ಕೋವಿಡ್ 19: ಬಡ ಟ್ಯಾಕ್ಸಿ ಚಾಲಕರಿಗೂ ಸಂಕಷ್ಟ

ಲಾಕ್‌ಡೌನ್‌: ಟ್ಯಾಕ್ಸಿ, ಮ್ಯಾಕ್ಸಿಕ್ಯಾಬ್‌ ಮಾಲಕರಿಗೆ ಅತೀವ ನಷ್ಟ

Team Udayavani, Apr 17, 2020, 5:24 AM IST

ಕೋವಿಡ್ 19: ಬಡ ಟ್ಯಾಕ್ಸಿ ಚಾಲಕರಿಗೂ ಸಂಕಷ್ಟ

ಉಡುಪಿ/ ಕುಂದಾಪುರ: ಕೋವಿಡ್ 19 ವೈರಸ್‌ ಪರಿಣಾಮ ವಿಧಿಸಿರುವ ಲಾಕ್‌ಡೌನ್‌ ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್‌ ಮಾಲಕರಿಗೆ ಅತೀವ ನಷ್ಟ ಉಂಟು ಮಾಡಿದೆ. ಇದರ ನೇರ ಪರಿಣಾಮ ವಾಹನ ಚಾಲಕರ ಮೇಲಾಗಿದೆ.

ಜಿಲ್ಲೆಯಲ್ಲಿ 2,600 ಟ್ಯಾಕ್ಸಿ ಹಾಗೂ 1,600 ಮ್ಯಾಕ್ಸಿಕ್ಯಾಬ್‌ಗಳು ಸೇರಿ 4,200 ವಾಹನಗಳಿವೆ. 4,500ಕ್ಕೂ ಅಧಿಕ ಮಂದಿ ಚಾಲಕರಿದ್ದಾರೆ. ಶಿರೂರಿನಿಂದ ಹೆಜಮಾಡಿ ತನಕ 64 ಘಟಕಗಳಿವೆ.

ಘಟಕಗಳಿಂದ ಕಷ್ಟದಲ್ಲಿದ್ದವರಿಗೆ ನೆರವು
ಸಂಕಷ್ಟದಲ್ಲಿರುವ ಚಾಲಕರ ನೆರವಿಗೆ ಉಡುಪಿ ಜಿಲ್ಲಾ ಟ್ಯಾಕ್ಸಿಮೆನ್‌ ಮತ್ತು ಮ್ಯಾಕ್ಸಿಕ್ಯಾಬ್‌ ಅಸೋಸಿ ಯೇಶನ್‌ ಘಟಕಗಳು ಮುಂದಾಗಿವೆ. ವಿವಿ ಧೆಡೆಗಳಲ್ಲಿ ಘಟಕಗಳ ಅಧ್ಯಕ್ಷರು, ಸದಸ್ಯರು ತಮ್ಮ ವ್ಯಾಪ್ತಿಯಲ್ಲಿರುವ ಬಡ ಚಾಲಕರಿಗೆ ಅಗತ್ಯ ದಿನಸಿ ಸಾಮಗ್ರಿಗಳನ್ನು ವಿತರಿಸುತ್ತಿದ್ದಾರೆ.

ಸೀಸನ್‌ ಸಮಯದಲ್ಲಿ ಆಘಾತ
ಉಡುಪಿ ಜಿಲ್ಲೆ ಪ್ರವಾಸಿ ಹಾಗೂ ಧಾರ್ಮಿಕ ತಾಣವಾಗಿ ಪ್ರಸಿದ್ಧಿ ಪಡೆದಿದೆ. ಜತೆಗೆ ಇದು ಮದುವೆ ಮತ್ತಿತರ ಸಮಾ ರಂಭಗಳ ಸೀಸನ್‌. ಈ ಸಮಯದಲ್ಲಿ ಟ್ಯಾಕ್ಸಿ ವಾಹನಗಳಿಗೆ ಹೆಚ್ಚು ಡಿಮಾಂಡ್‌ ಇರುತ್ತದೆ. ಅದೆಲ್ಲವನ್ನು ಕೊರೊನಾ ಕಸಿದುಕೊಂಡಿದೆ.

