ಮಾಂಸದ ಕೋಳಿ ಧಾರಣೆ 200 ರೂ.ಗಳಿಗೆ ಏರಿಕೆ
Team Udayavani, Apr 14, 2020, 11:25 AM IST
ಸುಳ್ಯ: ಕೋವಿಡ್ 19 ಮತ್ತು ಹಕ್ಕಿ ಜ್ವರದ ಕಾರಣದಿಂದ ಕಳೆದ ತಿಂಗಳು ಧಾರಣೆ ಕುಸಿದು ಕೆ.ಜಿ.ಗೆ 20 ರೂ. ಇದ್ದ ಮಾಂಸದ ಕೋಳಿ (ಬ್ರಾಯ್ಲರ್) ಧಾರಣೆ 200, 220 ರೂ. ತನಕ ಏರಿಕೆ ಕಂಡಿದೆ.
ಮಾರ್ಚ್ ಮೊದಲ ವಾರದಲ್ಲಿ ಏಕಾಏಕಿ ಪಾತಾಳಕ್ಕೆ ಇಳಿದಿದ್ದ ಧಾರಣೆ ಎಪ್ರಿಲ್ ಮೊದಲ ವಾರದ ಬಳಿಕ ಗಗನಕ್ಕೇರಿದೆ. ಉಚಿತವಾಗಿ ಕೊಟ್ಟರೂ ಜನ ತಿರಸ್ಕರಿಸುತ್ತಿದ್ದ ಕೋಳಿಗೆ ಈಗ ಎಲ್ಲಿಲ್ಲದ ಬೇಡಿಕೆ ಕಂಡು ಬಂದಿದೆ.
ಪೂರೈಕೆ ಕೊರತೆ
ರೋಗ ಭೀತಿ ಹಿನ್ನೆಲೆಯಲ್ಲಿ ಕೋಳಿಗೆ ಬೇಡಿಕೆ ಕಡಿಮೆ ಆದ ಪರಿಣಾಮ ವ್ಯಾಪಾರಿಗಳಿಗೆ ನಷ್ಟವಾಗಿತ್ತು. ಸಾಕಣೆ ವೆಚ್ಚ ವೃದ್ಧಿಸಿದ ಕಾರಣ ಸಾಕಾಣಿಕೆ ಕೇಂದ್ರಗಳು ಮುಚ್ಚಿದ್ದವು. ಇದ್ದ ಕೋಳಿಗಳನ್ನು ಧಪನ ಮಾಡಿದ್ದಲ್ಲದೆ, ಕೆಲವೆಡೆ ಸಿಕ್ಕ ದರಕ್ಕೆ ಮಾರಾಟ ಮಾಡಿದ್ದರು. ಇದರಿಂದ ಕೋಳಿ ಉತ್ಪಾದನೆ ಸ್ಥಗಿತಗೊಂಡಿತು. ಹೊರ ರಾಜ್ಯಗಳಿಂದಲೂ ಪೂರೈಕೆ ನಿಂತಿತು.
ಲಾಕ್ಡೌನ್ ಮಧ್ಯೆ ಮಾಂಸದಂಗಡಿಗಳು ತೆರೆಯಲು ಅವಕಾಶ ಸಿಕ್ಕ ಕಾರಣ ಕೋಳಿಗೆ ಮತ್ತೆ ಬೇಡಿಕೆ ಬಂತು. ಆದರೆ ಕೋಳಿ ಪೂರೈಕೆ ಸಾಕಷ್ಟಿಲ್ಲದ ಕಾರಣ ಧಾರಣೆ ಏರಿಕೆಯಾಗುತ್ತಿದೆ. ಬೆಳ್ಳಾರೆ, ಸುಳ್ಯ ಮಾರುಕಟ್ಟೆಯಲ್ಲಿ 4 ದಿನಗಳ ಹಿಂದೆ ಒಂದು ಕೆ.ಜಿ. ಮಾಂಸಕ್ಕೆ 150 ರೂ. ಇತ್ತು. ಅದು ಈಗ 200ರಿಂದ 220 ರೂ.ಗೆ ಏರಿಕೆ ಕಂಡಿದೆ.
ಕೋಳಿ ಮರಿಗಳನ್ನು ಆಮದು ಮಾಡಿ, ಬೆಳೆಸಿ ಪೂರೈಸಲು ಕನಿಷ್ಠ 40 ದಿನ ಬೇಕು. ಇದಕ್ಕೂ ಲಾಕ್ಡೌನ್ ಮುಕ್ತಾಯ ಆಗಬೇಕು. ಇನ್ನೂ ಒಂದೂವರೆ ತಿಂಗಳು ಇದೇ ಧಾರಣೆ ಮುಂದುವರಿಯುವ ಸಾಧ್ಯತೆ ಇದೆ ಎನ್ನುತ್ತಾರೆ ವ್ಯಾಪಾರಿ ಹಂಝ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ
Kateel: ತಾರಾನಾಥ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು… ಅಕ್ಕನಿಂದಲೇ ಕೊಲೆಯಾದ ತಮ್ಮ
ಮಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ: ದಂಪತಿ ಸಹಿತ ಆರೋಪಿಗಳಿಗೆ ಮುಂದುವರಿದ ನ್ಯಾಯಾಂಗ ಬಂಧನ
Mangaluru: ಸಿಸಿಬಿ ಪೊಲೀಸರ ಕಾರ್ಯಾಚರಣೆ… ಅಪಾರ ಪ್ರಮಾಣದ ಮಾದಕ ವಸ್ತು ಸಹಿತ ಓರ್ವನ ಸೆರೆ
Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.