ಕೋವಿಡ್‌-19:ಚೀನ ಲಾಕ್‌ಡೌನ್‌ ಇನ್ನೆಷ್ಟು ದಿನ?

Team Udayavani, Apr 15, 2020, 2:00 PM IST

ಕೋವಿಡ್‌-19:ಚೀನ ಲಾಕ್‌ಡೌನ್‌ ಇನ್ನೆಷ್ಟು ದಿನ?

ಕೋವಿಡ್‌ 19 ಕೇಂದ್ರಸ್ಥಾನವೆನಿಸಿದ ವುಹಾನ್‌ ಜನರು 76 ದಿನಗಳ ಬಳಿಕ ದಿಗ್ಬಂಧನ ಮುಕ್ತರೆನಿಸಿದ್ದಾರೆ. ಚೀನದಲ್ಲಿ  ಸೋಂಕಿತರ ಸಂಖ್ಯೆ ದಿನೇ ದಿನೆ ಇಳಿಕೆಯಾಗಲು, ವೈರಸ್‌ ಹರಡುವಿಕೆ ಕಡಿಮೆಯಾಗಲು ಚೀನದ ಕಟ್ಟು ನಿಟ್ಟಿನ ನಿರ್ಬಂಧವೂ ಕಾರಣವಾಗಿತ್ತು ಎನ್ನುವುದು ನಿಸ್ಸಂಶಯ.

ಚೀನ: ಚೀನದ ಮುಖ್ಯ ಉದ್ಯಮಗಳ ಕೇಂದ್ರ ವುಹಾನ್‌ ನಗರವು 76 ದಿನಗಳಲ್ಲಿ ಮೊದಲ ಬಾರಿಗೆ ತನ್ನ ಹೆದ್ದಾರಿಯನ್ನು ಮುಕ್ತಗೊಳಿಸಿದೆ. ಇದು ಕೋವಿಡ್‌-19ನಿಂದ ಮುಕ್ತವಾಗುತ್ತಿರುವುದರ ಸೂಚನೆ ಎಂಬ ಮಾತುಗಳು ವ್ಯಕ್ತವಾಗುತ್ತಿವೆ.

ಕೋವಿಡ್‌-19 ಸೋಂಕಿನಿಂದ ಜನವರಿ 23ರಂದು ಬೀಜಿಂಗ್‌ ವುಹಾನ್‌ ನಗರವನ್ನು ಸಂಪೂರ್ಣವಾಗಿ ಮುಚ್ಚಿತ್ತು. ಎಲ್ಲರಿಗೂ ತಮ್ಮ ಮನೆಯಲ್ಲೇ ಇರಲು ಸೂಚಿಸಿತ್ತು. ವೈರಸ್‌ ಪ್ರಪಂಚದಾದ್ಯಂತ ಹರಡುತ್ತಿದ್ದಂತೆ ಅಭಿವೃದ್ಧಿಹೊಂದಿದ ರಾಷ್ಟ್ರಗಳು ಎಚ್ಚೆತ್ತುಕೊಡು ಲಾಕ್‌ಡೌನ್‌ ಅನ್ನು ಅನುಸರಿಸಲು ಆರಭಿಸಿದವು. ಸಾರ್ವಜನಿಕ ಸಂಪರ್ಕದ ಮೇಲೆ ಅಸಾಧಾರಣ ನಿರ್ಬಂಧವನ್ನು ಹೇರಿದವು.

ಇದೀಗ ವುಹಾನ್‌ ನಗರವು ಮತ್ತೆ ಮೊದಲಿನಂತೆ ತನ್ನ ಕಾರ್ಯವನ್ನು ಆರಭಿಸುವ ಭರವಸೆಯನ್ನು ನೀಡಿದ್ದು, ಪರಿಸ್ಥಿತಿ ಸುಧಾರಿಸುತ್ತಿರುವುದು ಆಶ್ಚರ್ಯವನ್ನು ಉಂಟುಮಾಡಿದೆ. ಅಧಿಕಾರಿಗಳು ಮತ್ತು ತಜ್ಞರು ಎಚ್ಚರಿಕೆಯಿಂದ ಪರಿಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ.

ಚೀನಾದ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಆದರೆ ಈ ಪ್ರಕರಣಗಳು ಪುನರಾರಭವಾಗುವ ಅಪಾಯವಿದೆ ಎಂದು ಯುಎಸ್‌ ಮೂಲದ ಕೌನ್ಸಿಲ್‌ ಆನ್‌ ಫಾರಿನ್‌ ರಿಲೇಶನ್ಸ್‌ನಲ್ಲಿ ಜಾಗತಿಕ ಆರೋಗ್ಯದ ಹಿರಿಯ ಸಹವರ್ತಿ ಯಾನ್‌ ಜಾಂಗ್‌ ಹುವಾಂಗ್‌ ಹೇಳಿದ್ದಾರೆ.

