ಚಿಕ್ಕೋಡಿ-ನಿಪ್ಪಾಣಿ ಗಡಿಯಲ್ಲಿ ಭದ್ರತೆ
ಲಾಕ್‌ಡೌನ್ ಉಲ್ಲಂಘಿಸಿದ 210 ಬೈಕ್ ವಶ | ಗಡಿ ಭಾಗದ ರಸ್ತೆ ಮಾರ್ಗ ಸಂಪೂರ್ಣ ಬಂದ್
Team Udayavani, Apr 13, 2020, 1:41 PM IST
ಚಿಕ್ಕೋಡಿ: ಲಾಕ್‌ಡೌನ್ ಉಲ್ಲಂಘಿಸಿದವರರಿಂದ ವಶಪಡಿಸಿಕೊಂಡ ಬೈಕ್‌ಗಳು
ಚಿಕ್ಕೋಡಿ: ಶೈಕ್ಷಣಿಕ ಚಿಕ್ಕೋಡಿ ಜಿಲ್ಲೆ ವ್ಯಾಪ್ತಿಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಪರಿಣಾಮ ಚಿಕ್ಕೋಡಿ ಮತ್ತು ನಿಪ್ಪಾಣಿ ಗಡಿ ಭಾಗದಲ್ಲಿ ಭದ್ರತೆ ಹೆಚ್ಚಿಸಲಾಗಿದೆ.
ಅನಾವಶ್ಯಕ ಓಡಾಡುವ ಪ್ರಯಾಣಿಕರ ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡು ಜನರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ. ನಿಯೋಜಿತ ಚಿಕ್ಕೋಡಿ ಜಿಲ್ಲೆ ನೆರೆಯ ಮಹಾರಾಷ್ಟ್ರದ ಗಡಿ ಭಾಗಕ್ಕೆ ಹೊಂದಿಕೊಂಡಿದೆ. ಮಹಾರಾಷ್ಟ್ರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದೆ. ಇದರಿಂದ ಮಹಾರಾಷ್ಟ್ರದಿಂದ ಯಾರು ರಾಜ್ಯಕ್ಕೆ ಬರಬಾರದು ಮತ್ತು ಇಲ್ಲಿಂದ ಯಾರು ಮಹಾರಾಷ್ಟ್ರಕ್ಕೆ ತೆರಳದಂತೆ ರಾಷ್ಟ್ರೀಯ ಹೆದ್ದಾರಿ-4ರ ಕೊಗನ್ನೊಳ್ಳಿ ಟೋಲ್ ನಾಕಾ ಬಳಿ, ನಿಪ್ಪಾಣಿ ಹೊರವಲಯದ ದೇವಚೆಂದ ಕಾಲೇಜ ಬಳಿ, ರಾಧಾನಗರಿ ರಸ್ತೆ ಹಾಗೂ ಇಚಲಕರಂಜಿ ಚಿಕ್ಕೋಡಿ ರಸ್ತೆಯ ಬೋರಗಾಂವ ಬಳಿ ಸಂಪೂರ್ಣ ಬಂದ್ ಮಾಡಲಾಗಿದೆ.
ಇತ್ತ ಸಾಂಗ್ಲಿ-ಮಿರಜ್ ಕಡೆಯಿಂದ ರಾಜ್ಯಕ್ಕೆ ಸಂಪರ್ಕ ಕಲ್ಪಿಸುವ ಸಾಂಗ್ಲಿ-ಬಾಗಲಕೋಟೆ ರಸ್ತೆಯನ್ನು ಕಾಗವಾಡ ಚೆಕ್‌ಪೋಸ್ಟ್ ಬಳಿ ಬಂದ್ ಮಾಡಲಾಗಿದೆ. ದಿನಸಿ ಮಾರಾಟಗಾರರು ಬೆಳಗ್ಗೆ ಅಥವಾ ಸಂಜೆ ಒಂದು ಬಾರಿ ಜನರ ಮನೆ ಬಾಗಿಲಿಗೆ ಹೋಗಿ ಮಾರಾಟ ಮಾಡಿಕೊಂಡು ಮನೆಯಲ್ಲಿ ಇರಬೇಕೆಂದು ಪೊಲೀಸರು ಸೂಚನೆ ನೀಡುತ್ತಿದ್ದಾರೆ.
210 ಬೈಕ್ ವಶ: ಲಾಕ್‌ಡೌನ್ ಆದೇಶ ಉಲ್ಲಂಘಿಸಿ ಬೇಕಾಬಿಟ್ಟಿಯಾಗಿ ಬೈಕ್‌ಗಳ ಮೇಲೆ ಸಂಚರಿಸುತ್ತಿರುವ ಪುಂಡ ಪೋಕರಿಗಳ ಬೈಕ್ ಗಳನ್ನು ಚಿಕ್ಕೋಡಿ ಹಾಗೂ ನಿಪ್ಪಾಣಿ ಪೊಲೀಸರು ಜಪ್ತಿ ಮಾಡಿದ್ದಾರೆ. ಕೆಲ ಯುವಕರು ಅನಾವಶ್ಯಕ ಬೈಕ್‌ಗಳಲ್ಲಿ ತಿರುಗುತ್ತಿದ್ದಾರೆ. ಇದನ್ನು ತಡೆಯಲು ಚಿಕ್ಕೋಡಿ ಉಪವಿಭಾಗ ಮಟ್ಟದಲ್ಲಿ ಸುಮಾರು 210 ಬೈಕ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪ್ರತಿ ವಾಹನ ತಪಾಸಣೆ: ಚಿಕ್ಕೋಡಿ ಗಡಿ ಭಾಗದಲ್ಲಿ ಕೆಲ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದ್ದಾರೆ. ಪ್ರತಿ ಹಳ್ಳಿಯಿಂದ ನಗರ ಪ್ರದೇಶ ವ್ಯಾಪ್ತಿಗೆ ಬರುವ ವಾಹನಗಳನ್ನು ಪೊಲೀಸರು ತಪಾಸಣೆ ಮಾಡುತ್ತಿದ್ದಾರೆ. ಅದರಲ್ಲಿಯೂ ಚಿಕ್ಕೋಡಿ ಹಾಲಟ್ಟಿ ಬಳಿ, ಅಂಕಲಿ ಕೂಟ ಬಳಿ, ಯಕ್ಸಂಬಾ ತೆಗಡಿತೆಕ್ಕಿ ಬಳಿ, ಮಹಾವೀರ ನಗರ ಬಳಿ ಪೊಲೀಸರು ಹದ್ದಿಕಣ್ಣು ಇಟ್ಟಿದ್ದಾರೆ. ಪ್ರತಿ ವಾಹನ ತಪಾಸಣೆ ಮಾಡುತ್ತಿದ್ದಾರೆ.