ಹಲವು ಪರದಾಟ
ಟೂರಿಸ್ಟ್‌ ಟ್ಯಾಕ್ಸಿ ಉದ್ದಿಮೆ ಯನ್ನೇ ನೆಚ್ಚಿಕೊಂಡು ಚಾಲಕ- ಮಾಲಕರಿಗೆ ಇಎಂಐ ಕಟ್ಟಲು ಸರಕಾರ ಮೂರು ತಿಂಗಳ ಕಾಲ ಮುಂದೂಡಿ ರಿಯಾಯಿತಿ ನೀಡಿದೆ. ಇವರು ಇತರ ಸಾಲಗಳನ್ನು ಮಾಡಿ ಕೊಂಡಿದ್ದು, ಕಂತು ಕಟ್ಟಲು ಮತ್ತೂಬ್ಬರಿಂದ ಸಾಲ ಮಾಡುವಂತಾಗಿದೆ. ಜತೆಗೆ ವಾಹನ ದುರಸ್ತಿ, ಮನೆ, ವಿದ್ಯಾಭ್ಯಾಸ ಖರ್ಚು ನಿರ್ವಹಣೆಗೆ ಪರದಾಡುತ್ತಿದ್ದಾರೆ.

ಸರಕಾರದ ನೆರವಿನ ನಿರೀಕ್ಷೆ
ಜಿಲ್ಲಾ ಅಸೋಸಿಯೇಶನ್‌ ವತಿಯಿಂದ ಸರಕಾರಕ್ಕೆ ಈಗಾಗಲೆ ಎರಡು ಪ್ರಮುಖ ಬೇಡಿಕೆಗಳನ್ನು ಇರಿಸಲಾಗಿದೆ. ಟ್ಯಾಕ್ಸಿ ಮತ್ತು ಮ್ಯಾಕ್ಸಿಕ್ಯಾಬ್‌ಗಳ 6 ತಿಂಗಳ ರಸ್ತೆ ತೆರಿಗೆ ಹಾಗೂ ಇನ್ಶೂರೆನ್ಸ್‌ ರದ್ದು ಮಾಡಬೇಕು. ಕನಿಷ್ಠ 5,000 ರೂ. ತತ್‌ಕ್ಷಣಕ್ಕೆ ಸದಸ್ಯರ ಖಾತೆಗಳಿಗೆ ನೀಡಿ, ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ಚಾಲಕರ ಕುಟುಂಬಗಳ ನೆರವಿಗೆ ಬರಬೇಕು ಅನ್ನುವುದಾಗಿದೆ.

ಆರ್‌ಟಿಒ ಬಯಸಿದೆ 60 ಟ್ಯಾಕ್ಸಿ
ನಗರ ಆರ್‌ಟಿಒ ಅಧಿಕಾರಿಗಳು ಈಗಾಗಲೇ ಅಸೋಸಿಯೇಶನ್‌ ಮುಖ್ಯಸ್ಥ ರಲ್ಲಿ ತುರ್ತು ಸೇವೆಗಾಗಿ 60 ಟ್ಯಾಕ್ಸಿ ವಾಹನಗಳನ್ನು ನೀಡುವಂತೆ ಮನವಿ ಮಾಡಿದ್ದಾರೆ. ಡೀಸೆಲ್‌ ಖರ್ಚು ಭರಿಸುವು ದಾಗಿಯೂ ಹೇಳಿದ್ದಾರೆ. ಅದರಂತೆ ಅವರು ಕೇಳಿಕೊಂಡಷ್ಟು ವಾಹನಗಳನ್ನು ನೀಡಲು ಸಿದ್ಧರಿದ್ದೇವೆ. ಆರ್‌ಟಿಒ ಅಧಿಕಾರಿಗಳು ಕೇಳಿದಾಗ ಒದಗಿಸುತ್ತೇವೆ ಎಂದು ಜಿಲ್ಲಾ ಟ್ಯಾಕ್ಸಿಮೆನ್‌ ಮತ್ತು ಮ್ಯಾಕ್ಸಿಕ್ಯಾಬ್‌ ಸಂಘಟನೆಯ ಮುಖ್ಯಸ್ಥರು ತಿಳಿಸಿದ್ದಾರೆ.

