ನಗರದಲ್ಲಿ ಸ್ವಯಂ ಪ್ರೇರಿತ ಸೀಲ್‌ಡೌನ್‌


Team Udayavani, Apr 15, 2020, 12:28 PM IST

ನಗರದಲ್ಲಿ ಸ್ವಯಂ ಪ್ರೇರಿತ ಸೀಲ್‌ಡೌನ್‌

ಸಾಂದರ್ಭಿಕ ಚಿತ್ರ

ಬೆಂಗಳೂರು: ತಮ್ಮ ಬಡಾವಣೆಗಳಿಗೆ ಸ್ವತಃ ತಾವೇ ಸೀಲ್‌, ಸೀಮೋಲ್ಲಂಘನೆ ಮಾಡುವವರಿಗೆಲ್ಲ ಪೊಲೀಸರಂತೆ ದಾಖಲೆಗಳ ಪರಿಶೀಲನೆ, ರಸ್ತೆಗಳು ಟ್ರಾಫಿಕ್‌ನಿಂದ ಮುಕ್ತವಾಗಿದ್ದರೂ ಸುತ್ತಿಬಳಸಿ ಬರುವ ಆ್ಯಂಬುಲೆನ್ಸ್‌ಗಳು, ಸೀಲ್‌ಡೌನ್‌ನಲ್ಲೇ ನುಸುಳುವ ಡೆಲಿವರಿ ಬಾಯ್‌ಗಳು… – ನಗರದ ಕೆಲವು ಬಡಾವಣೆಗಳಲ್ಲಿ ಕಂಡುಬರುವ ದೃಶ್ಯಗಳಿವು.

ಮುಖ್ಯರಸ್ತೆಗಳಲ್ಲಿ ಪೊಲೀಸರು ಬ್ಯಾರಿಕೇಡ್‌ಗಳಿಂದ ಲಾಕ್‌ಡೌನ್‌ ಮಾಡಿ, ಅದನ್ನು ಉಲ್ಲಂಘಿಸದಂತೆ ಕಾವಲು ಕಾಯುತ್ತಿದ್ದಾರೆ. ಆದರೆ, ಸ್ಥಳೀಯ ನಿವಾಸಿಗಳು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆ ರಸ್ತೆಗಳನ್ನು ಕೂಡುವ ಉಪರಸ್ತೆಗಳನ್ನೂ ಬೇಲಿ ಹಾಕಿ ಬಂದ್‌ ಮಾಡಿದ್ದಾರೆ. ಕೆಲವರು ಪರ್ಯಾಯ ಮಾರ್ಗ ಹುಡುಕಲು ಪ್ರಯತ್ನಿಸುತ್ತಾರೆ. ಇನ್ನು ಹಲವರು ಬೇಲಿ ಜಿಗಿಯುವ ಸಾಹಸ ಮಾಡುತ್ತಿದ್ದಾರೆ. ಅಂತಹವರನ್ನು ತಡೆದು ನಿವಾಸಿಗಳು ವಿಚಾರಣೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನಗರದ ಕೆಲವು ಉಪರಸ್ತೆಗಳೂ ಸೀಲ್‌ಡೌನ್‌ ಆಗಿ ಪರಿವರ್ತನೆಯಾಗುತ್ತಿವೆ. ಬಡಾವಣೆಯ ಪ್ರವೇಶ ದ್ವಾರದ ರಸ್ತೆ ಹಾಗೂ ಕಡೆಯ ರಸ್ತೆಗೆ ದೊಡ್ಡದಾದ ಮರದ ದಿಮ್ಮಿಗಳನ್ನು ಅಡ್ಡ ಇಟ್ಟಿದ್ದಾರೆ. ಕೆಲವೆಡೆ ಪೊಲೀಸ್‌ ಬ್ಯಾರೀಕೇಡ್‌ಗಳನ್ನೂ ಬಳಕೆ ಮಾಡಿದ್ದಾರೆ. ಇನ್ನೂ ಹಲವೆಡೆ ಟಾಟಾಏಸ್‌ ವಾಹನಗಳು, ಆಟೋ, ಕಾರುಗಳನ್ನು, ಗಿಡದ ಪಾಟ್‌ಗಳು, ಬೈಕ್‌ಗಳನ್ನು ಅಡ್ಡವಿಟ್ಟು “ಸೀಲ್‌ಡೌನ್‌’ ಮಾಡಿದ್ದಾರೆ.

