ಐಶಾನಿ ಶೆಟ್ಟಿಯ ಭರತನಾಟ್ಯ ಅಭ್ಯಾಸ
ಹಳೇ ಕಥೆ ಹಿಡಿದು ಕುಳಿತ ಕರಾವಳಿ ಬೆಡಗಿ
Team Udayavani, Apr 17, 2020, 12:21 PM IST
ಕೋವಿಡ್ 19 ಹಿನ್ನೆಲೆಯಲ್ಲಿ ಪ್ರತಿಯೊಬ್ಬ ನಟ, ನಟಿಯರೂ ಒಂದಲ್ಲೊಂದು ಚಟುವಟಿಕೆಯಲ್ಲಿ ತೊಡಗಿದ್ದಾರೆ. ಆ ನಿಟ್ಟಿನಲ್ಲೀಗ ನಟಿ ಐಶಾನಿ ಶೆಟ್ಟಿ ಕೂಡ ಹೊರತಲ್ಲ. ಅವರು ಕೂಡ ಮನೆಯಲ್ಲೇ ಇದ್ದು, ಒಂದಷ್ಟು ಕೆಲಸಗಳಲ್ಲಿ ತೊಡಗಿದ್ದಾರೆ. ಅವರು ಸದ್ಯಕ್ಕೆ ಮನೆಗೆಲಸದ ನಡುವೆ ಭರತನಾಟ್ಯಂ ಅಭ್ಯಾಸ ಮಾಡುತ್ತಿದ್ದಾರೆ. ಈಕುರಿತು ಹೇಳುವ ಅವರು, “ನಾನು ಒಂದುವರೆ ವರ್ಷದಿಂದಲೂ ಭರತನಾಟ್ಯಂ ಕ್ಲಾಸ್‌ಗೆ ಹೋಗುತ್ತಿದ್ದೇನೆ.ಆದರೆ,ಈಗ ಕೋವಿಡ್ 19 ಎಫೆಕ್ಟ್ ನಿಂದಾಗಿ ಮನೆಯಲ್ಲಿರುವಂತಾಗಿದೆ.
ಹೀಗಾಗಿ ನಾನು ಈಸಮಯದಲ್ಲಿ ಭರತನಾಟ್ಯಂ ಅಭ್ಯಾಸ ಮಾಡುತ್ತಿದ್ದೇನೆ. ಇದಷ್ಟೇ ಅಲ್ಲ, ಅಮ್ಮನ ಜೊತೆ ಮನೆಕೆಲಸ ನೋಡಿಕೊಂಡು ಅಡುಗೆ ಮಾಡ್ತಾ ಇದ್ದೇನೆ. ಉಳಿದಂತೆ ಅಮೆಜಾನ್, ನೆಟ್‌ಫ್ಲೆಕ್ಸ್‌ನಲ್ಲಿ ಸಿನಿಮಾಗಳು, ಕಾಮಿಡಿ ಶೋಗಳು ನೋಡಿಕೊಂಡು ಸಮಯ ಕಳೆಯುತ್ತಿದ್ದೇನೆ ‘ ಎಂದು ವಿವರಿಸುತ್ತಾರೆ ಐಶಾನಿ ಶೆಟ್ಟಿ. ಐಶಾನಿ ಶೆಟ್ಟಿ, ನಟನೆ ಜೊತೆ ನಿರ್ದೇಶನದ ಮೇಲೂ ಆಸಕ್ತಿ ಇಟ್ಟುಕೊಂಡವರು. ಈಗಾಗಲೇ ಅವರು ಕಿರುಚಿತ್ರ ನಿರ್ದೇಶಿ ಸುವ ಮೂಲಕ ನಿರ್ದೇಶಕಿ ಯಾಗಿಯೂ ಗುರುತಿಸಿಕೊಂಡಿದ್ದಾರೆ. ಸಿನಿಮಾ ನಿರ್ದೇಶನದ ಮೇಲೂ ಆಸಕ್ತಿ ಇಟ್ಟುಕೊಂಡಿರುವ ಐಶಾನಿ, ಮುಂದಿನ ದಿನಗಳಲ್ಲಿ ಸಿನಿಮಾ ನಿರ್ದೇಶಿಸುವ ಆಶಯ ವ್ಯಕ್ತಪಡಿಸುತ್ತಾರೆ.
ಆ ಬಗ್ಗೆ ಹೇಳುವ ಅವರು, “ಹೊಸದಾಗಿ ನಾನು ಕಥೆ ಬರೆದಿಲ್ಲ. ಆದರೆ, ಹಿಂದೆ ಬರೆದಿಟ್ಟು ಕೊಂಡ ಕಥೆಗಳನ್ನೇ ಪುನಃ ಓದುತ್ತಿದ್ದೇನೆ. ಮುಂದೆ ಸಿನಿಮಾ ಮಾಡುವ ಆಸೆ ಇದೆ. ಹಾಗಾಗಿ, ಒಂದೆರೆಡು ವಿಷಯಗಳಿವೆ. ಅದನ್ನಿಟ್ಟು ಕೊಂಡು ಸಿನಿಮಾ ಮಾಡಬೇಕು. ಎರಡ್ಮೂರು ವರ್ಷಗಳ ಹಿಂದೆ ನಾನು ಬರೆದ ಕಥೆಗಳು ಈಗಿನ ಟ್ರೆಂಡ್‌ಗೆ ಸರಿಹೊದಲ್ಲ. ಹಾಗಾಗಿ ಹೊಸದಾಗಿ ಏನಾದರೂ ಬರೆದು,ಸಿನಿಮಾ ಮಾಡುವ ಬಯಕೆ ಇದೆ’ ಎನ್ನುತ್ತಾರೆ ಐಶಾನಿ ಶೆಟ್ಟಿ.
ಸದ್ಯಕ್ಕೆ ಐಶಾನಿ ಅಭಿನಯದ “ಧರಣಿ ಮಂಡಲ ‘ ಹಾಗು “ಹೊಂದಿಸಿ ಬರೆಯಿರಿ’ ಸಿನಿಮಾಗಳಿವೆ. ಚಿತ್ರೀಕರಣ ನಡೆಯುವ ಸಂದರ್ಭದಲ್ಲೇ ಕೋವಿಡ್ 19 ಬಂದಿದ್ದರಿಂದಶೂಟಿಂಗ್ ಸ್ಥಗಿತಗೊಳಿಸಲಾಗಿದೆ. ಕೋವಿಡ್ 19 ಸಮಸ್ಯೆ ಮುಗಿದ ಬಳಿಕ ಚಿತ್ರೀಕರಣಶುರುವಾಗಲಿದೆ ಎಂಬುದು ಅವರ ಮಾತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Sandalwood Rewind 2024; ಹಳಬರಿಗೆ ಜೈಕಾರ ಹೊಸಬರಿಗೆ ಉರಿ ಖಾರ; ಚಂದನವನದ ಚೆಂದದ ಲೆಕ್ಕ
Sandalwood: ಸ್ಟಾರ್ ಸಿನಿಮಾ ಹೆಚ್ಚು ಬಂದರೆ ಚಿತ್ರರಂಗಕ್ಕೆ ಪೂರಕ: ಎನ್. ನರಸಿಂಹಲು
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Stampede case:ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾದ ಅಲ್ಲು ಅರ್ಜುನ್
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.