ನಾಟಕ ಪ್ರದರ್ಶಿಸಿ ಕೋವಿಡ್ ಜಾಗೃತಿ
ತಮಟೆ ಬಾರಿಸಿ ಉದ್ಘಾಟಿಸಿದ ಡಿವೈಎಸ್ಪಿ ಶಿವಕುಮಾರ ಹಗಲುವೇಷಗಾರರಿಂದ ಹೊಸ ಯತ್ನ
Team Udayavani, Apr 15, 2020, 1:26 PM IST
ಕೂಡ್ಲಿಗಿ: ಡಿವೈಎಸ್ಪಿ ಶಿವಕುಮಾರ್ ತಮಟೆ ಬಾರಿಸಿ ಕಿರು ನಾಟಕಕ್ಕೆ ಚಾಲನೆ ನೀಡಿದರು.
ಕೂಡ್ಲಿಗಿ: ಕೋವಿಡ್ ವೈರಸ್ ರೋಗ ಜಾಗತಿಕ ಮಟ್ಟದಲ್ಲಿ ಸದ್ದು ಮಾಡುತ್ತಿದ್ದು, ಜನರನ್ನು ಬೆಚ್ಚಿಬೀಳಿಸಿ ಸಾವಿಗೆ ಶರಣಾಗಿ ನೋಡಬೇಕು ಎನ್ನುವ ಕೋವಿಡ್ ರೋಗ ಹರಡುವಿಕೆಯನ್ನು ತಡಗಟ್ಟಲು ಪ್ರಸ್ತುತ ಈ ಕಿರು ನಾಟಕ ಅವಶ್ಯಕ ಎಂದು ಡಿವೈಎಸ್‌ಪಿ ಶಿವಕುಮಾರ್ ಹೇಳಿದರು.
ಅವರು ತಮಟೆ ಬಾರಿಸಿ ನಾಟಕಕ್ಕೆ ಚಾಲನೆ ನೀಡಿ ಮಾತನಾಡಿದರು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೋವಿಡ್ ವೈರಾಸ್ ನಿಯಂತ್ರಿಸಲು ಪಟ್ಟಣದಲ್ಲಿ ಜನರಿಗೆ ಜಾಗೃತಿ ಮೂಡಿಸಲು ಹಗಲು ವೇಷ ಧರಿಸಿದವರ ಶ್ರಮ ಮೆಚ್ಚುವಂತಹದ್ದು. ಜನರಲ್ಲಿ ಭಯ ಬೀಳಿಸುವ ಮೂಲಕ ಪ್ರತಿ ವಾರ್ಡ್‌ಗಳಲ್ಲಿ ಜಾಗೃತಿ ಮೂಡಿಸಲಾಯಿತು. ಕೋವಿಡ್ ಮಹಾಮಾರಿ ನಿಯಂತ್ರಿಸಲು ಹಗಲು ವೇಷಗಾರರಿಂದ ಕಿರು ನಾಟಕ ನೋಡಿದ ಜನರು ಕೂಡಲೇ ದಯವಿಟ್ಟು ಅನವಶ್ಯಕವಾಗಿ ಮನೆಯಿಂದ ಹೊರಗೆ ಬಾರದೆ ಜನ ಅರ್ಥಮಾಡಿಕೊಂಡು ನಮಗಾಗಿ ಪೊಲೀಸ್ ಇಲಾಖೆ ಕಷ್ಟಪಡುತ್ತಿದೆ. ಆದ ಕಾರಣ ಇದು ನಮ್ಮ ಜವಾಬ್ದಾರಿ ಎಂದು ಮನಗಂಡು ಮನೆಯಲ್ಲಿಯೇ ಇರಬೇಕು ಎಂದು ನುಡಿದರು.
ನಂತರ ಸಿಪಿಐ ಪಂಪನಗೌಡ ಮಾತನಾಡುತ್ತಾ ಜನರಲ್ಲಿ ವೈರಸ್ ಯಾರು ಮನೆಯಿಂದ ಹೊರಗಡೆ ಬಂದವರಿಗೆ ಮೊದಲ ಮೃತ್ಯುಯಾಗಿ ಸ್ಪರ್ಶಿಸುವ ಶಕ್ತಿ ಇದೆ. ಭಯಾನಕ ರೋಗಕ್ಕೆ ತುತ್ತಾಗಿ ನರಳುವ ಯಾತನೆಯಿಂದ ಕೈಬಿಟ್ಟು ಈಗಾಲಾದರೂ ಕಿರು ನಾಟಕದಿಂದ ಬದಲಾಗಿ ಹಾಗೆಯೇ ಸ್ಥಳೀಯ ರಂಗ ಕಲಾವಿದರಾಗಿ ಹಗಲು ವೇಷದಾರಿಗಳು ತಮ್ಮ ನಟನೆಯಲ್ಲಿ ಕರಗತ ಮಾಡಿಕೊಂಡು ಪಟ್ಟಣದ ಪ್ರತಿ ವಾರ್ಡ್ ಗಳಲ್ಲಿ ಸಂಚಾರಿಸುತ್ತಾ ಪಾತ್ರದಾರಿಗಳಲ್ಲಿ ಒಬ್ಬ ಯಮನು ಇನ್ನೊಬ್ಬ ಕೋವಿಡ್ ವೈರಸ್, ಮತ್ತೊಬ್ಬ ಚಿತ್ರಗುಪ್ತ ಸಂಭಾಷಣೆ ಮಾಡುತ್ತಾ ಸ್ಯಾನಿಟೈಸರ್ ಬಳಸಿ ಕೈ ಶುಚಿ ಮಾಡಿಕೊಳ್ಳಬೇಕು ಎಂದು ಜನರಲ್ಲಿ ಅರಿವು ಮೂಡಿಸಿದರು.
ಸಾಮಾಜಿಕ ಅಂತರ ಕಾಯ್ದುಕೊಂಡು ರೋಗದಿಂದ ದೂರವಿರೋಣ ಎಂದರು. ತಿಮ್ಮಣ್ಣ ಚಾಗನೂರು ಮಾತನಾಡಿ ರೋಗಕ್ಕೆ ಕಡಿವಾಣ ಹಾಕಬೇಕಾದರೆ ನಮ್ಮ ಜನ ಅಲೆದಾಟ ಕಡಿಮೆ ಮಾಡಿ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದರು. ಕಾವಲಿಶಿವಪ್ಪ, ಕಾಂಗ್ರೆಸ್ ಮುಖಂಡ ಉಮೇಶ, ಕೋಗಳಿ ಮಂಜುನಾಥ ಮತ್ತು ಪೊಲೀಸ್ ಸಿಬ್ಬಂದಿ ಹಾಗೂ ಹಗಲು ವೇಷಗಾರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandur Result: ಭದ್ರಕೋಟೆಯಲ್ಲಿ ಮತ್ತೆ ಗೆದ್ದ ಕಾಂಗ್ರೆಸ್: ಇಲ್ಲಿದೆ ಮತಎಣಿಕೆಯ ಪೂರ್ಣವಿವರ
Sandur: ಭರ್ಜರಿ ಗೆಲುವಿನೊಂದಿಗೆ ವಿಧಾನಸಭೆಗೆ ಎಂಟ್ರಿಕೊಟ್ಟ ಕಾಂಗ್ರೆಸ್ ನ ಅನ್ನಪೂರ್ಣ
Siruguppa: ತೆಕ್ಕಲಕೋಟೆಯಲ್ಲಿ ಅಕ್ರಮ ಪಡಿತರ ಅಕ್ಕಿ ವಶ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Siruguppa: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.