ರಾಜ್ಯ ಸಂಕಷ್ಟದಲ್ಲಿದ್ದರೆ ಸಚಿವರ ಮೋಜು, ಮಸ್ತಿ
Team Udayavani, Apr 14, 2020, 3:18 PM IST
ನೆಲಮಂಗಲ: ರಾಜ್ಯವೇ ಸಂಕಷ್ಟದಲ್ಲಿ ಸಿಲುಕಿರುವಾಗ ಜವಾಬ್ದಾರಿಯುತ ಸಚಿವ ಡಾ.ಸುಧಾಕರ್ ಮತ್ತು ಸಿ.ಟಿ.ರವಿ ಬೇಜವಾಬ್ದಾರಿತನ ತೋರುತ್ತಿರುವುದು ಅಕ್ಷಮ್ಯ. ಪ್ರಪಂಚಕ್ಕೆ ಪಾಠ ಹೇಳುತ್ತಿರುವ ದೇಶ ನಮ್ಮದು. ಸಚಿವರ ನಡತೆಯಿಂದಾಗಿ ನೈತಿಕ ಹೊಣೆ ಹೊತ್ತು ಸ್ವಯಂ ಪ್ರೇರಣೆಯಿಂದ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಕೆಪಿ ಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದರು.
ತಾಲೂಕಿನ ಜಕ್ಕಸಂದ್ರ ಮತ್ತು ಅರಿಶಿನ ಕುಂಟೆ ಗ್ರಾಮಗಳಲ್ಲಿ ಮಾಜಿ ಸಚಿವ ಅಂಜನ ಮೂರ್ತಿ ನೇತೃತ್ವದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಮ್ಮಿಕೊಂಡಿದ್ದ ಆಹಾರ ಪದಾರ್ಥಗಳ ಕಿಟ್ ವಿತರಿಸಿ ಮಾತನಾಡಿದರು. ರಾಜ್ಯ ಸೇರಿದಂತೆ ರಾಷ್ಟ್ರ ಕೊರೊನಾದಿಂದ ತತ್ತರಿಸಿದೆ. ಇಂತಹ ಸಂದರ್ಭದಲ್ಲಿ ರಾಜ್ಯದ ಕೊರೊನಾ ಹೋರಾಟದ ಟೀಮ್ ಲೀಡರ್ ಎಂದೆ ಬಿಂಬಿಸಿಕೊಂಡಿದ್ದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಈಜುಕೊಳದಲ್ಲಿ ಈಜಾಡುತ್ತ ಸಮಯ ಕಳೆಯುತ್ತಿದ್ದರೆ, ಸಚಿವ ಸಿ.ಟಿ.ರವಿ ತಮ್ಮ ಮುದ್ದಿನ ನಾಯಿಗೆ ಸ್ನಾನ ಮಾಡಿಸಿಕೊಂಡು ಕುಳಿತಿರುವುದು ಅವರು ಜವಾಬ್ದಾರಿ ತೋರುತ್ತದೆ. ಬಿಜೆಪಿ ಸರಕಾರದ ಸಚಿವರ ವರ್ತನೆ ಸಹಿಸಲಾಗದು. ಪ್ರಧಾನಿಯವರಿಗೆ ರಕ್ಷಣೆ ಸಚಿವರಿಗೆ ವೈಯಕ್ತಿಕವಾಗಿ ವಿಮಾನಗಳಿದ್ದರೂ ಎಲ್ಲಿಯೂ ಹೋಗದೆ ತಾವಿರುವಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ. ಅವರು ಹೇಳಿದಂತೆ ದೇಶದ ಪ್ರತಿಯೊಬ್ಬರು ಚಪ್ಪಾಳೆ ಹೊಡೆದಿದ್ದೇವೆ, ದೀಪ ಹಚ್ಚಿದ್ದೇವೆ ಹಾಗೂ ಒಂದು ಹೊತ್ತು ಊಟ ಬಿಟ್ಟಿದ್ದಾರೆ. ಆದರೆ ಸಚಿವರು ಮಾತ್ರ ಈಜಾಡುತ್ತ ಕಾಲಕಳೆಯುತ್ತಿರುವುದು ಬೇಸರದ ಸಂಗತಿ. ಅವರು ರಾಜೀನಾಮೆ ನೀಡದಿದ್ದರೆ, ಮುಖ್ಯಮಂತ್ರಿಗಳೇ ಅವರ ರಾಜೀನಾಮೆ ಪಡೆಯುತ್ತಾರೆ. ಅವರ ಪಕ್ಷದ ಕೇಂದ್ರ ನಾಯಕರೇ ಉತ್ತರಿಸಬೇಕು. ಇಲ್ಲವಾದಲ್ಲಿ ರಾಜ್ಯಪಾಲರು ವಜಾಗೊಳಿಸಬೇಕು ಎಂದು ಕಿಡಿಕಾರಿದರು.
