ತುರ್ತು ಮಾತ್ರೆ ತಲುಪಿಸಿದ ವಾರಿಯರ್ಸ್
Team Udayavani, Apr 16, 2020, 4:20 PM IST
ಕಲಬುರಗಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಿಂದ ಕೋವಿಡ್-19 ಹಿನ್ನೆಲೆಯಲ್ಲಿ ಕಾರ್ಯನಿರ್ವಸುತ್ತಿರುವ ಕೋವಿಡ್ ವಾರಿಯರ್ಸ್ (ಸೈನಿಕರು) ಮೂತ್ರಪಿಂಡ ಹಾಗೂ ಹೃದಯ ಶಸ್ತ್ರ ಚಿಕಿತ್ಸೆಗೊಳಗಾದ ಇಬ್ಬರು ರೋಗಿಗಳಿಗೆ ತುರ್ತಾಗಿ ಬೇಕಾಗಿರುವ ಮಾತ್ರೆಗಳನ್ನು ತಲುಪಿಸಿದ್ದಾರೆ.
ಜಿಲ್ಲೆಯ ಆಳಂದ ತಾಲೂಕಿನ ನಿಂಬರ್ಗಾ ಗ್ರಾಮದ ಕಸ್ತೂರಿಬಾಯಿ ಎನ್ನುವ 67 ವರ್ಷದ ವೃದ್ಧೆಯೊಬ್ಬರು ವರ್ಷದ ಹಿಂದೆಯೆ ಮೂತ್ರಪಿಂಡ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಈ ರೋಗಿಗೆ ಪ್ರತಿ ತಿಂಗಳು ಸೇವಿಸಬೇಕಾದ ಮಾತ್ರೆಗಳನ್ನು ತಮ್ಮ ಸ್ವಂತ ವಾಹನದಲ್ಲಿ ನಿಂಬರಗಾ ಗ್ರಾಮಕ್ಕೆ ಕೊರೊನಾ ಸೈನಿಕ ನಾಗರಾಜ ಹೋಗಿ ತಲುಪಿಸಿದ್ದಾರೆ. ಸೇಡಂ ತಾಲೂಕಿನ ಹಂಗನಳ್ಳಿ ಗ್ರಾಮದ ನಾಗಮ್ಮ ಎನ್ನುವ 58 ವರ್ಷದ ವೃದ್ಧೆ ಆರು ತಿಂಗಳ ಹಿಂದೆಯೆ ಅತಿಯಾದ ರಕ್ತದೊತ್ತಡ ಇರುವ ಪ್ರಯುಕ್ತ ಗುಲಬರ್ಗಾ ಹಾರ್ಟ್ ಫೌಂಡೇಶನ್ ಆಸ್ಪತ್ರೆಯಲ್ಲಿ ಹೃದಯದ ಶಸ್ತ್ರ ಚಿಕಿತ್ಸೆಗೊಳಗಾಗಿದ್ದರು. ಇವರಿಗೆ ವೈದ್ಯರು ಆರು ತಿಂಗಳು ತಪ್ಪದೇ ಮಾತ್ರೆ ಸೇವಿಸಲು ತಿಳಿಸಿದ್ದರು.
ಲಾಕ್‌ಡೌನ್ ಪ್ರಯುಕ್ತ ಇವರು ಕಲಬುರಗಿಗೆ ಬಂದು ಮಾತ್ರೆ ಪಡೆಯಲು ಅಸಾಧ್ಯವಾಗಿತ್ತು. ಕೋವಿಡ್ ಸೈನಿಕರಾದ ಹರ್ಷಲ್ ನಾಗರೆ, ರಾಜು ಜೇವರ್ಗಿ ತಮ್ಮ ಸ್ವಂತ ವಾಹನದಲ್ಲಿ ಹಂಗನಳ್ಳಿ ಗ್ರಾಮಕ್ಕೆ ಹೋಗಿ ಮಾತ್ರೆ ತಲುಪಿಸಿದ್ದಾರೆ. ಇವರ ಕಾರ್ಯ ಮೆಚ್ಚುಗೆಗೆ ಪಾತ್ರವಾಗಿದೆ. ನಿಂಬರ್ಗಾ ಗ್ರಾಮದ ಕಸ್ತೂರಿಬಾಯಿ ಅವರ ಮೊಮ್ಮಗನಾದ ಸ್ವಪ್ನಿಲ್ ಹಾಗೂ ಹಂಗನಳ್ಳಿ ಗ್ರಾಮದ ನಾಗಮ್ಮ ಅವರ ಪುತ್ರಿ ಸುಲೋಚನಾ ಎನ್ನುವರು ಕರ್ನಾಟಕ ಕೊರೊನಾ ಸೈನಿಕರ ತಂಡದ ವಾಟ್ಸ್‌ಆ್ಯಪ್ ಗ್ರೂಪ್‌ನಲ್ಲಿ ಲಾಕ್ ಡೌನ್ ಇರುವ ಪ್ರಯುಕ್ತ ರೋಗಿಗಳಿಗೆ ಪ್ರತಿ ತಿಂಗಳು ಸೇವಿಸಬೇಕಾದ ಮಾತ್ರೆಗಳನ್ನು ಪೂರೈಸುವಂತೆ ಮನವಿ ಮಾಡಿದ್ದರು.
ಬೆಂಗಳೂರಿನ ರಾಘವೆಂದ್ರ ಅವರು ಕಲಬುರಗಿ ಜಿಲ್ಲೆಯ ಕೊರೊನಾ ಸೈನಿಕರಾದ ನಾಗರಾಜ, ಹರ್ಷಲ್ ನಾಗರೆ, ರಾಜು ಜೇವರ್ಗಿ ಅವರಿಗೆ ಈ ಟಾಸ್ಕ್ನ್ನು ಪೂರ್ಣಗೊಳಿಸುವಂತೆ ತಿಳಿಸಿದರು. ಇದಕ್ಕೆ ಕೊರೊನಾ ಸೈನಿಕರು ಸ್ಪಂದಿಸಿದ್ದಾರೆ. ಅನುಕೂಲ ಪಡೆದವರು ಕೊರೊನಾ ಸೈನಿಕರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
Canada: ದೇಗುಲದ ಮೇಲೆ ದಾಳಿ: ಕೆನಡಾ ಪೊಲೀಸ್‌ಗೆ ಕ್ಲೀನ್‌ಚಿಟ್
Protest: ಕಾಶ್ಮೀರ ಚರ್ಚೆ: ಆಕ್ಸ್‌ಫರ್ಡ್‌ನಲ್ಲಿ ಭಾರತೀಯರ ಪ್ರತಿಭಟನೆ
Chennai: ಲಾಟರಿ ಕಿಂಗ್ ಮಾರ್ಟಿನ್‌ನ 8.8 ಕೋಟಿ ರೂ. ಇ.ಡಿ. ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.