ಕೋವಿಡ್-19 ಮೇಷ್ಟ್ರ ಆನ್‌ಲೈನ್‌ ಪಾಠ

ಎಲ್ಲರೊಳಗೊಂದಾಗು ಮಂಕುತಿಮ್ಮ

Team Udayavani, Apr 14, 2020, 12:17 PM IST

ಕೋವಿಡ್-19 ಮೇಷ್ಟ್ರ ಆನ್‌ಲೈನ್‌ ಪಾಠ

ಕೋವಿಡ್-19 ಕಾರಣಕ್ಕೆ, ಪರೀಕ್ಷೆಗಳು ರದ್ದಾಗಿವೆ. ಶಾಲೆ- ಕಾಲೇಜುಗಳು ಬಂದ್‌ ಆಗಿವೆ. ಈ ಮಧ್ಯೆಯೇ, ಕೆಲವು ಕಾಲೇಜುಗಳಲ್ಲಿ ಆನ್‌ಲೈನ್‌ ಮೂಲಕ ಪಾಠ ಹೇಳುವ ಕೆಲಸವೂ ಶುರುವಾಗಿದೆ. ಇಷ್ಟು ದಿನದವರೆಗೂ, ಮೊಬೈಲ್‌ ಇರುವುದು ಕೇವಲ ಕಾಲ/ ಚಾಟ್‌ ಮಾಡಲಿಕ್ಕೆ ಎಂದು ನಂಬಿದ್ದವರು, ಈಗ ಆ ಮೊಬೈಲ್‌ ಮೂಲಕವೇ ಪಾಠ ಕಲಿಯಬಹುದಾದ ಸಾಧ್ಯತೆ ಕಂಡು ಬೆರಗಾಗಿದ್ದಾರೆ…

ಪಾಠಗಳೆಲ್ಲ ಆದ ಮೇಲೆ ಪರೀಕ್ಷೆಗಳು ನಡೆಯುವುದು ಸಾಮಾನ್ಯ. ಆದರೆ, ಸದ್ಯದ ಮಟ್ಟಿಗೆ, ಪರೀಕ್ಷೆಯ ಬಳಿಕ ಜನರು ಪಾಠ ಕಲಿಯುತ್ತಿದ್ದಾರೆ ಎಂಬುದೇ ನಿಜ.
ಕೋವಿಡ್-19ವೆಂಬ ಮಹಾಮೇಷ್ಟ್ರು, ಜಗತ್ತಿಗೆ ಕಲಿಸುತ್ತಿರುವ ಪಾಠ ಅಂತಿಂಥದ್ದಲ್ಲ. ಉಳಿದೆಲ್ಲ ವಿಷಯಗಳು ಒತ್ತಟ್ಟಿಗಿರಲಿ, ಸದಾ ವಿದ್ಯಾರ್ಥಿಗಳಿಗೆ ಪಾಠ ಹೇಳುವ ಮೇಷ್ಟ್ರುಗಳು, ತರಗತಿಗಳಲ್ಲೇ ಕುಳಿತು ಪಾಠ ಕೇಳುವ ವಿದ್ಯಾರ್ಥಿಗಳು- ಎಲ್ಲರೂ, ನಾಲ್ಕು ಗೋಡೆಗಳಿಂದಾಚೆಯೂ ಪಾಠ ಹೇಳುವ ಮತ್ತು ಕೇಳುವ ಹೊಸ ದಾರಿಗಳೇನಿವೆ ಎಂಬ ಹುಡುಕಾಟದಲ್ಲಿ ತೊಡಗಿದ್ದಾರೆ.