ವಿದ್ಯಾಪೀಠ ವೃತ್ತ, ರಾಜಾಜಿನಗರ, ವಿಜಯನಗರ, ಕೆ.ಆರ್‌.ಪುರ, ಬಸವನಗುಡಿ, ಯಲಹಂಕ, ಗೊರಗುಂಟೆಪಾಳ್ಯ, ಕೊಡಿಗೇಹಳ್ಳಿ, ವಿದ್ಯಾರಣ್ಯಪುರ, ಹೆಬ್ಟಾಳ. ಕೆ.ಆರ್‌ ಪುರ, ಕೆ.ಜೆ ಹಳ್ಳಿ, ಜೆ.ಜೆ. ನಗರ, ಸಹಕಾರನಗರ, ಆರ್‌.ಟಿ. ನಗರ, ಗಂಗಾನಗರ, ಹಲಸೂರು ಸೇರಿದಂತೆ ನಗರದ ಬಹುತೇಕ ಕಡೆಯ ಬಡವಾಣೆಗಳಲ್ಲಿ ಸೀಲ್‌ಡೌನ್‌ ಕಾಣಬಹುದು. ಸ್ಥಳೀಯರೇ ಸ್ವಯಂಸೇವಕರು!: ಜಕ್ಕೂರಿನ ವೆಂಕಟೇಶ್ವರನಗರದಲ್ಲಿ ಒಂದು ಕಡೆ ಕಾಲ್ನಡಿಗೆಯಲ್ಲಿ ಸಂಚರಿಸಲು ಚೆಕ್‌ಪೋಸ್ಟ್‌ ರೀತಿ ಅವಕಾಶ ಮಾಡಿಕೊಟ್ಟು ಇನ್ನುಳಿದ ಎಲ್ಲ ದಾರಿಗಳಲ್ಲಿ ಇಟ್ಟಿಗೆ, ಕಲ್ಲು, ಮರದ ದಿಮ್ಮಿಗಳನ್ನು ಇಟ್ಟು ಯಾವುದೇ ವಾಹನಗಳು ಸಂಚರಿಸದಂತೆ ನಿರ್ಬಂಧ ವಿಧಿಸಲಾಗಿದೆ. ಕಾಲ್ನಡಿಗೆಯಲ್ಲಿ ಸಂಚರಿಸುವ ಮಾರ್ಗದಲ್ಲಿ ಯಾವುದೇ ವಾಹನಗಳು ಬಂದರೆ ಇಲ್ಲಿನ ನಿವಾಸಿಗಳು ತಪಾಸಣೆ ನಡೆಸುತ್ತಾರೆ. ಅನಗತ್ಯವಾಗಿ ಬಂದಿದ್ದರೆ ತಡೆಯುತ್ತಾರೆ. ಸ್ವಯಂಸೇವಕರಂತೆ ಕಾರ್ಯನಿರ್ವಹಿಸುವ ಈ ನಿವಾಸಿಗಳು ಕೈಗವಸು ಮತ್ತು ಮುಖಗವಸು ಧರಿಸಿರುತ್ತಾರೆ.

