ಲಾಕ್‌ಡೌನ್‌: ಬ್ಯಾಂಕ್‌ಗೆ ಹೋಗಿ ಹಣ ತಂದುಕೊಡುವಿರಾ!?

Team Udayavani, Apr 16, 2020, 10:33 AM IST

ಲಾಕ್‌ಡೌನ್‌: ಬ್ಯಾಂಕ್‌ಗೆ ಹೋಗಿ ಹಣ ತಂದುಕೊಡುವಿರಾ!?

ಮಂಗಳೂರು: ಕೋವಿಡ್ ಲಾಕ್‌ಡೌನ್‌ ದಿನಗಳಲ್ಲಿ ಜನಸಾಮಾನ್ಯರಿಗೆ ಆವಶ್ಯಕ ಸೇವೆಗಳನ್ನು ಒದಗಿಸುವುದಕ್ಕೆ ಕೋವಿಡ್ ವಾರಿಯರ್, ವಾರ್‌ರೂಮ್‌ ಆದಿಯಾಗಿ ಅನೇಕ ಸಹಾಯ ಹಸ್ತಗಳಿವೆ. ಸಹಾಯ ಕೋರಿ ಇಲ್ಲಿಗೆ ಬರುವ ಕರೆಗಳು ತರಹೇವಾರಿ ಆಗಿರುತ್ತವೆ ಎಂಬುದಕ್ಕೆ ಈ ಹಿಂದೆ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು ಮೊಟ್ಟೆ ಮತ್ತು ಮ್ಯಾಗಿಗೆ ಬೇಡಿಕೆ ಮಂಡಿಸಿದ್ದೇ ಸಾಕ್ಷಿ. ಅಂಥ ಇನ್ನೊಂದು ಪ್ರಕರಣ ಇದು.

ನಗರದ ನಿವೃತ್ತ ಶಿಕ್ಷಕರೊಬ್ಬರಿಗೆ ದಿನಸಿ ಖರೀದಿಗೆ ಹಣ ಬೇಕಾಗಿತ್ತು. ಬ್ಯಾಂಕ್‌ಗೆ ವಾಹನದಲ್ಲಿ ತೆರಳಬೇಕು. ಲಾಕ್‌ಡೌನ್‌ನಡಿ ಖಾಸಗಿ ವಾಹನ ಸಂಚಾರಕ್ಕೆ ನಿಷೇಧ ಇರುವುದರಿಂದ ಕಾರು ಹೊರತೆಗೆಯಲು ಮನಸೊÕಪ್ಪಲಿಲ್ಲ. ಕಾಲ್ನಡಿಗೆಯಲ್ಲಿ ತೆರಳಲು ವಯಸ್ಸಿನ ಸಮಸ್ಯೆ. ಹೀಗಾಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸಂಸದರ ವಾರ್‌ ರೂಂಗೆ ಕರೆ ಮಾಡಿ ಸಹಾಯಕ್ಕೆ ಮನವಿ ಮಾಡಿದರು.

ಕರೆ ಸ್ವೀಕರಿಸಿದ ವಾರ್‌ ರೂಂ ಸಿಬಂದಿಯಿಂದ “ಅನುಮತಿ ಇರುವ ವಾಹನದ ವ್ಯವಸ್ಥೆ ತಮಗೆ ಮಾಡಿಕೊಡುತ್ತೇವೆ, ಅದರಲ್ಲಿ ಬ್ಯಾಂಕ್‌ಗೆ ತೆರಳಿ ಹಣ ಪಡೆಯಿರಿ’ ಎಂಬ ಸಲಹೆ ಸಿಕ್ಕಿತು. ಆದರೆ ನಿವೃತ್ತ ಶಿಕ್ಷಕರು ಅದಕ್ಕೆ ಒಪ್ಪಲಿಲ್ಲ. ಲಾಕ್‌ಡೌನ್‌ ಇರುವಾಗ ಹೊರಗೆ ಹೋಗುವುದು ತಪ್ಪಲ್ಲವೇ ಎಂಬುದು ಅವರ ವಾದ. ವಾರ್‌ ರೂಂ ಸಿಬಂದಿಗೂ ಇದು ಸರಿಯೆನಿಸಿತು. ಅವರು “ಇನ್ನೇನು ಮಾಡೋಣ’ ಎಂದು ಚೆಂಡನ್ನು ಶಿಕ್ಷಕರ ಅಂಗಳಕ್ಕೇ ದೂಡಿದರು. “ವಾರ್‌ ರೂಂನ ನಂಬಿಕಸ್ತ ಮತ್ತು ಜಿಲ್ಲಾಡಳಿತದ ಅನುಮತಿ ಇರುವ ಸಿಬಂದಿಯೊಬ್ಬರನ್ನು ನನ್ನ ಮನೆಗೆ ಕಳುಹಿಸಿ’ ಎಂದು ಕೇಳಿಕೊಂಡರು ನಿವೃತ್ತ ಶಿಕ್ಷಕರು.