ಪಾಸ್ ಇದ್ದವರಿಗೆ ಮಾತ್ರ ಪ್ರವೇಶ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಅನಾವಶ್ಯಕ ಜನರು ಓಡಾಡದಂತೆ ಬ್ರೆಕ್ ಹಾಕಲು ಪೊಲೀಸರು ಅವಶ್ಯಕ ಇರುವ ಜನರಿಗೆ ಪಾಸ್ ನೀಡಿದ್ದಾರೆ. ದಿನಸಿ ಮಾರಾಟ, ಕಿರಾಣಿ, ಹಾಲಿನ ಅಂಗಡಿ ಸೇರಿದಂತೆ ಅಗತ್ಯ ವಸ್ತುಗಳ ಪೂರೈಕೆ ಮಾಡುವ ಜನರಿಗೆ ಪೊಲೀಸ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಪಾಸ್ ನೀಡಿದ್ದಾರೆ. ಪಾಸ್ ಇದ್ದವರಿಗೆ ಮಾತ್ರ ಪೊಲೀಸರು ವಿನಾಯಿತಿ ನೀಡುತ್ತಿದ್ದಾರೆ. ಪಾಸ್ ಇಲ್ಲದೇ ನಗರ ಪ್ರವೇಶ ಮಾಡಿದರೇ ಅಂತವರ ವಾಹನಗಳನ್ನು ಜಪ್ತಿ ಮಾಡಲಾಗುತ್ತಿದೆ ಎಂದು ಚಿಕ್ಕೋಡಿ ಪಿಎಸ್‌ಐ ರಾಕೇಶ ಬಗಲಿ ತಿಳಿಸಿದರು.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಅನಾವಶ್ಯಕ ಓಡಾಡುವ ಜನರಿಗೆ ಬಿಸಿ ಮುಟ್ಟಿಸಲು ಚಿಕ್ಕೋಡಿ ಉಪವಿಭಾಗ ಮಟ್ಟದ ವ್ಯಾಪ್ತಿ ಸುಮಾರು 210 ಬೈಕ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಅಗತ್ಯ ವಸ್ತುಗಳ ಪೂರೈಕೆ ಮಾಡುವವರಿಗೆ ಪಾಸ್ ನೀಡಲಾಗಿದ್ದು, ಪಾಸ್ ಇಲ್ಲದೇ ಚಿಕ್ಕೋಡಿ ನಗರಕ್ಕೆ ಪ್ರವೇಶ ನಿರ್ಬಂಧಿಸಲಾಗಿದೆ. ಸರ್ಕಾರ ನಿಯಮ ಮೀರಿ ಯಾರು ಹೊರಗೆ ತಿರುಗಾಡಬಾರದು.
ಮನೋಜಕುಮಾರ ನಾಯಿಕ,
ಡಿವೈಎಸ್‌ಪಿ ಚಿಕ್ಕೋಡಿ
ಮಹಾದೇವ ಪೂಜೇರಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
ಬೆಳಗಾವಿ-ಐಫೋನ್‌ಗಾಗಿ ನಡೆಯಿತಾ ಯುವಕನ ಹತ್ಯೆ? ಪೊಲೀಸರಿಂದ ತೀವ್ರ ತನಿಖೆ
ಬೆಳಗಾವಿ: ಸಿಎಂ ಸಿದ್ದರಾಮಯ್ಯಗೆ ಬೆಳಗಾವಿ ಅಧಿವೇಶನವೇ ಕೊನೆ-ಬಿ.ವೈ ವಿಜಯೇಂದ್ರ
Belagavi: ಮರಕ್ಕೆ ಕ್ರೂಸರ್ ಢಿಕ್ಕಿ: ಸ್ಥಳದಲ್ಲೇ ಮೂವರ ಸಾವು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Andhra Pradesh: ಲಡ್ಡು ಪ್ರಸಾದ ವಿವಾದ: ತಿರುಪತಿಗೆ ಎಸ್‌ಐಟಿ ಭೇಟಿ
Belagavi: ದೂರು ಕೊಟ್ಟವರ ಮೊದಲು ಬಂಧಿಸಿ ಬಳಿಕ ನೈಜ ದರೋಡೆಕೋರರ ಸೆರೆ ಹಿಡಿದ ಪೊಲೀಸರು!
Udupi: ಆರೆಸ್ಸೆಸ್ ಹಿರಿಯ ಪ್ರಚಾರಕ್ ಭಯ್ಯಾಜಿ ಜೋಷಿ ಶ್ರೀಕೃಷ್ಣಮಠಕ್ಕೆ ಭೇಟಿ
Bagalakote: ಪ್ರೇಯಸಿ ಗೆಳತಿ ಹ*ತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.