ಆಧಾರ್‌ ಗೊಂದಲ: ಕುಟುಂಬಕ್ಕೆ ಸಿಗದ ಪಡಿತರ

ಅಣ್ಣ-ತಂಗಿಯ ಕುಟುಂಬದ ವ್ಯಥೆ

Team Udayavani, Apr 16, 2020, 6:16 AM IST

ಆಧಾರ್‌ ಗೊಂದಲ: ಕುಟುಂಬಕ್ಕೆ ಸಿಗದ ಪಡಿತರ

ವಿಶೇಷ ವರದಿ-ಸುಳ್ಯ: ಕೊರಗ, ಮಲೆಕುಡಿಯ ಸಮುದಾಯಗಳಿಗೆ ಬುಟ್ಟಿ ಹೆಣೆಯುವಿಕೆ ನಿತ್ಯ ಕಸುಬಾಗಿದ್ದು, ಜೀವನ ನಿರ್ವಹಣೆಗೆ ದಾರಿ ಆಗಿದೆ. ಆದರೆ ಲಾಕ್‌ಡೌನ್‌ ಪರಿಣಾಮ ಬುಟ್ಟಿ ಹೆಣೆಯಲು ಸಾಧ್ಯವಿಲ್ಲದೆ ಕುಟುಂಬಗಳಿಗೆ ಪರ್ಯಾಯ ಆರ್ಥಿಕ ದಾರಿಯಿಲ್ಲದೆ ನಿತ್ಯ ಜೀವನಕ್ಕೆ ತೊಂದರೆ ಉಂಟಾಗಿದೆ.

ಇವರಿಬ್ಬರ ಕಥೆ, ಹಲವರ ವ್ಯಥೆ
ಸುಳ್ಯ ತಾಲೂಕಿನ ಪೆರುವಾಜೆ ಗ್ರಾಮದ ಜಾಲ್ಪಣೆಯ ಕೊರಗ ಸಮುದಾಯದ ವಯೋವೃದ್ಧ ಅಣ್ಣ- ತಂಗಿಯ ಕಥೆ ಈ ಸಮುದಾಯದ ಹಲವರ ವ್ಯಥೆಯೂ ಹೌದು. ಬಟ್ಯ ಹಾಗೂ ಹುಕ್ರು ಇಬ್ಬರು ವಯೋವೃದ್ಧ ಅಣ್ಣ-ತಂಗಿಗೆ ಸರಕಾರದ ಪಡಿತರ ಸಾಮಗ್ರಿ ಸಿಗದೆ ಒಂದು ವರ್ಷವೇ ಕಳೆದಿದೆ. ಈಗೀಗ ಅನಾರೋಗ್ಯದಿಂದ ಬುಟ್ಟಿ ಹೆಣೆಯಲಾಗುತ್ತಿಲ್ಲ. ಹಾಗಾಗಿ ನಿತ್ಯ ಬದುಕು ನೇಯುವುದೇ ಇವರಿಗೆ ಕಠಿನ.

ವರ್ಷದಿಂದ ಪಡಿತರ ಸಿಕ್ಕಿಲ್ಲ
ಬಟ್ಯ ಮತ್ತು ಹುಕ್ರು ಅವರದ್ದು ಏಕಾಂಗಿ ಜೀವನ. ಹೀಗಾಗಿ ಅಣ್ಣ ಬಟ್ಯನಿಗೂ ತಂಗಿ ಹುಕ್ರು ಮನೆಯಲ್ಲೇ ವಾಸ. ಬಟ್ಯನಿಗೆ ಆರೋಗ್ಯ ಸಮಸ್ಯೆಯಿದ್ದು, ಮಾತಿನಲ್ಲೂ ಸ್ಪಷ್ಟತೆ ಇಲ್ಲ. ಹುಕ್ರುವಿಗೂ ಆಗಾಗ್ಗೆ ಆರೋಗ್ಯ ಕೈ ಕೊಡುತ್ತಿದೆ. ಬಟ್ಯನಿಗೆ ಅಂತ್ಯೋದಯ ಕಾರ್ಡ್‌, ಹುಕ್ರುವಿಗೆ ಬಿಪಿಎಲ್‌ ಕಾರ್ಡ್‌ ಇದ್ದರೂ, ಇಬ್ಬರಿಗೂ ಒಂದು ವರ್ಷದಿಂದ ಪಡಿತರ ಸಿಗುತಿಲ್ಲ. ಕೋವಿಡ್ 19  ಭೀತಿಯ ಹೊತ್ತಲ್ಲಿ ದಾನಿಗಳು ನೀಡಿದ ಆಹಾರವೇ ಉದರ ತುಂಬಲು ಇರುವ ದಾರಿ ಎನ್ನುತ್ತಾರೆ ಹುಕ್ರು.

