ಆಂಧ್ರ ಕಾರ್ಮಿಕರಿಗೆ ಆಹಾರ ಧಾನ್ಯ ವಿತರಣೆ
Team Udayavani, Apr 17, 2020, 3:41 PM IST
ಶಹಾಪುರ: ಮುಡಬೂಳ ಗ್ರಾಮದಲ್ಲಿ ಆಂಧ್ರದ ಕೂಲಿ ಕಾರ್ಮಿಕರಿಗೆ ಗುರುವಾರ ಆಹಾರ ಧಾನ್ಯ ವಿತರಿಸಲಾಯಿತು
ಶಹಾಪುರ: ತಾಲೂಕಿನ ಮೂಡಬೂಳ ಗ್ರಾಮದಲ್ಲಿ ಆಂಧ್ರದಿಂದ ಕೂಲಿ ಕೆಲಸಕ್ಕೆಂದು ಬಂದ ಸುಮಾರು 50 ಜನ ಕಾರ್ಮಿಕರು ಲಾಕ್ ಡೌನ್‌ನಿಂದ ಗ್ರಾಮದಲ್ಲಿಯೇ ಉಳಿಯುವಂತಾಗಿದ್ದು, ಊಟಕ್ಕಾಗಿ ಪರಿತಪಿಸುವಂತಾದ ಸುದ್ದಿ ತಿಳಿದ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಕಾರ್ಮಿಕರಿಗೆ ಅಗತ್ಯ ಆಹಾರ ಧಾನ್ಯ, ಸಾಮಗ್ರಿ ವಿತರಿಸಿದರು.
ನಂತರ ಮಾತನಾಡಿದ ಅವರು, ಲಾಕ್ ಡೌನ್ ಮುಕ್ತಾಯವಾಗುವವರೆಗೂ ಊಟದ ಸಮಸ್ಯೆಯಾಗದಂತೆ ಎಲ್ಲ ಅಗತ್ಯ ಆಹಾರ ಸಾಮಗ್ರಿ ವಿತರಿಸಲಾಗಿದ್ದು, ಯಾರೊಬ್ಬರೂ ಹಸಿವಿನಿಂದ ಬಳಲಬಾರದೆಂಬ ಉದ್ದೇಶದಿಂದ ಸ್ವಂತ ಖರ್ಚಿನಿಂದ ಸಾಮಗ್ರಿ ನೀಡಿದ್ದೇನೆ ಎಂದರು.
ಕಾರ್ಮಿಕರಿಗೆ 15 ದಿನಗಳವರೆಗೆ ಬೇಕಾಗುವ ಅಕ್ಕಿ, ಬೇಳೆ, ಒಳ್ಳೆಣ್ಣೆ ಮತ್ತು ಸಕ್ಕರೆ ಸೇರಿದಂತೆ ತರಕಾರಿ ಮುಂತಾದ ಆಹಾರ ಸಾಮಗ್ರಿಗಳನ್ನು ಟಂಟಂ ಮೂಲಕ ಕಳುಹಿಸಿ ಕೊಟ್ಟಿರುವುದಾಗಿ ತಿಳಿಸಿದ ಅವರು, ಲಾಕ್‌ಡೌನ್ ಮುಗಿದ ನಂತರ ತಮ್ಮ ಸ್ವಗ್ರಾಮ ತೆರಳುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.
ಶಾಸಕರ ಆಪ್ತ ಸಹಾಯಕ ಶಿವಶರಣಪ್ಪ ಇಟಗಿ, ನಗರಸಭೆ ಮಾಜಿ ಸದಸ್ಯ ವಸಂತ ಸುರಪುರಕರ್, ಶಂಕರಗೌಡ ಪಾಟೀಲ್, ಅಶೋಕರಾವ್ ಮಲ್ಲಾಬಾದಿ, ಬಸಲಿಂಗಪ್ಪ ಹವಾಲ್ದಾರ, ಗೋಪಣ್ಣ ಹವಾಲ್ದಾರ, ಮಲ್ಲಣ್ಣ ದ್ಯಾವಗೊಂಡ, ಹಣಮಂತ ಗಡಗ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Indian Navy: ಭಾರತೀಯ ನೌಕಾಪಡೆಗೆ ದೇಶಿ ನಿರ್ಮಿತ ತ್ರಿವಳಿ ಬಲ
Saif Ali Khan: ಬಾಲಿವುಡ್ ನಟ ಸೈಫ್ ಅಲಿಖಾನ್ ಗೆ ಚಾಕು ಇರಿತ; ಆಸ್ಪತ್ರೆಗೆ ದಾಖಲು
Congress: ಪಕ್ಷಕ್ಕೆ ಪೂರ್ಣ ಪ್ರಮಾಣ ಅಧ್ಯಕ್ಷರು ಬೇಕು: ಸಚಿವ ಸತೀಶ್ ಜಾರಕಿಹೊಳಿ
Proposal: ಮಹಾನಗರ ಪಾಲಿಕೆ ಆಗಿ ಉಡುಪಿ ನಗರಸಭೆ: ಪ್ರಸ್ತಾವನೆಗೆ ಸೂಚನೆ
BJP Politics: ಮಗನ ಪರ ನಿಲ್ಲಬೇಡಿ: ಬಿಎಸ್‌ವೈಗೆ ರಮೇಶ್ ಜಾರಕಿಹೊಳಿ; ಬಿವೈವಿ ಆಕ್ರೋಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.