ಪರೀಕ್ಷೆಯ ಬಳಿಕ ಪಾಠ ಎಂದರೆ ಇದೇ ಅಲ್ಲವೇ?
ನಿನ್ನೆ ಮೊನ್ನೆಯವರೆಗೂ “ವರ್ಚುವಲ್‌ ಕ್ಲಾಸ್‌ ರೂಮ್‌’ಅನ್ನು, ಯಾವುದೋ ವಿದೇಶದ ಪರಿಕಲ್ಪನೆ ಎಂಬಂತೆ ನೋಡಲಾಗುತ್ತಿತ್ತು. ಹೆಚ್ಚೆಂದರೆ, ಅದೆಲ್ಲ ನಮ್ಮ ಮಹಾನಗರಗಳ ಹೈಟೆಕ್‌ ಶಿಕ್ಷಣ ಸಂಸ್ಥೆಗಳಲ್ಲಿ ದೊರೆಯಬಹುದಾದ ಸೌಕರ್ಯ ಎಂದಷ್ಟೇ ಗ್ರಹಿಸಲಾಗುತ್ತಿತ್ತು. ಕೊರೊನಾ, ಆ ಕಲ್ಪನೆಯನ್ನು ಅನಿವಾರ್ಯವಾಗಿ ನಮ್ಮ ಮನೆಬಾಗಿಲಿಗೇ ತಂದು ನಿಲ್ಲಿಸಿದೆ. ಪಟ್ಟಣಗಳಿಂದ ತೊಡಗಿ ಹಳ್ಳಿಗಳವರೆಗಿನ, ಶಾಲಾ- ಕಾಲೇಜು ಹುಡುಗರೆಲ್ಲ ತಮಗರಿವಿಲ್ಲದಂತೆಯೇ, ವರ್ಚುವಲ್‌ ಕ್ಲಾಸ್‌ ರೂಮ್‌ಗಳ ವಿದ್ಯಾರ್ಥಿಗಳಾಗಿ ಬದಲಾಗುತ್ತಿದ್ದಾರೆ.

ಮೊಬೈಲ್‌ ಮೂಲಕವೇ ಪಾಠ!
ವಿದ್ಯಾರ್ಥಿಗಳೇ ಏಕೆ, ಬಹುಪಾಲು ಅಧ್ಯಾಪಕರೂ ಇಂತಹದೊಂದು ಸನ್ನಿವೇಶಕ್ಕೆ ಹೊಸಬರೇ. ಕಂಪ್ಯೂಟರ್‌, ಪ್ರೊಜೆಕ್ಟರ್‌ಗಳನ್ನೇ ಪರಕೀಯ ಸಲಕರಣೆಗಳೆಂದು ಭಾವಿಸಿ, ಪಠ್ಯ ಪುಸ್ತಕ, ಕರಿಹಲಗೆಗಳಿಗಷ್ಟೇ ತಮ್ಮನ್ನು ಸೀಮಿತಗೊಳಿಸಿಕೊಂಡಿದ್ದ ಅಧ್ಯಾಪಕರಿಗೂ, ಇದೀಗ ಆನ್‌ಲೈನ್‌ ತರಗತಿಗಳ ಅನಿವಾರ್ಯತೆ ಅರ್ಥವಾಗಿದೆ. ಈವರೆಗೂ, ತರಗತಿಯ ಕೊಠಡಿಗಳಷ್ಟೇ ಪಾಠದ ವೇದಿಕೆಗಳೆಂದು ಭಾವಿಸಿದ್ದ ಅಧ್ಯಾಪಕರೂ, ಯೂಟ್ಯೂಬ್
ವೀಡಿಯೋ ಕಾನ್ಫರೆನ್ಸ್, ಜೂಮ್‌ ಎಂದೆಲ್ಲಾ ಹೇಳುತ್ತಾ, ಉತ್ಸಾಹದಿಂದ ಎದ್ದುಕುಳಿತಿದ್ದಾರೆ.

ಮೊಬೈಲ್‌ ಎಂಬುದು ಚಾಟಿಂಗ್‌ ಮಾಡಲು, ವಿಡಿಯೋ ನೋಡಲು ಇರುವ ಟೈಂಪಾಸ್‌ ಸಾಧನ ಅಂದು ಕೊಂಡಿದ್ದ ಹುಡುಗರೂ, ಅದರಲ್ಲೇ ಪಾಠ ಕೇಳಬಹುದು ಅಂತ ಅರ್ಥಮಾಡಿ ಕೊಂಡಿದ್ದಾರೆ. ಕೊರೊನಾ, ಕೇವಲ ಎರಡೇ ತಿಂಗಳಲ್ಲಿ, ಇಷ್ಟೆಲ್ಲಾ ಅರ್ಥವನ್ನು ವಿವರವಾಗಿ ತಿಳಿಸಿಕೊಟ್ಟಿದೆ.

