ರೈತರು ಆನ್ ಲೈನ್ ಟ್ರೇಡಿಂಗ್ ಮಾಡಿದರೆ ನಷ್ಟವಾಗಲ್ಲ : ಬಿ ಸಿ ಪಾಟೀಲ್
Team Udayavani, Apr 18, 2020, 2:55 PM IST
ಕೊಪ್ಪಳ: ಕೋವಿಡ್-19 ಹಿನ್ನೆಲೆಯಲ್ಲಿ ರೈತರಿಗೆ ಸಮಸ್ಯೆಯಾಗಿದೆ. ರಾಜ್ಯಾದ್ಯಂತ ನಾನು ಪ್ರವಾಸ ಮಾಡಿ ಅವರ ಸಮಸ್ಯೆ ಆಲಿಸುತ್ತಿದ್ದೇನೆ. ಈ ವೇಳೆ ಆನ್ ಲೈನ್ ಟ್ರೇಡಿಂಗ್ ಮಾಡಿದರೆ ರೈತರು ನಷ್ಟವಾಗಲ್ಲ ಎಂದು ಕೃಷಿ ಸಚಿವ ಬಿ ಸಿ ಪಾಟೀಲ್ ಅವರು ಹೇಳಿದರು.
ಕೊಪ್ಪಳದಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ರೈತರು ಮಧ್ಯವರ್ತಿಗಳನ್ನು ನಂಬಿ ವ್ಯಾಪಾರ ಮಾಡಬಾರದು. ಇದರಿಂದ ಅವರಿಗೆ ನಷ್ಟವಾಗಲಿದೆ. ಆನ್ ಲೈನ್ ಟ್ರೇಡಿಂಗ್ ಮಾಡಿದರೆ ಅವರಿಗೆ ಅನುಕೂಲವಾಗಲಿದೆ. ಈಗಾಗಲೆ ಕೆಲವು ಕಡೆ ಟ್ರೇಡಿಂಗ್ ನಡೆದಿದೆ ಎಂದರು.
ರೈತರ ಉತ್ಪನ್ನ ಮಾರಾಟಕ್ಕೆ ಗ್ರೀನ್ ಪಾಸ್ ನೀಡಲಾಗುತ್ತಿದೆ. ಅವರಿಗೆ ಯಾವುದೇ ನಿರ್ಬಂಧ ಇಲ್ಲ. ಅಂತರಾಜ್ಯ ಮಾರಾಟಕ್ಕೂ ನಿರ್ಬಂಧ ಇಲ್ಲ ಎಂದರು.
ಇದುವರೆಗೂ ಕೊಪ್ಪಳ ಜಿಲ್ಲೆಯಲ್ಲಿ ಯಾವುದೇ ಕೋವಿಡ್-19 ಪಾಸಿಟಿವ್ ಕೇಸ್ ಪತ್ತೆಯಾಗದಿರುವುದು ಸಂತೋಷದ ಸಂಗತಿ. ಅಲ್ಲದೆ ಎಪ್ರಿಲ್ ತಿಂಗಳಾಂತ್ಯಕ್ಕೆ ಕೊಪ್ಪಳದಲ್ಲೂ ಕೋವಿಡ್-19 ಪರೀಕ್ಷಾ ಪ್ರಯೋಗಾಲಯ ತೆರೆಯಲಾಗುವುದು ಎಂದರು.
ನಮ್ಮದು ಡೋಂಗಿ ರಾಜಕಾರಣ ಅಲ್ಲ, ನಮ್ಮದೇನಿದ್ರೂ ನೇರಾ ನೇರ ರಾಜಕಾರಣ. ಬೆಳೆ ಹಾನಿ ಪರಿಹಾರಕ್ಕೆ ಸಂಬಂಧಿಸಿದಂತೆ ರಾಜಕಾರಣ ಬೆರೆಸುವುದು ಸರಿಯಲ್ಲ ಎಂದರು.
