ಎಸಿ ಕೊಠಡಿಯೊಳಗೆ ಹರಡುತ್ತದೆ ಕೋವಿಡ್
Team Udayavani, Apr 16, 2020, 4:18 PM IST
ಬೀಜಿಂಗ್: ಕೋವಿಡ್ ವೈರಾಣು ಹವಾನಿಯಂತ್ರಿತ ಕೊಠಡಿಯೊಳಗೆ ಸುಲಭವಾಗಿ ಹರಡುತ್ತದೆ ಎನ್ನುವುದಕ್ಕೆ ಚೀನದಲ್ಲಿ ಸಾಕ್ಷಿ ಸಿಕ್ಕಿದೆ. ಈ ಕುರಿತಾದ ಅಧ್ಯಯನ ವರದಿಯನ್ನು ವಿಜ್ಞಾನ ನಿಯತಕಾಲಿಕದಲ್ಲಿ ಪ್ರಕಟಿಸಲಾಗಿದೆ. ಚೀನದ ಗ್ವಾಂಗ್‌ಝುನಲ್ಲಿ ಒಂದೇ ಹೊಟೇಲಿನ ಎಸಿ ಕೊಠಡಿಯಲ್ಲಿ ಊಟ ಮಾಡಿದ ಮೂರು ಕುಟುಂಬಗಳನ್ನು ಅಧ್ಯಯನಕ್ಕೊಳಪಡಿಸಿತು.
ವುಹಾನ್ ವ್ಯಕ್ತಿಯೊಬ್ಬ ಹೊಟೇಲಿನ ಕಿಟಿಕಿಗಳಿಲ್ಲದ ಎಸಿ ಕೊಠಡಿಯಲ್ಲಿ ಜ.24ರಂದು ಊಟ ಮಾಡಿದ್ದ. ಇವನ ಪಕ್ಕದ ಟೇಬಲ್‌ನಲ್ಲಿ ಇನ್ನೆರಡು ಕುಟುಂಬಗಳಿದ್ದವು. ಮೊದಲ ವ್ಯಕ್ತಿಗೆ ಅದೇ ದಿನ ಕೆಮ್ಮು ಮತ್ತು ಜ್ವರ ಶುರುವಾಯಿತು. ಇನ್ನೆರಡು ಕುಟುಂಬಗಳ ಸದಸ್ಯರಿಗೆ ಫೆ.5ರಂದು ಸೋಂಕು ಇರುವುದು ದೃಢವಾಯಿತು.
ಉಗುಳಿನ ಹನಿಯಿಂದ ಈ ಹೊಟೇಲಿನೊಳಗೆ ಕೋವಿಡ್ ಹರಡಿರಬಹುದು ಎಂಬ ತೀರ್ಮಾನಕ್ಕೆ ಅಧ್ಯಯನಕಾರರು ಬಂದಿದ್ದಾರೆ. ಏಕೆಂದರೆ ಮೂರೂ ಕುಟುಂಬಗಳು ನೇರ ಸಂಪರ್ಕ ಹೊಂದಿರಲಿಲ್ಲ.
ಉಗುಳಿನ ಹನಿಯಲ್ಲಿ (ಡ್ರಾಪ್ಲೆಟ್) ವೈರಸ್‌ಗಳು ಕೆಲವು ನಿಮಿಷಗಳಷ್ಟು ಹೊತ್ತು ಇರುತ್ತವೆ ಮತ್ತು ತುಸು ದೂರ ಸಾಗುತ್ತವೆ. ಎಸಿಯೊಳಗಿನ ಗಾಳಿ ಹನಿಯನ್ನು ಒಬ್ಬರಿಂದ ಒಬ್ಬರಿಗೆ ಸಾಗಿಸಿರುವ ಸಾಧ್ಯತೆಯಿದೆ. ಹಾಗಾಗಿ ಹೊಟೇಲುಗಳಲ್ಲಿ ಟೇಬಲ್‌ಗಳ ನಡುವಿನ ಅಂತರ ಹೆಚ್ಚಳ ಹಾಗೂ ವೆಂಟಿಲೇಶನ್ ಸೌಲಭ್ಯ ಒದಗಿಸಲು ಸೂಚಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Covid-19: ಕೋವಿಡ್ ಭೀತಿ; ಮೂರು ರಾಜ್ಯಗಳಲ್ಲಿ ಮಾಸ್ಕ್ ಕಡ್ಡಾಯ
Covid 19 ವಿದೇಶದಿಂದ ಬರುವವರಿಗೆ ಕೋವಿಡ್ ಟೆಸ್ಟ್ ಕಡ್ಡಾಯ ಮಾಡಿದ ಉತ್ತರ ಪ್ರದೇಶ ಸರ್ಕಾರ
ಕೋವಿಡ್ ಗೂ ಹೃದಯಾಘಾತಕ್ಕೂ ಸಂಬಂಧವಿದೆಯೇ? ಉತ್ತರ ನೀಡಿದ ಕೇಂದ್ರ ಆರೋಗ್ಯ ಸಚಿವ
ಎಚ್3ಎನ್2 ಭೀತಿಯ ಮಧ್ಯೆ ಕೋವಿಡ್ ಏರಿಕೆ; ಒಂದೇ ದಿನ ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಕೋವಿಡ್ 19 ಲಸಿಕೆಯಿಂದ ಅಡ್ಡಪರಿಣಾಮ ಇರೋದು ನಿಜ: RTIನಲ್ಲಿ ಕೇಂದ್ರದ ಉತ್ತರ ಬಹಿರಂಗ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.