ಈ ಕುರಿತು ಪ್ರತಿಕ್ರಿಯಿಸಿದ ಬಡಾವಣೆಯ ಗ್ರೂಪ್‌ ಪಬ್ಲಿಕ್‌ ಇಶ್ಯು ಫೋರಂನ ಗಿರೀಶ್‌ ಪುಟ್ಟಣ್ಣ, “ತುರ್ತು ವೈದ್ಯಕೀಯ ಸೇವೆಯ ವಾಹನಗಳನ್ನು ಹೊರತುಪಡಿಸಿ ಹೊರಗಿನಿಂದ ಯಾವುದೇ ವಾಹನ ಸಂಚರಿಸದಂತೆ ಬಡಾವಣೆಯ ರಸ್ತೆಗಳನ್ನು ಬಂದ್‌ ಮಾಡಿದ್ದೇವೆ. ತಳ್ಳುವ ಗಾಡಿಗಳಿಗೂ ಅವಕಾಶ ನೀಡಿಲ್ಲ. ಇಲ್ಲಿನ ನಿವಾಸಿಗರು ವಾರಕ್ಕೆ ಎರಡು ಬಾರಿ ಕಾಲ್ನಡಿಗೆ ಮಾರ್ಗದಲ್ಲಿ ಹೊರಗೆ ಹೋಗಿ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ತರುತ್ತಾರೆ. ಸ್ವಚ್ಛತೆಯನ್ನು ಕಾಯ್ದುಕೊಳ್ಳಲಾಗಿದೆ. ಈ ಪ್ರಯೋಗವನ್ನು ಬೆಂಗಳೂರಿನ ಎಲ್ಲಾ ಬಡಾವಣೆಗಳಲ್ಲೂ ಅನುಸರಿಸಿದರೆ ಜನದಟ್ಟಣೆ ತಡೆಯಬಹುದು, ಸೋಂಕು ಹರಡುವುದನ್ನು ನಿಯಂತ್ರಿಸಬಹುದು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಆ್ಯಂಬುಲೆನ್ಸ್‌ ಸಂಚಾರ ಕ್ಕೆ ಕಷ್ಟ? :  ನಾಗರಿಕರು ಮಾಡಿರುವ ಸ್ವಯಂಪ್ರೇರಿತ ಸೀಲ್‌ಡೌನ್‌ ಕೆಲವು ವೇಳೆ ಆ್ಯಂಬುಲೆನ್ಸ್‌ ಹಾಗೂ ಇ-ಮಾರುಕಟ್ಟೆ ಕಂಪನಿಗಳ ಡೆಲಿವರಿ ಬಾಯ್‌ಗಳಿಗೆ ಕೆಲವೊಮ್ಮೆ ಕಿರಿಕಿರಿ ಉಂಟಾಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ರಸ್ತೆಗಳನ್ನು ಮುಚ್ಚಿರುವುದರಿಂದ ಅದೇ ಬಡಾವಣೆಯ ಯಾರಾದರೂ ಅನಾರೋಗ್ಯಕ್ಕೆ ಒಳಗಾಗಿ ಆ್ಯಂಬುಲೆನ್ಸ್‌ ಬಂದರೆ, ನಿರ್ದಿಷ್ಟ ಸ್ಥಳ ತಲುಪುವುದು ತಡವಾಗುತ್ತಿದೆ. ಹೊರಬರುವುದು ಕೂಡ ಕೆಲವು ಸಲ ಸಮಸ್ಯೆ ಆಗುತ್ತದೆ. “ಆ್ಯಂಬುಲೆನ್ಸ್‌ನಂತಹ ತುರ್ತು ಸೇವೆ ಕಲ್ಪಿಸುವ ವಾಹನಗಳನ್ನು ತಡೆಯಲು ಸಾಧ್ಯವೇ? ಸ್ಥಳದಲ್ಲಿದ್ದವರೇ ತೆರವುಗೊಳಿಸಿ ಜಾಗ ಮಾಡಿಕೊಡುತ್ತೇವೆ. ಹಾಗಾಗಿ, ತೊಂದರೆ ಆಗದು’ ಎಂದು ಕೊಡಿಗೇಹಳ್ಳಿಯ ಕಿಶೋರ್‌ ನಿರಾಕರಿಸಿದರು.