ತಂಬಿಂಗ್‌ ಸಮಸ್ಯೆ
ಪಡಿತರ ಸಾಮಗ್ರಿ ಪಡೆಯಲು ಅರ್ಹತೆ ಹೊಂದಿರುವ ಪಟ್ಟಿಯಲ್ಲಿ ಇವರಿಬ್ಬರ ಹೆಸರೇ ಇಲ್ಲ. ಹಳೆ ಕಾರ್ಡ್‌ ಬದಲಾಯಿಸದ ಕಾರಣ ಹೆಸರನ್ನೇ ಕೈಬಿಡಲಾಗಿದೆ. ಕೆಲ ಸಮಯಗಳ ಹಿಂದೆ ತಾಲೂಕು ಕಚೇರಿಗೆ ಕಾರ್ಡ್‌ ಸರಿಪಡಿಸಲು ಹೋದ ಸಂದರ್ಭ ಹುಕ್ರುವಿನ ಬೆರಳಚ್ಚು ದಾಖಲಾಗಲಿಲ್ಲ. ಬಟ್ಯನಿಗೆ ಹೊಸ ಕಾರ್ಡ್‌ನ ಕಥೆಯೇ ಗೊತ್ತಿಲ್ಲ. ಆತ ಹಳೆ ಕಾರ್ಡನ್ನೇ ನಂಬಿ ಕುಳಿತಿದ್ದಾನೆ. ಸೊಸೈಟಿಗೆ ಹೋಗುವುದನ್ನು ಬಿಟ್ಟು ಮನೆ ಮನೆ ತೆರಳಿ ಹಸಿವು ನೀಗಿಸುತ್ತಿದ್ದಾನೆ.

ಈಗಾಗಲೇ ಸೊಸೈಟಿ, ಗ್ರಾ.ಪಂ.ಗಳಲ್ಲಿ ತೆರಳಿ ವಿಚಾರಿಸಿದ್ದೇವೆ. ತಂಬಿಂಗ್‌ ಸಮರ್ಪಕವಾಗದೆ ಕಾರ್ಡ್‌ ಸರಿಯಾಗದು ಎಂಬ ಮಾಹಿತಿ ಸಿಕ್ಕಿರುವುದಾಗಿ ಹೇಳುತ್ತಾರೆ ಇವರ ಮನೆ ಪಕ್ಕದಲ್ಲಿರುವ ಸಹೋದರಿ ಪುತ್ರ ಐತ್ತಪ್ಪ ಕಾನಾವು.

ವಿದ್ಯುತ್‌, ಶೌಚಾಲಯ ಇಲ್ಲ!
ವಿವಾಹವಾಗಿದ್ದರೂ ಈಗ ಇಬ್ಬರೂ ಒಂಟಿಯಾಗಿದ್ದಾರೆ. ಹುಕ್ರುವಿಗೆ ಐದು ಸೆಂಟ್ಸ್‌ ಖಾಲಿ ಜಾಗ ಇದೆ. ಮನೆಗೆ ವಿದ್ಯುತ್‌ ಸಂಪರ್ಕ ಇತ್ತಾದರೂ ಬಿಲ್‌ ಕಟ್ಟಿಲ್ಲ ಎಂದು ಕೆಲವು ವರ್ಷಗಳ ಹಿಂದೆ ಸಂಪರ್ಕ ಕಡಿತ ಗೊಳಿಸಿದ್ದಾರೆ. ಹೀಗಾಗಿ ಚಿಮಿಣಿ ಬೆಳಕೇ ಈ ಕುಟುಂಬಕ್ಕೆ ಆಧಾರ. ಶೌಚಾಲಯ ಕೂಡ ಇಲ್ಲ. ಜಾತಿ ಪ್ರಮಾಣಪತ್ರದಲ್ಲಿ ಹೆಸರಿನ ಲೋಪ ಇರುವ ಕಾರಣ ಹೊಸ ಮನೆ ಕೂಡ ಮಂಜೂರಾಗುತ್ತಿಲ್ಲ. ಈ ಕುಟುಂಬಕ್ಕೆ ಕೊರಗ ಸಮುದಾಯದ ಐಟಿಡಿಪಿ ವತಿಯಿಂದ ವರ್ಷದಲ್ಲಿ ಆರು ತಿಂಗಳಿಗಷ್ಟೇ ದೊರೆಯುವ ಅಲ್ಪ ಆಹಾರ ಸಾಮಗ್ರಿ ಬಿಟ್ಟು ಉಳಿದ ಯಾವುದೇ ಸೌಲಭ್ಯಗಳು ದೊರೆಯುತ್ತಿಲ್ಲ.

