ಕೋವಿಡ್-19 : ಇರಾಕಿನ ಇವರ ಸಮಸ್ಯೆಯೇ ಬೇರೆ
Team Udayavani, Apr 15, 2020, 4:45 PM IST
ಇರಾಕ್: ಕೋವಿಡ್-19 ವಿರುದ್ಧ ಹೋರಾಟದಲ್ಲಿ ವಿಫಲಗೊಳ್ಳುತ್ತಿದ್ದು, ಸ್ಥಳೀಯ ಜನತೆಯ ಅಸಹಕಾರವೇ ಸರಕಾರಕ್ಕೆ ಸಮಸ್ಯೆಯಾಗಿ ಪರಿಣಮಿಸಿದೆ. ಇದೇ ಸಮಸ್ಯೆ ಅಫ್ಘಾನಿಸ್ತಾನಕ್ಕೂ ಹರಡುತ್ತಿರುವುದು ಭಯಕ್ಕೆ ಕಾರಣವಾಗಿದೆ.
ಇರಾಕ್‌ನ ಜನರು ಸಂಪ್ರದಾಯವೇ ಮುಖ್ಯವೆಂದು ಪ್ರತಿಪಾದಿಸುತ್ತಿದ್ದು, ಕೋವಿಡ್ 19ಗೆ ಸಂಬಂಧಿಸಿದ ನಿರ್ಬಂಧನೆಗಳನ್ನು ನಿರಾಕರಿಸುತ್ತಿದ್ದಾರೆ. ಇದು ಸೋಂಕಿನ ಪ್ರಕರಣ ಹೆಚ್ಚಲು ಕಾರಣವಾಗುತ್ತಿದೆ. ಅಲ್ಲಿನ ಜನರು ಆರೋಗ್ಯ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. 40 ರೋಗಿಗಳು ಸಂಪರ್ಕ ಸಿಗದೇ ತಪ್ಪಿಸಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಸಾಂಕ್ರಾಮಿಕ ರೋಗದ ವ್ಯಾಪ್ತಿಯ ನಿಖರವಾದ ಮಾಹಿತಿಯನ್ನು ಒಟ್ಟುಗೂಡಿಸುವ ಪ್ರಯತ್ನದಲ್ಲಿ ಇರಾಕ್ ಆರೋಗ್ಯ ಸಂಸ್ಥೆ ಪರೀಕ್ಷೆಗಳನ್ನು ನಡೆಸಿತು. ಆದರೆ ಜನರಿದ ಯಾವುದೇ ಉತ್ತಮ ಸ್ಪಂದನೆ ದೊರೆಯದೇ ಇರುವುದರಿದ ಆರೋಗ್ಯವಂತರನ್ನೂ ಸೋಂಕಿತರಂತೆ ಕಾಣುವಂತಾಗಿದೆ.
ಸರಕಾರವು ಆರೋಗ್ಯ ಕಾರ್ಯಕರ್ತರೊದಿಗೆ ಸಶಸ್ತ್ರ ರಾಷ್ಟ್ರೀಯ ಭದ್ರತಾ ಸಿಬಂದಿಯನ್ನು ನಿಯೋಜಿಸಿದೆ. ಇಲ್ಲಿನ ಸಂಸ್ಕೃತಿ ಪಾಲನೆಯಿಂದ ಎಲ್ಲ ಯೋಜನೆಗಳು ಸಮಸ್ಯೆಯಾಗಿದೆ ಎಂದು ಬಾಗ್ಧಾದ್ ಮೆಡಿಕಲ್ ಸಿಟಿಯ ಹಿರಿಯ ಶ್ವಾಸಕೋಶ ಶಾಸ್ತ್ರಜ್ಞ ಡಾ| ಮೊಹಮ್ಮದ್ ವಹೀಬ್ ಹೇಳಿದರು.
ರೋಗಿಯನ್ನು ಕರೆತರಲು ಆ್ಯಂಬುಲೆನ್ಸ್ ಕಳುಹಿಸಿದರೆ ಬೇರೆಯವರು ನೋಡುವವರೆದು ಅಸಮಾಧಾನಗೊಂಡು ನಿರಾಕರಿಸುತ್ತಿದ್ದಾರೆ. ಈ ಬದಲಾವಣೆಯಿಂದ ಸೋಂಕು ಪ್ರಕರಣಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಹಾಗಾಗಿ ಜನರನ್ನು ಮನವೊಲಿಸಿ ಮತ್ತು ತೊಂದರೆಯನ್ನು ನಿವಾರಿಸಲು ಭದ್ರತಾ ಸಿಬಂದಿಯನ್ನು ಬಳಸುವುದು ಏಕೈಕ ಮಾರ್ಗ ಎಂದು ಆರೋಗ್ಯ ಸಚಿವಾಲಯ ಹೇಳಿದೆ.