ಲಾಕ್‌ಡೌನ್‌ಗೆ ಸಾಥ್‌ :  ಬಾಪೂಜಿನಗರ, ಪಾದರಾಯನಪುರ ವಾರ್ಡ್‌ಗಳಿಗೆ ಬಿಬಿಎಂಪಿ ಅಧಿಕೃತವಾಗಿ ಸೀಲ್‌ಡೌನ್‌ ಮಾಡಿದ ಬೆನ್ನಲ್ಲೇ ನಗರದ ಬಹುತೇಕ ವಾರ್ಡ್‌ಗಳು, ಬಡಾವಣೆಗಳಲ್ಲಿ ನಾಗರಿಕರು ಸೀಲ್‌ ಮಾಡಿಕೊಳ್ಳುವ ಕ್ರಮಗಳಿಗೆ ಮುಂದಾಗಿದ್ದಾರೆ. “ಹೊರಗಿನವರು ಬಡಾವಣೆಗಳಿಗೆ ಬರದಂತೆ ತಡೆಯು ವುದು ಹಾಗೂ ಸರ್ಕಾರದ ಆದೇಶದಂತೆ ಬಡವಾಣೆ ನಿವಾಸಿಗಳು ಸಹ ಹೊರಗೆ ಹೋಗದಂತೆ ಮಾಡುವುದು ಇದರ ಉದ್ದೇಶ. ಇದರಿಂದ ಯಾರಿಗೂ ತೊಂದರೆ ಆಗಿಲ್ಲ. ಸೋಂಕು ತಡೆಯಲು ಸರ್ಕಾರದ ಲಾಕ್‌ಡೌನ್‌ಗೆ ಸಾಥ್‌ ನೀಡುವಲ್ಲಿ ನಮ್ಮದೂ ಒಂದು ಪ್ರಯತ್ನ’ ಎಂದು ಎಲ್‌ಬಿಎಸ್‌ ನಗರದ ಪ್ರಮೋದ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ತುರ್ತು ಸಂಚಾರ ಅವಶ್ಯ :  ಮೇಲ್ಸೇತುವೆ, ಆಯ್ದ ಗ್ರೇಡ್‌ ಸಪರೇಟರ್‌ ಸೇರಿ ಕೆಲವೊಂದು ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಉಳಿದಂತೆ ಆಯಾ ಭಾಗಗಳಲ್ಲಿ ಜನರೇ ಸ್ವಯಂಪ್ರೇರಿತವಾಗಿ ಓಡಾಟಕ್ಕೆ ನಿರ್ಬಂಧ ವಿಧಿಸಿದ್ದಾರೆ. ಆದರೆ, ಆ್ಯಂಬುಲೆನ್ಸ್‌ ಸೇರಿದಂತೆ ತುರ್ತು ವಾಹನಗಳ ಸಂಚಾರಕ್ಕೆ ಅದರಿಂದ ತೊಂದರೆ ಆಗದಂತೆ ನಾಗರಿಕರು ಎಚ್ಚರಿಕೆ ವಹಿಸಬೇಕು ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ತೊಂದರೆಯಲ್ಲಿ ಡೆಲಿವರಿ ಬಾಯ್ಸ್ : ಫ‌ುಡ್‌ ಡೆಲಿವರಿ ಮಾಡಬೇಕಾದ ಸ್ಥಳ ಹತ್ತಿರವೇ ಇದ್ದರೂ ಆ ರಸ್ತೆ ಮುಚ್ಚಿದ್ದರೆ ಸುತ್ತುಹಾಕಿ ಬೇರೆ ಮಾರ್ಗದ ಮೂಲಕ ಬರಬೇಕಾಗುತ್ತದೆ. ಇದರಿಂದ ಪೆಟ್ರೋಲ್‌ ವ್ಯಯ ಆಗುತ್ತದೆ. ಜತೆಗೆ ಸಮಯವೂ ವ್ಯರ್ಥವಾಗುತ್ತಿದೆ. ಕಳೆದ ಒಂದು ವಾರದಿಂದ ಈ ಸ್ಥಿತಿಯನ್ನು ಎದುರಿಸುತ್ತಿದ್ದೇವೆ. ಆದರೆ, ಸ್ಪಂದನೆ ದೊರೆಯುತ್ತಿಲ್ಲ. ಪೊಲೀಸ್‌ ಇಲಾಖೆ ಹಾಗೂ ಸ್ಥಳೀಯರ ಸೂಚನೆ ಪಾಲಿಸಬೇಕಷ್ಟೇ’ ಎನ್ನುತ್ತಾರೆ ಸ್ವಿಗ್ಗಿ ಫ‌ುಡ್‌ ಡೆಲಿವರಿ ಬಾಯ್‌ ಹುಲಿತೆಪ್ಪ.

 

 -ಮಂಜುನಾಥ ಲಘುಮೇನಹಳ್ಳಿ

ಟಾಪ್ ನ್ಯೂಸ್

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Instagram provides clues to finding suspect who had been on the run for 9 years

Bengaluru: 9 ವರ್ಷದಿಂದ ತಪ್ಪಿಸಿಕೊಂಡಿದ್ದ ಆರೋಪಿ ಪತ್ತೆಗೆ ಸುಳಿವು ನೀಡಿದ ಇನ್ಸ್ಟಾಗ್ರಾಮ್

21-cancer

Bengaluru: ಪ್ರತಿವರ್ಷ 500 ಮಕಳಲ್ಲಿ ಕ್ಯಾನ್ಸರ್‌ ಪತ್ತೆ !

20-metro

Metro: ಮರುಪರಿಷ್ಕರಣೆ: ತಪ್ಪದ ಮೆಟ್ರೋ ದರ ಗೊಂದಲ

19-bng

Bengaluru: 1.84 ಲಕ್ಷ ಬೀದಿ ನಾಯಿಗಳಿಗೆ ಸಂಯುಕ್ತ ಲಸಿಕೆ

18-bng

Bengaluru: ಇಂಧನ, ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

crimebb

Kasaragod: ಹಲ್ಲೆ ಪ್ರಕರಣ; ಕೇಸು ದಾಖಲು

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Jagadish Shettar: ಯಾವಾಗ ಬೇಕಾದರೂ ಸರ್ಕಾರ ಪತನ: ಶೆಟ್ಟರ್‌

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

de

Vitla: ಕಾಲು ಜಾರಿ ಕೆರೆಗೆ ಬಿದ್ದು ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.