ಮೂರು ತಿಂಗಳಲ್ಲಿ ಕೋವಿಡ್‌-19 ಸೋಂಕು 184 ದೇಶ ಮತ್ತು ಪ್ರಾಂತ್ಯಗಳನ್ನು ತಲುಪಿದ್ದು, 1.6 ದಶಲಕ್ಷ ಜನರಿಗೆ ಸೋಂಕು ತಗುಲಿದೆ ಮತ್ತು ಅವರಲ್ಲಿ 95,000 ಜನಸಾವನ್ನಪ್ಪಿದ್ದಾರೆ. ಚೀನದಲ್ಲಿ 82,000 ಪ್ರಕರಣಗಳಲ್ಲಿ 3,000 ಜನರು ಸಾವನ್ನಪ್ಪಿದ್ದಾರೆ. ಈಗ ಚೀನ ಐದನೇ ಸ್ಥಾನದಲ್ಲಿದೆ.

ಇದೀಗ ಯುರೋಪ್‌ ಈ ಸೋಂಕಿನ ಕೇಂದ್ರ ಬಿಂದುವಾಗಿದ್ದು, 4,60,000 ಪ್ರಕರಣಗಳಲ್ಲಿ 16,000 ಜನರು ಸಾವನ್ನಪ್ಪಿದ್ದಾರೆ ಮತ್ತು ಯುನೈಟೆಡ್‌ ಸ್ಟೇಟ್ಸ್‌ ವರದಿಯ ಪ್ರಕಾರ ಮುಂದಿನ ಸ್ಥಾನದಲ್ಲಿದೆ.

ಎಲ್ಲ ದೇಶಗಳು ವೈರಸ್‌ ಮುಕ್ತ ಎಂದು ಹೇಳುವವರೆಗೆ ಸೋಂಕು ಮುಗಿದಿದೆ ಎಂದು ಹೇಳಲಾಗದು ಎಂದು ಹುವಾಂಗ್‌ ಹೇಳಿದರು. ಇವೆಲ್ಲಾ ಪ್ರಪಂಚಕ್ಕೆ ದೀರ್ಘ‌ಕಾಲದ ಲಾಕ್‌ ಡೌನ್‌ಅನ್ನು ಸೂಚಿಸುತ್ತದೆ.

ಸೋಂಕು ಹೆಚ್ಚಾಗುವುದು ಮತ್ತು ಕಡಿಮೆಯಾಗುವುದರಿದ ಸರಕಾರದ ನಿಯಂತ್ರಣಗಳು ಇನ್ನಷ್ಟು ಬಿಗಿಗೊಳ್ಳುತ್ತವೆ. ಲಸಿಕೆ ದೊರೆಯುವವರೆಗೆ ಮತ್ತು ರೋಗನಿರೋಧಕ ಶಕ್ತಿ ಜನರಲ್ಲಿ ಹೆಚ್ಚುವವರೆಗೂ ಈ ನಿರ್ಬಂಧ ಹೀಗೆ ಉಳಿಯಬಹುದೆಂದು ಇಲ್ಲವಾದಲ್ಲಿ ಈ ಸೋಂಕು ಇನ್ನಷ್ಟು ಹೆಚ್ಚುತ್ತದೆ ಎಂದು ತಜ್ಞರೊಬ್ಬರು ತಿಳಿಸಿದ್ದಾರೆ.

ಸಿಂಗಾಪುರ ಆರಂಭದಲ್ಲಿ ಲಾಕ್‌ಡೌನ್‌ ಅನ್ನು ಅನುಸರಿಸದೇ ಸೋಂಕು ನಿಯಂತ್ರಿಸುವಲ್ಲಿ ಯಶಸ್ವಿಯಾಯಿತು. ಇಲ್ಲಿನ ನಗರದಲ್ಲಿ ಸೋಂಕುಗಳನ್ನು ತಡೆಗಟ್ಟಲು ಕಟ್ಟುನಿಟ್ಟಾದ ಕಣ್ಗಾವಲು ಮತ್ತು ಸಂಪರ್ಕ ತಡೆಯನ್ನು ಅವಲಂಬಿಸಿದೆ. ಆದರೆ ಹಲವು ವಲಸೆ ಕಾರ್ಮಿಕರಿಂದ ಸೋಂಕಿನ ಪ್ರಕರಣ ಹೆಚ್ಚಿದ್ದರಿಂದ ಕಳೆದ ವಾರ ಶಾಲೆ ಮತ್ತು ಕೆಲಸದ ಸ್ಥಳಗಳನ್ನು ಮುಚ್ಚಿಸಿತು. ಹತ್ತಿರದ ಹಾಂಗ್‌ ಕಾಂಗ್‌ನಲ್ಲಿ ಅಧಿಕಾರಿಗಳು ಚೀನ ಭೂಭಾಗದೊದಿಗೆ ಗಡಿ ನಿಯಂತ್ರಣವನ್ನು ಬಿಗಿಗೊಳಿಸಿದರು. 5,000 ಪ್ರಕರಣಗಳನ್ನು ಹೊಂದಿರುವ ಜಪಾನ್‌ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.

