ತಾಯಂದಿರ ಜನ್ಮದಿನದ ಸಂಭ್ರಮದಲ್ಲಿ ಶರಣ್
Team Udayavani, Apr 16, 2020, 10:45 AM IST
ಸದ್ಯ ಚಿತ್ರರಂಗದ ಬಹುತೇಕ ಎಲ್ಲ ತಾರೆಯರೂ ಲಾಕ್ ಡೌನ್ ಮೂಡ್ ನಲ್ಲಿದ್ದಾರೆ. ಆದರೆ ಮನೆಯಲ್ಲಿರುವತಾರೆಯರು ಒಂದಷ್ಟು ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. ಎಲ್ಲಾ ಲಾಕ್ ಡೌನ್, ಬಂದ್ ಗಳ ನಡುವೆಯೇ ನಟ ಶರಣ್ ಅವರು ಮನೆಯಲ್ಲಿಯೇ ತಮ್ಮ ತಾಯಂದಿರ ದಿನವನ್ನು ಆಚರಿಸಿಕೊಂಡಿದ್ದಾರೆ.
ಹೌದು, ಏಪ್ರಿಲ್ 15 ರಂದು ನಟ ಶರಣ್ ಅವರ ತಾಯಂದಿರಾದ ರಾಧ ಮತ್ತು ರುಕ್ಮಿಣಿ ಅವರ ಜನ್ಮದಿನ. ಇದರ ಪ್ರಯುಕ್ತ ಮನೆಯಲ್ಲಿಯೇ ತಾಯಂದಿರ ಹುಟ್ಟುಹಬ್ಬ ಆಚರಿಸಿರುವ ಶರಣ್, ಟ್ವಿಟ್ಟರ್ ನಲ್ಲಿತಮ್ಮ ತಾಯಂದಿರ ಹಲವು ದಶಕಗಳ ಹಿಂದಿನ ಪೋಟೋವನ್ನು ಶೇರ್ ಮಾಡಿ, ಇಂದು ನನ್ನ ತಾಯಂದಿರ ಜನುಮದಿನ. ನನ್ನ ನೆಚ್ಚಿನ ಒಂದು ಸುಂದರ ಹಾಗೂ ಅಪರೂಪದ ಭಾವಚಿತ್ರವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತಿದ್ದೇನೆ. ನಿಮ್ಮೆಲ್ಲರ ಹಾರೈಕೆ ಇರಲಿ ಎಂದು ತಮ್ಮ ಸಂಭ್ರಮವನ್ನು ಹಂಚಿಕೊಂಡಿದ್ದಾರೆ.
ಸದ್ಯ ಶರಣ್ ಅಭಿನಯದ ಅವತಾರ್ ಪುರುಷ ಚಿತ್ರ ತೆರೆಗೆ ಬರುವ ತಯಾರಿಯಲ್ಲಿದ್ದು, ಈ ಚಿತ್ರದಲ್ಲಿ ಶರಣ್ ಅವರಿಗೆ ಆಶಿಕಾ ರಂಗನಾಥ್ ಜೋಡಿಯಾಗಿ ಅಭಿನಯಿಸಿದ್ದಾರೆ. ಬಜಾರ್ ಚಿತ್ರದ ಬಳಿಕ ನಿರ್ದೇಶಕ ಸಿಂಪಲ್ ಸಿನಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇದರ ನಡುವೆಯೇ ಶರಣ್ ಮತ್ತೂಂದು ಕಾಮಿಡಿ ಕಥಾಹಂದರದ ಚಿತ್ರದಲ್ಲಿ ಅಭಿನಯಿಸುತ್ತಿದ್ದು, ಲಾಕ್ ಡೌನ್ ಮುಗಿದ ಬಳಿಕ ಆ ಚಿತ್ರದ ಟೈಟಲ್ ಮತ್ತಿತರ ವಿಷಯಗಳು ಹೊರಬೀಳುವ ಸಾಧ್ಯತೆ ಇದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.