ಸೀಮೆಯ ಒಡೆಯನ ಬ್ರಹ್ಮರಥೋತ್ಸವ ಸಮಯದಲ್ಲಿ ಮನೆಯಿಂದ ಪ್ರಾರ್ಥನೆ


Team Udayavani, Apr 18, 2020, 5:21 AM IST

ಸೀಮೆಯ ಒಡೆಯನ ಬ್ರಹ್ಮರಥೋತ್ಸವ ಸಮಯದಲ್ಲಿ ಮನೆಯಿಂದ ಪ್ರಾರ್ಥನೆ

ಪುತ್ತೂರು: ಸೀಮೆಯ ಒಡೆಯ ಮಹತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮರಥೋ ತ್ಸವವು ಈ ಬಾರಿ ಶುಕ್ರವಾರ ಸರಳ ಪೂರ್ವಶಿಷ್ಟ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ದೇಗುಲದ ಒಳಾಂಗಣದಲ್ಲಿ ನಡೆಯಿತು.

ಬೆಳಗ್ಗೆ ಹಾಗೂ ಸಂಜೆ ಶ್ರೀ ದೇವರ ಬಲಿ ಉತ್ಸವ, ವಸಂತಕಟ್ಟೆಪೂಜೆ ನಡೆಯಿತು. ದೇವಾಲಯದ ಕಾರ್ಯನಿರ್ವಹ ಣಾಧಿಕಾರಿ, ಆಡಳಿತಾಧಿಕಾರಿ ಹಾಗೂ ನಿತ್ಯ ಕರಸೇವಕರು ಸೇರಿದಂತೆ ಸೀಮಿತ ಮಂದಿ ಪಾಲ್ಗೊಂಡರು. ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ಮಾರ್ಗದರ್ಶನದಲ್ಲಿ ಗುರು ತಂತ್ರಿಯವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ರಥೋತ್ಸವ ಇರಲಿಲ್ಲ.

ಮನೆಗಳಲ್ಲಿ ಪಂಚಾಕ್ಷರಿ ಪಠಣ
ದೇವಾಲಯದ ವತಿಯಿಂದ ಭಕ್ತರಲ್ಲಿ ಮಾಡಿದ ವಿನಂತಿಯಂತೆ ಬ್ರಹ್ಮರಥೋತ್ಸವ ನಡೆಯುವ ರಾತ್ರಿ 7.30ರ ಬಳಿಕ
ಸೀಮೆಯ ಭಕ್ತರು ಮನೆಗಳಲ್ಲಿ ದೀಪ ಬೆಳಗಿಸಿ ಓಂ ನಮಃ ಶಿವಾಯ ಪಂಚಾಕ್ಷರಿ ಪಠಣವನ್ನು ಮಾಡುವ ಮೂಲಕ ಶ್ರೀ ಮಹಾಲಿಂಗೇಶ್ವರನನ್ನು ಭಕ್ತರು ಸ್ಮರಣೆ ಮಾಡಿ ದರು. ಈಗ ಬಂದಿರುವ ಕಷ್ಟ ಕಾರ್ಪ ಣ್ಯಗಳನ್ನು ದೂರೀಕರಿಸುವಂತೆ ಒಡೆಯನಿಗೆ ಪ್ರಾರ್ಥನೆ ಸಲ್ಲಿಸಿದರು.

ಬಲಾ°ಡಿನಲ್ಲಿ ಪ್ರಾರ್ಥನೆ
ಕೆರೆಯ ಆಯನದ ದಿನವಾದ ಎ. 16ರಂದು ದೇವಾಲಯಕ್ಕೆ ನೇರ ಸಂಬಂಧವಿರುವ ಬಲಾ°ಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಸ್ಥಾನದಿಂದ ಕಿರುವಾಳು ಆಗಮನಕ್ಕೆ ಲಾಕ್‌ಡೌನ್‌ ಅಡ್ಡಿಯಾಗಿರುವ ಹಿನ್ನೆಲೆಯಲ್ಲಿ ಕುಂಟಾರು ಗುರುಪ್ರಸಾದ್‌ ತಂತ್ರಿಯವರ ನೇತೃತ್ವದಲ್ಲಿ ಸಂಜೆ ಅಲ್ಲಿಗೆ ಭೇಟಿ ನೀಡ ಲಾಯಿತು.

