ಕೋವಿಡ್ ತಪ್ಪು ವರದಿ: ರಾಯಿಟರ್ಸ್ ಲೈಸೆನ್ಸ್ ರದ್ದುಗೊಳಿಸಿದ ಇರಾಕ್
ಕೋವಿಡ್ ತಪ್ಪು ವರದಿ: ರಾಯಿಟರ್ಸ್ ಲೈಸೆನ್ಸ್ ರದ್ದುಗೊಳಿಸಿದ ಇರಾಕ್
Team Udayavani, Apr 16, 2020, 3:46 PM IST
ಬಾಗ್ಧಾದ್: ಕೋವಿಡ್-19 ಪ್ರಕರಣಗಳ ಬಗ್ಗೆ ತಪ್ಪು ಮಾಹಿತಿಗಳಿರುವ ವರದಿ ಪ್ರಕಟಿಸಿದ ಆರೋಪಕ್ಕೊಳಗಾಗಿರುವ ರಾಯಿಟರ್ಸ್ ಸುದ್ದಿ ಸಂಸ್ಥೆಯ ಪರವಾನಿಗೆಯನ್ನು ಇರಾಕ್ ಮೂರು ತಿಂಗಳ ಮಟ್ಟಿಗೆ ರದ್ದುಗೊಳಿಸಿದೆ. ಪ್ರಸಾರ ನಿಯಮ ಗಳನ್ನು ಉಲ್ಲಂ ಸಿರುವ ಕಾರಣಕ್ಕೆ ಈ ಕಠಿನ ಕ್ರಮ ಕೈಗೊಳ್ಳಲಾಗಿದೆ ಎಂದು ಸರಕಾರದ ಮೂಲಗಳು ತಿಳಿಸಿವೆ.
ರಾಯಿಟರ್ಸ್ ಪರವಾನಿಗೆಯನ್ನು 3 ತಿಂಗಳ ಮಟ್ಟಿಗೆ ರದ್ದುಪಡಿಸಿದ್ದು, ತಪ್ಪು ಮಾಹಿತಿ ನೀಡಿದ್ದಕ್ಕೆ 25 ದಶಲಕ್ಷ ದಿನಾರ್ (21,000 ಡಾಲರ್) ದಂಡ ವಿಧಿಸಲಾಗಿದೆ ಎಂದು ಇರಾಕ್‌ನ ಮಾಧ್ಯಮ ನಿಯಂತ್ರಕರು ಹೇಳಿದ್ದಾರೆ. ರಾಯಿಟರ್ಸ್ ವರದಿಯು ಸಾಮಾಜಿಕ ಆರೋಗ್ಯ ಮತ್ತು ಸುರಕ್ಷತೆಯ ಮೇಲೆ ಗಂಭೀರವಾದ ಪ್ರತಿಕೂಲ ಪರಿಣಾಮಗಳನ್ನು ಬೀರಿರುವುದರಿಂದ ಈ ಕ್ರಮ ಕೈಗೊಂಡಿದ್ದೇವೆ ಎಂದು ಸುದ್ದಿಸಂಸ್ಥೆಗೆ ಬರೆದ ಪತ್ರದಲ್ಲಿ ಸಂವಹನ ಮತ್ತು ಮಾಧ್ಯಮ ಆಯೋಗ ತಿಳಿಸಿದೆ. ಆದರೆ ಆರೋಪವನ್ನು ಅಲ್ಲಗಳೆದಿರುವ ರಾಯಿಟರ್ಸ್, ಇರಾಕ್ ಸರಕಾರದ ಕ್ರಮಕ್ಕಾಗಿ ವಿಷಾದಿಸುತ್ತೇವೆ. ವರದಿಗೆ ನಾವು ಈಗಲೂ ಬದ್ಧ. ವೈದ್ಯಕೀಯ ಮತ್ತು ರಾಜಕೀಯ ಕ್ಷೇತ್ರದ ಅನೇಕ ಮಂದಿಯನ್ನು ಭೇಟಿಯಾಗಿ ಸಂಗ್ರಹಿಸಿದ ಮಾಹಿತಿ ಆಧರಿಸಿ ಈ ವರದಿಯನ್ನು ಸಿದ್ಧಪಡಿಸಲಾಗಿತ್ತು. ಈ ವಿವಾದ ಆದಷ್ಟು ಬೇಗ ಬಗೆಹರಿಯಲಿದೆ ಎನ್ನುವುದು ನಮ್ಮ ನಿರೀಕ್ಷೆ ಎಂದು ಸರಕಾರಕ್ಕೆ ಪ್ರತಿಕ್ರಿಯಿಸಿದೆ.
ಏನಿತ್ತು ವರದಿಯಲ್ಲಿ?
ಎ.2ರಂದು ಪ್ರಕಟವಾದ ವರದಿಯಲ್ಲಿ ಇರಾಕ್‌ನಲ್ಲಿ ಸಾವಿರಾರು ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಆದರೆ ಇರಾಕ್ ಸರಕಾರ ಬರೀ 772 ಮಂದಿ ಮಾತ್ರ ಸಾವಿಗೀಡಾಗಿದ್ದಾರೆ ಎಂಬ ಲೆಕ್ಕವನ್ನು ತೋರಿಸುತ್ತಿದೆ ಎಂದು ಹೇಳಲಾಗಿತ್ತು. ವರದಿಗೆ ಆಧಾರವಾಗಿ ಮೂವರು ವೈದ್ಯರು, ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ರಾಜಕೀಯ ನಾಯಕರು ನೀಡಿದ ಹೇಳಿಕೆಯನ್ನು ಬಳಸಿಕೊಳ್ಳಲಾಗಿತ್ತು. ಆರೋಗ್ಯ ಸಚಿವಾಲಯದ ನಿರಾಕರಣೆಯನ್ನು ಬಳಿಕ ವರದಿಯ ಜತೆಗೆ ಸೇರಿಸಿ ಪ್ರಕಟಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Tensions Grip: ಬಾಂಗ್ಲಾದೇಶ ಸರಕಾರದಿಂದ ಹಿಂದೂ ನಾಯಕ, ಇಸ್ಕಾನ್‌ನ ಕೃಷ್ಣದಾಸ್ ಸೆರೆ
Parliament Session: ಗೂಂಡಾಗಿರಿ ಮೂಲಕ ಸಂಸತ್ ಮೇಲೆ ನಿಯಂತ್ರಣ ಸಾಧಿಸಲು ಯತ್ನ: ಮೋದಿ
Sullia: ರಬ್ಬರ್ ಸ್ಮೋಕ್ ಹೌಸ್‌ಗೆ ಬೆಂಕಿ
Horoscope: ಆತ್ಮ ವಿಶ್ವಾಸ ಮತ್ತು ಸಕಾರಾತ್ಮಕ ಚಿಂತನೆಯಿಂದ ಯಶಸ್ಸು ಸಿಗಲಿದೆ
Mosque survey: ಸಂಭಲ್ ಹಿಂಸೆ: ಎಸ್ಪಿ ಸಂಸದ ಸೇರಿ ಹಲವರ ವಿರುದ್ಧ ಕೇಸು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.