ಕೆನರಾ ಬ್ಯಾಂಕ್ನಿಂದ ಸಂಚಾರಿ ಎಟಿಎಂ
Team Udayavani, Apr 16, 2020, 6:09 PM IST
ಶಹಾಬಾದ: ಕೊರೊನಾ ಸೊಂಕು ನಿಯಂತ್ರಣಕ್ಕೆ ಪೂರಕವಾಗಿ ನಗರದ ಕೆನರಾ ಬ್ಯಾಂಕ್ ಶಾಖೆ ಸಂಚಾರಿ ಎಟಿಎಂ ಸೇವೆ ನೀಡುವ ಮೂಲಕ ಗ್ರಾಹಕರಿಗೆ ಅನುಕೂಲ ಮಾಡಿಕೊಡುತ್ತಿದೆ.
ಕೆನರಾ ಬ್ಯಾಂಕ್ ವ್ಯವಸ್ಥಾಪಕ ಹಣಮಂತರಾವ ದೇಗಾಂವ್ ಸಲಹೆ ಮೇರೆಗೆ ಸಂಚಾರಿ ಎಟಿಎಂ ಸೇವೆ ಆರಂಭಿಸಲಾಗಿದ್ದು, ಆಟೋಗಳ ಮೂಲಕ ನಗರ ಹಾಗೂ ಗ್ರಾಮೀಣ ಪ್ರದೇಶಕ್ಕೆ ತಲಾ ಒಂದೊಂದು ಸಂಚಾರಿ ಎಟಿಎಂ ಸೇವೆ ಕಳಿಸಲಾಗಿದೆ. ಈ ಸೇವೆ ಮೂಲಕ ಗ್ರಾಹಕರು ತಮ್ಮ ಜನ್ಧನ್ ಖಾತೆಗೆ ಕೇಂದ್ರ ಸರಕಾರ ಪಾವತಿಸಿರುವ 500 ರೂ. ಪಡೆದುಕೊಳ್ಳಲು ಅನುಕೂಲ ಮಾಡಿಕೊಡಲಾಗಿದೆ. ಹೀಗೆ ಹಣ ಪಡೆದುಕೊಳ್ಳಲು ಪಾಸ್ ಬುಕ್ ಇರಲೆಬೇಕೆಂಬ ನಿಯಮವಿಲ್ಲ. ಕೇವಲ ಖಾತೆದಾರರು ತಮ್ಮ ಆಧಾರ ಕಾರ್ಡ್ ತೋರಿಸಿ ಹಣ ಪಡೆಯಬಹುದು ಎಂದು ತಿಳಿಸಿದ್ದಾರೆ.
ಇನ್ನೊಂದೆಡೆ ಖಾತೆದಾರರು ತಮ್ಮ ಖಾತೆಯಿಂದ ನಿತ್ಯ 20 ಸಾವಿರ ರೂ. ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಅಲ್ಲದೇ ತಮ್ಮ ಹಣವನ್ನು ಡಿಪಾಸಿಟ್ ಸಹ ಮಾಡಬಹುದಾಗಿದೆ. ಲಾಕ್ಡೌನ್ ಹಿನ್ನೆಲೆಯಲ್ಲಿ ಬ್ಯಾಂಕ್ ಗಳಿಗೆ ಬರಲು ಆಗದಿರುವುದರಿಂದ ಮತ್ತು ಬ್ಯಾಂಕುಗಳಲ್ಲಿ ಜನಸಂದಣಿ ಆಗದಿರುವುದಕ್ಕೆ ಈ ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bengaluru: ವೈದ್ಯೆಗೆ ಲೈಂಗಿಕ ಕಿರುಕುಳ: ಪಿಎಸ್ಐ ವಿರುದ್ದ ಪೊಲೀಸ್ ಆಯುಕ್ತರಿಗೆ ದೂರು
Bengaluru: ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯ ಜೀವ ಉಳಿಸಿದ ಸಂಚಾರ ಪೊಲೀಸರು
Anmol Buffalo:1500 ಕೆಜಿ ತೂಗುವ ಈ ಕೋಣದ ಬೆಲೆ ಬರೋಬ್ಬರಿ 23 ಕೋಟಿ ರೂ!
BBK11: ಅಸಲಿ ಆಟ ಶುರು ಮಾಡಿದ ಧನರಾಜ್: ಮೋಕ್ಷಿತಾಳಿಗೆ ಅಹಂಕಾರ ಇದೆ ಎಂದ ಸೈಲೆಂಟ್ ಕಿಲಾಡಿ
Digital Arrest ಹೆಸರಿನಲ್ಲಿ ನಿವೃತ್ತ ಇಂಜಿನಿಯರ್ ಗೆ 10 ಕೋಟಿ ರೂಪಾಯಿ ಪಂಗನಾಮ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.