ಸರಕಾರ ಜನರಿಗೆ ದವಸ ಧಾನ್ಯಗಳನ್ನು ನೀಡುವ ಬದಲಿಗೆ ಮುಂದಿನ ದಿನಗಳಲ್ಲಿ ರೈತರಿಂದಲೇ ಸ್ಥಳೀಯವಾಗಿ ಖರೀದಿಸಿ ತರಕಾರಿ ಹಣ್ಣು ಹಂಚಬೇಕು. ಇದರಿಂದ ರೈತರನ್ನು ಬದುಕಿಸುವಂತಹ ಕೆಲಸ ಮಾಡಬೇಕು. ರಾಜ್ಯದ ಉದ್ದಗಲಕ್ಕೆ ಪಕ್ಷದ ಕಾರ್ಯಕರ್ತರು ಮುಖಂಡರು ಸ್ವ ಇಚ್ಛೆಯಿಂದ ಸಹಕಾರಕ್ಕೆ ಮುಂದಾಗುವ ಮೂಲಕ ಮಾನವೀಯತೆ ಮೆರೆಯುತ್ತಿರುವುದಕ್ಕೆ ಅಭಿನಂದನೆಗಳು, ತಾಲೂಕಿನ ಕಾಂಗ್ರೆಸ್ ಮುಖಂಡರು, ಮಾಜಿ ಸಚಿವ ಅಂಜನಮೂರ್ತಿ ಅವರ ನೇತೃತ್ವದಲ್ಲಿ ಬಡ ಕೂಲಿಕಾರ್ಮಿಕರು ಮತ್ತು ಗ್ರಾಮೀಣ ಜನರಿಗೆ ಉತ್ತಮ ಗುಣಮಟ್ಟದ ಆಹಾರ ಪದಾರ್ಥ ನೀಡಿ ಸಂಕಷ್ಟಕ್ಕೆ ಸ್ಪಂದಿಸುತ್ತಿರುವುದು ಉತ್ತಮ ಕೆಲಸ. ಪಕ್ಷದ ಕಾರ್ಯಕರ್ತರು ತಮ್ಮ ಗ್ರಾಮಗಳ ಜನರ ಸಮಸ್ಯೆಗಳಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ ಎಂದು ಕರೆ ನೀಡಿದರು. ಮಾಜಿ ಸಚಿವ ಅಂಜನ ಮೂರ್ತಿ, ವಿಧಾನ ಪರಿಷತ್ ಸದಸ್ಯ ಎಸ್.ರವಿ, ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ, ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ರಂಗನಾಥ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಶಾಮಪ್ಪ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ನಾಗರಾಜು, ಸಿ.ಆರ್. ಗೌಡ, ಮುಂಖಡ ಚಿಕ್ಕನಾಗಯ್ಯ, ಸೈಯದ್ ಖಲೀಮುಲ್ಲಾ, ಮಿಲ್ಟ್ರಿ ಮೂರ್ತಿ, ಶಿವಣ್ಣ, ಸಿ ಎಂ.ಗೌಡ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
AI world: ಕ್ರಿಮಿನಲ್‌ಗಳ ಜಾತಕವನ್ನೇ ಬಿಚ್ಚಿಡುವ ಎಐ ಆ್ಯಪ್!
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Perth Test: ಟೀಂ ಇಂಡಿಯಾಗಿಲ್ಲ ಶುಭಾರಂಭ: ಮೊದಲ ಸೆಶನ್ ನಲ್ಲೇ ಪರದಾಡಿದ ಬ್ಯಾಟರ್ ಗಳು
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.