ಯಾರೂ ಊಹಿಸಿರಲಿಲ್ಲ ಇನ್ನು, ಐದೋ ಹತ್ತೋ ವರ್ಷಕ್ಕೆ ಅನಿವಾರ್ಯವಾಗಬಹುದಾಗಿದ್ದ ವರ್ಚುವಲ್‌ ಕ್ಲಾಸ್‌ ರೂಮ್‌ಗಳನ್ನು, ಕೋವಿಡ್-19 ಈಗಲೇ ಅನಿವಾರ್ಯವಾಗಿಸಿದೆ. ಕಾಲೇಜುಗಳು ಮತ್ತು ವಿಶ್ವವಿದ್ಯಾನಿಲಯಗಳು, ವರ್ಷದ ಎರಡನೇ ಭಾಗವನ್ನು ಪೂರೈಸುವ ಮೊದಲೇ, ಅನಿರೀಕ್ಷಿತವಾಗಿ ಲಾಕ್‌ಡೌನ್‌
ರಜೆಯನ್ನು ಎದುರಿಸಬೇಕಾಗಿ ಬಂದಿದೆ. ಪರಿಣಾಮ, ಪಾಠಪ್ರವಚನಗಳೆಲ್ಲ ಅಲ್ಲಲ್ಲೇ ನಿಂತುಬಿಟ್ಟಿವೆ. ಹಾಗಂತ, ಅನಿಶ್ಚಿತತೆಯಲ್ಲೇ ವಾರ, ತಿಂಗಳು ಕಳೆಯು ವುದು ಕಷ್ಟ. ಈಗ ಏನಾದರೂ ಮಾಡಲೇಬೇಕು ಎಂಬ ಪರಿಸ್ಥಿತಿ ಬಂದಿದೆ. ಇಂತಹದೊಂದು ಸಂದರ್ಭ, ನಮ್ಮ ಜೀವನದಲ್ಲಿ ಬಂದೀತು ಎಂದು ಯಾರೂ ಊಹಿಸಿರಲಿಲ್ಲ. ಹಾಗಾಗಿ, ಶಿಕ್ಷಣ ವಲಯವೂ ಅದನ್ನು ಹೇಗೆ ಎದುರಿಸುವುದೆಂದು ತಿಳಿಯದೆ, ಒಂದಷ್ಟು ದಿನ ತಬ್ಬಿಬ್ಟಾಗಿದ್ದು ನಿಜವೇ. ಆದರೆ, ಕೆಲವೇ
ದಿನಗಳಲ್ಲಿ ಶಿಕ್ಷಣ ಸಂಸ್ಥೆಗಳು, ಅಧ್ಯಾಪಕರು, ಮನೆಗಳಿಗೇ ಪಾಠ, ನೋಟ್ಸು ತಲುಪಿಸುತ್ತಿರುವುದನ್ನು ನೋಡಿ ವಿದ್ಯಾರ್ಥಿಗಳು ಸೋಜಿಗಪಟ್ಟಿದ್ದಾರೆ. ಕ್ಲಾಸ್‌ ರೂಮ್‌ನಲ್ಲಾದರೆ ಒಮ್ಮೆ ಕೇಳಿಸಿಕೊಂಡ ಪಾಠ ಅಷ್ಟಕ್ಕೇ ಸೀಮಿತ.

