿತ ನಿಲುಗಡೆ ಇಲ್ಲವಾದರೂ, ಪ್ಯಾಕೇಜ್‌ ಅನ್ನು ಫ‌ಲಾ°ದಿಂದ ತೆಗೆದುಕೊಂಡು ಮುಂಬಯಿಯ ಮಹಿಳೆಗೆ ತಲುಪಿಸಲಾಯಿತು ಎಂದು ಮುಖ್ಯ ಪ್ರಯಾಣಿಕರ ಸಂಚಾರ ನಾರ್ತ್‌ ವೆಸ್ಟರ್ನ್ ರೈಲ್ವೆ (ಎನ್‌ಡಬ್ಲ್ಯುಆì) ವ್ಯವಸ್ಥಾಪಕ ತರುಣ್‌ ಜೈನ್‌ ಪಿಟಿಐಗೆ ತಿಳಿಸಿದ್ದಾರೆ.

ಪ್ರಾಧಿಕಾರದಿಂದ ಸೂಕ್ತ ಅನುಮತಿ ಪಡೆದ ಅನಂತರ, ರೈಲನ್ನು ನಿಲ್ಲಿಸಲಾಯಿತು ಮತ್ತು ಒಂಟೆಯ ಹಾಲನ್ನು ಬಾಂದ್ರಾದಲ್ಲಿ ಮಹಿಳೆಗೆ ತಲುಪಿಸಲಾಯಿತು. ಭಾರತೀಯ ರೈಲ್ವೆಯಲ್ಲಿ ನಮಗೆ, ವಾಣಿಜ್ಯ ಲಾಭಗಳನ್ನು ನೋಡುವ ಸಮಯ ಇದಲ್ಲ. ನಮಗೆ ಸಾಧ್ಯವಾದಷ್ಟು ರೀತಿಯಲ್ಲಿ ಸಹಾಯ ಮಾಡಲು ಕೇಳಿಕೊಳ್ಳಲಾಗಿದೆ. ನಮ್ಮ (ಎನ್‌ಡಬ್ಲ್ಯುಆ) ರೈಲುಗಳು ದೇಶದ 18 ಜಿಲ್ಲೆಗಳ ಮೂಲಕ ಚಲಿಸುತ್ತವೆ ಮತ್ತು ಜನರಿಗೆ ಸಹಾಯ ಮಾಡಲು ನಾವು ಏನು ಬೇಕಾದರೂ ಮಾಡುತ್ತೇವೆ ಎಂದು ಜೈನ್‌ ಅವರು ಹೇಳಿದರು.

ಟಾಪ್ ನ್ಯೂಸ್

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?

Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Afghanistan Cricketer: ಏಕದಿನ ಕ್ರಿಕೆಟ್‌ ಗೆ ವಿದಾಯ ಘೋಷಿಸಿದ ಅಫ್ಘಾನ್‌ ಆಲ್‌ರೌಂಡರ್‌

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

Bhairathi Ranagal; ಶಿವಣ್ಣ ಡ್ರೀಮ್‌ ಪ್ರಾಜೆಕ್ಟ್ ಭೈರತಿ ಮೈಲುಗಲ್‌!

ಪಿಂಚಣಿದಾರರ ಡಿಜಿಟಲ್‌ ಲೈಫ್‌ ಸರ್ಟಿಫಿಕೆಟ್‌: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ

ಪಿಂಚಣಿದಾರರ ಡಿಜಿಟಲ್‌ ಲೈಫ್‌ ಸರ್ಟಿಫಿಕೆಟ್‌: ಅಂಚೆ ಕಚೇರಿಯಿಂದ ಮನೆ ಬಾಗಿಲಲ್ಲೇ ಸೇವೆ

Kambala: ಪರಂಪರೆ ಮರೆತಿಲ್ಲ… ಆಧುನಿಕತೆ ಬಿಟ್ಟಿಲ್ಲ

Kambala: ಪರಂಪರೆ ಮರೆತಿಲ್ಲ… ಆಧುನಿಕತೆ ಬಿಟ್ಟಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-

Desiswara: ನ್ಯೂಯಾರ್ಕ್‌ ಸರಕಾರದಿಂದ ಭರ್ಜರಿ ದೀಪಾವಳಿ ಆಚರಣೆ

11-1

Desiswara: ಜಾಗತಿಕ ಬೆಳಕಿನ ಹಬ್ಬ ದೀಪಾವಳಿ – ಬೆಳಕೆಂದರೆ ಬರಿಯ ಬೆಳಕಲ್ಲ…

10-

Desiswara: ಕನ್ನಡ ಉಳಿವಿಗೆ ಜವಾಬ್ದಾರಿಯುತ ನಡೆ ನಮ್ಮದಾಗಲಿ

9-desi

Kannada Alphanbets: “ಕ’ ಕಾರದಲ್ಲಿನ ವಿಶೇಷ:‌ ಕನ್ನಡ ಅಕ್ಷರಮಾಲೆಯಲ್ಲಿನ “ಕ’ ಕಾರ ವೈಭವ

8-

ನ.9: ವಿಶ್ವ ಕನ್ನಡ ಹಬ್ಬ: ಈ ಬಾರಿ ಸಿಂಗಾಪುರದಲ್ಲಿ ರಂಗೇರಲಿರುವ ಸಂಭ್ರಮ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

Bellary; ವಕ್ಫ್‌ ಹೆಸರಲ್ಲಿ ದೇವಸ್ಥಾನ, ಮಠಗಳನ್ನು ಕಬಳಿಸಲು ಸರ್ಕಾರ ಮುಂದಾಗಿದೆ: ಜೋಶಿ

11-kushtagi

Kushtagi: ದ್ಯಾಮವ್ವ ದೇವಿ ಗುಡಿಗೆ ಭಕ್ತರಂತೆ ಹೋಗಿ ದರ್ಶನ ಪಡೆದ ವಾನರ

Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?

Thirthahalli: ಹಣಗೆರೆಕಟ್ಟೆ ದೇವಸ್ಥಾನದ ಹಣ ಏರು ಪೇರು ಆಗಿದ್ದು ನಿಜವೇ?

10-kodagu

Promotion: ಕೊಡಗಿನ ಮಧು ಮೊಣ್ಣಪ್ಪ ಸುಬೇದಾರ್‌ ಮೇಜರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.