ಕ್ಯಾನ್ಸರ್ ಪೀಡಿತರಿಗೆ ಸ್ವಯಂ ನಿರ್ಬಂಧ ಸೂಕ್ತ
ಬಾಧಿತರಲ್ಲಿ ರೋಗ ನಿರೋಧಕ ಶಕ್ತಿ ಕೊರತೆ; ಸ್ವಯಂ ಕ್ವಾರೆಂಟೈನ್ ಮಾದರಿ ಪಾಲನೆಗೆ ವೈದ್ಯರ ಸಲಹೆ
Team Udayavani, Apr 18, 2020, 1:04 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಕೋವಿಡ್- 19 ವೈರಾಣು ರೋಗ ನಿರೋಧಕ ಶಕ್ತಿ ಕಡಿಮೆಯಿರುವವರಿಗೆ ಬಹಳ ಬೇಗ ಹರಡುವ ಸಾಧ್ಯತೆ ಹೆಚ್ಚಾಗಿರುವುದರಿಂದ ಕ್ಯಾನ್ಸರ್ ರೋಗಿಗಳು ಸ್ವಯಂ ಪ್ರೇರಿತವಾಗಿ ಕ್ವಾರೆಂಟೈನ್ ಮಾದರಿ ಪಾಲನೆ ರೂಢಿಸಿಕೊಳ್ಳುವುದು ಉತ್ತಮ!
ಕ್ಯಾನ್ಸರ್ ರೋಗಿಗಳು, ಕಿಮೋಥೆರಪಿ, ರೇಡಿಯೇಷನ್ ಥೆರಪಿ ಪಡೆಯುತ್ತಿರುವವರಲ್ಲಿ ಸಹಜವಾಗಿ ರೋಗ ನಿರೋಧಕ ಶಕ್ತಿ ಕಡಿಮೆ ಇರುತ್ತದೆ. ಅಂತಹ ಸಂದರ್ಭದಲ್ಲಿ ಕೋವಿಡ್ -19 ಸೋಂಕು ಕಾಣಿಸಿಕೊಂಡರೆ ಅದನ್ನು ಗುಣಪಡಿಸುವ ಜತೆಗೆ ಕ್ಯಾನ್ಸರ್‌ಗೂ ಚಿಕಿತ್ಸೆ ಮುಂದುವರಿಸುವುದು ಬಹಳ ಸವಾಲಾಗುತ್ತದೆ. ಹಾಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಸ್ವಯಂಪ್ರೇರಿತ ಕ್ವಾರೆಂಟೈನ್, ರೋಗ ನಿರೋಧ ಶಕ್ತಿ ವೃದ್ಧಿಸಿಕೊಳ್ಳುವ ಮೂಲಕ ಸೋಂಕು ಕಾಡದಂತೆ ತಡೆಯಲು ಮುಂದಾಗಬೇಕು ಎಂದು ಕ್ಯಾನ್ಸರ್ ತಜ್ಞರು ಹೇಳುತ್ತಾರೆ.
ಕ್ಯಾನ್ಸರ್ ಕಾಣಿಸಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯಲ್ಲೇ ಸಾಮಾನ್ಯ ಸಂದರ್ಭದಲ್ಲಿ ನಿತ್ಯ 100ಕ್ಕೂ ಹೆಚ್ಚು ಹೊಸ
ರೋಗಿಗಳು ನೋಂದಣಿಯಾಗುತ್ತಿದ್ದರು. ಜತೆಗೆ ಕಿಮೋ/ರೇಡಿಯೇಷನ್ ಥೆರಪಿ ಚಿಕಿತ್ಸೆಯನ್ನೂ ಸಾಕಷ್ಟು ಮಂದಿ ಪಡೆಯುತ್ತಿದ್ದರು. ಸದ್ಯ ಸೋಂಕು
ಭೀತಿ ಹಿನ್ನೆಲೆಯುಲ್ಲಿ ಹೊಸ ರೋಗಿಗಳ ನೋಂದಣಿ, ಚಿಕಿತ್ಸೆಗೆ ಬರುವ ಹಳೆ ರೋಗಿಗಳ ಸಂಖ್ಯೆ ಕಡಿಮೆಯಾಗಿದೆ. ಜತೆಗೆ ಖಾಸಗಿ ಆಸ್ಪತ್ರೆಗಳಲೂ ಕ್ಯಾನ್ಸರ್ ಚಿಕಿತ್ಸೆ ಪಡೆಯುವವರ ಸಂಖ್ಯೆ ಹೆಚ್ಚಾಗಿದೆ ಹೀಗಾಗಿ, ಮುನ್ನೆಚ್ಚರಿಕೆ ವಹಿಸುವುದು ಅಗತ್ಯ.
ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬೇಕು:
ಕೋವಿಡ್ -19 ಸೋಂಕು ಹರಡುತ್ತಿರುವ ಈ ಹೊತ್ತಿನಲ್ಲಿ ಕ್ಯಾನ್ಸರ್ ರೋಗಿಗಳು ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ತುರ್ತು ಅಗತ್ಯವಿದ್ದರಷ್ಟೇ ಚಿಕಿತ್ಸೆ
ಪಡೆಯಲು ಸಂಸ್ಥೆಗೆ ಭೇಟಿ ನೀಡಬೇಕು. ಅನಗತ್ಯವಾಗಿ ರೋಗಿಗಳು ಓಡಾಡಿದರೆ ಆಯಾಸವಾಗುವ ಜತೆಗೆ ಇತರೆ ಸೋಂಕುಗಳಿಗೆ ತುತ್ತಾಗುವ ಅಪಾಯವಿರುತ್ತದೆ. ಹಾಗಾಗಿ ಅನಗತ್ಯ ಓಡಾಟ ನಿಲ್ಲಿಸಬೇಕು ಎಂದು ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ನಿರ್ದೇಶಕ ಡಾ.ಸಿ.ರಾಮಚಂದ್ರ ತಿಳಿಸಿದರು.
ಕಿಮೋ/ ರೇಡಿಯೇಷನ್ ಥೆರಪಿ ಚಿಕಿತ್ಸೆ ಬಳಿಕ ರೋಗ ನಿರೋಧಕ ಶಕ್ತಿ ಕುಗ್ಗಿರುತ್ತದೆ. ಆ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಒತ್ತು ನೀಡಬೇಕು.
ಹೆಚ್ಚಾಗಿ ನೀರು ಸೇವಿಸಬೇಕು. ಬೇಯಿಸಿದ ತರಕಾರಿಯನ್ನು ಹೆಚ್ಚಾಗಿ ಸೇವಿಸಬೇಕು. ಪ್ರತಿ ಹೊತ್ತಿಗೆ ಆಗಷ್ಟೇ ಸಿದ್ಧಪಡಿಸಿದ ಆಹಾರ ಸೇವಿಸಬೇಕೆ ಹೊರತು
ತಂಗಳ ಆಹಾರ ಸೇವಿಸಬಾರದು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಜತೆಗೆ ಸಾಧ್ಯವಾದಷ್ಟು ಪ್ರತ್ಯೇಕವಾಗಿ ಇದ್ದರೆ ಹೆಚ್ಚು ಸುರಕ್ಷಿತ ಎಂದು ಹೇಳಿದರು.
ಸ್ವಯಂ ಕ್ವಾರೆಂಟೈನ್ ಉಪಯುಕ
ಕ್ಯಾನ್ಸರ್‌ಪೀಡಿತರು ಮನೆಯಲ್ಲೇ ಪ್ರತ್ಯೇಕ ಕೋಣೆಯಲ್ಲಿರುವುದು. ಹೊರಗಿನಿಂದ ಬಂದವರನ್ನು ನೇರವಾಗಿ ಭೇಟಿಯಾಗದಿರುವುದು. ಸಾಧ್ಯವಾದಷ್ಟು
ಸಾಮಾಜಿಕ ಅಂತರ ಪಾಲಿಸುವುದರಿಂದ ಕೋವಿಡ್ -19 ಸೇರಿದಂತೆ ಇತರೆ ಸೋಂಕು ಕಾಣಿಸಿಕೊಳ್ಳದಂತೆ ತಡೆಯಲು ಅವಕಾಶವಿದೆ ಎಂದು ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯ ಕ್ಯಾನ್ಸರ್‌ತಜ್ಞ ಶೇಖರ್ ಪಾಟೀಲ್ ತಿಳಿಸಿದರು.
