ಆಹಾರ ಸಾಮಗ್ರಿ ಪ್ಯಾಕಿಂಗ್ ಪರಿಶೀಲನೆ
Team Udayavani, Apr 18, 2020, 3:52 PM IST
ಮುದ್ದೇಬಿಹಾಳ: ದಾಸೋಹ ನಿಲಯದಲ್ಲಿ ಕಿಟ್ ಪ್ಯಾಕಿಂಗ್ ಕಾರ್ಯವನ್ನು ಶಾಸಕ ನಡಹಳ್ಳಿ ಅವರು ಪತ್ನಿ ಮಹಾದೇವಿಯೊಂದಿಗೆ ಪರಿಶೀಲಿಸಿದರು.
ಮುದ್ದೇಬಿಹಾಳ: ಪಟ್ಟಣದ ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರ ದಾಸೋಹ ನಿಲಯದ ಆವರಣದಲ್ಲಿ ತಾಲೂಕಿನ 20,000 ಕಡುಬಡವರಿಗೆ ವಿತರಿಸಲು 12 ರೀತಿಯ ಆಹಾರ ಸಾಮಗ್ರಿ ಕಿಟ್ ಪ್ಯಾಕಿಂಗ್ ಕೆಲಸ ಸಂಪೂರ್ಣ ಸುರಕ್ಷತೆ ಮತ್ತು ಸ್ವತ್ಛತೆಯಲ್ಲಿ ನಡೆಯುತ್ತಿದೆ.
ಸ್ವತಃ ಶಾಸಕ ನಡಹಳ್ಳಿ ಹಾಗೂ ಅವರ ಪತ್ನಿ ಮಹಾದೇವಿ ಅವರು ಕಿಟ್ ತಯಾರಿಸುವ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಕಿಟ್ ತಯಾರಿಸುವ ಕಾರ್ಮಿಕರು ಮತ್ತು ನಡಹಳ್ಳಿ ಅಭಿಮಾನಿ ಬಳಗದ ಸದಸ್ಯರು ಮುಖಕ್ಕೆ ಮಾಸ್ಕ್, ತಲೆಗೆ ಕವರ್ ಮತ್ತು ಸಮವಸ್ತ್ರ ಧರಿಸಿ ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಪ್ಯಾಕಿಂಗ್ ಸಿಬ್ಬಂದಿ ಆರೋಗ್ಯ ಖಚಿತಪಡಿಸಿಕೊಂಡು ಅವರಿಗೆಲ್ಲ ಗುರುತಿನ ಕಾರ್ಡ್ ನೀಡಲಾಗಿದೆ. ಈ ವೇಳೆ ಪ್ಯಾಕಿಂಗ್‌ನಿರತ ಕಾರ್ಮಿಕರಿಗೆ ಮಹಾದೇವಿ ಅವರು ಸ್ವತಃ ಊಟ ಬಡಿಸಿದರು. ಮುದ್ದೇಬಿಹಾಳ, ತಾಳಿಕೋಟೆ, ನಾಲತವಾಡ ಪಟ್ಟಣದ ಬಡವರಿಗೆ 1 ಕೋಟಿ ರೂ. ಸ್ವಂತದ ಹಣದಲ್ಲಿ ಶಾಸಕರು ಈ ಕಿಟ್ ವಿತರಿಸಲು ಮುಂದಾಗಿದ್ದಾರೆ.