ಒಡೆಯನ ನಡೆಗೆ ದೈವಗಳ ಕಿರುವಾಳು ಸಕಲ ಬಿರುದಾವಳಿಗಳಿಂದ ಕರೆತರಲು ಸಾಧ್ಯವಾಗುತ್ತಿಲ್ಲ. ಆದರೆ ಕಟ್ಟು ಕಟ್ಟೆಲೆಯಂತೆ ತಂಬಿಲ ಸೇವೆ ನೀಡುವ ಮೂಲಕ ಸಾಂಕೇತಿಕವಾಗಿ ಸಂಪ್ರ ದಾಯವನ್ನು ಪಾಲನೆ ಮಾಡಲಾಗಿದೆ ಎಂದು ದೈವಗಳ ಸನ್ನಿಧಿ ಯಲ್ಲಿ ಪ್ರಾರ್ಥನೆ ಮಾಡಲಾಯಿತು.

ಜಿಲ್ಲಾ ಧಾರ್ಮಿಕ ಪರಿಷತ್‌ ಸದಸ್ಯ ಮುರಳೀಕೃಷ್ಣ ಹಸಂತಡ್ಕ, ದೇಗುಲದ ಆಡಳಿತಾಧಿಕಾರಿ ಲೋಕೇಶ್‌ ಸಿ., ಕಾರ್ಯ ನಿರ್ವಹಣಾಧಿಕಾರಿ ನವೀನ್‌ ಭಂಡಾರಿ, ಕಚೇರಿ ವ್ಯವಸ್ಥಾಪಕ ಹರೀಶ್‌ ಶೆಟ್ಟಿ, ವಾಸ್ತು ಎಂಜಿನಿಯರ್‌ ಪಿ. ಜಿಜಗನ್ನಿವಾಸ್‌ ರಾವ್‌, ಬ್ರಹ್ಮವಾಹಕ ಕೆ. ಪ್ರೀತಂ ಪುತ್ತೂರಾಯ, ಬಲಾ°ಡು ದೈವಸ್ಥಾನಕ್ಕೆ ಸಂಬಂಧಿಸಿ ಕಟ್ಟೆ ಮನೆ ಪ್ರತಿನಿಧಿ ದಂಡನಾಯಕನ ಪಾತ್ರಿ ಪರಮೇಶ್ವರ ಗೌಡ ಮತ್ತು ಅರ್ಚಕ ರವಿ ನೆಲ್ಲಿತ್ತಾಯ ಉಪಸ್ಥಿತರಿದ್ದರು.

ಅವಭೃಥಕ್ಕೆ ತೆರೆದ ಕೆರೆಯಲ್ಲಿ ತುಂಬಿದ ನೀರು!
ಬ್ರಹ್ಮರಥೋತ್ಸವದ ಮರುದಿನ ದೇವರ ಅವಭೃಥ ಸ್ನಾನಕ್ಕೆಂದು ಸುಮಾರು 13 ಕಿ.ಮೀ. ದೂರದ ವೀರಮಂಗಲಕ್ಕೆ ದೇವರು ತೆರಳುವುದು ವಾಡಿಕೆ. ಆದರೆ ಈ ಬಾರಿ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ದೇಗುಲದ ಎದುರು ಗದ್ದೆಯಲ್ಲಿ ತಾತ್ಕಾಲಿಕವಾಗಿ ದೇವರ ಅವಭೃಥ ಸ್ನಾನಕ್ಕೆಂದು ಕೆರೆಯನ್ನು ತೋಡಲಾಗಿದೆ. ಈಗ ನಗರ ವ್ಯಾಪ್ತಿಯಲ್ಲಿ ಕೊಳವೆ ಬಾವಿ ಕೊರೆಸಿದರೂ ನೀರು ಸಿಗದೇ ಇರುವ ಪರಿಸ್ಥಿತಿ ಇದೆ.
ಆದರೆ ಒಡೆಯನ ಅವಭೃಥಕ್ಕೆ ಮೇಲ್ಭಾಗದಲ್ಲೇ ನೀರು ಸಿಕ್ಕಿದೆ. ದೇವಸ್ಥಾನದ ಕೆರೆಯಲ್ಲಿ ವರ್ಷ ಪೂರ್ತಿ ನೀರು ಇರುತ್ತದೆ.
ಈ ಕೆರೆಯಿಂದ 100 ಮೀ. ದೂರದಲ್ಲಿರುವ ದೇಗುಲದ ಮುಂಭಾಗದ ಗದ್ದೆಯಲ್ಲಿ ಶ್ರೀ ಅಯ್ಯಪ್ಪ ಸ್ವಾಮಿ ಗುಡಿ ಬಳಿ ಹಿಟಾಚಿ ಯಂತ್ರದ ಮೂಲಕ ತೆರೆದ ತಾತ್ಕಾಲಿಕ ಕೆರೆಯಲ್ಲಿ ಈ ಬೇಸಗೆಯಲ್ಲೂ ಕೇವಲ 8 ಅಡಿ ಆಳದಲ್ಲಿ ನೀರಿನ ಒರತೆ ಸಿಕ್ಕಿದೆ.

