ಕೋವಿಡ್ ಹಾವಳಿ: ಮಲ್ಲಿಗೆ ಕೃಷಿಕರು ಕಂಗಾಲು !
ಸೀಸನ್ ಸಮಯದಲ್ಲೇ ಎದುರಾದ ಸಮಸ್ಯೆ
Team Udayavani, Apr 15, 2020, 1:10 PM IST
ಬಂಟ್ವಾಳ: ಮದುವೆ ಸಹಿತ ಶುಭ ಸಮಾರಂಭಗಳು ಹೆಚ್ಚಾಗಿ ನಡೆಯುವ ಮಾರ್ಚ್-ಎಪ್ರಿಲ್ ಸಮಯದಲ್ಲೇ ಕೋವಿಡ್ ಸಮಸ್ಯೆ ಕಾಣಿಸಿಕೊಂಡಿರುವುದರಿಂದ ಮಲ್ಲಿಗೆ ಬೆಳೆಗಾರರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ. ಈ ಬಾರಿ ಸೀಸನ್ ಸಮಯದಲ್ಲಿ ಹೂವುಗಳ ಮಾರುಕಟ್ಟೆಯೇ ನಿಂತುಹೋಗಿದೆ.
ಇತರ ಬೆಳೆಗಳ ಕೃಷಿಕರಿಗೆ ಧಾರಣೆಯಲ್ಲಿ ವ್ಯತ್ಯಾಸವಿದ್ದರೂ ಇಂದಲ್ಲ ನಾಳೆ ಅದಕ್ಕೆ ಮಾರುಕಟ್ಟೆ ಸಿಗುತ್ತದೆ. ಆದರೆ ಮಲ್ಲಿಗೆಗೆ ಅದನ್ನು ಗಿಡದಿಂದ ತೆಗೆದ ದಿನ ಅಥವಾ ಮರುದಿನ ಮಾತ್ರ ಮಾರುಕಟ್ಟೆ ಇರುವ ಕಾರಣ ಪ್ರಸ್ತುತ ಪರಿಸ್ಥಿತಿಯಿಂದಾಗಿ ಮಲ್ಲಿಗೆ ಬೆಳೆಗಾರರು ಚಿಂತೆಗೀಡಾಗಿದ್ದಾರೆ. ಬಂಟ್ವಾಳ ತಾಲೂಕಿನಲ್ಲೂ ಸಾಕಷ್ಟು ಮಂದಿ ಕೃಷಿಕರು ಮಲ್ಲಿಗೆ ಕೃಷಿ ಮಾಡುತ್ತಿದ್ದಾರೆ.
ಪ್ರಸ್ತುತ ಮಾರುಕಟ್ಟೆ ಇಲ್ಲದಿರುವುದರಿಂದ ಕೃಷಿಕರು ಗಿಡಗಳಲ್ಲಿ ಹೂವು ಬಾರದಂತೆ ಆರೈಕೆ ಮಾಡಬಹುದು ಎಂದು ತೋಟಗಾರಿಕಾ ಇಲಾಖೆಯವರು ಸಲಹೆ ನೀಡುತ್ತಾರೆ. ಗೊಬ್ಬರ ಹಾಕುವುದನ್ನು ಕಡಿಮೆ ಮಾಡುವುದು ಸಹಿತ ಇತರ ವಿಧಾನಗಳ ಮೂಲಕ ಗಿಡಗಳು ಹೂವು ಬಿಡುವುದನ್ನು ಕಡಿಮೆ ಮಾಡಬಹುದು. ಮುಂದೆ ಮಾರು ಕಟ್ಟೆಗಳು ತೆರೆದುಕೊಂಡಾಗ ಮತ್ತೆ ಹಿಂದಿನ ರೀತಿಯಲ್ಲೇ ಹೂವು ಬಿಡುವಂತೆ ಮಾಡಬಹುದು ಎಂಬುದು ಅಧಿಕಾರಿಗಳ ಅಭಿಪ್ರಾಯ.
ಕೃಷಿಕರು ಮಾಹಿತಿ ನೀಡಿ
ಮಲ್ಲಿಗೆ ಕೃಷಿಕರು ತಮ್ಮಲ್ಲಿರುವ ಮಲ್ಲಿಗೆ ಗಿಡಗಳ ಕುರಿತು ಇಲಾಖೆಗೆ ಮಾಹಿತಿಯನ್ನು ನೀಡಿದರೆ ಅದರಿಂದ ಕೃಷಿಕರಿಗೆ ಸಾಕಷ್ಟು ಪ್ರಯೋಜನಗಳು ಸಿಗುವ ಸಾಧ್ಯತೆ ಇರುತ್ತದೆ. ಇಲಾಖೆಯಲ್ಲಿ ಕೃಷಿಕರ ಕುರಿತು ಮಾಹಿತಿ ಇದ್ದಾಗ, ಅವರಿಗೆ ಬೇಕಾದ ಸೌಲಭ್ಯಗಳ ಕುರಿತು ಸರಕಾರಕ್ಕೆ ಪ್ರಸ್ತಾವನೆಯನ್ನು ನೀಡಲು ಸಹಾಯಕವಾಗು ತ್ತದೆ. ಮತ್ತೂಂದೆಡೆ ವಿವಿಧ ತರಬೇತಿ ಗಳಿದ್ದಾಗ ಮಾಹಿತಿ ನೀಡಲೂ ಅನು ಕೂಲವಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ವೆನ್ಲಾಕ್ ಆಸ್ಪತ್ರೆ ಹೊರರೋಗಿ ವಿಭಾಗ ವಿಸ್ತರಣೆ
Mangaluru: 7 ಕೆರೆ, ಪಾರ್ಕ್ ಅಭಿವೃದ್ಧಿಗೆ ಅಮೃತ 2.0
Belagavi Session: ರಾಜಕೀಯ ಕಿತ್ತಾಟ ಏನಿದ್ದರೂ ಸದನದ ಹೊರಗೆ ನಡೆಸಿ: ಯು.ಟಿ. ಖಾದರ್
Fraud Case: ಹೂಡಿಕೆ ನೆಪ: ಮಹಿಳೆಯಿಂದ 56.64 ಲಕ್ಷ ರೂ. ವಂಚನೆ
Kulai ಜೆಟ್ಟಿ ಕಾಮಗಾರಿ: ಚೆನ್ನೈ ಐಐಟಿಯಿಂದ ವರದಿ ಪಡೆಯಲು ಮೀನುಗಾರಿಕೆ ಸಚಿವರ ನಿರ್ಧಾರ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.