ಧುರೀಣರ ಸಭೆ: ಪಟ್ಟಣ ಪ್ರದೇಶದಲ್ಲಿ ನಿಜವಾದ ಬಡವರನ್ನು ಗುರುತಿಸುವ ಕುರಿತು ಶಾಸಕರು ತಮ್ಮ ದಾಸೋಹ ನಿಲಯದಲ್ಲಿ ಬಿಜೆಪಿ ಧುರೀಣರು, ಅಭಿಮಾನಿ ಬಳಗದ ಪ್ರಮುಖರು ಮತ್ತು ವಾರ್ಡ್ ಪ್ರಮುಖರ ಸಮಾಲೋಚನಾ ಸಭೆ ನಡೆಸಿದರು. ಸಭೆಯಲ್ಲಿ ತಮ್ಮ ಯೋಜನೆ ಬಗ್ಗೆ ಮಾಹಿತಿ ನೀಡಿದ ಶಾಸಕರು ಎಲ್ಲೆಲ್ಲಿ ಬಡವರಿದ್ದಾರೆ ಅನ್ನುವುದನ್ನು ತಿಳಿದುಕೊಂಡು ಅಂಥವರ ಪಟ್ಟಿ ನೀಡಬೇಕು. ನೇರವಾಗಿ ಅಂಥವರ ಮನೆಗೇ ಕಿಟ್ ವಿತರಿಸಲಾಗುತ್ತದೆ. ಇದರಲ್ಲಿ ಲೋಪವಾಗದಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ನಾವೆಲ್ಲರೂ ನಿರ್ವಹಿಸಬೇಕಿದೆ ಎಂದರು.
ಬಿಜೆಪಿ ತಾಲೂಕಾಧ್ಯಕ್ಷ ಡಾ| ಪರಶುರಾಮ ಪವಾರ, ಧುರೀಣರಾದ ಪ್ರಭು ಕಡಿ, ಮಾಣಿಕಚಂದ ದಂಡಾವತಿ, ಲಕ್ಷ್ಮಣ ಬಿಜ್ಜೂರ, ಸಂಗಮ್ಮ ದೇವರಳ್ಳಿ, ಮನೋಹರ ತುಪ್ಪದ, ವಿವಿಧ ಬಡಾವಣೆ ಯುವ ಕಾರ್ಯಕರ್ತರು ಸಭೆಯಲ್ಲಿ ಪಾಲ್ಗೊಂಡು ಸಲಹೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
ಶಾಸಕರ ನಿವಾಸಕ್ಕೆ ಮುತ್ತಿಗೆ ಹಾಕಲು ಸಿದ್ಧತೆ.. ದಲಿತ ಮುಖಂಡರನ್ನು ವಶಕ್ಕೆ ಪಡೆದ ಪೊಲೀಸರು
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
Nalatawad: ವಿದ್ಯುತ್ ಶಾಕ್‌ನಿಂದ ಮೃತಪಟ್ಟ ಕೋತಿಗೆ ಸ್ಥಳೀಯ ನಿವಾಸಿಗಳಿಂದ ಅಂತ್ಯಸಂಸ್ಕಾರ
Vijayapura: ಜಿಲ್ಲಾಸ್ಪತ್ರೆಯಲ್ಲಿ ಒಂದು ವರ್ಷದ ಮಗು ಅಪಹರಣ: ಸಿಸಿಟಿವಿಯಲ್ಲಿ ದೃಶ್ಯ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Mangaluru: ಪಿ.ಎಂ. ರಾವ್ ರಸ್ತೆಯಲ್ಲಿ ಮತ್ತೆ ಎಲ್ಲೆಂದರಲ್ಲಿ ವಾಹನ ನಿಲುಗಡೆ
Thirthahalli: ತುಂಗಾ ಕಮಾನು ಸೇತುವೆ ಬಳಿ ಪತ್ತೆಯಾಗಿದ್ದ ಅಸ್ತಿ ಪಂಜರ ತಂದು ಹಾಕಿದ್ಯಾರು!!?
IPL: ಗೊಂದಲದಲ್ಲಿ ಮರಿ ಸೆಹ್ವಾಗ್ ನನ್ನು ಖರೀದಿಸಿದ ಆರ್ ಸಿಬಿ; ಯಾರು ಈ ಸ್ವಸ್ತಿಕ್ ಚಿಕಾರ
Kundapura: ರಾಷ್ಟ್ರೀಯ ಹೆದ್ದಾರಿಯ ಅರಾಟೆ ಹಳೆ ಸೇತುವೆಯಲ್ಲಿ ಸಂಚಾರ ಸ್ಥಗಿತ
Essar Group: ಎಸ್ಸಾರ್ ಗ್ರೂಪ್ ನ ಸಹ ಸಂಸ್ಥಾಪಕ ಶಶಿ ರುಯಿಯಾ ನಿಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.