ಅಶಕ್ತ ಕುಟುಂಬಕ್ಕೆ ಕುಂದಾಪುರ ಎ.ಎಸ್.ಪಿ. ತುರ್ತು ಸ್ಪಂದನೆ
ಉದಯವಾಣಿಗೆ ಕರೆ ಮಾಡಿ ಅಳಲು ತೋಡಿಕೊಂಡ ವ್ಯಕ್ತಿಗೆ ನೆರವು
Team Udayavani, Apr 18, 2020, 5:45 AM IST
ಬೈಂದೂರು: ಕೋವಿಡ್ 19 ನಿಯಂತ್ರಿಸಲು ಹೇರಿರುವ ಲಾಕ್‌ಡೌನ್‌ನಿಂದಾಗಿ ಕೆಲವರಿಗೆ ಸಮಸ್ಯೆಯೂ ಆಗಿದೆ. ಬೈಂದೂರು ತಾಲೂಕಿನ ಉಳ್ಳೂರು-11ರಲ್ಲಿ ಶೆಡ್‌ನಲ್ಲಿ ವಾಸವಿದ್ದ ಕುಟುಂಬಕ್ಕೆ ದಿಕ್ಕೇ ತೋಚದೆ ಇದ್ದಾಗ ನೆರವಿಗೆ ಬಂದದ್ದು ಉದಯವಾಣಿ ಪತ್ರಿಕೆ. ಪತ್ರಿಕೆಯಲ್ಲಿದ್ದ ದೂರ ವಾಣಿ ಸಂಖ್ಯೆಗೆ ಫೋನ್ ಮಾಡಿ ಬೇರೆ ಪ್ರದೇಶಕ್ಕೆ ಹೋಗಲು ಸಹಾಯ ಮಾಡುವಂತೆ ಕೇಳಿದ್ದು,ಇದನ್ನು ಕುಂದಾಪುರ ಎಎಸ್‌ಪಿ ಅವರ ಗಮನಕ್ಕೆ ತಂದಾಗ ಅವರು ತುರ್ತಾಗಿ ಸ್ಪಂದಿಸಿದ್ದಾರೆ.
ಉಳ್ಳೂರಿನಲ್ಲಿ ಪ್ಲಾಸ್ಟಿಕ್ ಶೆಡ್‌ನಲ್ಲಿ 67ರ ಹರೆ ಯದ ವೃದ್ಧೆ ಮೂಕಾಂಬಿಕೆ ತನ್ನ ಪುತ್ರ ಈಶ್ವರ್ (47) ಜತೆ ವಾಸಿಸುತ್ತಿದ್ದರು. ಇವರು ಮೂಲತಃ ಬೈಂದೂರಿನವರಾಗಿದ್ದರೂ ಹಲವು ವರ್ಷಗಳ ಹಿಂದೆ ಹೊಸನಗರದಲ್ಲಿ ಬಾಡಿಗೆ ಮನೆಯಲ್ಲಿದ್ದರು. ನಾಲ್ಕು ತಿಂಗಳ ಹಿಂದೆ ಮತ್ತೆ ಬೈಂದೂರು ತಾಲೂಕಿಗೆ ಬಂದು ಇಲ್ಲಿ ನೆಲೆಸಿ ದ್ದರು. ಕೆಲವು ದಿನಗಳ ಹಿಂದೆ ಮೂಕಾಂಬಿಕೆ ಅವರು ಬಿದ್ದು ಕಾಲು ಮುರಿದಿತ್ತು.