ಸ್ಪಂದನೆಯ ನಿರೀಕ್ಷೆ
ಜಿಲ್ಲಾ ಸಂಘಟನೆ ವತಿಯಿಂದ ಮತ್ತು ಆಯಾ ಪ್ರದೇಶಗಳ ಘಟಕಗಳ ಮೂಲಕ ಸಹೋದ್ಯೋಗಿಗಳಿಗೆ ಅಗತ್ಯ ನೆರವನ್ನು ನೀಡುತ್ತಿದ್ದೇವೆ. ದಿನಸಿ ವಸ್ತುಗಳನ್ನು ವಿತರಿಸುವ ಕೆಲಸ ನಡೆಯುತ್ತಿದೆ. ಆರ್ಥಿಕ ಸಂಕಷ್ಟಕ್ಕೆ ಒಳಗಾದ ಚಾಲಕ-ಮಾಲಕರ ನೆರವಿಗೆ ಸರಕಾರಕ್ಕೂ ಮನವಿ ಮಾಡಿದ್ದೇವೆ. ಸ್ಪಂದನೆಯ ನಿರೀಕ್ಷೆಯಲ್ಲಿದ್ದೇವೆ.
-ರಮೇಶ್‌ ಕೋಟ್ಯಾನ್‌,
ಪ್ರಧಾನ ಕಾರ್ಯದರ್ಶಿ,
ಜಿಲ್ಲಾ ಟ್ಯಾಕ್ಸಿಮೆನ್‌ ಮತ್ತು ಮ್ಯಾಕ್ಸಿಕ್ಯಾಬ್‌ ಅಸೋಸಿಯೇಶನ್‌, ಉಡುಪಿ.

ಟಾಪ್ ನ್ಯೂಸ್

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

High-Court

Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ

Hockey

Hockey: ಇಂದಿನಿಂದ ಜೂ. ಏಷ್ಯಾ ಕಪ್‌ ಹಾಕಿ; ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

ಯಾರಿಗೂ ಹೆದರೆನು, ವಕ್ಫ್ ಸಮರ ನಿಲ್ಲಿಸೆನು: ಬಸನಗೌಡ ಪಾಟೀಲ್‌ ಯತ್ನಾಳ್‌

NH Highway works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌

NH Highway Works: ಬಿ.ಸಿ.ರೋಡು: ಟ್ರಾಫಿಕ್‌ ಜಾಮ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಗೀತಾರ್ಥ ಚಿಂತನೆ 106: ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

2

Malpe: ಬೋಟಿನಲ್ಲಿದ್ದ ಮೀನುಗಾರ ನಾಪತ್ತೆ; ಪ್ರಕರಣ ದಾಖಲು

crime

Padubidri: ಸ್ಕೂಟಿಯಿಂದ ಬಿದ್ದು ಮಹಿಳೆಗೆ ತೀವ್ರ ಗಾಯ

KAUP: ಸಂವಿಧಾನ ಉಳಿಸಿ ಬೃಹತ್‌ ಜಾಥಾ ಮತ್ತು ಸಾರ್ವಜನಿಕ ಸಭೆ

KAUP: ಧರ್ಮಗ್ರಂಥಗಳಷ್ಟೇ ಸಂವಿಧಾನವೂ ಪವಿತ್ರ: ನಿಕೇತ್‌ ರಾಜ್‌ ಮೌರ್ಯ

man-a

Udupi: ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

CM-Siddu-High-Court

MUDA Case: ಮುಡಾ ನಿವೇಶನ ಹಗರಣ ಸಿಬಿಐಗೆ: ಡಿ. 10ಕ್ಕೆ ವಿಚಾರಣೆ ಮುಂದೂಡಿಕೆ

High-Court

Order: ಮಗು ಆರೈಕೆ ರಜೆ: ಸಿಎಟಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Tamil-tahala

Pro Kabaddi: ಯೋಧಾಸ್‌ಗೆ ತಲೈವಾಸ್‌ ಆಘಾತ

Hockey

Hockey: ಇಂದಿನಿಂದ ಜೂ. ಏಷ್ಯಾ ಕಪ್‌ ಹಾಕಿ; ಭಾರತಕ್ಕೆ ಥಾಯ್ಲೆಂಡ್‌ ಎದುರಾಳಿ

Murder-Represent

Bengaluru: ಪ್ರಿಯಕರನಿಂದಲೇ ಪ್ರೇಯಸಿ ಎದೆಗೆ ಇರಿದು ಹ*ತ್ಯೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.