ಕೋವಿಡ್ 19 ಸೋಂಕು: ಒಬ್ಬ ವ್ಯಕ್ತಿಯಿಂದಾಗಿ 14 ಗ್ರಾಮಗಳು ಸಂಪೂರ್ಣ ಸೀಲ್ಡ್ ಆಗುವಂತಾಯ್ತು!
Team Udayavani, Apr 13, 2020, 5:51 PM IST
Representative Image
ಲಕ್ನೋ:ಕೋವಿಡ್ 19 ಮಹಾಮಾರಿ ಹರಡುವ ಭೀತಿಯ ನಡುವೆಯೇ ಸೋಂಕು ಕ್ಷಿಪ್ರವಾಗಿ ದೇಶಾದ್ಯಂತ ಪಸರಿಸತೊಡಗಿದೆ. ಕೋವಿಡ್ 19 ಸೋಂಕು ಪೀಡಿತ ವ್ಯಕ್ತಿಯೊಬ್ಬನಿಂದಾಗಿ 14 ಗ್ರಾಮಗಳನ್ನು ಸೀಲ್ಡ್ ಮಾಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಆಂಧ್ರಪ್ರದೇಶದ ವ್ಯಕ್ತಿಯೊಬ್ಬ ಉತ್ತರಪ್ರದೇಶದ ಭವಾನಿಪುರ್ ಖಾಲಿ ಪ್ರದೇಶದ ಮಸೀದಿಯಲ್ಲಿ ವಾಸವಾಗಿದ್ದು, ಈತನಿಗೆ ಕೋವಿಡ್ 19 ಸೋಂಕು ಇದ್ದಿರುವುದಾಗಿ ಶನಿವಾರ ಬಂದ ವರದಿಯಲ್ಲಿ ದೃಢಪಟ್ಟಿರುವುದಾಗಿ ಪಿಟಿಐ ನ್ಯೂಸ್ ಏಜೆನ್ಸಿ ವರದಿ ಮಾಡಿದೆ. ಈ ವ್ಯಕ್ತಿ ದಿಲ್ಲಿಯ ನಿಜಾಮುದ್ದೀನ್ ತಬ್ಲಿಘಿ ಜಮಾತ್ ನಲ್ಲಿ ಭಾಗವಹಿಸಿ ಬಂದಿರುವುದಾಗಿ ವರದಿ ಹೇಳಿದೆ.
ಈ ವ್ಯಕ್ತಿಗೆ ಕೋವಿಡ್ ಸೋಂಕಿರುವುದು ಪಾಸಿಟಿವ್ ವರದಿ ಬಂದ ನಂತರ ಜಿಲ್ಲಾಡಳಿತ ಹದಿನಾಲ್ಕು ಗ್ರಾಮಗಳನ್ನು ಸೀಲ್ಡ್ ಮಾಡಿದೆ. ಈ ವ್ಯಕ್ತಿ ಉಳಿದುಕೊಂಡಿದ್ದ ಗ್ರಾಮದಿಂದ ಮೂರು ಕಿಲೋ ಮೀಟರ್ ಸುತ್ತಮುತ್ತ ನಿರ್ಬಂಧ ವಿಧಿಸಿ 14 ಗ್ರಾಮಗಳನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ ಎಂದು ಪಿಟಿಐ ವರದಿ ವಿವರಿಸಿದೆ.
ಸೋಮವಾರ ಉತ್ತರಪ್ರದೇಶದ ಆಗ್ರಾದಲ್ಲಿ ಕೋವಿಡ್ 19 ಸೋಂಕು 30 ಜನರಿಗೆ ತಗುಲಿರುವುದು ಪತ್ತೆಯಾಗಿತ್ತು. ಜಿಲ್ಲೆಯಲ್ಲಿ 134 ಪ್ರಕರಣಗಳು ವರದಿಯಾಗಿದ್ದು, ಇದರಲ್ಲಿ 60 ಮಂದಿ ತಬ್ಲಿಘಿಗಳು ಎಂದು ಜಿಲ್ಲಾಧಿಕಾರಿ ಪ್ರಭು ಎನ್ ಸಿಂಗ್ ತಿಳಿಸಿದ್ದಾರೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ವೆಬ್ ಸೈಟ್ ಮಾಹಿತಿ ಪ್ರಕಾರ, ಉತ್ತರಪ್ರದೇಶದಲ್ಲಿ ಕೋವಿಡ್ 19 ಸೋಂಕು ಪೀಡಿತರ ಒಟ್ಟು ಸಂಖ್ಯೆ 483ಕ್ಕೆ ಏರಿದ್ದು, ಐದು ಮಂದಿ ಸಾವನ್ನಪ್ಪಿದ್ದು, 46 ಜನರು ಗುಣಮುಖರಾಗಿದ್ದಾರೆ ಎಂದು ವರದಿ ವಿವರಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.