ಕಿಟಕಿಯ ಮೂಲಕ ಜಗತ್ತನ್ನು ನೋಡಬೇಕು
Team Udayavani, Apr 14, 2020, 11:06 AM IST
“ಜಗತ್ತನ್ನು ನಾನು ಹೇಗೆ ನೋಡಬೇಕು ಗುರುಗಳೇ?’- ಹೀಗೊಂದು ಪ್ರಶ್ನೆ ಎಸೆದ ಶಿಷ್ಯ, ಗುರುವಿನ ಮುಖ ನೋಡಿದ. ಗುರುಗಳು, ಆತನನ್ನು ಕಿಟಕಿಯ ಬಳಿಗೆ ಕರೆದುಕೊಂಡು ಹೋದರು. “ಈ ಕಿಟಕಿಯ ಗಾಜಿನ ಮೂಲಕ ಹೊರಗೆ ನೋಡು’ ಎಂದರು. ಹೊರಗೆ ಒಬ್ಬ ಬಡವ, ಸೌದೆಯ ಹೊರೆ ಹೊತ್ತುಕೊಂಡು, ಬೆವರುತ್ತಾ, ಕಷ್ಟಪಟ್ಟು ನಡೆಯುತ್ತಿದ್ದ. “ನೋಡಿದೆ ತಾನೆ? ಈಗ ಈ ಕಡೆಗೆ ಬಾ…’ ಎಂದ ಗುರುಗಳು, ಶಿಷ್ಯನನ್ನು ಮತ್ತೂಂದು ರೂಮಿಗೆ ಕರೆದೊಯ್ದರು. ಅಲ್ಲೊಂದು ದೊಡ್ಡ ಕನ್ನಡಿಯಿತ್ತು. ಅದನ್ನು ತೋರಿಸುತ್ತಾ- “ಇಲ್ಲಿ ನೋಡು’ ಎಂದರು.
ಶಿಷ್ಯನಿಗೆ ಅಲ್ಲಿ ತನ್ನ ಪ್ರತಿಬಿಂಬವೇ ಕಾಣಿಸಿತು. ಗುರುಗಳು ಹೇಳಿದರು- “ಈಗ ನೀನು ನೋಡಿದೆಯಲ್ಲ? ಅವೆರಡೂ ಗಾಜಿನಿಂದ ಮಾಡಿದಂಥವೇ. ಆದರೆ, ಕಿಟಕಿಯ ಗಾಜು ಬಡವರ ಮನಸ್ಸಿನ ಪ್ರತಿನಿಧಿ. ಅದರ ಮೂಲಕ ನೋಡಿದರೆ ಬೇರೆಯವರು ಕಾಣಿಸುತ್ತಾರೆ. ರೂಮ್ನ ಒಳಗೇ ಇರುವ ಕನ್ನಡಿ, ಶ್ರೀಮಂತರ ಮನಸ್ಸಿನ ಪ್ರತಿನಿಧಿ. ಅದರಲ್ಲಿ ಇಣುಕಿದರೆ, ನೋಡುವವನೇ ಕಾಣಿಸ್ತಾನೆ. ನಾವು ಯಾವಾಗಲೂ, ಕಿಟಕಿ ಗಾಜಿನಿಂದ ನೋಡಬೇಕು …
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.