ಲಾಕ್‌ಡೌನ್‌ ಉಲ್ಲಂ ಸಿಲ್ಲ
ಇದರಂತೆ ಸಿಬಂದಿಯೊಬ್ಬರು ಶಿಕ್ಷಕರ ಮನೆಗೆ ತೆರಳಿದರು. ಅವರು ಚೆಕ್‌ ಬರೆದು ಕೊಟ್ಟು ಬ್ಯಾಂಕ್‌ಗೆ
ಹೋಗಿ ಹಣ ಡ್ರಾ ಮಾಡಿ ತಂದು ಕೊಡುವಂತೆ ವಿನಂತಿಸಿದರು. ಸಿಬಂದಿ ಹಾಗೆಯೇ ಮಾಡಿದರು. ನಿವೃತ್ತ ಶಿಕ್ಷಕರು ಲಾಕ್‌ಡೌನ್‌ ಉಲ್ಲಂಘನೆ ಮಾಡದೆಯೇ ವಾರ್‌ರೂಂ ನೆರವು ಪಡೆದು ಹಣವನ್ನು ನಗದಾಗಿ ಪಡೆಯುವುದಕ್ಕಾಯಿತು!

ಚಿತ್ರ ವಿಚಿತ್ರ “ನೆರವಿಗೆ ಮನವಿ!’
ಜಿಲ್ಲಾಧಿಕಾರಿ ಕಚೇರಿಯಲ್ಲಿರುವ ಸಂಸದರ ವಾರ್‌ ರೂಂ ಮತ್ತು ದ.ಕ. ಜಿಲ್ಲಾಡಳಿತದ ಅಧೀನ ಮನಪಾದಲ್ಲಿರುವ ಕೊರೊನಾ ಮೇಲ್ವಿಚಾರಣ ಕೇಂದ್ರದಲ್ಲಿ ದಾಖಲಾಗುತ್ತಿರುವ ಚಿತ್ರವಿಚಿತ್ರ “ನೆರವಿಗೆ ಮನವಿ’ಗಳ ಸ್ಯಾಂಪಲ್‌ ಇದು. ಇತ್ತೀಚೆಗೆ ಮಂಗಳೂರಿನಲ್ಲಿ ವಾಸವಾಗಿರುವ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬರು “ಮೊಟ್ಟೆ ಹಾಗೂ ಮ್ಯಾಗಿ ಬೇಕು’ ಎಂದು ಪ್ರಧಾನಿ ಕಾರ್ಯಾಲಯಕ್ಕೆ ಟ್ವೀಟ್‌ ಮಾಡಿದ್ದರು. ರಾಜ್ಯ ನಗರಾಭಿವೃದ್ಧಿ ಇಲಾಖೆ ಅಧಿಕಾರಿ ಇದನ್ನು ನೋಡಿ ಸಂಸದರ ವಾರ್‌ ರೂಂಗೆ ಸೂಚಿಸಿ ಆಕೆ ಕೇಳಿದ್ದನ್ನು ಕೊಟ್ಟು ಬಂದಿದ್ದರು.

“ಖರ್ಚಿಗೆ ಹಣ ಕೊಡಿ… ಮದ್ಯ ಕೊಡಿ…’
ಲಾಕ್‌ಡೌನ್‌ನಿಂದಾಗಿ ಮದ್ಯ ಮಾರಾಟ ಸಂಪೂರ್ಣ ಬಂದ್‌ ಆಗಿದ್ದು ಹಲವರಿಗೆ ಸಮಸ್ಯೆಯಾಗಿದೆ. ಹತಾಶರಾದ ಕೆಲವರು ಸಂಸದರ ವಾರ್‌ ರೂಂ, ಜಿಲ್ಲಾಡಳಿತದ ಕೇಂದ್ರಕ್ಕೆ ಕರೆ ಮಾಡಿ ಮದ್ಯ ನೀಡುವಂತೆ ಗೋಗರೆಯುತ್ತಿದ್ದಾರೆ. ಇನ್ನೂ ಕೆಲವರು ಖರ್ಚಿಗೆ ಹಣವಿಲ್ಲ; ಸಹಾಯ ಮಾಡಿ ಎನ್ನುತ್ತಿದ್ದಾರೆ. ಗ್ಯಾಸ್‌ ಖಾಲಿ, ಕರೆಂಟ್‌ ಹೋಗಿದೆ, ಬೈಕಿನ ಇಎಂಐ ಪಾವತಿಸುತ್ತೀರಾ, ಮೊಟ್ಟೆ ಕೊಡಿ… ಹೀಗೂ ಕರೆ ಮಾಡುವವರಿದ್ದಾರೆ!

