ನಿಯಂತ್ರಣದಲ್ಲಿ ಬೆಂಗಳೂರೇ ದಿ ಬೆಸ್ಟ್
ಲಾಕ್‌ಡೌನ್ ಪರಿಣಾಮಕಾರಿ ಜಾರಿ, ಜನರಲ್ಲಿ ಜಾಗೃತಿ, ನಾಗರಿಕರ ಪ್ರಬುದ್ಧತೆಗೆ ನಗರ ಮಾದರಿ
Team Udayavani, Apr 14, 2020, 1:31 PM IST
ಬೆಂಗಳೂರು: ದೇಶದ ಪ್ರಮುಖ ಮಹಾನಗರಗಳಲ್ಲಿ ಸೋಂಕಿತರ ಸಂಖ್ಯೆ ಮೂರಂಕಿ ದಾಟಿದೆ. ಆದರೆ, ಅತೀ ಹೆಚ್ಚು ವಿದೇಶಿ ಪ್ರಯಾಣ ಮಾಡುವ ಸಿಲಿಕಾನ್ ಸಿಟಿ ಮಾತ್ರ ಎರಡಂಕಿ ದಾಟಿಲ್ಲ. ಈ ಮೂಲಕ ಕೊರೊನಾ ನಿಯಂತ್ರಣದಲ್ಲಿ ಕಳೆದ ಒಂದು ತಿಂಗಳಲ್ಲಿ ಬೆಂಗಳೂರು ಅರ್ಧ ಯಶಸ್ಸು ಕಂಡಿದೆ. ಇದಕ್ಕೆ ಕಾರಣ – ಇಲ್ಲಿನ ಲಾಕ್‌ಡೌನ್ ಪರಿಣಾಮಕಾರಿ ಜಾರಿ, ಜನ ಜಾಗೃತಿ ಹಾಗೂ ಜನರ ಪ್ರಬುದ್ಧತೆ ಎನ್ನಲಾಗುತ್ತಿದೆ.
ಇವತ್ತಿಗೆ ರಾಜ್ಯ ಸರ್ಕಾರ ಒಂದು ಲಾಕ್‌ಡೌನ್ ಪೂರೈಸಿದೆ. ಕೇಂದ್ರ ಸರ್ಕಾರದ ಒಂದು ಹಂತದ ಲಾಕ್ ಡೌನ್ ಅನ್ನು ಬೆಂಗಳೂರು ಪೂರೈಸಿ, ನಾಳೆ ಎರಡನೇ
ಹಂತಕ್ಕೆ ಸಿದ್ಧವಾಗುತ್ತಿದೆ. ಈ ಲಾಕ್‌ಡೌನ್ ಕ್ರಮ ಅಕ್ಷರಶಃ ಬೆಂಗಳೂರಿಗೆ ವರವಾಗಿ ಪರಿಣಮಿಸಿದ್ದು, ಇದಕ್ಕೆ ನಗರದಲ್ಲಿ ಕಾಣಿಸಿಕೊಂಡಿರುವ ಕೊರೊನಾ ವೈರಸ್
ಸೋಂಕು ಪ್ರಕರಣಗಳೇ ಸಾಕ್ಷಿ. ದೇಶದ ಪ್ರಮುಖ ಮಹಾನಗರಗಳಾದ ದೆಹಲಿ, ಮುಂಬೈ, ಪುಣೆ, ಹೈದರಬಾದ್, ಚೆನ್ನೈ, ಅಹಮದಾ ಬಾದ್‌ಗೆ
ಹೋಲಿಸಿದರೆ ಬೆಂಗಳೂರಿನಲ್ಲಿ ಸೋಂಕಿತರು ಸಾಕಷ್ಟು ಕಡಿಮೆ ಇದ್ದಾರೆ. ಅದರಲ್ಲೂ ದೆಹಲಿ, ಮುಂಬೈನಲ್ಲಿ ಸೋಂಕಿತರ ಸಂಖ್ಯೆ ಸಾವಿರಕ್ಕೇರಿದ್ದು, ಹೈದರಾಬಾದ್, ಚೆನ್ನೈ, ಪುಣೆ, ಅಲಹಬಾದ್‌ನಲ್ಲಿ ದ್ವಿಶತಕ ಬಾರಿಸಿದೆ. ಆದರೆ, ಅತೀ ಹೆಚ್ಚು ವಿದೇಶ ಪ್ರಯಾಣವಾಗುವ, ತಂತ್ರಜ್ಞಾನದ ರಾಜಧಾನಿ ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ 77 ಮಾತ್ರ.
