ಮನೆ ಎದುರು ಮೂರ್ಛೆ ಹೋಗಿದ್ದ ವಲಸೆ ಕಾರ್ಮಿಕನಿಗೆ ಶಮಿ ನೆರವು
ಭಾರತ ಕ್ರಿಕೆಟ್ ತಂಡದ ವೇಗದ ಬೌಲರ್ ಬಿಚ್ಚಿಟ್ಟ ದಾರುಣ ಪರಿಸ್ಥಿತಿ
Team Udayavani, Apr 17, 2020, 4:21 PM IST
ಲಕ್ನೋ: ಕೊರೊನಾ ವೈರಸ್ ಹೊಡೆತದಿಂದ ದೇಶಾದ್ಯಂತ ಜನ ತತ್ತರಿಸಿದ್ದಾರೆ. ಅದರಲ್ಲೂ ವಲಸೆ ಕಾರ್ಮಿಕರು ಒಪ್ಪತ್ತಿನ ಊಟಕ್ಕೂ ದಿನನಿತ್ಯ ಹರಸಾಹಸ ಮಾಡಬೇಕಾಗಿ ಬಂದಿದೆ. ಇಂತಹ ವಲಸೆ ಕಾರ್ಮಿಕರಿಗೆ ಕ್ರಿಕೆಟಿಗ ಮೊಹಮ್ಮದ್ ಶಮಿ ನೆರವು ನೀಡಿ ರಕ್ಷಿಸಿದ್ದಾರೆ. ಇನ್ಸಾಗ್ರಾಂ ಚಾಟ್ ನಲ್ಲಿ ಸ್ವತಃ ಮೊಹಮ್ಮದ್ ಶಮಿ ಸ್ಪಿನ್ನರ್ ಯಜುವೇಂದ್ರ ಚಹಲ್ ಜತೆಗೆ ಈ ಘಟನೆಯನ್ನು ಹೇಳಿಕೊಂಡಿದ್ದಾರೆ.
ಹೇಗಾಯಿತು? “ವಲಸೆ ಕಾರ್ಮಿಕನೊಬ್ಬ ಹಸಿನಿವಿನಿಂದ ಬಳಲಿ ಲಕ್ನೋದ ಹೈವೇ ಬದಿಯಲ್ಲಿರುವ ನನ್ನ ಮನೆ ಸಮೀಪ ಕುಸಿದು ಬಿದ್ದಿದ್ದ. ಆತನಿಗೆ ಊಟ, ನೀರು ನೀಡಿ ಉಪಚರಿಸಿದೆ. ಆತ ಚೇತರಿಸಿಕೊಂಡ ಬಳಿಕ ತನ್ನ ಬಗೆಗಿನ ಮಾಹಿತಿಯನ್ನು ನೀಡಿದ.
ಆತ ಲಾಕ್ ಡೌನ್‌ನಿಂದಾಗಿ ಕೆಲಸವಿಲ್ಲದೆ ಕಷ್ಟಕ್ಕೆ ಸಿಲುಕಿದ್ದ, ರಾಜಸ್ಥಾನದಿಂದ ಕಾಲ್ನಡಿಗೆಯಲ್ಲೇ ತನ್ನೂರು ಬಿಹಾರಕ್ಕೆ ಹೊರಟಿದ್ದ, ಲಕ್ನೋದಿಂದ ಬಿಹಾರಕ್ಕೆ ಭಾರೀ ಅಂತರದ ದೂರವಿದೆ. ನಡೆದು ಸುಸ್ತಾಗಿ ನನ್ನ ಮನೆಯ ಹತ್ತಿರ ಬಿದ್ದದ್ದನ್ನು ನಾನು ಸಿಸಿಟಿವಿಯಲ್ಲಿ ನೋಡಿದ್ದೆ, ಇಂತಹ ನೂರಾರು ಕಾರ್ಮಿಕರು ದಿನನಿತ್ಯ ನಡೆದುಕೊಂಡೇ ಹೋಗುವುದನ್ನು ನಾನು ನೋಡಿದ್ದೇನೆ. ಇಂತಹ ಸಂಕಷ್ಟದಲ್ಲಿರುವವರಿಗೆ ಸಹಾಯ ಮಾಡಲು ನನ್ನಿಂದಾದ ಪ್ರಯತ್ನ ಮಾಡುತ್ತಿದ್ದೇನೆ. ಅವರ ಪರಿಸ್ಥಿತಿ ಕಂಡು ಮನಸ್ಸು ಕರಗಿದೆ’ ಎಂದು ಶಮಿ ಹೇಳಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಎಲ್ಲಾ 10 ತಂಡಗಳು ಹೀಗಿವೆ ನೋಡಿ
IPL Mega Auction: ಮೊದಲ ದಿನದ ಹರಾಜಿನ ಬಳಿಕ ಆರ್ ಸಿಬಿ ತಂಡ ಹೀಗಿದೆ ನೋಡಿ
Singapore: ಇಂದಿನಿಂದ ವಿಶ್ವ ಚೆಸ್: ಗುಕೇಶ್-ಲಿರೆನ್ ಮುಖಾಮುಖಿ
Australia: ಪರ್ತ್‌ಗೆ ಆಗಮಿಸಿದ ರೋಹಿತ್ ಶರ್ಮ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Dr.Veerendra Heggade: ಡಾ.ಡಿ.ವೀರೇಂದ್ರ ಹಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
BGT 2024: ಪರ್ತ್ ನಲ್ಲಿ ಪಲ್ಟಿ ಹೊಡೆದ ಆಸೀಸ್: ಬುಮ್ರಾ ಪಡೆಗೆ ಮೊದಲ ಪಂದ್ಯದಲ್ಲಿ ಜಯ
IFFI 2024: ಅಜ್ಜನ ಸಿನಿಮಾಗಳು ಡಿಸೆಂಬರ್ ನಲ್ಲಿ ಚಿತ್ರಮಂದಿರದಲ್ಲಿ ಬಿಡುಗಡೆ: ರಣಬೀರ್ ಕಪೂರ್
ಕಡಬ, ಬೆಳ್ತಂಗಡಿ ಸೇರಿದಂತೆ ಹಲವೆಡೆ ಮಾದಕವಸ್ತು, ಅಕ್ರಮ ಮದ್ಯ ಮಾರಾಟ ವಿರುದ್ಧ ಕಾರ್ಯಾಚರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.