ಕೋವಿಡ್-19 ಸಹಾಯವಾಣಿ ಕೇಂದ್ರಕ್ಕೆ 508 ಕರೆ

ಗೌರಿಬಿದನೂರು, ಶಿಡ್ಲಘಟ್ಟದಿಂದ ಹೆಚ್ಚು ಕರೆ; ನಿತ್ಯ 20 ರಿಂದ 25 ಕರೆಗಳು ದಾಖಲು

Team Udayavani, Apr 14, 2020, 2:32 PM IST

ಕೋವಿಡ್-19 ಸಹಾಯವಾಣಿ ಕೇಂದ್ರಕ್ಕೆ 508 ಕರೆ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಕೋವಿಡ್-19 ಸೋಂಕು ಹರಡದಂತೆ ಘೋಷಣೆಯಾಗಿರುವ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಜನರ ಸಂಕಷ್ಟಗಳಿಗೆ ನೆರವಾಗಲಿ ಎಂದು ಜಿಲ್ಲಾಡಳಿತ ಸ್ಥಾಪಿಸಿರುವ ಸಹಾಯವಾಣಿ ಕೇಂದ್ರಗಳಿಗೆ ನಿತ್ಯ ಕರೆಗಳ ಮಹಾಪೂರ ಹರಿದು ಬರುತ್ತಿದ್ದು ಏ.13ರ ವರೆಗೂ ಸಹಾಯವಾಣಿ ಕೇಂದ್ರಕ್ಕೆ 508 ಕರೆಗಳು ಬಂದಿವೆ. ಕೋವಿಡ್‌-19 ತಡೆಯುವ ಉದ್ದೇಶದಿಂದ ಜಿಲ್ಲೆಯಲ್ಲಿ ಕಳೆದ ಮಾ.22 ರಿಂದಲೇ ಲಾಕ್‌ಡೌನ್‌ ಘೋಷಣೆ ಆಗಿದ್ದು, ಕೋವಿಡ್-19 ಸೋಂಕಿನ ಬಗ್ಗೆ ಅನುಮಾನ ಬಂದಲ್ಲಿ ಅಥವಾ ಲಾಕ್‌ಡೌನ್‌ ಘೋಷಣೆಯಿಂದ ಸಂಕಷ್ಟಕ್ಕೆ ಸಿಲುಕಿರುವ ನಾಗರಿಕರಿಗೆ ತಮ್ಮ ದೂರು ಹೇಳಿಕೊಳ್ಳಲು 104 ಸಹಾಯವಾಣಿ ಜೊತೆಗೆ ಜಿಲ್ಲಾಡಳಿತ ಪ್ರತ್ಯೇಕವಾದ ಸಹಾಯ ವಾಣಿ ತೆರೆದಿದ್ದು ನಿತ್ಯ 20 ರಿಂದ 25 ಕರೆಗಳು ದಾಖಲಾಗುತ್ತಿವೆ.

508 ಕರೆಗಳ ಸ್ವೀಕಾರ: ಬಿಹಾರ, ರಾಜಸ್ತಾನಕ್ಕೆ ಸೇರಿದ ಸುಮಾರು 19 ಮಂದಿ ವಲಸೆ ಕಾರ್ಮಿಕರು ಆಶ್ರಯಕ್ಕಾಗಿ ಜಿಲ್ಲಾಡಳಿತಕ್ಕೆ ಕರೆ ಮಾಡಿದ್ದರೆ, ಬಹುತೇಕರು ಕೋವಿಡ್‌-19 ಬಗ್ಗೆಯೇ ಹೆಚ್ಚು ಕರೆ ಮಾಡಿ ವಿಚಾರಿಸಿದರೆ ಮತ್ತೆ ಕೆಲವರು ಸೋಂಕಿನ ಲಕ್ಷಣ ಬಗ್ಗೆ ನಾವು ಪರೀಕ್ಷೆ ಮಾಡಿಸಿ ಕೊಳ್ಳ ಬೇಕೆಂದು 55 ಮಂದಿ ಕರೆ ಮಾಡಿದ್ದಾರೆ.

ಇನ್ನೂ ತಮಗೆ ಆಹಾರ ಒದಗಿಸಬೇಕೆಂದು 62 ಮಂದಿ, ಔಷಧಿಗಳಿಗಾಗಿ ಸುಮಾರು 3 ಮಂದಿ ಕರೆ ಮಾಡಿದ್ದಾರೆ. ಸುಮಾರು 115 ಮಂದಿ ಕೆಲವರು ಲಾಕ್‌ಡೌನ್‌ ಸರಿಯಾಗಿ ಪಾಲನೆ ಮಾಡುತ್ತಿಲ್ಲ. ತರಕಾರಿ, ಎಪಿಎಂಸಿ ಮಾರುಕಟ್ಟೆ, ದಿನಸಿ ಅಂಗಡಿಗಳ ಬಳಿ ಜನ ದಟ್ಟಣೆ ಇದೆ. ಕೆಲವರು ಮಾಸ್ಕ್ ಧರಿಸಿಲ್ಲ ಎನ್ನುವುದರ ಬಗ್ಗೆಯು ಸಹಾಯವಾಣಿಗೆ ಕರೆ ಮಾಡಿ ತಿಳಿಸಿದ್ದಾರೆ.

