ಜಾನುವಾರುಗಳಿಗೆ ಮೇವು ಅಭಾವ ಭೀತಿ
ಲಾಕ್ಡೌನ್: ಘಟ್ಟ ಪ್ರದೇಶದಿಂದ ಉಭಯ ಜಿಲ್ಲೆಗಳಿಗೆ ಬೈ-ಹುಲ್ಲು ಪೂರೈಕೆ ಸ್ಥಗಿತ
Team Udayavani, Apr 15, 2020, 8:46 AM IST
ಸುಳ್ಯ: ಕೋವಿಡ್-19 ಲೌಕ್ಡೌನ್ ಕಾರಣ ಘಟ್ಟ ಪ್ರದೇಶದಿಂದ ಒಣ ಹುಲ್ಲು (ಬೈಹುಲ್ಲು) ಪೂರೈಕೆ ಆಗದ ಕಾರಣ ಬೇಸಗೆಯಲ್ಲಿ ಅವಿಭಜಿತ ಜಿಲ್ಲೆಯಲ್ಲಿ ಜಾನುವಾರುಗಳಿಗೆ ಮೇವಿನ ಅಭಾವದ ಭೀತಿ ಎದುರಾಗಿದೆ. ಪ್ರತಿ ವರ್ಷ ಘಟ್ಟ ಪ್ರದೇಶದಿಂದ ಒಣ ಹುಲ್ಲು ಸಂಗ್ರಹಿಸಿ ಅಗತ್ಯಕ್ಕೆ ತಕ್ಕಂತೆ ಬಳಸುವ ಕರಾವಳಿ ಜಿಲ್ಲೆಯ ಹೈನುಗಾರರಿಗೆ ಪ್ರಸ್ತುತ ಪೂರೈಕೆ ವ್ಯವಸ್ಥೆ ಇಲ್ಲದ ಕಾರಣ ಬಳಕೆಯ ಮೇಲೆ ಪರಿಣಾಮ ಬೀರಿದೆ. ಹೀಗಾಗಿ ಬೈ ಹುಲ್ಲು ಸಾಗಾಟಕ್ಕೆ ಅನುಮತಿ ನೀಡುವಂತೆ ಕೃಷಿಕರು ಆಗ್ರಹಿಸಿದ್ದಾರೆ.
ಒಣ ಹುಲ್ಲು ಆಧಾರ
ಕರಾವಳಿಯಲ್ಲಿ ಬಿಸಿಲಿನ ತಾಪ ಹೆಚ್ಚು. ಬೇಸಗೆಯಲ್ಲಿ ಕೃಷಿ ತೋಟಕ್ಕೆ ನೀರಿನ ಅಭಾವ ಉಂಟಾಗಿ ಹಸಿ ಹುಲ್ಲಿನ ಕೊರತೆ ಕಾಡುತ್ತದೆ. ಹೈನುಗಾರರು ಬೈಹುಲ್ಲನ್ನು ಸಂಗ್ರಹಿಸಿ ಜಾನುವಾರುಗಳಿಗೆ ಆಹಾರವಾಗಿ ಬಳಸುತ್ತಾರೆ. ಅವಿಭಜಿತ ಜಿಲ್ಲೆಯಲ್ಲಿ ಭತ್ತದ ಗದ್ದೆಗಳ ಪ್ರಮಾಣ ಇಳಿಮುಖವಾಗುತ್ತಿದ್ದು, ಒಣ ಹುಲ್ಲನ್ನು ಘಟ್ಟ ಪ್ರದೇಶದಿಂದ ತರಿಸುತ್ತಾರೆ. ಬೇಸಗೆಯಲ್ಲಿ ಮೇವಿನ ಕೊರತೆಯನ್ನು ಈ ಮೂಲಕ ನೀಗಿಸಲಾಗುತ್ತದೆ.
ಘಟ್ಟದಿಂದ ಆಮದು
ಕರಾವಳಿಗೆ ಘಟ್ಟದ ಪ್ರದೇಶಗಳಾದ ಹಾಸನ, ಶಿವಮೊಗ್ಗ, ಸಾಗರ, ಹೊಸನಗರ, ಬನವಾಸಿ, ಆನಂದಪುರ, ಚಿಕ್ಕಮಗಳೂರು, ಮೂಡಿಗೆರೆ ಪ್ರದೇಶಗಳಿಂದ ಬೈಹುಲ್ಲು ಪೂರೈಕೆಯಾಗುತ್ತಿದೆ. ಬೈಹುಲ್ಲು ಹೊತ್ತ ಲಾರಿ, ಟೆಂಪೋಗಳು ಮನೆ ಮನೆಗೆ ಬರುತ್ತವೆ. ಆದರೆ ಲಾಕ್ಡೌನ್ ಕಾರಣ ಈ ಬೇಸಗೆಯಲ್ಲಿ ಬೈಹುಲ್ಲು ಸಾಗಾಟ ಸ್ಥಗಿತವಾಗಿದೆ. ಇದರ ಬಿಸಿ ಹೈನುಗಾರಿಕೆಯ ಮೇಲೆ ಉಂಟಾಗಿದೆ. ಹೈನುಗಾರಿಕೆಗೆ ಒಣ ಹುಲ್ಲು ಅಗತ್ಯ ಎಂದು ಪರಿಗಣಿಸಿ ಸಾಗಾಟಕ್ಕೆ ಅನುಮತಿ ನೀಡಬೇಕು ಎಂದು ಕೃಷಿಕರು ಆಗ್ರಹಿಸಿದ್ದಾರೆ.
