ಕೆಜಿಎಫ್ ಗೆ ಭೇಟಿ ನೀಡಿದ್ದ ಅಂಬೇಡ್ಕರ್‌


Team Udayavani, Apr 14, 2020, 2:59 PM IST

Udayavani Kannada Newspaper

ಕೋಲಾರ: ರಾಷ್ಟ್ರದಲ್ಲಿಯೇ ಅತಿ ಹೆಚ್ಚು ದಲಿತ ಸಮೂಹವನ್ನು ಹೊಂದಿರುವ ಜಿಲ್ಲೆಗೆ ಐವತ್ತರ ದಶಕದಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಭೇಟಿ ನೀಡಿದ್ದರು. ಚಿನ್ನದ ಗಣಿಗಳು ಉತ್ತುಂಗ ಸ್ಥಿತಿಯಲ್ಲಿದ್ದ 50ರ ದಶಕದಲ್ಲಿ ಅಲ್ಲಿನ 30 ಸಾವಿರ ಕಾರ್ಮಿಕ ವರ್ಗದ ಕೋರಿಕೆ ಮೇರೆಗೆ ಅಂಬೇಡ್ಕರ್‌ 1954 ಜುಲೈ 12 ರಂದು ಪತ್ನಿ ಸವಿತಾ ಅವರೊಂದಿಗೆ ಕೆಜಿಎಫ್ನ ಗರಕ್ಕೆ ಭೇಟಿ ನೀಡಿದ್ದರು.

ದೇಶಾದ್ಯಂತ ದಲಿತ ಸಮುದಾಯದ ಕಾರ್ಮಿಕವನ್ನು ವರ್ಗವನ್ನು ಸಂಘಟಿಸುವ ಕಾರ್ಯದಲ್ಲಿ ಮಗ್ನರಾಗಿದ್ದ ಅಂಬೇಡ್ಕರ್‌ಗೆ ಸಹಜವಾಗಿಯೇ ಸಹಸ್ರಾರು ದಲಿತ ಕಾರ್ಮಿಕರು ಕೆಲಸ ಮಾಡುತ್ತಿದ್ದ ಕೆಜಿಎಫ್ ನಗರ ಆಕರ್ಷಿಸಿತ್ತು. ಕಾರ್ಮಿಕರ ಕೋರಿಕೆ ಮೇರೆಗೆ ಕೆಜಿಎಫ್ಗೆ ಆಗ ಮಿಸಿದ್ದ ಅಂಬೇಡ್ಕರ್‌ ಕೆಜಿಎಫ್ ನಗರದಲ್ಲಿ ಬುದ್ಧನ ಹೆಸರಿನ ಶಾಲೆಯೊಂದನ್ನು ಉದ್ಘಾಟಿಸಿದ್ದರು.

ಮಲಯಾಳಿ ಮೈದಾನದಲ್ಲಿ ಸಾರ್ವಜನಿಕ ಸಭೆ ಉದ್ದೇಶ ಭಾಷಣ ಮಾಡುವ ಕಾರ್ಯಕ್ರಮ ನಿಗದಿಯಾಗಿತ್ತು. ಕಾರ್ಯಕ್ರಮಕ್ಕೂ ಮುನ್ನ ಅತಿಥಿ ಗೃಹದಲ್ಲಿದ್ದ ಅಂಬೇಡ್ಕರ್‌ರ ಕಾಲಿಗೆರಗಲು ಸಹಸ್ರಾರು ಸಂಖ್ಯೆಯಲ್ಲಿ ಕಾರ್ಮಿಕರು ಆಗಮಿಸಿದ್ದರು. ಸ್ವಾಭಿಮಾನದ ಹೆಗ್ಗುರುತಾಗಿದ್ದ ಅಂಬೇಡ್ಕರ್‌ಗೆ ಇದು ಮುಜುಗರವನ್ನುಂಟು ಮಾಡಿತ್ತು. ಹೀಗೆ ಮಾಡಬಾರದೆಂಬ ಅಂಬೇಡ್ಕರ್‌ ಮಾತಿಗೆ ಕಾರ್ಮಿಕ ವರ್ಗ ಕಿವಿಗೊಟ್ಟಿರಲಿಲ್ಲ. ಇದರಿಂದ ಮುನಿಸಿಕೊಂಡು ಅಂಬೇಡ್ಕರ್‌, ಭಾಷಣ ಮಾಡದೆ ಬೆಂಗಳೂರಿನತ್ತ ತೆರಳಿದ್ದರೆಂದು ಗಣಿ ಕಾರ್ಮಿಕ ಕುಟುಂಬ ಸದಸ್ಯ ಸಿ.ವಿ.ನಾಗರಾಜ್‌ ವಿವರಿಸುತ್ತಾರೆ.

ಇಷ್ಟಾದರೂ ಕೆಜಿಎಫ್ ಕಾರ್ಮಿಕ ವರ್ಗಕ್ಕೆ ಅಂಬೇಡ್ಕರ್‌ ಬಗ್ಗೆ ಅಭಿಮಾನ ತಗ್ಗಿರಲಿಲ್ಲ. ಅವರು ನಗರಕ್ಕೆ ಕಾಲಿಟ್ಟು ಹೋಗಿದ್ದರ ನೆನಪಿನಲ್ಲಿ ಇಂದಿಗೂ ಕೆಜಿಎಫ್ ಬಹುತೇಕ ಪ್ರಮುಖ ರಸ್ತೆ, ಗಲ್ಲಿಗಳಲ್ಲಿ ಅಂಬೇಡ್ಕರ್‌ ಪ್ರತಿಮೆ, ಬಣ್ಣದ ಚಿತ್ರಗಳಿವೆ. ದೇಶದಲ್ಲಿಯೇ ಅತಿ ಹೆಚ್ಚು ಅಂಬೇಡ್ಕರ್‌ ಪ್ರತಿಮೆ, ಚಿತ್ರ ಹೊಂದಿರುವ ನಗರಗಳಲ್ಲಿ ಕೆಜಿಎಫ್ಗೆ ಅಗ್ರಸ್ಥಾನ ಇದೆ.