ಗೌರಿಬಿದನೂರು, ಶಿಡ್ಲಘಟ್ಟ ಹೆಚ್ಚು:
ಸಹಾಯವಾಣಿ ಕೇಂದ್ರಗಳಿಗೆ ಬಂದಿರುವ ಕರೆಗಳ ಪೈಕಿ ಜಿಲ್ಲೆಯಲ್ಲಿ ಕೊರಾನ ಅಟ್ಟಹಾಸ ಮೆರೆದಿರುವ ಗೌರಿಬಿದನೂರು ತಾಲೂಕಿ ನಿಂದ ಬರೋಬ್ಬರಿ 78 ಮಂದಿ ಹಾಗೂ ಜಿಲ್ಲೆಯ ರೇಷ್ಮೆ ನಗರಿ ಶಿಡ್ಲಘಟ್ಟದಿಂದ ಒಟ್ಟು 88 ಮಂದಿ ಕರೆ ಮಾಡಿ ಕೋವಿಡ್‌-19 ಬಗ್ಗೆ ವಿಚಾರಿಸಿಕೊಂಡಿದ್ದಾರೆ. ಜಿಲ್ಲಾಡಳಿತ ಸಹಾ ಯವಾಣಿಗೆ ಒಟ್ಟು ಇದುವರೆಗೂ 227 ಕರೆಗಳು ಬಂದಿದ್ದರೆ ಕೋವಿಡ್‌-19 ಕ್ಕಾಗಿಯೇ ಸ್ಥಾಪಿಸಲಾಗಿರುವ ಸಹಾಯವಾಣಿ 104ಗೆ ಜಿಲ್ಲೆಯಲ್ಲಿ ಒಟ್ಟು 69 ಕರೆಗಳು ಬಂದಿವೆ. ಇನ್ನೂ ಆನ್‌ಲೈನ್‌ ಮೂಲಕವು ಸಾರ್ವಜನಿಕರಿಂದ ದೂರುಗಳು ಸ್ವೀಕರಿಸಿದ್ದು ಅದಕ್ಕಾಗಿ ಸ್ಥಾಪಿಸಿರುವ ಸಿಪಿ ಗ್ರಾಮ್ಸ್‌ಗೆ ಒಟ್ಟು 11 ದೂರು ಸ್ವೀಕೃತವಾಗಿವೆ.

ಕೋವಿಡ್-19 ಸೋಂಕು ತಡೆಯುವ ಉದ್ದೇಶದಿಂದ ಜಿಲ್ಲಾಡಳಿತ ತೆರೆದಿರುವ ಸಹಾಯ ವಾಣಿ ಕೇಂದ್ರಕ್ಕೆ ಜಿಲ್ಲೆಯ ವಿವಿಧ ತಾಲೂಕುಗಳಿಂದ ಸೋಮವಾರದವರೆಗೂ ಒಟ್ಟು 508 ಕರೆಗಳು ಬಂದಿವೆ. ಆ ಪೈಕಿ ಜಿಲ್ಲಾಡಳಿತ ಸಹಾಯವಾಣಿಗೆ 227, 104 ಸಹಾಯವಾಣಿಗೆ 69, ಆನ್‌ಲೈನ್‌ ಮೂಲಕ 11 ಕರೆಗಳು ಬಂದಿವೆ.
ಅನುರೂಪ, ನೋಡಲ್‌ ಅಧಿಕಾರಿ.

ಟಾಪ್ ನ್ಯೂಸ್

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CKB-Crime

Chikkaballapura: ಕಾರಿನಲ್ಲಿ ಸಾಗಿಸುತ್ತಿದ್ದ 7.20 ಲಕ್ಷ ರೂ. ಮೌಲ್ಯದ ಗಾಂಜಾ ವಶ

Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್‌: ಆರ್‌. ಅಶೋಕ್‌ ಆರೋಪ

Karnataka Govt: ಹಿಂದೂಗಳ ದಮನಕ್ಕೆ ಮುಂದಾದ ಕಾಂಗ್ರೆಸ್‌: ಆರ್‌. ಅಶೋಕ್‌ ಆರೋಪ

Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ

Dr. Sudhakar: ಹಿಂದಿನ ಕಾಂಗ್ರೆಸ್‌ರ ಸರ್ಕಾರದ ಭ್ರಷ್ಟಾಚಾರ ಬಿಚ್ಚಿಡುವೆ

ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapura: ನಮ್ಮನ್ನು ಖಳ ನಾಯಕರನ್ನಾಗಿ ಮಾಡಲು ಹೊರಟಿದ್ದಾರೆ: ಸಂಸದ ಡಾ.ಕೆ.ಸುಧಾಕರ್

Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!

Chikkaballapur: ಪರಿಹಾರ ಕೊಡದ ಎಸಿ ಕಚೇರಿ ಸಂತ್ರಸ್ತರಿಂದ ಜಪ್ತಿ!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

4-siruguppa

Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್‌; ಎತ್ತು ಸಾವು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.