ಮಕ್ಕಳ ಹಸಿವು ಹಂಗಿಸುತ್ತಿದೆ ಉಚಿತ ಡೈರಿ ಹಾಲು

Team Udayavani, Apr 16, 2020, 5:32 PM IST

16-April-30

ವಾಡಿ: ಪಟ್ಟಣದ ಮಲ್ಲಿಕಾರ್ಜುನ ದೇವಸ್ಥಾನ ಹಿಂಭಾಗದ ಬಡಾವಣೆಯ ಬಡ ಕುಟುಂಬಗಳ ಮಕ್ಕಳು ಉಚಿತ ಹಾಲಿನಿಂದ ವಂಚಿತರಾಗಿದ್ದಾರೆ

ವಾಡಿ: ಕೊರೊನಾ ಸಂಕಟದಲ್ಲಿ ಸಿಲುಕಿ ಕೂಲಿಯಿಲ್ಲದೆ ನರಳುತ್ತಿರುವ ಬಡ ಕುಟುಂಬಗಳಿಗೆ ಉಚಿತವಾಗಿ ಹಾಲು ವಿತರಿಸುವ ಕಾರ್ಯಕ್ಕೆ ಸ್ಥಳೀಯ ಆಡಳಿತಗಳಿಂದ ಚಾಲನೆ ದೊರೆತಿದ್ದು, ಹಸಿದವರನ್ನು ಬಿಟ್ಟು ಹೊಟ್ಟೆ ತುಂಬಿದವರ ಮನೆಗೆ ಡೈರಿ ಪ್ಯಾಕೇಟ್‌ಗಳು ತಲುಪುತ್ತಿವೆ ಎನ್ನುವ ಆರೋಪ ಕೇಳಿಬಂದಿದೆ.

ಲಾಕ್‌ಡೌನ್‌ ಅಂತ್ಯದ ವರೆಗೂ ಪುರಸಭೆ ವ್ಯಾಪ್ತಿಯ ಬಡವರು, ನಿರ್ಗತಿಕರು ಹಾಗೂ ಊಟ ವಸತಿಗಾಗಿ ಪರದಾಡುತ್ತಿರುವವರಿಗೆ ನೆರವಾಗಬೇಕು ಎನ್ನುವ ಕಾರಣಕ್ಕೆ ಆಹಾರ ಮತ್ತು ನಂದಿನಿ ಡೈರಿ ಹಾಲನ್ನು ಪ್ರತಿನಿತ್ಯ ಉಚಿತವಾಗಿ ಮನೆ ಮನೆಗೆ ತಂದು ವಿತರಿಸಬೇಕು ಎನ್ನುವ ಆದೇಶ ಸರಕಾರದಿಂದ ಹೊರಬಿದ್ದಿದೆ. ಆದರೆ ವಿತರಣೆಯಲ್ಲಿ ರಾಜಕೀಯ ಸೇರಿಕೆಯಾಗಿದ್ದು, ಸ್ಥಿತಿವಂತರೂ ಹಾಲಿಗೆ, ಊಟಕ್ಕೆ ಕೈಯೊಡ್ಡುತ್ತಿದ್ದಾರೆ.