ಶೀಘ್ರ ಲಾಕ್‌ಡೌನ್: ಬೆಂಗಳೂರಿಗೆ ಹೈದರಾಬಾದ್ ಮೂಲಕ ಕೊರೊನಾ ಸೋಂಕಿತ ಟೆಕ್ಕಿ ಬಂದಿದ್ದ ಎಂದ ಕೂಡಲೇ ಇಲ್ಲಿನ ಆರೋಗ್ಯ ಇಲಾಖೆ ಮುಂಜಾಗ್ರತಾ
ಕ್ರಮಕೈಗೊಂಡಿತು. ಬೆಂಗಳೂರಲ್ಲಿ ಮೊದಲ ಪ್ರಕರಣ ಕಾಣಿಸಿಕೊಂಡ ದಿನದಿಂದ (ಮಾ. 9) ನಗರದ ಜನರಲ್ಲಿ ಜಾಗೃತಿ ಮೂಡಿತು. ಬೆಂಗಳೂರಿನಲ್ಲಿ ಐದು ಕೊರೊನಾ ಸೋಂಕು ಪ್ರಕರಣ ಕಾಣಿಸಿಕೊಂಡ ಕೂಡಲೇ ರಾಜ್ಯಾದ್ಯಂತ ಲಾಕ್‌ಡೌನ್ ಜಾರಿ ಮಾಡ ಲಾಯಿತು. ಲಾಕ್‌ಡೌನ್ ಜಾರಿಯಾದ ತಕ್ಷಣ 10 ದಿನ ಮುಂಚೆಯೇ ಬೆಂಗ ಳೂರನ್ನು ಸಂಪೂರ್ಣ ಬಂದ್ ಮಾಡಲಾಯಿತು. ಇದರ ಜತೆಗೆ ಜನರ ಅನಾವಶ್ಯಕ ಓಡಾಟ ನಿಯಂತ್ರಣ, ರಾಜ್ಯಗಡಿ ಬಂದ್, ಆರೋಗ್ಯ ಇಲಾಖೆ ವ್ಯವಸ್ಥಿತ ಆಸ್ಪತ್ರೆ, ನಿಗಾ ಘಟಕ, ಬಿಬಿಎಂಪಿ ಜ್ವರ ತಪಾಸಣಾ ಕೇಂದ್ರ ನಿಯೋಜನೆಯಂತಹ ಆಡಳಿ ತಾತ್ಮಕ ಕ್ರಮಗಳು ಸೋಂಕಿತರ ಸಂಖ್ಯೆ ಮಹಾನಗರ ಗಳಿಗಿಂತ ಬೆಂಗಳೂರಿ ನಲ್ಲಿ ನಿಯಂತ್ರಣದಲ್ಲಿರಲು ಸಹಕಾರಿ ಯಾಯಿತು.
ಸಹಕಾರಿಯಾದ ರಿಲ್ಯಾಕ್ಸ್ ಮೂಡ್: ಸದಾ ಒತ್ತಡದಲ್ಲಿಯೇ ದಿನ ಕಳೆಯುತ್ತಿದ್ದ ಬೆಂಗಳೂರಿಗರಿಗೆ ಈ ಲಾಕ್‌ಡೌನ್ ದೊಡ್ಡ ಬ್ರೇಕ್ ನೀಡಿದಂತಾಯಿತು. ಬಹುತೇಕ ಲಾಕ್‌ಡೌನ್ ಬಗ್ಗೆ ಚಿಂತಿಸದೇ ಮನೆಯಲ್ಲಿಯೇ ರಿಲ್ಯಾಕ್ಸ್ ಮಾಡಲು ನಿರ್ಧರಿಸಿದರು. ಊರಿಂದ ದೂರಾಗಿದ್ದ ಮಂದಿ ಊರು ಸೇರಿದರು. ಈ ಮೂಲಕ ನಗರದಲ್ಲಿ ಜನ ದಟ್ಟಣೆ ಇಲ್ಲದೆ ಸೋಂಕು ಕೂಡಾ ಕಡಿಮೆಯಾಯಿತು.
ತ್ವರಿತ ಗುಣಮುಖ
ಇತರೆ ಮಹಾನಗರಗಳಿಗಿಂತ ಸೋಂಕಿ ತರ ಸಂಖ್ಯೆ ಹೆಚ್ಚಿದೆ. ಆದರೆ, ಬೆಂಗಳೂರಿನಲ್ಲಿ ಗುಣಮುಖರಾಗಿ ಮನೆಗೆ ತೆರಳಿದವರ ಸಂಖ್ಯೆ ಹೆಚ್ಚಿದೆ. ಈಗಾಗಲೇ ಸೋಂಕಿತ 77 ಪೈಕಿ ಮಂದಿಯಲ್ಲಿ 27 ಮಂದಿ ಗುಣಮುಖ ರಾಗಿದ್ದಾರೆ. ಈ ಪ್ರಮಾಣ ಶೇ.35 ರಷ್ಟು ಇದೆ. ಆದರೆ, ಮುಂಬೈನಲ್ಲಿ ಗುಣಮುಖ ರಾದವರ
ಪ್ರಮಾಣ ಶೇ.10ಕ್ಕೂ ಕಡಿಮೆ ಇದೆ. ಚೆನ್ನೈ, ಪುಣೆ, ದೆಹಲಿಯಲ್ಲಿ ಗುಣಮುಖರಾದರ ಸಂಖ್ಯೆ ಬೆರಳಣಿಕೆ ಮಾತ್ರ. ಇನ್ನು ಅಂಕಿ ಅಂಶದಂತೆ ಬೆಂಗಳೂರಿನಲ್ಲಿ ಎರಡು ಆ ಪೈಕಿ ಒಬ್ಬರು ಕೊರೊನಾ ಸಾವು ಎಂದಾಗಿದ್ದು, ಮೂಲತಃ ಮೃತ ವೃದ್ಧೆ ಚಿಕ್ಕಬಳ್ಳಾಪುರ ದವರು. ಬೆಂಗ ಳೂರಿನ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದು ಸಾವಿಗೀಡಾದರಿಂದ ಇಲ್ಲಿನ ಲೆಕ್ಕಕ್ಕೆ ಸೇರಿಸಲಾಗಿದೆ.