ಹೆಚ್ಚೆಂದರೆ ನೋಟ್ಸ್ ಮಾಡಿಕೊಳ್ಳಬಹುದು. ಆದರೆ ಈಗ, ಅಧ್ಯಾಪಕರು ತಂತ್ರಜ್ಞಾನಗಳನ್ನು ಬಳಸಿಕೊಂಡು ಮೊಬೈಲುಗಳಿಗೇ ಕಳಿಸತೊಡಗಿರುವ ಆಡಿಯೋ- ವಿಡಿಯೋಗಳನ್ನು ಮತ್ತೆಮತ್ತೆ ಕೇಳಬಹುದು. ಅನುಕೂಲದ ಸಮಯದಲ್ಲಿ, ಅನುಕೂಲದ ಸ್ಥಳದಲ್ಲಿ ಕುಳಿತು ನೋಡಬಹುದು. ಛೇ! ಇದೆಲ್ಲ ಸಾಧ್ಯವಿತ್ತಲ್ಲವೇ ಎಂದು ವಿದ್ಯಾರ್ಥಿಗಳೂ ಅಧ್ಯಾಪಕರೂ ಮುಖಮುಖ ನೋಡಿಕೊಂಡು ಪ್ರಶ್ನಿಸಿಕೊಳ್ಳುತ್ತಿದ್ದಾರೆ. ಜೂಮ್‌ ಆಪ್‌ನಲ್ಲಿ ಮೀಟಿಂಗ್‌ ಮಾಡಿಕೊಂಡು, ತಾವು ಇದ್ದಲ್ಲಿಂದಲೇ
ಪಾಠಪ್ರವಚನಗಳಲ್ಲಿ ಭಾಗವಹಿಸತೊಡಗಿದ್ದಾರೆ.

ಮಿತಿಗಳೂ ಇವೆ…
ಇಲ್ಲಿ ಇತಿಮಿತಿಗಳು, ಕಷ್ಟಗಳು ಇಲ್ಲದಿಲ್ಲ. ಹಳ್ಳಿಗಳಿಂದ, ಆರ್ಥಿಕವಾಗಿ ಹಿಂದುಳಿದ ಮನೆಗಳಿಂದ ಬರುವ ಸಾವಿರಾರು ವಿದ್ಯಾರ್ಥಿಗಳಿದ್ದಾರೆ. ಎಲ್ಲರಲ್ಲೂ ಆಂಡ್ರಾಯ್ಡ್ ಮೊಬೈಲುಗಳಿಲ್ಲ. ಇರುವವರಿಗೆ ನೆಟ್‌ ವರ್ಕ್‌ ಸಮಸ್ಯೆ ಇದೆ. ಹೀಗಾಗಿ, ಕೇವಲ ಆನ್‌ಲೈನ್‌ ತರಗತಿಗಳಿಂದಲೇ ಸಿಲೆಬಸ್‌
ಪೂರೈಸಿ ಪರೀಕ್ಷೆಗಳನ್ನು ನಡೆಸುವುದು ಸಾಧ್ಯವಿಲ್ಲ. ಡಿಜಿಟಲ್‌ ಡಿವೈಡ್‌ನ‌ ಆಚೆ ಇರುವ ಎಷ್ಟೋ ವಿದ್ಯಾರ್ಥಿಗಳಿಗೆ ಪರಿಹಾರ ಪಾಠಗಳನ್ನು ನಡೆಸುವುದೂ ಅನಿವಾರ್ಯ. ಹಾಗೆಂದು, ಈ ಪರಿಸ್ಥಿತಿಯೇನೂ ಶಾಶ್ವತವಲ್ಲ. ಇಂತಹ ಸನ್ನಿವೇಶಗಳು ಎದುರಾದಾಗ ಏನು ಮಾಡಬೇಕು ಎಂದು ಯೋಚಿಸುವಂತೆ ಕೊರೊನಾ ಮಾಡಿದೆ. ಜೀವನ ಒಂದು ನಿರಂತರ ಕಲಿಕೆ ಎಂಬುದು ನಿಜವಾಗಿದ್ದರೆ, ಇದು ಅದರ ಒಂದು ಭಾಗವಷ್ಟೇ!