ಬೈ ಹುಲ್ಲು ಏಕೆ ಬೇಕು?
ಹಸಿ ಹುಲ್ಲಿನ ಅಭಾವವಿರುವ ಬೇಸಗೆಯಲ್ಲಿ ಹಸುವಿನ ಧಾತು ಹಾಗೂ ಹಾಲು ಸಂಗ್ರಹದ ಪ್ರಮಾಣ ಹೆಚ್ಚಿಸಲು ಬೈಹುಲ್ಲೇ ಆಧಾರ. ಪಶುಸಂಗೋಪನೆ ಇಲಾಖೆ ನೀಡುವ ಆಹಾರಕ್ಕಿಂತಲೂ ಒಣ ಹುಲ್ಲಿನ ಅಗತ್ಯ ಹೆಚ್ಚು ಎನ್ನುತ್ತಾರೆ ಹೈನುಗಾರರು. ದ.ಕ. ಜಿಲ್ಲೆಯಲ್ಲಿ ಮೇವು ಅವಲಂಬಿತ 3.82 ಲಕ್ಷ ಹಾಗೂ ಉಡುಪಿ ಜಿಲ್ಲೆಯಲ್ಲಿ 1.95 ಲಕ್ಷಕ್ಕೂ ಅಧಿಕ ಜಾನುವಾರುಗಳಿವೆ.
ಕೆಎಂಎಫ್ ಜತೆ ಚರ್ಚೆ
ಬೈಹುಲ್ಲು ಕೊರತೆಗೆ ಸಂಬಂಧಿಸಿ ಕೆಲವು ಹೈನುಗಾರರು ನನ್ನನ್ನು ಸಂಪರ್ಕಿಸಿದ್ದಾರೆ. ಈ ಕುರಿತು ಕೆಎಂಎಫ್ ಅಧ್ಯಕ್ಷರೊಂದಿಗೆ ಚರ್ಚಿಸಿದ್ದೇನೆ. ಕೆಎಂಎಫ್ ವತಿಯಿಂದಲೇ ನಿಗದಿತ ದರದಲ್ಲಿ ನೇರವಾಗಿ ಹೈನುಗಾರರಿಗೆ ಬೈಹುಲ್ಲು ಪೂರೈಸಲು ಕ್ರಮ ಕೈಗೊಳ್ಳುವಂತೆ ತಿಳಿಸಿದ್ದೇನೆ.
– ಸಂಜೀವ ಮಠಂದೂರು, ಶಾಸಕರು, ಪುತ್ತೂರು
ಜಿಲ್ಲಾಡಳಿತ ಕ್ರಮ ಕೈಗೊಳ್ಳಬೇಕು
ಪ್ರತಿ ಬಾರಿ ಸುಳ್ಯ ತಾಲೂಕಿಗೆ ಹಾಸನದಿಂದ ಬೈಹುಲ್ಲು ಪೂರೈಕೆ ಮಾಡಲಾಗುತ್ತಿತ್ತು. ಲಾಕ್ಡೌನ್ ಕಾರಣ ಈ ಬಾರಿ ಪೂರೈಕೆ ಆಗಿಲ್ಲ. ಇದರಿಂದ ಮೇವಿನ ಅಭಾವ ಉಂಟಾಗಿದೆ. ಜಾನುವಾರಿನ ಮೇಲೂ ಅದರ ಪರಿಣಾಮ ಬೀರುತ್ತಿದೆ. ಜಿಲ್ಲಾಡಳಿತ ಒಣ ಹುಲ್ಲು ಸಾಗಾಟಕ್ಕೆ ವ್ಯವಸ್ಥೆ ಕಲ್ಪಿಸಬೇಕು. ಜಿಲ್ಲೆಯ ಬೇರೆ ಭಾಗಗಳಲ್ಲಿ ಬೈಹುಲ್ಲು ಸಂಗ್ರಹವಿದ್ದರೆ ಅಗತ್ಯವಿರುವ ಕಡೆಗೆ ಪೂರೈಸಬೇಕು.
– ಭಾಸ್ಕರ ಗೌಡ ಹೊಸಗದ್ದೆ ಸೋಣಂಗೇರಿ, ಕೃಷಿಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.