ಲಾಕ್‌ಡೌನ್: ಆತ್ಮಹತ್ಯೆ, ಖಿನ್ನತೆ ಪ್ರಕರಣ ಹೆಚ್ಚಳ
Team Udayavani, Apr 15, 2020, 6:25 PM IST
ಸಾಂದರ್ಭಿಕ ಚಿತ್ರ
ಪುಣೆ, ಎ. 14: ಕೋವಿಡ್ -19 ಪ್ರಕರಣಗಳ ಹರಡುವಿಕೆಯನ್ನು ತಡೆಯಲು ಪ್ರಧಾನಿ ನರೇಂದ್ರ ಮೋದಿ ಮಾರ್ಚ್ 24ರಂದು 21 ದಿನಗಳ ಲಾಕ್ ಡೌನ್ ಅವಧಿಯನ್ನು ಘೋಷಿಸಿದಾಗಿನಿಂದ, ಆತ್ಮಹತ್ಯೆ ಸಹಾಯವಾಣಿ ಸೇರಿದಂತೆ ಮಾನಸಿಕ ಸಹಾಯವಾಣಿ ಸಂಖ್ಯೆಗಳ ಕರೆಗಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡು ಬಂದಿದೆ.
ಲಾಕ್‌ಡೌನ್‌ನಿಂದಾಗಿ ಖಿನ್ನತೆ ಮತ್ತು ಒಂಟಿತನದ ಸಮಸ್ಯೆಗಳನ್ನು ಎದುರಿಸಬಹುದಾದವರಿಗೆ ಸಸೂನ್ ಜನರಲ್ ಆಸ್ಪತ್ರೆ 24/7 ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಿದೆ. ಸಹಾಯವಾಣಿ ಸಂಖ್ಯೆಯನ್ನು ಪ್ರಾರಂಭಿಸಿದ ಮನೋ ವೈದ್ಯಕೀಯ ವಿಭಾಗದ ಮುಖ್ಯಸ್ಥ ಡಾ| ನಿತಿನ್ ಅಭಿವಂತ್ ಅವರ ಪ್ರಕಾರ, ಕೇವಲ 24 ಗಂಟೆಗಳಲ್ಲಿ ಸಹಾಯವಾಣಿ ಸಂಖ್ಯೆಗೆ 40 ಕರೆಗಳು ಬಂದಿವೆ. ತಜ್ಞರ ಪ್ರಕಾರ, ಖನ್ನತೆ, ಒಂಟಿತನ, ಕಿರಿಕಿರಿ, ನಿದ್ರಾಹೀನತೆ, ಭಯ ಮತ್ತು ಕೌಟುಂಬಿಕ ಸಂಘರ್ಷದಂತಹ ವಿಷಯಗಳಲ್ಲಿ ಸಹಾಯ ಪಡೆಯುವ ಜನರಿಂದ ಈ ಕರೆಗಳು ಬಂದಿವೆ ಎಂದು ಅವರು ತಿಳಿಸಿದ್ದಾರೆ.
ಸಹಾಯವಾಣಿ ಸಂಖ್ಯೆ : ಜನರು ಒಪಿಡಿಗಳಲ್ಲಿ ಮಾನಸಿಕ ಸಹಾಯವನ್ನು ಬಯಸುತ್ತಿದ್ದರು ಮತ್ತು ಆದ್ದರಿಂದ ನಾವು ಮೀಸಲಾದ ಸಹಾಯವಾಣಿ ಸಂಖ್ಯೆಯನ್ನು ಪ್ರಾರಂಭಿಸಲು ನಿರ್ಧರಿಸಿದ್ದೇವೆ. ವೇಗವಾಗಿ ಬದಲಾಗುತ್ತಿರುವ ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳು ಮತ್ತು ಅವರ ದೈಹಿಕ ಯೋಗ ಕ್ಷೇಮದಿಂದಾಗಿ ಭಯ ಮತ್ತು ಆತಂಕದಿಂದ ಕರೆ ಮಾಡುವವರ ಸಾಮಾನ್ಯ ದೂರುಗಳು ಅಧಿಕ ವಾಗಿವೆ ಎಂದು ಡಾ| ಅಭಿವಂತ್ ಹೇಳಿದ್ದಾರೆ. ಯಾವುದೇ ಅನಾಹುತವು ವ್ಯಕ್ತಿಯ ಮಾನಸಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಅಂತಹ ಅಲ್ಪಾವಧಿಯಲ್ಲಿಯೇ ಜನರು ಇಂತಹ ಕ್ಷಿಪ್ರ ಬದಲಾವಣೆಗಳನ್ನು ನೋಡುತ್ತಾರೆ. ಅದು ಮಾನಸಿಕ ಪರಿಣಾಮವನ್ನು ಬೀರುತ್ತದೆ ಎಂದು ಅವರು ಹೇಳಿದ್ದಾರೆ.