ಚಿಕಿತ್ಸೆಗೆಂದು ಕುಂದಾಪುರ ಆಸ್ಪತ್ರೆಗೆ ಹೋದಾಗ ಪರೀಕ್ಷಿಸಿದ ವೈದ್ಯರು ಉಡುಪಿಗೆ ಹೋಗಬೇಕು ಎಂದಿದ್ದರು. ಆದರೆ ಈಗ ಕೋವಿಡ್ 19 ಇರುವುದರಿಂದ ಸ್ವಲ್ಪ ಸಮಯ ಬಿಟ್ಟು ಹೋಗುವಂತೆ ತಿಳಿಸಿದ್ದರು. ಹೀಗಾಗಿ ಮನೆಯಲ್ಲೆ ತಾತ್ಕಾಲಿಕ ವ್ಯವಸ್ಥೆ ಮಾಡಲು ತಿಳಿಸಿ ದರು.ಈ ನಡುವೆ ಕಾಲುನೋವು ಉಲ್ಬಣಗೊಂಡು ಮೇಲೆಳಲಾಗದ ಪರಿಸ್ಥಿತಿ ಉಂಟಾಯಿತು. ಹೀಗಾಗಿ ಮಗ ಮನೆಬಿಟ್ಟು ಹೊರ ಹೋಗಲಾಗದ ಸ್ಥಿತಿ ನಿರ್ಮಾಣವಾಯಿತು.ಲಾಕ್‌ಡೌನ್ ಹಿನ್ನೆಲೆಯಲ್ಲಿ ಊಟಕ್ಕೂ ಪರದಾಡಬೇಕಾದ ಪರಿಸ್ಥಿತಿಯಲ್ಲಿ ಇತ್ತು.
ಪತ್ರಿಕೆಗೆ ಕರೆ
ಹೀಗಿರುವಾಗ ಉದಯವಾಣಿ ಪತ್ರಿಕೆ ಇವರಿಗೆ ಸಿಕ್ಕಿದ್ದು ಅದರಲ್ಲಿರುವ ನಂಬರ್‌ಗೆ ಕರೆ ಮಾಡಿ ತಾವು ಮೊದಲು ಇದ್ದ ಹೊಸನಗರಕ್ಕೆ ತೆರಳಲು ಪೊಲೀಸರಿಂದ ಅನುಮತಿ ದೊರಕಿಸಿಕೊಡುವಂತೆ ಮನವಿ ಮಾಡಿದ್ದರು. ಅಲ್ಲಿ ತಾಯಿಗೆ ಚಿಕಿತ್ಸೆ ಕೊಡಿಸುವ ಬಯಕೆಯನ್ನು ಈಶ್ವರ್ ವ್ಯಕ್ತಪಡಿಸಿದ್ದರು. ಕೂಡಲೇ ಕುಂದಾಪುರ ಎ.ಎಸ್.ಪಿ. ಹರಿರಾಮ್ ಶಂಕರ್‌ಗೆ ವಾಸ್ತವತೆ ತಿಳಿಸಲಾಯಿತು. ತತ್‌ಕ್ಷಣ ಸ್ಪಂದಿಸಿದ ಅವರು ಬೈಂದೂರು ಠಾಣಾಧಿಕಾರಿ ಸಂಗೀತಾ ಮತ್ತು ಸಿಬಂದಿ ಯನ್ನು ಅವರ ಮನೆಗೆ ಪರಿಶೀಲನೆಗಾಗಿ ಕಳುಹಿಸಿದರು. ಇವರ ಶೋಚ ನೀಯ ಪರಿಸ್ಥಿತಿ ಕಂಡ ಠಾಣಾಧಿಕಾರಿಗಳು ಸ್ವಲ್ಪ ಆರ್ಥಿಕ ನೆರವು ಹಾಗೂ ಒಂದು ತಿಂಗಳಿಗಾಗುವಷ್ಟು ಆಹಾರ ಸಾಮಗ್ರಿ ಕೂಡ ನೀಡಿದರು. ಮಾತ್ರವಲ್ಲದೆ ಮೂಕಾಂಬಿಕೆ ಅವರ ಚಿಕಿತ್ಸೆಗೆ ವೈದ್ಯಕೀಯ ನೆರವು ಒದಗಿ ಸುವ ವ್ಯವಸ್ಥೆ ಮಾಡಿ ಉಡುಪಿಯ ಆಸ್ಪತ್ರೆಗೆ ದಾಖಲಿಸಲು ವ್ಯವಸ್ಥೆ ಮಾಡಿದ್ದಾರೆ. ಉಡುಪಿಯ ಕೆಲವು ದಾನಿಗಳು ಕೂಡ ಇವರ ನೆರವಿಗೆ ಧಾವಿಸಿದ್ದಾರೆ.