ಟಾಪ್ ನ್ಯೂಸ್

Praja-Souhda

Central Office: 49 ಹೊಸ ತಾಲೂಕಿಗೆ “ಪ್ರಜಾ ಸೌಧ’ ಸಂಕೀರ್ಣ ಯಾವಾಗ?

horoscope-new-3

Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ. ಅಪೇಕ್ಷಿತ ಆರ್ಥಿಕ ನೆರವು ಲಭ್ಯ.

ಬಾಂಗ್ಲಾದೇಶದಿಂದ ಭಾರತ ವಿರುದ್ಧ ಮತ್ತೊಂದು ಕ್ಯಾತೆ

ಬಾಂಗ್ಲಾದೇಶದಿಂದ ಭಾರತ ವಿರುದ್ಧ ಮತ್ತೊಂದು ಕ್ಯಾತೆ

Chalavadi2

Council: ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಪಮಾನ: ಛಲವಾದಿ ನಾರಾಯಣಸ್ವಾಮಿ

ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್‌ ವಿರುದ್ಧ ತಿರುಗಿ ಬಿದ್ದ ಸಂತರು

ಧಾರ್ಮಿಕ ವಿಚಾರ ನಮಗೆ ಬಿಟ್ಟುಬಿಡಿ: ಭಾಗವತ್‌ ವಿರುದ್ಧ ತಿರುಗಿ ಬಿದ್ದ ಸಂತರು

Chalavadi

Ambedkar Row: ಕಾಂಗ್ರೆಸ್‌ ತಿಪ್ಪೆ ಇದ್ದಂತೆ, ಕೆದಕಿದಷ್ಟೂ ದುರ್ವಾಸನೆ ಬರುತ್ತೆ: ಛಲವಾದಿ

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

Congress: ಚುನಾವಣಾ ನಿಯಮ ತಿದ್ದುಪಡಿ ಪ್ರಶ್ನಿಸಿ ಕಾಂಗ್ರೆಸ್‌ ಸುಪ್ರೀಂ ಕೋರ್ಟ್‌ ಗೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

Mangaluru: ಎರಡು ಸೈಬರ್‌ ವಂಚನೆ ಪ್ರಕರಣ: ಸೆನ್‌ ಪೊಲೀಸರಿಂದ ಇಬ್ಬರ‌ ಬಂಧನ

Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್‌

Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್‌

Mangaluru ಮಾದಕವಸ್ತು ಸೇವನೆ: ಇಬ್ಬರ ಬಂಧನ

Mangaluru ಮಾದಕವಸ್ತು ಸೇವನೆ: ಇಬ್ಬರ ಬಂಧನ

4-mng-2

Mangaluru: ಹೆಲಿಕಾಪ್ಟರ್ ಸಂಚಾರ: ಸ್ಥಳ ಬದಲಾವಣೆ

6

Mangaluru; ನಗರದ ಇನ್ನಷ್ಟು ಕಡೆ ಬೀದಿ ಬದಿ ವ್ಯಾಪಾರಸ್ಥರ ವಲಯ: ಮೇಯರ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Praja-Souhda

Central Office: 49 ಹೊಸ ತಾಲೂಕಿಗೆ “ಪ್ರಜಾ ಸೌಧ’ ಸಂಕೀರ್ಣ ಯಾವಾಗ?

horoscope-new-3

Daily Horoscope: ಕಾರ್ಯವೈಖರಿ ಸುಧಾರಣೆಗೆ ಚಿಂತನೆ. ಅಪೇಕ್ಷಿತ ಆರ್ಥಿಕ ನೆರವು ಲಭ್ಯ.

ಬಾಂಗ್ಲಾದೇಶದಿಂದ ಭಾರತ ವಿರುದ್ಧ ಮತ್ತೊಂದು ಕ್ಯಾತೆ

ಬಾಂಗ್ಲಾದೇಶದಿಂದ ಭಾರತ ವಿರುದ್ಧ ಮತ್ತೊಂದು ಕ್ಯಾತೆ

Chalavadi2

Council: ಸಭಾಪತಿ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಅಪಮಾನ: ಛಲವಾದಿ ನಾರಾಯಣಸ್ವಾಮಿ

Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ

Chandigarh: ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಅಕ್ರಿ ಗ್ರಾ.ಪಂನಿಂದ ಹಣ ಸಹಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.