ಕೋವಿಡ್-19ಗೆ ಮೂರನೇ ಬಲಿ: ಕಲಬುರಗಿ ಜನತೆಯಿಂದ ಸ್ವಯಂ ನಿರ್ಬಂಧ
Team Udayavani, Apr 13, 2020, 11:11 PM IST
ಕಲಬುರಗಿ: ಕೋವಿಡ್-19 ಸೋಂಕಿಗೆ ಕಲಬುರಗಿ ನಗರದಲ್ಲಿ ಮೂರನೇ ಬಲಿಯಾಗಿದ್ದರಿಂದ ಜನತೆಯಲ್ಲಿ ಆತಂಕವೂ ಹೆಚ್ಚಾಗಿದೆ. ಹಲವು ಬಡಾವಣೆಗಳ ಜನರು ಸ್ವಯಂ ನಿರ್ಬಂಧದ ಮೊರೆ ಹೋಗಿದ್ದಾರೆ.
ಸೋಮವಾರ ಸಂಜೆ ಕೋವಿಡ್-19 ಪೀಡಿತ 55 ವರ್ಷದ ಬಟ್ಟೆ ವ್ಯಾಪಾರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದು, ಈ ವಿಷಯ ತಿಳಿಯುತ್ತದಂತೆ ನಾಗರಿಕರು ತಮ್ಮ ಬಡಾವಣೆಗೆ ಬೇರೆ ಪ್ರದೇಶದ ಜನರು ಬಾರದಂತೆ ರಸ್ತೆ ಬಂದ್ ಮಾಡಿದ್ದಾರೆ.
ಬಡಾವಣೆ ಹಾಗೂ ತಾವು ವಾಸವಿದ್ದ ಗಲ್ಲಿಯ ಮುಖ್ಯ ರಸ್ತೆಗೆ ಅಡ್ಡಲಾಗಿ ಕಲ್ಲು, ಮಣ್ಣು, ತೆಂಗಿನ ಗರಿ ಹಾಕಿದ್ದಾರೆ. ಅಲ್ಲದೇ, ಹಗ್ಗಕ್ಕೆ ಕಟ್ಟಿ ಬಟ್ಟೆ ತುಣುಕುಗಳನ್ನು ನೇತು ಹಾಕಿ ರಸ್ತೆ ಸಂಚಾರಕ್ಕೆ ನಿರ್ಬಂಧ ಹೇರಿದ್ದಾರೆ.
ಜಿಲ್ಲೆಯಲ್ಲಿ ಇದುವರೆಗೆ ಒಟ್ಟು 413 ಜನರ ಗಂಟಲು ಮಾದರಿಯನ್ನು ಸಂಗ್ರಹಿಸಲಾಗಿದೆ. 311 ಜನರಿಗೆ ನೆಗೆಟಿವ್ ಎಂದು ವರದಿ ಬಂದಿದೆ. 13 ಜನರಿಗೆ ಕೋವಿಡ್-19 ಪಾಸಿಟಿವ್ ಇದ್ದು, ಇದರಲ್ಲಿ ಮೂವರು ಮೃತಪಟ್ಟಿದ್ದಾರೆ. ಇಬ್ಬರು ಗುಣಮುಖರಾಗಿದ್ದಾರೆ.
ಎರಡು ವರದಿಗಳು ತಾಂತ್ರಿಕ ಕಾರಣದಿಂದ ಬಂದಿಲ್ಲ. ಇನ್ನು, 87 ಮಾದರಿ ಪರೀಕ್ಷಾ ವರದಿಗಳು ಬಾಕಿ ಇವೆ. ಒಟ್ಟಾರೆ ಜಿಲ್ಲೆಯಲ್ಲಿ ಸೋಂಕಿತ ವ್ಯಕ್ತಿಗಳಿಗೆ ನೇರ ಸಂಪರ್ಕಕ್ಕೆ ಬಂದ 253 ಜನ ಹಾಗೂ ಎರಡನೇ ಸಂಪರ್ಕಕ್ಕೆ ಬಂದ 1028 ಜನರೆಂದು ಗುರುತಿಸಲಾಗಿದೆ.
ವಿದೇಶದಿಂದ ಜಿಲ್ಲೆಗೆ ಮರಳಿದ 488 ಜನರನ್ನು ಪತ್ತೆ ಹಚ್ಚಾಲಾಗಿದೆ. 745 ಜನ 14 ದಿನಗಳ ಹೋಂ ಕ್ವಾರಂಟೈನ್ ಹಾಗೂ 799 ಮಂದಿ 28 ದಿನಗಳ ಹೋಂ ಕ್ವಾರಂಟೈನ್ ನಲ್ಲಿದ್ದಾರೆ. 171 ಜನ 28 ದಿನಗಳ ಹೋಂ ಕ್ವಾರಂಟೈನ್ ಮುಗಿಸಿದ್ದು, ಸ್ವಯಂ ವರದಿ ಮಾಡಿಕೊಳ್ಳುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
School; ಮೊಟ್ಟೆ-ಬಾಳೆಹಣ್ಣು ವಿತರಣಾ ಜವಾಬ್ದಾರಿಯಿಂದ ಶಿಕ್ಷಕರ ಬಿಡುಗಡೆಗೊಳಿಸಿ
Karnataka: 18 ತಿಂಗಳಲ್ಲಿ 18 ಎಸ್‌ಐಟಿ ರಚಿಸಿದ ಕಾಂಗ್ರೆಸ್: ಛಲವಾದಿ
Report: ರಾಜ್ಯ ಗುತ್ತಿಗೆದಾರರ ಸಂಘದಿಂದ ಲೋಕಾಯುಕ್ತಕ್ಕೆ ದೂರು ಕೊಟ್ಟಿಲ್ಲ: ಜಗನ್ನಾಥ ಶೇಗಜಿ
Road Mishap: ಕಲಬುರ್ಗಿಯಲ್ಲಿ ರಸ್ತೆ ಅಪಘಾತ… ಮುದ್ದೇಬಿಹಾಳದ ಯುವಕ ಮೃತ್ಯು
Kalaburagi: ಘನತ್ಯಾಜ್ಯ ವಿಲೇವಾರಿ ಮಾಡದ ಪಾಲಿಕೆ ವಿರುದ್ದ ಲೋಕಾಯುಕ್ತ ಸ್ವಯಂ ಪ್ರಕರಣ ದಾಖಲು
MUST WATCH
ಹೊಸ ಸೇರ್ಪಡೆ
Bagalakote: ಪ್ರೇಯಸಿ ಗೆಳತಿ ಹತ್ಯೆಗೆ ಸಂಚು; ಕೊನೆಗೆ ಕೈ ಕಳೆದುಕೊಂಡಿದ್ದು ಪ್ರೇಮಿಯೇ!
Udupi: ಕೋಟಿ ಗೀತಾ ಲೇಖನ ಯಜ್ಞ: 500ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಸಿಬ್ಬಂದಿಯಿಂದ ದೀಕ್ಷೆ
Karnataka HC; ನಾಲ್ಕನೇ ಪ್ರಕರಣದಲ್ಲೂ ಪ್ರಜ್ವಲ್ ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಜಾ
Sagara: ಟ್ರಾಫಿಕ್ ಜಾಮ್‌ಗೆ ಕಾರಣವಾದ ವಾಹನ ವಶ; ಚಾಲಕನ ವಿರುದ್ಧ ಎಫ್ಐಆರ್ ದಾಖಲು
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.