ಬಿಎಲ್‌ಡಿಇಯಿಂದ ಪೊರ್ಟೆಬಲ್ ಮಷಿನ್ ಆವಿಷ್ಕಾರ
ಐದೇ ನಿಮಿಷದಲ್ಲಿ ಮರುಬಳಕೆ ವಸ್ತುಗಳ ಸ್ವತ್ಛತೆ ಕೊರೊನಾ ವೈರಸ್ ನಿಷ್ಕ್ರಿಯಗೊಳಿಸಲು ಸಹಕಾರಿ
Team Udayavani, Apr 14, 2020, 5:41 PM IST
ವಿಜಯಪುರ: ಕೋವಿಡ್-19 ಕಾಯಿಲೆ ಹಿನ್ನೆಲೆಯಲ್ಲಿ ಬಿಎಲ್‌ಡಿಇ ಬಿ.ಎಂ. ಪಾಟೀಲ್ ವೈದ್ಯಕೀಯ ಕಾಲೇಜು-ಆಸ್ಪತ್ರೆಯಿಂದ ವಚನ ಪಿತಾಮಹ
ಡಾ| ಫ.ಗುಹಳಕಟ್ಟಿ ಇಂಜನಿಯರಿಂಗ್ ಕಾಲೇಜು ಸಹಯೋಗದಲ್ಲಿ ಕೋ-ಅಲ್ಟ್ರಾ ಸಲ್ಯೂಶನ್-20 ವಿವಿಧೋದ್ಧೇಶದ ಪೊರ್ಟೆಬಲ್ ಮಷಿನ್‌ನ್ನು ಆವಿಷ್ಕರಿಸಲಾಗಿದೆ. ಸದರಿ ಯಂತ್ರ ರೋಗ ನಿಗ್ರಹದಲ್ಲಿ ಆಸ್ಪತ್ರೆ, ವೈದ್ಯರು ಮಾತ್ರವಲ್ಲ ಮನೆ-ಮನೆಗೂ ಸದರಿ ಯಂತ್ರ ಉಪಯೋಗಕ್ಕೆ ಬರಲಿದೆ.
ಈ ಕುರಿತು ಪ್ರಕಟಣೆ ನೀಡಿರುವ ಬಿಎಲ್‌ಡಿಇ ಸಂಸ್ಥೆ, ಡಾ| ಸುರೇಖಾ ಕಲ್ಯಾಣಪ್ಪಗೋಳ, ಡಾ| ಗಿರೀಶ ಭದ್ರಗೊಂಡ, ಡಾ| ಜಯಲಕ್ಷ್ಮೀ ಗೋನಾಳ, ಡಾ| ಸ್ಮಿತಾ ಮಂಗಲಗಿ ಅವರಿದ್ದ ತಂಡವು ರೋಗ ತಡೆಗಟ್ಟುವಿಕೆ ಹಾಗೂ ಮುಂಜಾಗ್ರತಾ ಮಾತ್ರವಲ್ಲದೇ ಕೊರೊನಾದಂತಹ ವೈರಸ್‌ಗಳನ್ನು ಅಲ್ಟ್ರಾವೆಲೈಟ್ ಕಿರಣಗಳ ಮೂಲಕ ನಾಶಪಡಿಸಬಹುದು, ಇಲ್ಲವೇ ನಿಷ್ಕ್ರಿಯಗೊಳ್ಳುತ್ತವೆ ಎಂದು ತಿಳಿಸಲಾಗಿದೆ.