ಸ್ವಯಂ ಪ್ರೇರಿತ ನಿಯಂತ್ರಣ
ಆಡಳಿತ ಕ್ರಮಗಳಿಗಿಂತಲೂ ಜನರು ಕೈಗೊಂಡ ಸ್ವಯಂ ಮುಂಜಾಗ್ರತಾ ಕ್ರಮಗಳು ಬೆಂಗಳೂರಿನಲ್ಲಿ ಸೋಂಕು ನಿಯಂತ್ರಣಕ್ಕೆ ಇನ್ನಷ್ಟು ಸಹಕಾರಿಯಾಯಿತು. ತಪ್ಪು ಮಾಡಿದವರ ವಿರುದ್ಧ ಸಾರ್ವಜನಿಕರರೇ ಪ್ರಶ್ನಿಸುವ ಮನೋಭಾವ ಬೆಳೆಸಿಕೊಂಡರು. ಮಾಸ್ಕ್ ಬಳಕೆಗೆ ಸ್ವಯಂ ಪ್ರೇರಿತ ಕ್ರಮಕ್ಕೆ ಮುಂದಾದರು. ಹಳ್ಳಿ ಕಡೆ ಹೊರಗಿನಿಂದ ಯಾರು ಬರಬಾರದು ಎಂದು ಊರ ರಸ್ತೆಯನ್ನು ಕಟ್ಟಿಗೆ, ಕಲ್ಲು ಹಾಕಿ ಬಂದ್ ಮಾಡಿದಂತೆಯೇ ಬೆಂಗಳೂರಿನಲ್ಲಿಯೂ ಅನೇಕ ಬಡಾವಣೆಗಳಲ್ಲಿ ಜನರೇ ರಸ್ತೆ ಬಂದ್ ಮಾಡಿದರು. ಬಳಿಕ ಪೊಲೀಸರು ನಗರದ ರಸ್ತೆಗಳನ್ನು ಏಕಮುಖ ಮಾಡಿ, ಪ್ರಮುಖ ರಸ್ತೆಗಳನ್ನು ಬಂದ್ ಮಾಡಿದರು. ಇದರಿಂದ ನಗರದಲ್ಲಿ ಅನಾವಶ್ಯಕ ಸಾರ್ವಜನಿಕ ಸ್ಥಳಗಳಲ್ಲಿ ಓಡಾಟ ಕಡಿಮೆಯಾಯಿತು.
ರಾಜಧಾನಿ 25 ಮಂದಿ
ಆರಂಭದಲ್ಲಿ ಸಾಕಷ್ಟು ಏರುಗತಿಯಲ್ಲಿ ಸಾಗಿದ ಕೊರೊನಾ ಪ್ರಕರಣಗಳು ಏಪ್ರಿಲ್ ಒಂದರಿಂದ ಸಾಕಷ್ಟು ಇಳಿಕೆಯಾದವು.
ಏಪ್ರಿಲ್ 1 ರಿಂದ ಇಲ್ಲಿಯವರೆಗೂ ರಾಜ್ಯಾದ್ಯಂತ 150 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡರೆ ಬೆಂಗಳೂರಿನಲ್ಲಿ ಮಾತ್ರ 25 ಮಂದಿ ಸೋಂಕಿತರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Fraud Case: ಡಿಕೆಸು ಹೆಸರಿನಲ್ಲಿ 8.4 ಕೋಟಿ ರೂ. ವಂಚನೆ; ಆರೋಪಿಗಳಿಗೆ ನೋಟಿಸ್
Arrested: ಸ್ನೇಹಿತನ ಹತ್ಯೆಗೈದಿದ್ದ ಆರೋಪಿ ಬಂಧನ
Toll fee: ಹೆಬ್ಬಾಳ-ಸಿಲ್ಕ್ ಬೋರ್ಡ್ ಸುರಂಗ ರಸ್ತೆ: ಕೇವಲ 18 ಕಿ.ಮೀ.ಗೆ 288 ರೂ. ಸುಂಕ?
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಅನೂಪ್ ಪೂಜಾರಿ ಪಾರ್ಥೀವ ಶರೀರ ಹುಟ್ಟೂರಿಗೆ; ತಾಯಿ, ಪತ್ನಿಯಿಂದ ಅಂತಿಮ ದರ್ಶನ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
Uppunda: ಪಾಳು ಕೆರೆ ಈಗ ಈಜುಕೊಳ!; ಚೌಂಡಿ ಕೆರೆಗೆ ಊರಿನ ಯುವಕರಿಂದ ಕಾಯಕಲ್ಪ
Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.