ಆನ್‌ಲೈನ್‌ ಕಲಿಕೆಗೆ ಹತ್ತಾರು ದಾರಿ
ಅಧ್ಯಾಪಕರು ಮತ್ತು ವಿದ್ಯಾರ್ಥಿಗಳು ಪರಸ್ಪರ ಸಂಪರ್ಕದಲ್ಲಿರಲು, ತಂತ್ರಜ್ಞಾನ ಹತ್ತುಹಲವು ಹಾದಿಗಳನ್ನು ತೆರೆದಿಟ್ಟಿದೆ.
ಜೂಮ್‌ ಆ್ಯಪ್‌: ಅಧ್ಯಾಪಕ ಒಮ್ಮೆಗೆ 100 ಮಂದಿಯೊಂದಿಗೆ ಏಕಕಾಲಕ್ಕೆ ಸಂಪರ್ಕ ಸಾಧಿಸಬಹುದು. ತಲಾ 40 ನಿಮಿಷಗಳ ಪಾಠ ಮಾಡಬಹುದು. ವಿದ್ಯಾರ್ಥಿಗಳು, ತಾವಿರುವಲ್ಲಿಂದಲೇ ಪಾಠ ಕೇಳಬಹುದು, ಮೇಷ್ಟ್ರೊಂದಿಗೆ ಸಂವಾದ ಕೂಡ ನಡೆಸಬಹುದು.

ಗೂಗಲ್‌ ಹ್ಯಾಂಗೌಟ್: ವಿಡಿಯೋ ಕಾನ್ಫರೆನ್ಸಿಗೆ ತುಂಬ ಅನುಕೂಲವಾಗಿರುವ ಜನಪ್ರಿಯ ಆ್ಯಪ್‌ ಇದು. ಪಾಠದ ನೇರಪ್ರಸಾರ ಅಷ್ಟೇ ಅಲ್ಲದೆ ಟೈಪ್‌ ಮಾಡುವ ಮೂಲಕವೂ ಪ್ರಶ್ನೋತ್ತರ ಮಾಡಬಹುದು.

ಯೂಟ್ಯೂಬ್: ವಿಡಿಯೋ ರೆಕಾರ್ಡ್‌ ಮಾಡಿಕೊಂಡಿರುವ ಪಾಠಗಳನ್ನು ಯೂಟ್ಯೂಬಿಗೆ ಹಾಕುವ ಮೂಲಕ ವಿದ್ಯಾರ್ಥಿಗಳಿಗೆ ತಲುಪಿಸಬಹುದು.ವಿಡಿಯೋಗಳನ್ನು ಮತ್ತೆ ಮತ್ತೆ ನೋಡುವ ಅನುಕೂಲವೂ ಇದೆ.

ವಾಟ್ಸ್ಆ್ಯಪ್‌/ ಇಮೇಲ್: ಅಧ್ಯಾಪಕರು 20- 30 ನಿಮಿಷಗಳ ಪಾಠಗಳನ್ನು ಆಡಿಯೋ/ ವಿಡಿಯೊ ರೆಕಾರ್ಡ್‌ ಮಾಡಿ ವಿದ್ಯಾರ್ಥಿಗಳಿಗೆ ತಲುಪಿಸಬಹುದು. ಮೊಬೈಲ್‌ ಬಳಸಿಕೊಂಡೇ ಇದನ್ನೆಲ್ಲ ಮಾಡಬಹುದು. ಪವರ್‌ ಪಾಯಿಂಟ್‌ ಪ್ರಸೆಂಟೇಶನ್‌, ನೋಟ್ಸ್ ಇತ್ಯಾದಿ ಅಧ್ಯಯನ ಸಾಮಗ್ರಿಗಳನ್ನು ಹಂಚಿಕೊಳ್ಳಬಹುದು. ಆಡಿಯೋ/ ವಿಡಿಯೋ ಫೈಲ್‌ಗ‌ಳು ದೊಡ್ಡದಿದ್ದಾಗ ಗೂಗಲ್‌ ಡ್ರೈವ್‌ನಲ್ಲಿ ಸೇವ್‌ ಮಾಡಿ ಲಿಂಕ್‌ ಹಂಚಿಕೊಳ್ಳಬಹುದು. ಕ್ಲೌಡ್‌ ಶೇರಿಂಗ್‌ ಕೂಡ
ಮಾಡಬಹುದು.

