ಕೋವಿಡ್ ಜಾಗೃತಿ ಕಾರ್ಯಕ್ರಮ
Team Udayavani, Apr 15, 2020, 2:51 PM IST
ಶಿವಮೊಗ್ಗ: ಕೊರೊನಾ ಜಾಗೃತಿ ಕಾರ್ಯಕ್ರಮ ನಡೆಯಿತು
ಶಿವಮೊಗ್ಗ: ಕೋವಿಡ್ ಸೋಂಕು ಹರಡದಿರಲು ಸಮಾಜದ ಪ್ರತಿಯೊಬ್ಬರು ಜವಾಬ್ದಾರಿಯಿಂದ ಸುರಕ್ಷತಾ ನಿಯಮ ಪಾಲನೆ ಮಾಡಬೇಕು ಎಂದು ರೆಡ್‌ಕ್ರಾಸ್ ಸಂಸ್ಥೆ ರಾಜ್ಯ ಉಪಾಧ್ಯಕ್ಷ ಡಾ| ವಿ.ಎಲ್.ಎಸ್. ಕುಮಾರ್ ಅಭಿಪ್ರಾಯಪಟ್ಟರು.
ನಗರದ ಶಕ್ತಿ ಇನ್ನೋವೇಷನ್ ಆವರಣದಲ್ಲಿ ಜಿಲ್ಲಾ ರೆಡ್‌ಕ್ರಾಸ್ ಮತ್ತು ರೋಟರಿ ಶಿವಮೊಗ್ಗದ ಪೂರ್ವದ ವತಿಯಿಂದ ನಡೆದ ಕೋವಿಡ್ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರತಿಯೊಬ್ಬರು ನಿಯಮಿತವಾಗಿ ಸಾಬೂನು ಹಾಗೂ ನೀರಿನಿಂದ ಚೆನ್ನಾಗಿ ಕೈ ತೊಳೆಯಬೇಕು. ಕೆಮ್ಮುವಾಗ ಮತ್ತು ಸೀನುವಾಗ ಮೂಗು ಮತ್ತು ಬಾಯಿಯನ್ನು ಕರ ವಸ್ತ್ರದಿಂದ ಮುಚ್ಚಿಕೊಳ್ಳಬೇಕು. ಒಮ್ಮೆ ಬಳಸಿದ ಕರ ವಸ್ತ್ರ ಕಸದ ಬುಟ್ಟಿಯಲ್ಲಿ ಹಾಕ ಬೇಕು. ಜ್ವರ, ಉಸಿರಾಟದ ತೊಂದರೆ, ನೆಗಡಿ, ಕೆಮ್ಮು ಲಕ್ಷಣಗಳು ಕಂಡುಬಂದಲ್ಲಿ ತಕ್ಷಣ ವೈದ್ಯರನ್ನು ಭೇಟಿ ಮಾಡಬೇಕು ಎಂದರು. ಕೋವಿಡ್ ಸೋಂಕಿನ ಪೂರ್ಣ ಮಾಹಿತಿ ಇರುವ ಕರಪತ್ರಗಳನ್ನು ಸಾರ್ವಜನಿಕರಿಗೆ ನೀಡಲಾಯಿತು.
ಶಕ್ತಿ ಇನ್ನೋವೇಶನ್ ಮುಖ್ಯಸ್ಥ ಬಿ.ಗೋಪಿನಾಥ್, ರೆಡ್‌ಕ್ರಾಸ್ ಸಂಸ್ಥೆಯ ಶಿವಮೊಗ್ಗ ಶಾಖೆ ಅಧ್ಯಕ್ಷ ಎಸ್.ಪಿ.ದಿನೇಶ್, ಡಾ| ದಿನೇಶ್, ರೆಡ್‌ಕ್ರಾಸ್ ನಿರ್ದೇಶಕ ವಸಂತ ಹೋಬಳಿದಾರ್, ಗಿರೀಶ್, ಅಶ್ವಥ್ ನಾರಾಯಣ ಶೆಟ್ಟಿ, ರೇಶ್ಮಾ ಮತ್ತು ಜಿ.ವಿಜಯ್‌ಕುಮಾರ್,
ಮಂಜುನಾಥ್ ಕದಂ, ಕೊರೊನಾ ವಾರಿಯರ್ಸ್ ಹಾಗೂ ಪತ್ರಕರ್ತ ಹಾಲಸ್ವಾಮಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
40 percent commission ಸುಳ್ಳು ಸಾಬೀತು : ಕಾಂಗ್ರೆಸಿಗರಿಗೆ ತಾಕೀತು ಮಾಡಿದ ಯಡಿಯೂರಪ್ಪ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Shimoga; ಪೆಟ್ರೋಲ್ ಹಾಕುವಾಗ ಹೊತ್ತಿ ಉರಿದ ಓಮಿನಿ
Covid ವೇಳೆ ಜೀವ ಉಳಿಸುವ ಕೆಲಸ ಮಾಡಿದ್ದೇವೆ: ಬಿಎಸ್‌ವೈ
Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.