ಔರಾದನಲ್ಲಿ ಕೋವಿಡ್ ಜಾಗೃತಿ ರ‍್ಯಾಲಿ-ಪಥ ಸಂಚಲನ
Team Udayavani, Apr 13, 2020, 4:02 PM IST
ಔರಾದ: ಪಟ್ಟಣದಲ್ಲಿ ಪೊಲೀಸರಿಂದ ಕೋವಿಡ್ ಜನಜಾಗೃತಿ ಪಥ ಸಂಚಲನ ನಡೆಯಿತು.
ಔರಾದ: ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕೋವಿಡ್ ಜನ ಜಾಗೃತಿ ರ‍್ಯಾಲಿ ಹಾಗೂ ಪೊಲೀಸರಿಂದ ಪಥ ಸಂಚಲನ ನಡೆಯಿತು. ಭಾಲ್ಕಿ ಡಿವೈಎಸ್‌ಪಿ ಡಾ| ದೇವರಾಜ, ಸಿಪಿಐ ಟಿ. ರಾಘವೇಂದ್ರ, ಪಿಎಸ್‌ಐ ಜಗದೀಶ ನಾಯ್ಕ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ಪಪಂ ಸಿಬ್ಬಂದಿಗಳು ಪಥ ಸಂಚಲನದಲ್ಲಿ ಭಾಗವಹಿಸಿದ್ದರು.
ಪಥ ಸಂಚಲನದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಹಾಗೂ ಸಂಘ ಸಂಸ್ಥೆಯ ಮುಖಂಡರು ಪುಷ್ಪ ವೃಷ್ಠಿ ಸಲ್ಲಿಸಿದರೆ, ಸುಮಂಗಲಿಯರು ಮಂಗಳಾರತಿ ಮಾಡಿ ಕೋವಿಡ್ ವಿರುದ್ಧ ಜಯ ಸಾಧಿಸಲೆಂದು ಸಿಂಧೂರವಿಟ್ಟರು. ಸಂಘ ಸಂಸ್ಥೆಯ ಮುಖಂಡರು ರಸ್ತೆ ಪಕ್ಕದಲ್ಲಿ ನಿಂತುಕೊಂಡು ಪುಷ್ಪಾರ್ಚನೆ ಮಾಡಿದರು. ಬಡಾವಣೆಗೆ ಬಂದ ಕೊರೊನಾ ಯೋಧರಿಗೆ ಗೃಹಿಣಿಯರು ಆರತಿ ಮಾಡಿ ಶುಭ ಕೋರಿದರು.
ರಸ್ತೆಯುದ್ದಕ್ಕೂ ಸಾರ್ವಜನಿಕರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜೊತೆಗೆ ಮನೆಯಲ್ಲಿಯೇ ಇದ್ದು ಮಹಾಮಾರಿ ವಿರುದ್ಧ
ಹೋರಾಡಬೇಕು. ರಸ್ತೆ ಸೇರಿದಂತೆ ಸಾರ್ವಜನಿಕ ಸ್ಥಳದಲ್ಲಿ ಉಗುಳಬಾರದು. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ಧ ರಿಸಿಕೊಳ್ಳಬೇಕೆಂದು ಮನವಿ ಮಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ| ಶರಣಯ್ನಾ ಸ್ವಾಮಿ, ಡಾ| ಮಹೇಶ ಬಿರಾದರ,ಪಪಂ ಮುಖ್ಯಾ ಧಿಕಾರಿ ಚಾಂದಪಟೇಲ್ ಇತರ ಅಧಿಕಾರಿಗಳು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mantralayam: ತುಂಗಭದ್ರಾ ನದಿಯಲ್ಲಿ ಮಂತ್ರಾಲಯ ಶ್ರೀಗಳಿಂದ ದಂಡೋದಕ ಸ್ನಾನ
Raichur: ಕುದುರೆಗೆ ಮೈ ತೊಳೆಸಲು ಹೋದ ಯುವಕ ಕೆರೆಪಾಲು
Raichur: ಹುಲಿಯಂತಿದ್ದ ಸಿಎಂ ಇಲಿಯಾಗಿದ್ದಾರೆ: ರಮೇಶ್ ಜಾರಕಿಹೊಳಿ
Raichuru: ಆರ್‌ಟಿಪಿಎಸ್ ಬೂದಿ ಹೊಂಡದ ನೀರು ಕೃಷ್ಣಾ ನದಿಗೆ; ಜನರಲ್ಲಿ ಆತಂಕ
Dhananjay: ಸಿಕ್ಕ ಸಿಕ್ಕಲೆಲ್ಲ ಕೇಳ್ತಿದ್ರಲ್ಲ; ಅದಕ್ಕೆ ಅನೌನ್ಸ್ ಮಾಡಿದೆ: ಡಾಲಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.