ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರದಲ್ಲೇ ಮನೆ ಮಾಡಿದ ಸವಣೂರಿನ ವಿವೇಕ್ ಆಳ್ವ
Team Udayavani, Apr 14, 2020, 1:01 PM IST
ಸವಣೂರು : ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಮರದಲ್ಲೇ ಕುಳಿತ ವಕೀಲರ ಬಗ್ಗೆ ನಾವೆಲ್ಲರೂ ತಿಳಿದಿದ್ದೇವೆ
ಆದರೆ ಇಲ್ಲೊಬ್ಬರು ತಾನೆ ಬೆಳೆಸಿದ ಕಾಡಿನ ನಡುವೆ ಮರದ ಮೇಲೆಯೇ ಮನೆಯ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಪರಿಸರ ವೀಕ್ಷಣೆಯಲ್ಲಿ ಸಂಭ್ರಮ ಪಡುತ್ತಿದ್ದಾರೆ.
ಅವರು ಬೇರಾರೂ ಅಲ್ಲ…ಉಪನ್ಯಾಸಕ ,ಸಂಶೋಧಕ,ಕೃಷಿಕರಿಗಾಗಿಯೇ ಕೃಷಿ ಡೈರಿ ರೂಪಿಸಿದ ಕಡಬ ತಾಲೂಕಿನ ಸವಣೂರು ಸಮೀಪದ ಪುಣ್ಚಪ್ಪಾಡಿ ಗ್ರಾಮದ ನಡುಮನೆಯ ವಿವೇಕ್ ಆಳ್ವ ಅವರು.
ಇವರ ಕೃಷಿ ಸಂಶೋಧನೆಗಾಗಿ ಹಲವು ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.ಪ್ರಚಾರ ಬಯಸದ ಅಧಮ್ಯ ಪ್ರತಿಭೆ.
ಅವರು ತನ್ನ ಮನೆಯ ಸಮೀಪವಿರುವ ಕೃತಕ ಕಾಡಿನಲ್ಲಿ ಒಂದು ಮರದ ಮೇಲೆ ಗುಡಿಸಲನ್ನು ಮಾಡಿದ್ದು, ಅದಕ್ಕಾಗಿ 7 ದಿನಗಳ ಕಾಲ ಕೆಲಸ ಮಾಡಿದ್ದಾರೆ.
ಇದು ಸಾಮಾಜಿಕ ದೂರ ಮತ್ತು ಬಹಳಷ್ಟು ಜೊತೆಗೆ ಅದ್ಭುತ ಅನುಭವವನ್ನು ನೀಡುತ್ತದೆ ಎನ್ನುತ್ತಾರೆ ವಿವೇಕ್ ಆಳ್ವ.
ಈ ಮರದ ಮೇಲಿನ ಗುಡಿಸಲಿನಲ್ಲಿ ಹಾಯಾಗಿ ಹಕ್ಕಿಗಳ ಚಿಲಿಪಿಲಿ,ಪುಸ್ತಕ ಓದುವುದು.ಏಕಾಂತದಲ್ಲಿ ಸಂಗೀತ ಕೇಳುವುದು, ತಂಪಾದ ಗಾಳಿಯೊಂದಿಗೆ ಪ್ರಕೃತಿ ವೀಕ್ಷಣೆ ಮಾಡಬಹುದು.
ಈ ಗುಡಿಸಲಿನ ಸುತ್ತ ಬಿಸಿಲು ಹಾಗೂ ಸುರಕ್ಷತೆಯ ದೃಷ್ಟಿಯಿಂದ ಶಾಡೋ ನೆಟ್ ಹಾಕಲಾಗಿದೆ.ನಿಮಗೂ ಇವರ ಈ ಕಾರ್ಯವನ್ನು ನೋಡಬೇಕಾದರೆ ಲಾಕ್‌ಡೌನ್ ಅವಧಿ ಮುಗಿಯಲೇ ಬೇಕು.
– ಪ್ರವೀಣ್ ಚೆನ್ನಾವರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.