ಕೋವಿಡ್‌-19ನ ತಾಪಮಾನದ ಅಧ್ಯಯನ ಮಾಡುತ್ತಿರುವ ನಿಕೋಲ್ಸ್‌ “ವೈರಸ್‌ ಆಖಕ್ಕೆ ಸೂಕ್ಷ್ಮವಾಗಿದ್ದು, ಶೀತ ವಾತಾವರಣಕ್ಕೆ ಬದುಕುಳಿಯುತ್ತದೆ ಮತ್ತು ಉತ್ತಮವಾಗಿ ಇನ್ನೊಬ್ಬರಿಗೆ ಹರಡುತ್ತದೆ. ಆದ್ದರಿಂದ ಕೆಲವು ತಿಂಗಳುಗಳವರೆಗೆ ಅಂತಾರಾಷ್ಟ್ರೀಯ ಪ್ರಯಾಣವನ್ನು ನಿರ್ಲಕ್ಷಿಸಬೇಡಿ ಎಂದು ಅವರು ಹೇಳಿದರು.

ಟಾಪ್ ನ್ಯೂಸ್

HD-Kumaraswamy

Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ

Sonia-Ghandi

Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ

Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!

Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!

Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ

Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ

Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ

Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ

Kundapura: “ಅವರು ಪ್ರತೀ ದಿನ ಫೋನ್‌ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’

Kundapura: “ಅವರು ಪ್ರತೀ ದಿನ ಫೋನ್‌ ಮಾಡುತ್ತಿದ್ದರು… ಅಂದು ನನ್ನ ಕರೆಗೆ ಉತ್ತರಿಸಲಿಲ್ಲ’

Pushpa 2: 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ

Pushpa 2film : 21 ದಿನಗಳಲ್ಲಿ 1100 ಕೋಟಿ ರೂ. ಗಳಿಸಿದ “ಪುಷ್ಪ-2′ ಸಿನೆಮಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Syria ಸರ್ವಾಧಿಕಾರಿ ಬಶರ್‌ ಅಸಾದ್‌ ಪತ್ನಿಗೆ ಲ್ಯುಕೇಮಿಯಾ: ವರದಿ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Maulana Masood: 26/11‌ ದಾಳಿಯ ಮಾಸ್ಟರ್‌ ಮೈಂಡ್: ಭಯೋ*ತ್ಪಾದಕ ಮಸೂದ್‌ ಗೆ ಹೃದಯಾಘಾತ

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…

ಬಾಹ್ಯಾಕಾಶದಲ್ಲಿ ಕ್ರಿಸ್ಮಸ್‌ ಆಚರಿಸಿದ ಸುನೀತಾ ವಿಲಿಯಮ್ಸ್‌

ಬಾಹ್ಯಾಕಾಶದಲ್ಲಿ ಕ್ರಿಸ್ಮಸ್‌ ಆಚರಿಸಿದ ಸುನೀತಾ ವಿಲಿಯಮ್ಸ್‌

Kazakhstan: ಅಜೆರ್ಬೈಜಾನ್‌ ಏರ್‌ ಲೈನ್ಸ್‌ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?

Kazakhstan: ಅಜೆರ್ಬೈಜಾನ್‌ ಏರ್‌ ಲೈನ್ಸ್‌ ಪತನ, 25ಕ್ಕೂ ಅಧಿಕ ಪ್ರಯಾಣಿಕರ ಮೃತ್ಯು?

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

HD-Kumaraswamy

Belagavi: ಅಧಿವೇಶನ ಶತಮಾನೋತ್ಸವದಲ್ಲಿ ನಕಲಿ ಗಾಂಧಿಗಳೇ ಹೆಚ್ಚು: ಎಚ್‌ಡಿಕೆ ವ್ಯಂಗ್ಯ

Sonia-Ghandi

Belagavi Congress Session: ಗಾಂಧೀಜಿ ಪರಂಪರೆ ಮುಂದುವರಿಸಲು ಬದ್ಧರಾಗಬೇಕು: ಸೋನಿಯಾ

Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!

Udupi: ಗೀತಾರ್ಥ ಚಿಂತನೆ 137: ಮನೆಗೆ ಬೆಂಕಿ ಬಿದ್ದರೆ ದುಃಖ ಬೆಂಕಿಗಾಗಿಯಲ್ಲ!

Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ

Christmas, ವರ್ಷಾಂತ್ಯ ಸಂಭ್ರಮ; ಬೀಚ್‌ಗಳಿಗೆ ಜೀವಕಳೆ

Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ

Captain Brijesh Chowta: ಪಿಎಂ-ವಿಶ್ವಕರ್ಮ ಯೋಜನೆ ಯಶಸ್ವಿ ಅನುಷ್ಠಾನಕ್ಕೆ ಸೂಚನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.