ಕಲ್ಲಂಗಡಿ ಮಾರಾಟಕ್ಕೆ ಕೋವಿಡ್ ಕಾಟ
ಹೊಲದಲ್ಲೇ ಕೊಳೆಯುತ್ತಿದೆ ಸಾಲ ಸೂಲ ಮಾಡಿ ಬೆಳೆದ ಬೆಳೆ
Team Udayavani, Apr 17, 2020, 11:27 AM IST
ಇಂಡಿ: ಇಂಗಳಗಿ ಗ್ರಾಮದ ರೈತ ಬೆಳೆದಿರುವ ಕಲ್ಲಂಗಡಿ ಮಾರುಕಟ್ಟೆಗೆ ಸಾಗಿಸಲಾಗದೆ ಹೊಲದಲ್ಲಿಯೇ ಕೊಳೆಯುತ್ತಿರುವುದು.
ಇಂಡಿ: ಸರಕಾರದಿಂದ ಜಿಲ್ಲಾ ಕೇಂದ್ರದಲ್ಲಿ ತೆರೆದಿರುವ ಹಾಪ್‌ಕಾಮ್ಸ್ ಮಳಿಗೆಯಿಂದ ರೈತರ ಬೆಳೆ ಖರೀದಿ ಮಾಡಲಾಗುವುದು ಎಂದು ಕೃಷಿ ಸಚಿವರು, ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ, ರೈತರು ಬೆಳೆದ ಎಲ್ಲ ಬೆಳೆಯನ್ನೂ ಹಾಪ್‌ಕಾಮ್ಸ್‌ದಿಂದ ಖರೀದಿಸಲು ಅಸಾಧ್ಯವಾಗಿದೆ.
ಕಲ್ಲಂಗಡಿ ಬೆಳೆದಿರುವ ತಾಲೂಕಿನ ಇಂಗಳಗಿ, ಆಳೂರ, ಲಚ್ಯಾಣ, ಇಂಡಿ, ಅಹಿರಸಂಗ, ಹಿರೇಬೇವನೂರ, ಭುಯ್ನಾರ ಗ್ರಾಮಗಳಲ್ಲಿನ ರೈತರು ಮಾರುಕಟ್ಟೆ ಇಲ್ಲದೆ ಕಂಗಾಲಾಗಿದ್ದಾರೆ. ಕೊರೊನಾ ವಿರುದ್ಧ ಹೋರಾಟಕ್ಕೆ ಸರ್ಕಾರ ಲಾಕ್‌ಡೌನ್ ಆದೇಶ ನೀಡಿ ಜೀವ ಉಳಿಸಲು ಗಟ್ಟಿ ನಿರ್ಧಾರ ತೆಗದುಕೊಂಡಿದ್ದು, ಈ ಸಂದರ್ಭದಲ್ಲಿ ಸಾಲಸೂಲ ಮಾಡಿ ಬೆಳೆದಿರುವ ಬೆಳೆ ಮಾರಾಟಮಾಡಲಾಗದೆ ಅನ್ನದಾತ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾನೆ. ಮಧ್ಯವರ್ತಿಗಳು ಕೆಜಿ ಕಲ್ಲಂಗಡಿಗೆ ಕೇವಲ 2 ರೂಪಾಯಿ ಕೇಳುತ್ತಿದ್ದು, ಇದು ನಾವು ಬೆಳೆಗೆ ಮಾಡಿದ ಖರ್ಚು ಸಹ ಮರಳಿ ಬಾರದಂತ ಸ್ಥಿತಿಯಲ್ಲಿದೆ.