ಅಲ್ಟ್ರಾ ವೈಲೆಟ್ ಕಿರಣಗಳನ್ನು ಬಳಸಿ, ಆಸ್ಪತ್ರೆಗಳಲ್ಲಿ ಕೊರೊನಾ ರೋಗಿಗಳಿಗೆ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ಇತರೆ ಸಿಬ್ಬಂದಿ ತಮ್ಮ ಸ್ಟೇಥಸ್ಕೋಪ್, ಬಿ.ಪಿ.ಯಂತ್ರ, ಆಸ್ಪತ್ರೆ ದಾಖಲೆಗಳು, ಪೆನ್ನು, ಕೀ ಚೈನ್, ಪರ್ಸ್, ಚಪ್ಪಲಿಗಳು, ಮೊಬೈಲ್, ಲ್ಯಾಪ್‌ಟಾಪ್‌ಗ್ಳು ಸೇರಿದಂತೆ ಮರುಬಳಕೆ ವಸ್ತ್ರಗಳು ಮತ್ತು ಕವಚಗಳನ್ನು ಈ ಯಂತ್ರದ ಸಹಾಯದಿಂದ ಸಂಪೂರ್ಣ ಶುಚಿ ಮಾಡಲು ಸಾಧ್ಯವಿದೆ ಎಂದು ವಿವರಿಸಿದ್ದಾರೆ. ಅಲ್ಲದೇ ಮನೆಗಳಲ್ಲಿಯೂ ಸಹ ಹೊರಗಡೆಯಿಂದ ತರಿಸುವ ಹಾಲು, ತರಕಾರಿ, ದಿನಸಿ ಹಾಗೂ ಇತರೆ ಸಾಮಗ್ರಿಗಳನ್ನು ಸಹ ಈ ಯಂತ್ರದ ಮೂಲಕ ಶುಚಿತ್ವಗೊಳಿಸಬಹುದಾಗಿದೆ. ಯಾರಾದರು ವ್ಯಕ್ತಿಗಳು ಈ ಯಂತ್ರದ ಮುಂದೆ ನಿಂತರೆ ಅದು ಸ್ವಯಂ ಚಾಲಿತವಾಗಿ ತೆರೆದು, ಸ್ವಯಂ ಚಾಲಿತವಾಗಿ ಮುಚ್ಚುವುದು ವಿಶೇಷವಾಗಿದೆ. ಇದರಲ್ಲಿ ಇಡುವ ವಸ್ತುಗಳು 3-5ನಿಮಿಷಗಳಲ್ಲಿ ಸಂಪೂರ್ಣ ಶುಚಿತ್ವಗೊಳ್ಳುವವು.
ಬಿಎಲ್‌ಡಿಇ ವೈದ್ಯರ ತಂಡದ ಈ ಸಾಧನೆಗೆ ಮಾಜಿ ಸಚಿವ, ಸಂಸ್ಥೆಯ ಅಧ್ಯಕ್ಷ ಎಂ.ಬಿ.ಪಾಟೀಲ್ ಶ್ಲಾಘನೆ ವ್ಯಕ್ತಪಡಿಸಿದ್ದು, ಕೊವಿಡ್-19 ಕೊರೊನಾ ಕಾಯಿಲೆ ಕಷ್ಟಕರ ಸಂದರ್ಭದಲ್ಲಿ ಇಂತಹ ಆವಿಷ್ಕಾರಗಳು ಹಲವರಿಗೆ ವಿಶೇಷವಾಗಿ ವೈದ್ಯರಿಗೆ ನೆರವಾಗುವುದಾಗಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಬಿಜೆಪಿಯಲ್ಲಿ ನಾಯಕತ್ವದ ಕೊರತೆಯಿಲ್ಲ; ಮೋದಿ ನಂತರ ಯೋಗಿ ಎಂದ ಯತ್ನಾಳ್
Amit Shah ರಾಜೀನಾಮೆಗೆ ಒತ್ತಾಯಿಸಿ ಡಿ.28ಕ್ಕೆ ವಿಜಯಪುರ ಬಂದ್
Vijayapura: ವೃಕ್ಷಥಾನ್ ಹೆರಿಟೇಜ್ ರನ್‌ಗೆ ಸ್ಪೀಕರ್ ಯು.ಟಿ.ಖಾದರ್ ಚಾಲನೆ
Vijaypura: ಕೋರ್ಟ್ ನಲ್ಲೆ ಕತ್ತು ಕೊ*ಯ್ದುಕೊಂಡ ಆರೋಪಿ!!
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
Uppunda: ಪಾಳು ಕೆರೆ ಈಗ ಈಜುಕೊಳ!; ಚೌಂಡಿ ಕೆರೆಗೆ ಊರಿನ ಯುವಕರಿಂದ ಕಾಯಕಲ್ಪ
Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!
Perfect: ಎಡ್ ಶಿರನ್ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್ ಆದ ಉಡುಪಿಯ ಹುಡುಗ | Video
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.