ವೈದ್ಯಕೀಯ ವ್ಯವಸ್ಥೆಯ ಮೇಲೆ ಇಲ್ಲಿನ ಜನತೆಗೆ ನಂಬಿಕೆ ಇಲ್ಲದಿರುವುದೇ ಈ ಎಲ್ಲ ಸಮಸ್ಯೆಗೆ ಕಾರಣವಾಗಿದೆ. 38 ದಶಲಕ್ಷ ಜನ ಸಂಖ್ಯೆ ಹೊಂದಿರುವ ಇರಾಕ್‌ನಲ್ಲಿ ಸೋಮವಾರ 1,352 ಸೋಂಕಿತ ಪ್ರಕರಣ ದೃಢಪಟ್ಟಿದೆ. ಇರಾಕ್‌ಗಿಂತ ಕಡಿಮೆ ಜನ ಸಂಖ್ಯೆ ಹೊಂದಿರುವ ಸೌದಿ ಅರೇಬಿಯಾದಲ್ಲಿ ಅತೀ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ.
ನಮ್ಮಲ್ಲಿ ಪ್ರಕರಣಗಳನ್ನು ಮರೆಮಾಚಲಾಗಿದೆ. ಇಲ್ಲಿನ ಜನರು ಪರೀಕ್ಷೆಗೆ ಒಳಗಾಗಲು ಒಪ್ಪುವುದಿಲ್ಲ, ಸಂಪರ್ಕ ತಡೆ, ಮತ್ತು ಪ್ರತ್ಯೇಕತೆಗೆ ಹೆದರುತ್ತಾರೆ ಎಂದು ಉಪ ಆರೋಗ್ಯ ಸಚಿವ ಡಾ| ಹಜೀವ್ ಅಲ್ ಜುಮೇಲಿ ಹೇಳಿದರು.
ಬಾಸ್ರಾ ಆಸ್ಪತ್ರೆಯಲ್ಲಿ ಮಹಿಳಾ ರೋಗಿಗಳು ಮಾಸ್ಕ್ ಇಲ್ಲದೆ ಮಲಗಿರುವ ಮತ್ತು ಒಬ್ಬರು ಸಾವನ್ನಪ್ಪಿರುವ ವೀಡಿಯೋ ವ್ಯಾಪಕವಾಗಿ ಹರಿದಾಡುತ್ತಿರುವುದರಿಂದ ಜನರು ಭಯಗೊಂಡಿದ್ದಾರೆ ಎನ್ನಲಾಗಿದೆ.
32 ವರ್ಷದ ಮಹಿಳಾ ರೋಗಿಯ ಪ್ರಕರಣವನ್ನು ಅವರು ಪ್ರಸ್ತಾಪಿಸುತ್ತಾ, ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಈಕೆಯನ್ನು ಕೋವಿಡ್-19 ಪರೀಕ್ಷೆಗೆ ಹೋಗುವಂತೆ ಶಿಫಾರಸು ಮಾಡಲಾಗುತ್ತದೆ. ಆದರೆ ಆಕೆಯ ತಂದೆ ಮತ್ತು ಸಹೋದರರು ಪರೀಕ್ಷೆಗೆ ಹೋಗುವುದನ್ನು ನಿರಾಕರಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Beirut ಮೇಲೆ ದಾಳಿ…ಇಸ್ರೇಲ್ ಮೇಲೆ 250 ರಾಕೆಟ್ ದಾಳಿ ನಡೆಸಿದ ಹೆಜ್ಬುಲ್ಲಾ; ಪ್ರತಿದಾಳಿ
Cape Canaveral: ತಾತ್ಕಾಲಿಕ ಉಪಗ್ರಹವಾಗಿದ್ದ “ಮಿನಿ ಮೂನ್’ಗೆ ಗುಡ್ ಬೈ
Elon Musk: ಭಾರತದಲ್ಲಿ 1 ದಿನದಲ್ಲಿ 6.4 ಕೋಟಿ ಮತ ಎಣಿಕೆ: ಉದ್ಯಮಿ ಮಸ್ಕ್ ಮೆಚ್ಚುಗೆ!
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್ ಬಂಡಾಯ ಅಭ್ಯರ್ಥಿ ಶಿವಸೇನೆಗೆ
warrant: ಇಸ್ರೇಲಿ ನಾಯಕರಿಗೆ ವಾರಂಟ್ ಬೇಡ, ಗಲ್ಲು ವಿಧಿಸಿ: ಇರಾನ್
Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.
Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್
Scheme: ದಿಲ್ಲಿಯಲ್ಲಿ ಆಮ್ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.