269 ಕುಟುಂಬಗಳು
ತಾಲೂಕಿನಲ್ಲಿ 32 ಕೊರಗರ ಹಾಗೂ 237 ಮಲೆಕುಡಿಯ ಕುಟುಂಬಗಳಿವೆ. ಸರಕಾರದ ಕೊರಗರ ಐಟಿಡಿಪಿಯಲ್ಲಿ ನೀಡಲಾಗುವ ಸೌಲಭ್ಯ ವಿತರಿಸಲಾಗುತ್ತಿದೆ. ಗುರುತಿನ ಚೀಟಿಯೂ ಇದೆ ಎನ್ನುತ್ತಾರೆ ಸಮಾಜ ಕಲ್ಯಾಣ ಇಲಾಖಾಧಿಕಾರಿ ಲಕ್ಷ್ಮೀದೇವಿ. ಶೇ.65ಕ್ಕೂ ಅಧಿಕ ಮಂದಿಗೆ ಕಾಡಿನಲ್ಲಿ ಸಿಗುವ ಬಳ್ಳಿ ಬಳಸಿ ಹೆಣೆಯುವ ಬುಟ್ಟಿಯೇ ಜೀವನಾಧಾರ. ಆದರೆ ಈಗ ಕಾಡಿಗೂ ಪ್ರವೇಶ ಮಾಡುತ್ತಿಲ್ಲ. ಬಳ್ಳಿ ಸಿಕ್ಕಿ ಬುಟ್ಟಿ ಹೆಣೆದರೂ ಮಾರಾಟ ಮಾಡಲು ಮಾರುಕಟ್ಟೆ ವ್ಯವಸ್ಥೆ ಇಲ್ಲ. ಹೀಗಾಗಿ ಅಗತ್ಯ ವಸ್ತುಗಳ ಜತೆಗೆ ಆರ್ಥಿಕ ಸಹಕಾರದ ಅಗತ್ಯವೂ ಇದೆ ಎನ್ನುವುದು ಸಮುದಾಯದ ಹಲವರ ಅಭಿಪ್ರಾಯ.

 ಆಧಾರ್‌ ನೀಡದ ಕಾರಣ ರದ್ದಾಗಿದೆ
ಆಧಾರ್‌ ನೀಡದಿರುವ ಕಾರಣ ಹುಕ್ರು ಅವರ ಪಡಿತರ ಕಾರ್ಡ್‌ ರದ್ದುಗೊಂಡಿದೆ. ಕೋವಿಡ್ 19 ಲಾಕ್‌ಡೌನ್‌ ಮುಗಿದ ತತ್‌ಕ್ಷಣ ಪಡಿತರ ಚೀಟಿಗೆ ಹೊಸ ಅರ್ಜಿ ಸಲ್ಲಿಸಬೇಕಿದೆ. ಬಟ್ಯ ಅವರ ಕಾರ್ಡ್‌ ಸಂಖ್ಯೆ ಪಡೆದು ರೇಷನ್‌ ದೊರೆಯದಿರಲು ಕಾರಣವಾದ ಅಂಶಗಳ ಬಗ್ಗೆ ಪರಿಶೀಲಿಸಲಾಗುವುದು.
 - ಎಂ.ಕೆ. ಮಂಜುನಾಥನ್‌
ಜಂಟಿ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ದ.ಕ.

ಟಾಪ್ ನ್ಯೂಸ್

DKS–HDD-HDK

By Election: ಚನ್ನಪಟ್ಟಣದಲ್ಲಿ ಎಚ್‌.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್‌ ಮೇಕೆದಾಟು ಜಟಾಪಟಿ

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

Paper-Reader

Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

High-Court

High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ

Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?

Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?

Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ

Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

Sullia: ಸ್ಕೂಟಿಗೆ ಢಿಕ್ಕಿಯಾದ ಬಸ್‌: ವಿದ್ಯಾರ್ಥಿನಿ ಸಾವು

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ

Uppinangady ದಾರಿ ವಿವಾದ: ಸಂಬಂಧಿಯನ್ನೇ ಕಡಿದು ಕೊ*ಲೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Uppinangady: ಮಹಿಳೆ ನೇಣು ಬಿಗಿದುಕೊಂಡು ಆತ್ಮಹ*ತ್ಯೆ

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

Road Mishaps: ಬೆಂಗಳೂರಿನಲ್ಲಿ ಬೈಕ್‌ ಅಪಘಾತ ಇಂದಬೆಟ್ಟುವಿನ ವಿದ್ಯಾರ್ಥಿ ಸಾವು

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

DKS–HDD-HDK

By Election: ಚನ್ನಪಟ್ಟಣದಲ್ಲಿ ಎಚ್‌.ಡಿ.ದೇವೇಗೌಡ Vs ಡಿ.ಕೆ.ಶಿವಕುಮಾರ್‌ ಮೇಕೆದಾಟು ಜಟಾಪಟಿ

Sumalatha

Active Politics: ನಾನು ಎಂದೂ ಮಂಡ್ಯ ಕ್ಷೇತ್ರ ಬಿಡುವುದಿಲ್ಲ: ಮಾಜಿ ಸಂಸದೆ ಸುಮಲತಾ

Paper-Reader

Golden Jubliee: ಪತ್ರಿಕೆಯ ಓದು ಪ್ರತಿಯೊಬ್ಬರಿಗೂ ಆಹಾ! ಎನಿಸುವಂತಿರಲಿ

HD-Devegowda

By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್‌.ಡಿ.ದೇವೇಗೌಡ

High-Court

High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.