ತಾಲೂಕಿನಲ್ಲಿ ಅನೇಕ ರೈತರು ಕಲ್ಲಂಗಡಿ ಬೆಳೆದಿದ್ದಾರೆ. ಆದರೆ, ಲಾಕ್‌ಡೌನ್ ಪರಿಣಾಮ ಮಾರುಕಟ್ಟೆಗೆ ಸಾಗಾಟ ಮಾಡಲು ಸಮಸ್ಯೆಯಾಗಿದೆ. ಹಾಫ್‌ಕಾಮ್ಸ್ ಗೆ ಕಳುಹಿಸಲು ಕರೆ ಮಾಡಿ ಕೇಳಿದ್ದೇವೆ. ಈಗಾಗಲೇ ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಹಣ್ಣು ಖರೀದಿ ಮಾಡಲಾಗಿದೆ. ಸದ್ಯ ಅಗತ್ಯವಿಲ್ಲ ಎನ್ನುವ ಉತ್ತರ ನೀಡಿದ್ದಾರೆ.
ರಮೇಶ ಬೆನಕನಹಳ್ಳಿ,
ಇಂಗಳಗಿ ಗ್ರಾಮದ ರೈತ
2ಎಕರೆಯಲ್ಲಿ ಕಲ್ಲಂಗಡಿ ಬೆಳೆದಿದ್ದೇನೆ. ಮಾರುಕಟ್ಟೆ ಇಲ್ಲದ ಕಾರಣ ಜಮೀನಿನಲ್ಲೇ ಬೆಳೆ ಕೊಳೆಯುತ್ತಿದೆ. ದನ-ಕರುಗಳಿಗೆ ಕಲ್ಲಂಗಡಿ ತಿನ್ನಿಸುತ್ತಿದ್ದೇವೆ. ಕೆಜಿಗೆ ಎರಡು ರೂಪಾಯಿಯಂತೆ ಕೇಳುತ್ತಿದ್ದಾರೆ. ನಮ್ಮ ಗೋಳು ಕೇಳಲು ಯಾರೂ ಮುಂದೆ ಬರುತ್ತಿಲ್ಲ.
ವಿಠ್ಠಲ ಬಿರಾದಾರ,
ಆಳೂರ ಗ್ರಾಮದ ರೈತ
ತಾಲೂಕಿನಲ್ಲಿ ಬೆಳೆದಿರುವ ಕಲ್ಲಂಗಡಿ ಬೆಳೆಗಾರರ ಸಮಸ್ಯೆ ಪರಿಹಾರಕ್ಕೆ ಸರ್ವೇ ಮಾಡಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಕಲ್ಲಂಗಡಿ , ಲಿಂಬೆ, ಕರಬೂಜ, ದ್ರಾಕ್ಷಿ, ದಾಳಿಂಬೆ ಬೆಳೆಗಳಿಗೂ ಇದೇ ಪರಿಸ್ಥಿತಿ ಇದೆ. ಸರಕಾರದ ಗಮನ ಸೆಳೆದು ರೈತರಿಗೆ ನ್ಯಾಯ ದೊರಕಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ಯಶವಂತ್ರಾಯಗೌಡ ಪಾಟೀಲ,
ಶಾಸಕರು
ಉಮೇಶ ಬಳಬಟ್ಟಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Test; ದಕ್ಷಿಣ ಆಫ್ರಿಕಾ ಎದುರು ನಿಕೃಷ್ಟ ಮೊತ್ತಕ್ಕೆ ಶ್ರೀಲಂಕಾ ಆಲೌಟ್
Bangladesh ಹಿಂಸಾಚಾರ: ಕೋಲ್ಕತಾ ಹಿಂದೂ ಸಂಘಟನೆಗಳ ಭಾರೀ ಪ್ರತಿಭಟನೆ
R. B. Timmapur: ಮದ್ಯದಂಗಡಿ ಮಂಜೂರಿಗೆ ಲಂಚ ಕೇಳಿದ್ದ ಇಬ್ಬರ ಅಮಾನತು
8 ಮಸೂದೆ ಮಂಡನೆಗೆ ಸಂಪುಟ ಒಪ್ಪಿಗೆ; ವಿಧಾನಮಂಡಲದ ಅಧಿವೇಶನದಲ್ಲಿ ಮಂಡನೆ
Elephant: ಬಂಡೀಪುರದಲ್ಲಿ ಆನೆ ಮೃತದೇಹ ಪತ್ತೆ: ಆಂಥ್ರಾಕ್ಸ್ ಸೋಂಕು ಶಂಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.