![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
![Delhi-Stamp](https://www.udayavani.com/wp-content/uploads/2025/02/Delhi-Stamp-415x249.jpg)
Team Udayavani, Apr 15, 2020, 8:36 AM IST
ಕೊರೊನಾ ಪರೀಕ್ಷೆಗೆ ಒಳಗಾದ ಶಾಸಕ ಯು.ಟಿ. ಖಾದರ್.
ಉಳ್ಳಾಲ: ದಿಲ್ಲಿಯ ನಿಜಾಮುದ್ದಿನ್ ಮರ್ಕಝ್ನಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ್ದ ತೊಕ್ಕೊಟ್ಟಿನ ನಿವಾಸಿಗೆ ಎ. 4ರಂದು ಕೋವಿಡ್-19 ಸೋಂಕು ದೃಡವಾದ ಹಿನ್ನೆಲೆಯಲ್ಲಿ ಚೆಂಬುಗುಡ್ಡೆಯ ಜುಮಾ ಮಸೀದಿ ಹಾಗೂ ಪರಿಸರದ 105 ನಿವಾಸಿಗಳ ಕೋವಿಡ್ 10 ಪರೀಕ್ಷೆಯನ್ನು ಶಾಸಕ ಯು.ಟಿ. ಖಾದರ್ ಅವರ ನೇತೃತ್ವದಲ್ಲಿ ಮಸೀದಿ ಆವರಣದಲ್ಲಿ ನಡೆಸಲಾಯಿತು.
ಶಾಸಕರೇ ಸ್ವತಃ ಪರೀಕ್ಷೆಗೆ ಒಳಗಾಗುವ ಮೂಲಕ ಸ್ಥಳೀಯರಲ್ಲಿ ಜಾಗೃತಿ ಮೂಡಿಸಿದರು. ತೊಕ್ಕೊಟ್ಟು ನಿವಾಸಿ ದಿಲ್ಲಿ ಕಾರ್ಯಕ್ರಮ ಮುಗಿಸಿ ಬಂದ ಬಳಿಕ ಶುಕ್ರವಾರದ ಜುಮಾ ನಿರ್ವಹಿಸಿದ್ದರು. ಚೆಂಬುಗುಡ್ಡೆ ಪರಿಸರದಲ್ಲಿಯೂ ಸಂಚರಿಸಿದ್ದರು. ಅವರಿಗೆ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕೊರೊನಾ ಪರೀಕ್ಷೆಗೆ ವ್ಯವಸ್ಥೆ ಮಾಡುವಂತೆ ಜಮಾಅತ್ ಸಮಿತಿಗೆ ಆರೋಗ್ಯ ಇಲಾಖೆ ಸೂಚಿಸಿತ್ತು. ಮಸೀದಿಯ ಧ್ವನಿವರ್ಧಕದ ಮೂಲಕವೂ ಮಾಹಿತಿ ನೀಡಲಾಗಿತ್ತು. ಶಾಸಕ ಯು.ಟಿ. ಖಾದರ್ ಸಹಿತ 105 ಜನರ ಗಂಚಲು ದ್ರವ ತೆಗೆದು ಪರೀಕ್ಷೆಗೆ ಕಳುಹಿಸಲಾಗಿದೆ.
ತಾಲೂಕು ಆರೋಗ್ಯಾಧಿಕಾರಿ ಡಾ| ಸುಜಯ್, ನಿರ್ವಹಣ ಅಧಿಕಾರಿ ಡಾ| ಜಗದೀಶ್, ಜಿಲ್ಲಾ ಮಲೇರಿಯಾ ಅಧಿಕಾರಿ ಡಾ| ನವೀನ್, ಮೈಕ್ರೋಬಯಾಲಜಿಸ್ಟ್ ವೀಣಾ ಜಯರಾಜ್, ಉಳ್ಳಾಲ ಸರಕಾರಿ ಆಸ್ಪತ್ರೆಯ ಲ್ಯಾಬ್ ಟೆಕ್ನಿಷಿಯನ್ ದಿವ್ಯಾ, ನಾಟೆಕಲ್ ಪ್ರಾ.ಆ. ಕೇಂದ್ರದ ಲ್ಯಾಬ್ ಟೆಕ್ನಿಷಿಯನ್ ಜಲೀಲ್ ಸಹಕರಿಸಿದರು. ಶಾಸಕ ಯು.ಟಿ. ಖಾದರ್, ಕಣಚೂರು ಸಂಸ್ಥೆಯ ಮುಖ್ಯಸ್ಥ ಕಣಚೂರು ಮೋನು, ಎಂ.ಡಿ. ರಹ್ಮಾನ್, ಚೆಂಬುಗುಡ್ಡೆ ಮಸೀದಿ ಅಧ್ಯಕ್ಷ ಹನೀಫ್, ಕಾರ್ಯದರ್ಶಿ ಅಬ್ದುಲ್ ಸಲಾಂ, ಸದಸ್ಯರಾದ ಸಜದ್, ರಿಜ್ವಾನ್, ಎಂ.ಸಿ. ಖಾದರ್, ಅಶ್ರಫ್ ಕೆರೆಬೈಲ್ ಹಾಗೂ ನಗರ ಸಭೆ ಕೌನ್ಸಿಲರ್ ಬಾಜಿಲ್ ಡಿ’ಸೋಜಾ ಉಪಸ್ಥಿತರಿದ್ದರು.
You seem to have an Ad Blocker on.
To continue reading, please turn it off or whitelist Udayavani.