ನಾವು ಅವರಿಗೆ ಸಲಹೆ ನೀಡುತ್ತೇವೆ ಮತ್ತು ಅವರಿಗೆ ಪ್ರವೇಶ ಅಥವಾ ವೈದ್ಯಕೀಯ ಚಿಕಿತ್ಸೆ ಅಗತ್ಯವಿದ್ದರೆ ನಾವು ಅವರನ್ನು ಸಸೂನ್ ಅಥವಾ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಬರಲು ಶಿಫಾರಸು ಮಾಡುತ್ತೇವೆ. ಈ ಭಯವು ಎÇÉಾ ಸಾಮಾಜಿಕ-ಆರ್ಥಿಕ ವರ್ಗಗಳಲ್ಲಿದೆ ಎಂದು ಡಾ. ಅಭಿವಂತ್ ಹೇಳಿದ್ದಾರೆ.
ಡಾ| ಅಭಿವಂತ್ ಅವರು ಸಾಮಾನ್ಯ ಜನರು ಮಾತ್ರವಲ್ಲ, ಮುಂಚೂಣಿಯಲ್ಲಿರುವ ಆರೋಗ್ಯ ಕಾರ್ಯಕರ್ತರು ಸಹ ಮಾನಸಿಕ ಸಹಾಯವನ್ನು ಪಡೆಯುತ್ತಿದ್ದಾರೆ. ವೈದ್ಯಕೀಯ ಕಾರ್ಯಕರ್ತರು ದೈಹಿಕವಾಗಿ ಮತ್ತು ಮಾನಸಿಕವಾಗಿ ದಣಿದಿರುವ ಕಾರಣ ಈ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರಿಗೆ ಮನೋಸ್ಥೈರ್ಯ ಹೆಚ್ಚಿಸುವ ಅಗತ್ಯವೂ ಇದೆ ಮತ್ತು ಅದಕ್ಕಾಗಿ ನಾವು ಅವರಿಗೆ ಸಹಾಯ ಮಾಡುತ್ತೇವೆ ಎಂದು ತಿಳಿಸಿದ್ದಾರೆ. ಸರಕಾರವು ಈ ವಿಷಯದ ಬಗ್ಗೆಯೂ ಗಮನಹರಿಸಬೇಕು. ಏಕೆಂದರೆ ಈ ಸ್ಥಿತಿಯ ಮಾನಸಿಕ ಪರಿಣಾಮವು ದೊಡ್ಡದಾಗಿದೆ ಮತ್ತು ಸೋಂಕು ಕಡಿಮೆಯಾದ ನಂತರವೂ ದೀರ್ಘಾವಧಿಯ ಪರಿಣಾಮಗಳನ್ನು ನಿಭಾಯಿಸ ಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಬೆಂಬಲ ಸಿಗುತ್ತಿಲ್ಲ : ದಂಪತಿಗಳು ದಿನವಿಡೀ ತಮ್ಮ ಮನೆಗಳಲ್ಲಿ ಸೀಮಿತವಾಗಿರುವುದರಿಂದ ಹೆಚ್ಚಿನ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಥಾಮಸ್ ಅವರು ಹೇಳಿದರು. ಹಿರಿಯ ನಾಗರಿಕರು ಈ ಸಂಕಟದ ಸಮಯದಲ್ಲಿ ಕುಟುಂಬ ಸದಸ್ಯರೊಂದಿಗೆ ಸಂವಹನವನ್ನು ಬಯಸುತ್ತಾರೆ. ಆದರೆ ಅವರಿಗೆ ಅಗತ್ಯವಾದ ಬೆಂಬಲ ಸಿಗದ ಕಾರಣ ಸಹಾಯವಾಣಿ ಸಂಖ್ಯೆ ಗಳಿಂದ ಸಹಾಯ ಪಡೆಯಲು ಮುಂದಾಗುತ್ತಿದ್ದಾರೆ ಎಂದು ಥಾಮಸ್ ಹೇಳಿದರು. ಎಲ್ಲಾ ಸಮಯದಲ್ಲೂ ಒಟ್ಟಿಗೆ ಇರುವುದು ತನ್ನದೇ ಆದ ಸಮಸ್ಯೆಗಳನ್ನು ಹೊಂದಿದೆ. ಏಕೆಂದರೆ ಇದು ಸಮಸ್ಯೆಗಳನ್ನು ಉಲ್ಬಣಗೊಳಿಸಲು ಕಾರಣ ವಾಗುತ್ತದೆ ಮತ್ತು ಸಣ್ಣಪುಟ್ಟ ಘರ್ಷಣೆಗಳು ಸಹ ಜಗಳದ ಪ್ರಮುಖ ಘಟ್ಟವಾಗುತ್ತವೆ ಎಂದು ಅವರು ಹೇಳಿದ್ದಾರೆ.