ತಬ್ಲೀಘಿಗಳು ಸಹಕರಿಸುತ್ತಿಲ್ಲ. ಅದೇ ಇಷ್ಟು ದೊಡ್ಡ ರಾದ್ಧಾಂತಕ್ಕೆ ಕಾರಣ. ಅದೇ ರೀತಿ ಜುಬಿಲಿಯಂಟ್ ಫ್ಯಾಕ್ಟರಿ ಪ್ರಕರಣವೂ ಸಹ ಆಗಿದೆ ಎಂದರು.
ಇನ್ನು ಜಿಲ್ಲಾಧಿಕಾರಿಗೆ ಪ್ರಶ್ನೆ ಮಾಡಿದ್ದನ್ನ ಸಮರ್ಥಿಸಿಕೊಂಡ ಬಿ.ಸಿ.ಪಾಟೀಲ್, ನಾನು ಮಂತ್ರಿಯಾಗಿ ಬೆಳೆ ಹಾನಿ ಪರಿಶೀಲನೆಗೆ ಆಗಮಿಸಿದ್ರೂ ಡಿಸಿ ಸ್ಥಳಕ್ಕೆ ಬಾರದಿರುವದನ್ನ ಕೇಳಿದ್ದರಲ್ಲಿ ತಪ್ಪೇನಿದೆ. ನಾನು ಬೆಳೆ ಪರಿಶೀಲನೆ, ಸೋಂಕು ನಿಯಂತ್ರಣ ಕುರಿತ ಸಭೆ ನಡೆಸಲು ಆಗಮಿಸಿದ್ದೇನೆ ಹೊರತು ಪಿಕ್ ನಿಕ್ ಗೆ ಬಂದಿರಲಿಲ್ಲ. ಜನಾಕ್ರೋಶ ಅದೆಲ್ಲ ಏನಿಲ್ಲ, ನಾನು ಸರಕಾರದ ಸಂಬಳ ಪಡೆದು ಜನರ ಕೆಲಸ ಮಾಡ್ತೇನೆ. ಸರಕಾರದ ಸಂಬಳ ತಗೊಳ್ಳೋರು ಜನರ ಕೆಲಸ ಮಾಡಬೇಕು ಎಂದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Koppala: ಮರಕುಂಬಿ ಅಸ್ಪೃಶ್ಯತೆ ಪ್ರಕರಣ… 99 ಜನರಿಗೆ ಜಾಮೀನು ನೀಡಿದ ಹೈಕೋರ್ಟ್
ಕೊಪ್ಪಳ:ಈ ರಸ್ತೆಗಳಲ್ಲಿ ನಿತ್ಯವೂ ನರಕ ದರ್ಶನ-ಜೀವಭಯದಲ್ಲೇ ಸಂಚಾರ
ಕುಷ್ಟಗಿ: ಬಿಳಿ ಜೋಳಕ್ಕೂ ಲಗ್ಗೆಯಿಟ್ಟ ಲದ್ದಿ ಹುಳು
Gangavathi: ಆನೆಗೊಂದಿ ರಾಜವಂಶಸ್ಥ ಎಸ್.ಆರ್.ಕೆ. ರಾಜಬಹಾದ್ದೂರ್ ನಿಧನ
Koppala: ಅಧಿಕಾರಿಗಳ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಜೆಸ್ಕಾಂ ಗುತ್ತಿಗೆದಾರ
MUST WATCH
ಹೊಸ ಸೇರ್ಪಡೆ
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Belagavi: ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡುವ ಸ್ಥಿತಿ ಬರಲಿದೆ: ಈರಣ್ಣ ಕಡಾಡಿ
Shimoga; ವಿಜಯೇಂದ್ರರನ್ನು ಕಟ್ಟಿ ಹಾಕಲು ಕಾಂಗ್ರೆಸ್ ನಿಂದ ಸುಳ್ಳು ಆರೋಪ: ರಾಘವೇಂದ್ರ
Anandapura: ಸಾಲ ಬಾಧೆ ತಾಳಲಾರದೆ ರೈತ ಆತ್ಮಹ*ತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.