ಇಂದು ಅವಭೃಥ
ಶ್ರೀ ಮಹಾಲಿಂಗೇಶ್ವರ ದೇವರ ಜಳಕದ ಸವಾರಿಯು ಎ. 18ರಂದು ದೇವಾಲಯದ ಎದುರು ತೆಗೆದ ಕೆರೆಯ ಬಳಿಗೆ ಸಾಗಲಿದ್ದು, ದೇವರ ಅವಭೃಥ ಸ್ನಾನದ ಬಳಿಕ ಧ್ವಜಾವರೋಹಣ ನಡೆಯಲಿದೆ. ಈ ಪ್ರಕ್ರಿಯೆಗಳು ಎ. 18ರಂದೇ ಮುಕ್ತಾಯಗೊಳ್ಳಲಿವೆ ಎಂಬ ಮಾಹಿತಿ ಲಭ್ಯವಾಗಿದೆ.

ಟಾಪ್ ನ್ಯೂಸ್

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Patla-yakshadruva

Mangaluru: ಎಲ್ಲ ವರ್ಗದ ಜನರ ಸಹಕಾರದಿಂದ ಸಾಮಾಜಿಕ ಸಾಧನೆ: ಕನ್ಯಾನ ಸದಾಶಿವ ಶೆಟ್ಟಿ

Vijayendra (2)

Congress 40 ಪರ್ಸೆಂಟ್‌ ಕಮಿಷನ್‌ ಆರೋಪ ಸುಳ್ಳೆಂದು ಸಾಬೀತು: ಬಿಜೆಪಿ

police

Belgavi; ವೇಶ್ಯಾವಾಟಿಕೆ ಆರೋಪ: ತಾಯಿ, ಮಗಳನ್ನು ರಸ್ತೆಗೆ ಎಳೆದು ಹಲ್ಲೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

Puttur: ಮೃತದೇಹ ಪಿಕಪ್‌ನಲ್ಲಿ ತಂದು ಮನೆ ಮುಂಭಾಗ ಮಲಗಿಸಿ ಹೋದರು: ಮನೆ ಮಂದಿಯ ಆಕ್ರೋಶ

5

Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ

13-notes-1

Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

Puturu-Crime

Puttur: ‘ಕಾಡಿನೊಳಗಿದ್ದೇನೆ ದಾರಿ ಸಿಗುತ್ತಿಲ್ಲ’ ಎಂದಾತ 7 ತಿಂಗಳ ಬಳಿಕವೂ ಪತ್ತೆಯಾಗಿಲ್ಲ!

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

puttige-4

Udupi; ಗೀತಾರ್ಥ ಚಿಂತನೆ 96 : ವ್ಯಾಮೋಹ ಜಾಲ vs ಜಾಗೃತಾತ್ಮ

uppunda1

Uppunda: ಶ್ರೀದುರ್ಗಾಪರಮೇಶ್ವರಿ ಅಮ್ಮನವರ ಸಂಭ್ರಮದ ಮನ್ಮಹಾರಥೋತ್ಸವ

Govinda-pai-Book

Udupi: ಗೋವಿಂದ ಪೈಗಳ ಸಂಶೋಧನ ಬರಹಗಳು ಸಮಗ್ರತೆಯ ಹೂರಣ: ಡಾ.ವಿವೇಕ್‌ ರೈ

DK SHI NEW

MLAs 50 ಕೋಟಿ ರೂ.; ಸಾಕ್ಷಿ ಕೊಡುವ ಹೊಣೆ ಯತ್ನಾಳ್‌ದು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.