ಹಸಿದವರ ಮಕ್ಕಳು ಮಾತ್ರ ನಮಗೂ ಹಾಲು ಬರುತ್ತದೆ ಎಂದು ಕಾಯ್ದು ಕುಳಿತು ನಿರಾಸೆ ಅನುಭವಿಸುತ್ತಿದ್ದಾರೆ. ಪೌರಕಾರ್ಮಿಕರು ವಾಹನದಲ್ಲಿ ಸಾಗಿಸುವ ಹಾಲುಗಳತ್ತ ದೃಷ್ಟಿ ನೆಡುತ್ತಿರುವ ಬಡ ಮಕ್ಕಳು, ಹಾಲು ಕೊಡಿ ಎಂದು ಕೈಚಾಚುತ್ತಿದ್ದರೂ ಸಿಬ್ಬಂದಿ ನೋಡಿಯೂ ನೋಡದಂತೆ ಬೇರೆ ಬಡಾವಣೆಗಳಿಗೆ ಹೋಗುತ್ತಿದ್ದಾರೆ. ಪುರಸಭೆಯ ವಾರ್ಡ್‌ 13ರ ಮಲ್ಲಿಕರ್ಜುನ ದೇವಸ್ಥಾನ ಹಿಂಭಾಗದ ಸಣ್ಣ ಬಡಾವಣೆಯಲ್ಲಿ ಸುಮಾರು 30ಕ್ಕೂ ಹೆಚ್ಚು ಬಡ ಕುಟುಂಬಗಳು ಆಶ್ರಯ ಪಡೆದಿವೆ. ಕಳೆದ ಒಂದು ವಾರದಿಂದ ವಿವಿಧ ಬಡಾವಣೆಗಳಿಗೆ ಹಾಲು ವಿತರಿಸಲಾಗುತ್ತಿದೆ. ಆದರೆ ಈ ಬಡಾವಣೆಯ ಮಕ್ಕಳಿಗೆ ಒಮ್ಮೆಯೂ ಹಾಲು ತಲುಪಿಲ್ಲ. ಹೋಟೆಲ್‌ಗ‌ಳಲ್ಲಿ ಪಾತ್ರೆ ತೊಳೆಯುವ, ಮನೆಗಳಲ್ಲಿ ಬಟ್ಟೆ ಒಗೆಯುವ, ಕಟ್ಟಡ ಕಾರ್ಮಿಕರು, ದಿನಗೂಲಿ ಕಾರ್ಮಿಕರು ಇಲ್ಲಿ ವಾಸವಿದ್ದಾರೆ.

ಇತರ ಸ್ಲಂ ಬಡಾವಣೆಗಳಲ್ಲೂ ಬಡತನ ಭೀಕರವಾಗಿ ಕಾಡುತ್ತಿದೆ. ಇವೆಲ್ಲ ಕುಟುಂಬಗಳಿಗೆ ಸರಿಯಾಗಿ ಹಾಲು ವಿತರಣೆಯಾಗುತ್ತಿಲ್ಲ ಎಂದು ಎಐಯುಟಿಯುಸಿ ಕಾರ್ಮಿಕ ಸಂಘಟನೆ ಸಂಚಾಲಕ ಶರಣು ಎಸ್‌.ಕೆ ಆರೋಪಿಸಿದ್ದಾರೆ.

