ಸೋಂಕು ಹರಡದಂತೆ ಸ್ವಯಂ ಹತೋಟಿ ಅಗತ್ಯ: ಡಾ| ಪ್ರಭು
ಭಾರತೀಯ ವೈದ್ಯಕೀಯ ಸಂಘದ ಉಡುಪಿ ಕರಾವಳಿ ಶಾಖೆ: ಸಾರ್ವಜನಿಕರಿಗೆ ಮಾಸ್ಕ್ ವಿತರಣೆ
Team Udayavani, Apr 16, 2020, 4:51 AM IST
ಉಡುಪಿ: ಕೋವಿಡ್ 19 ವೈರಸ್ ಎಲ್ಲೆಡೆ ಹರಡುತ್ತಿದ್ದು, ಅದನ್ನು ತಡೆಗಟ್ಟಲು ಮುನ್ನೆಚ್ಚರಿಕೆ ಅಗತ್ಯ. ಜಿಲ್ಲೆ ಯಲ್ಲಿ ಸೋಂಕು ನಿಯಂತ್ರಣದಲ್ಲಿದ್ದರೂ ಸೋಂಕು ಹರಡದಂತೆ ಹತೋಟಿ ಮುಖ್ಯ. ಇದಕ್ಕೆ ಎಲ್ಲರೂ ಮಾಸ್ಕ್ ಧರಿಸಬೇಕು ಎಂದು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ| ಉಮೇಶ್ ಪ್ರಭು ಹೇಳಿದರು.
ಭಾರತೀಯ ವೈದ್ಯಕೀಯ ಸಂಘ ಉಡುಪಿ ಕರಾವಳಿ ಶಾಖೆ ವತಿಯಿಂದ ಸಾರ್ವಜನಿಕರಿಗೆ 1,000 ಬಟ್ಟೆ ಮಾಸ್ಕ್ ಅನ್ನು ಕೆಎಸ್‌ಆರ್‌ಟಿಸಿ ಸಮೀಪದ ಸಂತೆ ಮಾರುಕಟ್ಟೆ ಬಳಿ ಬುಧವಾರ ವಿತರಿಸಿ ಅವರು ಮಾತನಾಡಿದರು.
ವೈದ್ಯಕೀಯ ಸಂಘದ ಕಾರ್ಯದರ್ಶಿ ಡಾ| ಪ್ರಕಾಶ್ ಭಟ್, ಸಂಘದ ಡಾ| ಪುರುಷೋತ್ತಮ ಆಚಾರ್ಯ, ಡಾ| ವಿಜಯ ವೈ., ಡಾ| ಕೇಶವ ನಾಯಕ್ ಮೊದಲಾದವರು ಉಪಸ್ಥಿತರಿದ್ದರು.
1ಲಕ್ಷ ರೂ. ವೆಚ್ಚದ
ಮಾಸ್ಕ್ ಹಂಚುವ ಗುರಿ
ಭಾರತೀಯ ವೈದ್ಯಕೀಯ ಸಂಘವು ಒಟ್ಟು 1 ಲಕ್ಷ ರೂ. ವೆಚ್ಚದಲ್ಲಿ 3 ಸಾವಿರ ಬಟ್ಟೆ ಮಾಸ್ಕ್ ಹಂಚಲು ನಿರ್ಧರಿಸಿದೆ. ಬುಧವಾರ 1,000 ಮಾಸ್ಕ್ ಅನ್ನುಕೆಎಸ್‌ಆರ್‌ಟಿಸಿ ಸಮೀಪದ ಸಂತೆ ಮಾರುಕಟ್ಟೆ ಯವರಿಗೆ ಹಾಗೂ ಸಾರ್ವಜನಿಕರಿಗೆ ವಿತರಿಸಲಾಯಿತು.ಇನ್ನು 2 ಸಾವಿರ ಮಾಸ್ಕ್ಗಳನ್ನು ಹಂತಹಂತವಾಗಿ ಸಾರ್ವಜನಿಕರಿಗೆ ವಿತರಿಸಲು ಸಂಘ ನಿರ್ಧರಿಸಿದೆ.
ಮಾಸ್ಕ್ ಬಳಕೆ: ಸಲಹೆ
ಸಂಘದ ಜಿಲ್ಲಾ ಸಂಯೋಜಕ ಡಾ| ವೈ. ಸುದರ್ಶನ ರಾವ್ ಮಾತನಾಡಿ, ಕೋವಿಡ್ 19 ಸೋಂಕು ತಡೆಗೆ ಎಲ್ಲರೂ ಮಾಸ್ಕ್ ಧರಿಸಬೇಕು. ಮಾಸ್ಕ್ ಧರಿಸುವಾಗ ಕೆಲವು ಸಂಗತಿಗಳನ್ನು ಅರಿತಿರಬೇಕು. ಮೂಗು ಮತ್ತು ಬಾಯಿಯನ್ನು ಮಾಸ್ಕ್ ಮುಚ್ಚಿರಲಿ. ಧರಿಸಿದ ಮೇಲೆ ಆಗಾಗ ಬಾಯಿ ಮತ್ತು ಮೂಗಿನ ಭಾಗವನ್ನು ಸ್ಪರ್ಶಿಸಬೇಡಿ. ಒಂದು ಬಾರಿ ಬಳಸಿದ ಬಟ್ಟೆ ಮಾಸ್ಕ್ ಅನ್ನು ತೊಳೆದು ಸ್ವತ್ಛಗೊಳಿಸಿ ಪೂರ್ಣ ಒಣಗಿದ ಬಳಿಕವೇ ಬಳಸಬೇಕು. ಒಬ್ಬ ಬಳಸಿದ ಮಾಸ್ಕ್ ಇನ್ನೊಬ್ಬರು ಬಳಸಬಾರದು. ಮಾಸ್ಕ್ ನ್ನು ಎಲ್ಲೆಂದರಲ್ಲಿ ಬಿಸಾಡಬಾರದು, ದುಬಾರಿ ವೆಚ್ಚದ ಮಾಸ್ಕ್ ಬಳಸುವ ಅಗತ್ಯವಿಲ್ಲ. ಬಟ್ಟೆ ಮಾಸ್ಕ್ ಬಳಸುವುದು ಸೂಕ್ತ ಎಂದು ಸಲಹೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Venur; ಚಿರತೆ ಓಡಾಟ; ಸಾರ್ವಜನಿಕರಲ್ಲಿ ಆತಂಕ; ಅರಣ್ಯಾಧಿಕಾರಿ- ಸಾರ್ವಜನಿಕರ ಸಭೆ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Governor: ಮಣಿಪುರದ 19 ನೇ ರಾಜ್ಯಪಾಲರಾಗಿ ಅಜಯ್ ಭಲ್ಲಾ ಪ್ರಮಾಣ ವಚನ ಸ್ವೀಕಾರ
Bidar; ಗುತ್ತಿಗೆದಾರ ಸಚಿನ್ ಕೇಸ್; ತನಿಖೆ ಆರಂಭಿಸಿದ ಸಿಐಡಿ ತಂಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.