ತುರ್ತು ನೆರವು
ಲಾಕ್‌ಡೌನ್‌ನಿಂದ ಪರಿಸ್ಥಿತಿ ತುಂಬಾ ಕಷ್ಟದಲ್ಲಿತ್ತು. ತಾಯಿಗೆ ಸೂಕ್ತ ಚಿಕಿತ್ಸೆ ಕೊಡಲು ಹೊಸನಗರಕ್ಕೆ ತೆರಳಬೇಕಿತ್ತು. ನಿತ್ಯ ಊಟಕ್ಕೂ ಕಷ್ಟ ಪಡಬೇಕಾದ ಸಂದರ್ಭದಲ್ಲಿ ಪತ್ರಿಕೆ ಹಾಗೂ ಆರಕ್ಷಕ ಇಲಾಖೆ ನನಗೆ ನೆರವು ನೀಡಿದೆ. ಇದರಿಂದ ನನಗೆ ಬಹಳ ಉಪಕಾರವಾಗಿದೆ.
-ಈಶ್ವರ ಉಳ್ಳೂರು.
ತುರ್ತು ನೆರವು
ಮಾಹಿತಿ ಪಡೆದ ತತ್‌ಕ್ಷಣ ಬೈಂದೂರು ಠಾಣಾಧಿಕಾರಿಯವರನ್ನು ಸ್ಥಳಕ್ಕೆ ಕಳುಹಿಸಿ ವಿವರ ಪಡೆದಿದ್ದೇನೆ. ಮಾತ್ರವಲ್ಲದೆ ತುರ್ತು ನೆರವು ನೀಡಲಾಗಿದ್ದು ಅವರಿಗೆ ಅವಶ್ಯವಿರುವ ಎಲ್ಲ ನೆರವನ್ನು ನೀಡುವ ವ್ಯವಸ್ಥೆ ಮಾಡಲಾಗಿದೆ. ತಾಯಿಯ ಚಿಕಿತ್ಸೆಗೆ ಯಾವುದೇ ರೀತಿ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗುವುದು ಮತ್ತು ಲಾಕ್‌ಡೌನ್‌ನಿಂದ ಅವರ ಕುಟುಂಬಕ್ಕೆ ಆಹಾರ ತೊಂದರೆಯಾಗದಂತೆ ಇಲಾಖೆ ನೋಡಿಕೊಳ್ಳುತ್ತದೆ. ದಾನಿಗಳ ಮಾನವೀಯ ಸ್ಪಂದನೆಯ ನಿರೀಕ್ಷೆ ಕೂಡ ಇದೆ.
-ಹರಿರಾಮ್ ಶಂಕರ್, ಎ.ಎಸ್.ಪಿ. ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Gangolli: ಬೈಕ್‌ಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ
Udupi: ಪಿಕಪ್ ವಾಹನ ಢಿಕ್ಕಿ ಹೊಡೆದು ವ್ಯಕ್ತಿ ಗಾಯ
Gift: ಶಿಗ್ಗಾವಿಯಲ್ಲಿ ನಾಮಪತ್ರ ವಾಪಸ್ ಪಡೆದ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷಗಿರಿ ಹುದ್ದೆ!
Davanagere: ʼಸೋಲಿಲ್ಲದ ಸರದಾರʼ ಎನಿಸಿದ್ದ ʼಬೆಳ್ಳೂಡಿ ಕಾಳಿʼ ಟಗರು ಅನಾರೋಗ್ಯದಿಂದ ನಿಧನ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.