ಕ್ಯಾನ್ಸರ್‌ಪೀಡಿತರು ಸಾಧ್ಯವಾದಷ್ಟು ಹೊರಗೆ ಓಡಾಡುವುದು ನಿಲ್ಲಿಸಬೇಕು. ಪದೇ ಪದೆ ಆಸ್ಪತ್ರೆಗೆ ಭೇಟಿ ಅಗತ್ಯವಿದ್ದರಷ್ಟೇ ವೈದ್ಯರನ್ನು ಭೇಟಿಯಾಗಬೇಕು. ಆಸ್ಪತ್ರೆ ಭೇಟಿ ಅನಿವಾರ್ಯವಾದರೆ ಅವರು ಎಲ್ಲಿಯೂ ಕಾಯುವಂತಾಗಬಾರದು. ಆಸ್ಪತ್ರೆಗೆ ಬಂದವರೇ ವೈದ್ಯರನ್ನು ಭೇಟಿಯಾಗಿ ತ್ವರಿತವಾಗಿ ಚಿಕಿತ್ಸೆ ಪಡೆದು ಮನೆಗೆ ಹಿಂದಿರುಗಬೇಕು ಎಂದು ಹೇಳಿದರು. ವಿಡಿಯೋ- ಆಡಿಯೋ ಸಂವಾದ, ಟೆಲಿ ಮೆಡಿಸಿನ್ ಬಳಕೆ ಅವಕಾಶವಿದ್ದರೆ ಅದನ್ನು ಪರಿಣಾ ಮ ಕಾರಿಯಾಗಿ ಬಳಸಬೇಕು. ಕ್ಯಾನ್ಸರ್‌ಪೀಡಿತ ರೊಂದಿಗಿರುವ ಸಹಾಯಕರೂ ಸೋಂಕಿಗೆ ತುತ್ತಾಗ ದಂತೆ ಎಚ್ಚರ ವಹಿಸುವುದು ಬಹಳ ಮುಖ್ಯ. ಕ್ಯಾನ್ಸ ರ್‌ಗೆ ಶಸ್ತ್ರಚಿಕಿತ್ಸೆ ಅನಿವಾರ್ಯವಾದರೆ ಮೊದ ಲಿಗೆ ಕೋವಿಡ್ -19 ಸೋಂಕು ಪತ್ತೆ ತಪಾಸಣೆ ಬಳಿಕ ವಷ್ಟೇ ಮುಂದುವರಿ ಯ ಬೇಕಾಗುತ್ತದೆ. ಹಾಗಾಗಿ ಕ್ಯಾನ್ಸರ್‌ಪೀಡಿತರ ಸಾಮಾಜಿಕ ಅಂತರವನ್ನು ಕಟ್ಟುನಿಟ್ಟಾಗಿ ಪಾಲಿಸುವುದು ಉತ್ತಮ ಎಂದು ಸಲಹೆ ನೀಡಿದರು.
ಕ್ಯಾನ್ಸರ್ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದರಿಂದ ಸಾಕಷ್ಟು ಮುನ್ನೆಚ್ಚರಿಕೆ ವಹಿಸಬೇಕು. ತುರ್ತು ಚಿಕಿತ್ಸೆ ಅಗತ್ಯವಿಲ್ಲದಿದ್ದರೆ ಒಂದೆರಡು ವಾರಗಳ ಕಾಲ ಆಸ್ಪತ್ರೆ ಭೇಟಿಯನ್ನು ಮುಂದೂಡುವುದು ಒಳಿತು. ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಪದಾರ್ಥ ಹೆಚ್ಚಾಗಿ ಬಳಸಬೇಕು.
● ಡಾ.ಸಿ. ರಾಮಚಂದ್ರ, ಕಿದ್ವಾಯಿ ಸ್ಮಾರಕ, ಗ್ರಂಥಿ ಸಂಸ್ಥೆಯ ನಿರ್ದೇಶಕ
ಕೋವಿಡ್ -19 ಸೇರಿದಂತೆ ಇತರೆ ಸೋಂಕಿಗೆ ಒಳಗಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಕ್ಯಾನ್ಸರ್‌ಪೀಡಿತರು ಸ್ವಯಂಪ್ರೇರಿತವಾಗಿ ಕ್ವಾರೆಂಟೈನ್ ಮಾದರಿ ಅನುಸರಿಸುವುದು ಉತ್ತಮ. ಸಾಮಾಜಿಕ ಅಂತರ, ಪ್ರತ್ಯೇಕವಾಗಿರುವುದನ್ನು ರೂಢಿಸಿಕೊಂಡರೆ ಸೋಂಕು ಕಾಣಿಸಿಕೊಳ್ಳದಂತೆ ತಡೆಯುವ ಜತೆಗೆ ಶೀಘ್ರ
ಗುಣಮುಖರಾಗಲು ಅನುಕೂಲವಾಗಲಿದೆ.
● ಡಾ. ಶೇಖರ್ ಪಾಟೀಲ್, ಎಚ್‌ಸಿಜಿ ಕ್ಯಾನ್ಸರ್ ಆಸ್ಪತ್ರೆಯ ಕ್ಯಾನ್ಸರ್‌ತಜ್ಞ
● ಎಂ. ಕೀರ್ತಿಪ್ರಸಾದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
IFFI 2024; ಫಿಲ್ಮ್ ಬಜಾರ್: ಮತ್ತೊಂದು ಯಶಸ್ವಿ ಮುನ್ನುಡಿಯೊಂದಿಗೆ ಉತ್ಸವ ಸಮಾಪನ
IPL Mega Auction:1.1 ಕೋಟಿ ರೂ.ಗೆ ಹರಾಜಾದ 13ರ ಬಾಲಕ !!
Udupi: ಶ್ರೀ ಕೃಷ್ಣಮಠ; 18 ದಿನಗಳ ಭಗವದ್ಗೀತಾ ಹರಿಕಥಾ ಸರಣಿ ಕಾರ್ಯಕ್ರಮಕ್ಕೆ ಚಾಲನೆ
Israel; ಹೆಜ್ಬುಲ್ಲಾ ಜತೆ ‘ತಾತ್ವಿಕವಾಗಿ’ ಕದನ ವಿರಾಮ ಒಪ್ಪಂದ :ವರದಿ
Mangaluru: ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ ವ್ಯಕ್ತಿ ನಾಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.