ಒಂಟಿತನ, ತೊಂದರೆಗೀಡಾದ ಮತ್ತು ಆತ್ಮಹತ್ಯೆಗೆ ಸಂಬಂಧಿಸಿದ ಬಿಕ್ಕಟ್ಟಿನ ಹಸ್ತಕ್ಷೇಪ ಕೇಂದ್ರವಾದ ನಿರ್ದೇಶಕರಾದ ಜಾನ್ಸನ್ ಥಾಮಸ್, ಅವರು ಮಾತನಾಡಿಲಾಕ್‌ಡೌನ್ ಘೋಷಣೆಯ ನಂತರ ಜನರು ನಮ್ಮ ಸಹಾಯವಾಣಿ ಸಂಖ್ಯೆಯ ಮೂಲಕ ನಮ್ಮನ್ನು ತಲುಪುತ್ತಿದ್ದಾರೆ ಎಂದು ಹೇಳಿದ್ದಾರೆ.ಕುಟುಂಬದ ಎಲ್ಲ ಸದಸ್ಯರು ಮನೆಯಲ್ಲಿದ್ದರೂ ಸಹ ಅವರು ತಮ್ಮ ಮೊಬೈಲ್ ಫೋನ್‌ಗಳಲ್ಲಿ ನಿರತರಾಗಿರುವುದರಿಂದ ಪರಸ್ಪರ ಸಂವಹನ ನಡೆಸುವುದಿಲ್ಲ. ಇದು ಪೋಷಕರು ಮತ್ತು ಮಕ್ಕಳ ನಡುವಿನ ಘರ್ಷಣೆಗೆ ಕಾರಣವಾಗುತ್ತದೆ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Desi Swara: ಲಕ್ಸಂಬರ್ಗ್ ಕನ್ನಡೋತ್ಸವದಲ್ಲಿ ಬಿಲ್ಲಹಬ್ಬ
ಇಂಗ್ಲೆಂಡ್‌ನ ರಾದರಮ್ ನದಿ ತೀರದಲ್ಲರಳಿದ ಸುವರ್ಣ ಕುಸುಮ: ಒಂದು ಕೂಚಿಪುಡಿ ರಂಗಪ್ರವೇಶ
Desi Swara@150:ವಿದೇಶ ನೆಲದಲ್ಲಿ ಕರ್ನಾಟಕದ ಖಾದ್ಯವನ್ನು ಉಣಬಡಿಸುತ್ತಿರುವ ದಂಪತಿ
Desi Swara@150: ದಾಸರೆಂದರೆ ದಾಸರಯ್ಯಾ…ಸಾಹಿತ್ಯ ಲೋಕದಲ್ಲಿ “ಕನ್ನಡ ಮತ್ತು ಕರ್ನಾಟಕ’
Desi Swra@150:ಕೊವೆಂಟ್ರಿಯಲ್ಲಿ ಕನ್ನಡಿಗರ ಮನರಂಜಿಸಿದ ಅನುರಾಧ ಭಟ್
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.