ಟಿ.ಚೆನ್ನಯ್ಯರ ನಂಟು: ಕೋಲಾರ ನಗರದ ನಿರ್ಮಾತೃ ಟಿ.ಚೆನ್ನಯ್ಯರಿಗೂ ಅಂಬೇಡ್ಕರ್‌ರೊಂ ದಿಗೆ ನಿಕಟ ನಂಟಿತ್ತು. ಸಂವಿಧಾನ ಕರಡು ಸಮಿತಿಯಲ್ಲಿ ಟಿ.ಚನ್ನಯ್ಯನವರು ಕೆಲಸ ನಿರ್ವಹಿಸಿದ್ದರು. ಅಂಬೇಡ್ಕರ್‌ ಜತೆ ಇರುವ ಅಪೂರ್ವ ಚಿತ್ರಗಳು ಇಂದಿಗೂ ಟಿ.ಚನ್ನಯ್ಯರ ಕುಟುಂಬದಲ್ಲಿದೆ.

ಸವಿತಾ ಅಂಬೇಡ್ಕರ್‌ ನಂಟು: ಸವಿತಾ ಅಂಬೇಡ್ಕರ್‌ ನಿಧನವಾಗುವ ಕೆಲವೇ ವರ್ಷಗಳ ಮೊದಲು ಕೋಲಾರ ಜಿಲ್ಲೆಗೆ ಆಗಮಿಸಿ ದಲಿತ ಚಳವಳಿಯ ಹಿರಿಯ ಮುಖಂಡ ಡಾ.ಎಂ.ಚಂದ್ರಶೇಖರ್‌ ನಿವಾ ಸ ದಲ್ಲಿ ಒಂದು ವಾರ ಕಾಲ ವಾಸ್ತವ್ಯಹೂಡಿ ಕೋಲಾರ, ಕೆಜಿಎಫ್‌ ನಗರಗಳಲ್ಲಿ ಸಂಚರಿಸಿದ್ದರು. ಅಂಬೇಡ್ಕರ್‌ರ ಬಗೆಗಿನ ಅಭಿಮಾನ ಪ್ರೀತಿ ಸ್ಫೂರ್ತಿಯಿಂದಲೇ ಕೋಲಾರ ಜಿಲ್ಲೆ 70ರ ದಶಕದಲ್ಲಿ ದಲಿತ ಚಳವಳಿಯ ತವರೂರಾಗಿ ಮಾರ್ಪಟ್ಟಿತ್ತು.

ಕೆ.ಎಸ್‌.ಗಣೇಶ್‌

ಟಾಪ್ ನ್ಯೂಸ್

5-kundapura

Kundapura: ಅನೂಪ್ ಪೂಜಾರಿ ಪಾರ್ಥೀವ ಶರೀರ ಹುಟ್ಟೂರಿಗೆ; ತಾಯಿ, ಪತ್ನಿಯಿಂದ ಅಂತಿಮ ದರ್ಶನ

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ

Perfect: ಎಡ್‌ ಶಿರನ್‌ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್‌ ಆದ ಉಡುಪಿಯ ಹುಡುಗ | Video

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

Pushpa 2: ಖಾಕಿಗೆ ಸವಾಲು‌ ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್

IRCTC: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ

ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ

Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mulabagil

Mulabagilu: ಭೀಕರ ಅಪಘಾತ: ದ್ವಿಚಕ್ರ ವಾಹನಗಳಿಗೆ ಬೊಲೆರೋ ಢಿಕ್ಕಿ, ನಾಲ್ವರ ಮೃತ್ಯು!

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Agricultural: ಲಾರಿ ಚಾಲಕನ ಕೃಷಿ ಪಯಣಕ್ಕೆ ನರೇಗಾ ನೆರವು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Mulabagilu: ನಾಲ್ವರು ವಿದ್ಯಾರ್ಥಿನಿಯರು ಸಮುದ್ರ ಪಾಲು ಪ್ರಕರಣ: ಶಿಕ್ಷಕರ ಅಮಾನತು

Rain-1

Cyclone Fengal: ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಯ ಶಾಲೆ, ಕಾಲೇಜಿಗೆ ಡಿ.2ರಂದು ರಜೆ

8

Kolar: ಧಾರ್ಮಿಕ ಮೆರವಣಿಗೆಯಲ್ಲಿ ಯಾಂತ್ರಿಕ ಆನೆ ಬಳಕೆ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

5-kundapura

Kundapura: ಅನೂಪ್ ಪೂಜಾರಿ ಪಾರ್ಥೀವ ಶರೀರ ಹುಟ್ಟೂರಿಗೆ; ತಾಯಿ, ಪತ್ನಿಯಿಂದ ಅಂತಿಮ ದರ್ಶನ

5

Mangaluru: ಪದವು ಜಂಕ್ಷನ್‌- ಶರ್ಬತ್‌ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್‌

4

Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ

3(1

Uppunda: ಪಾಳು ಕೆರೆ ಈಗ ಈಜುಕೊಳ!; ಚೌಂಡಿ ಕೆರೆಗೆ ಊರಿನ ಯುವಕರಿಂದ ಕಾಯಕಲ್ಪ

2

Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.