ಶಾಲ್ಮಲಾ

ಟಾಪ್ ನ್ಯೂಸ್

BBK11: ದಯವಿಟ್ಟು ಬಿಗ್‌ ಬಾಸ್‌ ಮನೆಯಿಂದ ಹೋಗು.. ಚೈತ್ರಾಗೆ ಕೈಮುಗಿದು ಕೇಳಿಕೊಂಡ ರಜತ್

BBK11: ದಯವಿಟ್ಟು ಬಿಗ್‌ ಬಾಸ್‌ ಮನೆಯಿಂದ ಹೋಗು.. ಚೈತ್ರಾಗೆ ಕೈಮುಗಿದು ಕೇಳಿಕೊಂಡ ರಜತ್

Belagavi: Kannadigas’ tax money wasted to please fake Gandhis: Jagadish Shettar

Belagavi: ನಕಲಿ ಗಾಂಧಿಗಳನ್ನು ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣ ಪೋಲು: ಜಗದೀಶ್ ಶೆಟ್ಟರ್

Sonu Sood: ನನಗೆ ಸಿಎಂ, ಡಿಸಿಎಂ ಆಗುವ ಆಫರ್ ಬಂದಿತ್ತು ಆದರೆ.. ನಟ ಸೋನು ಸೂದ್ ಹೇಳಿದ್ದೇನು?

Sonu Sood: ನನಗೆ ಸಿಎಂ, ಡಿಸಿಎಂ ಹುದ್ದೆಗೆ ಆಫರ್ ಬಂದಿತ್ತು ಆದರೆ, ಸೋನು ಸೂದ್ ಹೇಳಿದ್ದೇನು?

ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್‌ ಸ್ಟೋರಿ

PV Sindhu: ವಿಮಾನದಲ್ಲಿ ಶುರುವಾಯ್ತು ಸಿಂಧು-ದತ್ತಾ ಲವ್‌ ಸ್ಟೋರಿ

Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್‌ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ

Shimoga: ಕೊಡಚಾದ್ರಿ ಸಮೀಪ ಟಿಟಿ- ಜೀಪ್‌ ಮುಖಾಮುಖಿ ಡಿಕ್ಕಿ: ಎಂಟು ಜನರಿಗೆ ಗಾಯ

5-kundapura

Kundapura: ಅನೂಪ್ ಪೂಜಾರಿ ಪಾರ್ಥೀವ ಶರೀರ ಹುಟ್ಟೂರಿಗೆ; ತಾಯಿ, ಪತ್ನಿಯಿಂದ ಅಂತಿಮ ದರ್ಶನ

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ | Video


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

BBK11: ದಯವಿಟ್ಟು ಬಿಗ್‌ ಬಾಸ್‌ ಮನೆಯಿಂದ ಹೋಗು.. ಚೈತ್ರಾಗೆ ಕೈಮುಗಿದು ಕೇಳಿಕೊಂಡ ರಜತ್

BBK11: ದಯವಿಟ್ಟು ಬಿಗ್‌ ಬಾಸ್‌ ಮನೆಯಿಂದ ಹೋಗು.. ಚೈತ್ರಾಗೆ ಕೈಮುಗಿದು ಕೇಳಿಕೊಂಡ ರಜತ್

Belagavi: Kannadigas’ tax money wasted to please fake Gandhis: Jagadish Shettar

Belagavi: ನಕಲಿ ಗಾಂಧಿಗಳನ್ನು ಮೆಚ್ಚಿಸಲು ಕನ್ನಡಿಗರ ತೆರಿಗೆ ಹಣ ಪೋಲು: ಜಗದೀಶ್ ಶೆಟ್ಟರ್

Sonu Sood: ನನಗೆ ಸಿಎಂ, ಡಿಸಿಎಂ ಆಗುವ ಆಫರ್ ಬಂದಿತ್ತು ಆದರೆ.. ನಟ ಸೋನು ಸೂದ್ ಹೇಳಿದ್ದೇನು?

Sonu Sood: ನನಗೆ ಸಿಎಂ, ಡಿಸಿಎಂ ಹುದ್ದೆಗೆ ಆಫರ್ ಬಂದಿತ್ತು ಆದರೆ, ಸೋನು ಸೂದ್ ಹೇಳಿದ್ದೇನು?

7

Manipal: ಅಪಘಾತ ತಡೆಯಲು ಹೀಗೆ ಮಾಡಿ!

6

ಒಲವಿನ ಊಟಕ್ಕೆ ಅಕ್ಕಂದಿರು ಸಿದ್ಧ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.