ಟಾಪ್ ನ್ಯೂಸ್

Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು

Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು

Karnataka Govt.,: ನಕಲಿ ವೈದ್ಯರ ಹಾವಳಿ ತಡೆಗೆ ಕ್ರಮ: ಆರೋಗ್ಯ ಸಚಿವ

Karnataka Govt.,: ನಕಲಿ ವೈದ್ಯರ ಹಾವಳಿ ತಡೆಗೆ ಕ್ರಮ: ಆರೋಗ್ಯ ಸಚಿವ

Karnataka ಮಾಹಿತಿ ಆಯೋಗ: ಖಾಲಿ ಹುದ್ದೆ ಭರ್ತಿಗೆ ಹೈಕೋರ್ಟ್‌ ಆದೇಶ

Karnataka ಮಾಹಿತಿ ಆಯೋಗ: ಖಾಲಿ ಹುದ್ದೆ ಭರ್ತಿಗೆ ಹೈಕೋರ್ಟ್‌ ಆದೇಶ

UK ಚೆವನಿಂಗ್‌-ಕರ್ನಾಟಕ ಸ್ನಾತಕೋತ್ತರ ವಿದ್ಯಾರ್ಥಿ ವೇತನ ಒಪ್ಪಂದಕ್ಕೆ ಸಹಿ

UK ಚೆವನಿಂಗ್‌-ಕರ್ನಾಟಕ ಸ್ನಾತಕೋತ್ತರ ವಿದ್ಯಾರ್ಥಿ ವೇತನ ಒಪ್ಪಂದಕ್ಕೆ ಸಹಿ

Vishwanath-Rao

Kaup: ಸಹಕಾರಿ ಧುರೀಣ ಬಾಲಂ ವಿಶ್ವನಾಥ್ ರಾವ್ ಪಣಿಯೂರು ನಿಧನ

1-bg

Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ

RTE: ದ್ವಿತೀಯ ಪಿಯುವೆರೆಗೆ ವಿಸ್ತರಣೆ ಪ್ರಸ್ತಾವನೆ ಇಲ್ಲ: ಸಚಿವ ಮಧು ಬಂಗಾರಪ್ಪ

RTE: ದ್ವಿತೀಯ ಪಿಯುವೆರೆಗೆ ವಿಸ್ತರಣೆ ಪ್ರಸ್ತಾವನೆ ಇಲ್ಲ: ಸಚಿವ ಮಧು ಬಂಗಾರಪ್ಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police

Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು

ಮಾಜಿ ಉಪ ಸಭಾಪತಿ ಶತಾಯುಷ್ಸಿ ಕೇಶವರಾವ ನಿಟ್ಟೂರಕರ ಅಸ್ತಂಗತ

Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ

police

Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ

ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ

Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ

Bidar: ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ದರ್ಪ… ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಾಗ್ದಾಳಿ

Bidar: ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ದರ್ಪ… ಬಿಜೆಪಿ ಅಧ್ಯಕ್ಷ ವಿಜಯೇಂದ್ರ ವಾಗ್ದಾಳಿ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

3 ತಿಂಗಳಿಂದ ಸಂಬಳ ನೀಡದ್ದಕ್ಕೆ 30 ಅಡಿ ಎತ್ತರದ ಕಂಬ ಏರಿ ಆತ್ಮಹ*ತ್ಯೆಗೆ ಯತ್ನ

3 ತಿಂಗಳಿಂದ ಸಂಬಳ ನೀಡದ್ದಕ್ಕೆ 30 ಅಡಿ ಎತ್ತರದ ಕಂಬ ಏರಿ ಆತ್ಮಹ*ತ್ಯೆಗೆ ಯತ್ನ

Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು

Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು

Karnataka Govt.,: ನಕಲಿ ವೈದ್ಯರ ಹಾವಳಿ ತಡೆಗೆ ಕ್ರಮ: ಆರೋಗ್ಯ ಸಚಿವ

Karnataka Govt.,: ನಕಲಿ ವೈದ್ಯರ ಹಾವಳಿ ತಡೆಗೆ ಕ್ರಮ: ಆರೋಗ್ಯ ಸಚಿವ

Karnataka ಮಾಹಿತಿ ಆಯೋಗ: ಖಾಲಿ ಹುದ್ದೆ ಭರ್ತಿಗೆ ಹೈಕೋರ್ಟ್‌ ಆದೇಶ

Karnataka ಮಾಹಿತಿ ಆಯೋಗ: ಖಾಲಿ ಹುದ್ದೆ ಭರ್ತಿಗೆ ಹೈಕೋರ್ಟ್‌ ಆದೇಶ

UK ಚೆವನಿಂಗ್‌-ಕರ್ನಾಟಕ ಸ್ನಾತಕೋತ್ತರ ವಿದ್ಯಾರ್ಥಿ ವೇತನ ಒಪ್ಪಂದಕ್ಕೆ ಸಹಿ

UK ಚೆವನಿಂಗ್‌-ಕರ್ನಾಟಕ ಸ್ನಾತಕೋತ್ತರ ವಿದ್ಯಾರ್ಥಿ ವೇತನ ಒಪ್ಪಂದಕ್ಕೆ ಸಹಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.