ಪಿಪಿಇ ಕಿಟ್-ಮಾಸ್ಕ್ ವಿತರಿಸಿದ ನಡಹಳ್ಳಿ
Team Udayavani, Apr 18, 2020, 4:14 PM IST
ಮುದ್ದೇಬಿಹಾಳ: ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಅವರು ಖಾಸಗಿ ವೈದ್ಯ ಡಾ|ಉತ್ಕರ್ಷ ನಾಗೂರಗೆ ಮಾಸ್ಕ್, ಪಿಪಿಇ ಕಿಟ್, ಉಳಿದವರಿಗೆ ಮಾಸ್ಕ್ ವಿತರಿಸಿದರು.
ಮುದ್ದೇಬಿಹಾಳ: ಕೋವಿಡ್ ಲಾಕ್‌ಡೌನ್ ಮುಗಿಯುವವರೆಗೆ ಖಾಸಗಿ ವೈದ್ಯರ ಆರೋಗ್ಯ ರಕ್ಷಣೆ ಹಾಗೂ ಬಡವರ ಹೊಟ್ಟೆ ತುಂಬಿಸುವ ಜವಾಬ್ದಾರಿ ನನ್ನದಾಗಿದೆ ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ವಾಗ್ಧಾನ ಮಾಡಿದ್ದಾರೆ.
ಪಟ್ಟಣದ ದಾಸೋಹ ನಿಲಯದಲ್ಲಿ ಶುಕ್ರವಾರ ಖಾಸಗಿ ವೈದ್ಯರು, ಪತ್ರಕರ್ತರಿಗೆ ಗುಣಮಟ್ಟದ ಮಾಸ್ಕ್ ವಿತರಿಸಿ, ಸಂಕಷ್ಟ ಹೇಳಿಕೊಳ್ಳಲು ಬಂದಿದ್ದ ಬಡ ಮಹಿಳೆಯರ ಅಳಲು ಆಲಿಸಿ ಅವರು ಮಾತನಾಡಿದರು. ವೈದ್ಯರ ಬೇಡಿಕೆಯಂತೆ ಮಾಸ್ಕ್ವಿ ತರಿಸಲಾಗಿದೆ. ಪಿಪಿಇ ಕಿಟ್ ಅಗತ್ಯ ಕಂಡು ಬಂದಲ್ಲಿ ಪೂರೈಸಲಾಗುತ್ತದೆ. ಕೊರೊನಾ ಆತಂಕ ಇಲ್ಲದೆ ಕ್ಲಿನಿಕ್, ಆಸ್ಪತ್ರೆ ಪ್ರಾರಂಭಿಸಿ ಎಂದಿನಂತೆ ರೋಗಿಗಳ ಸೇವೆ ಮುಂದುವರಿಸಿ. ಜಿಲ್ಲಾಡಳಿತದ ಸೂಚನೆಯಂತೆ ಕೆಮ್ಮು, ನೆಗಡಿ, ಜ್ವರ, ಉಸಿರಾಟದ ತೊಂದರೆ ಇರುವ ರೋಗಿಗಳನ್ನು ಸರ್ಕಾರಿ ಆಸ್ಪತ್ರೆಗೆ ಕಳಿಸಿ. ಈ ಕುರಿತ ನೋಟಿಸ್‌ನ್ನು ಆಸ್ಪತ್ರೆಗಳ ಮುಂದೆ ಅಂಟಿಸಿ. ಕಠಿಣ ಪರಿಸ್ಥಿತಿಯಲ್ಲಿ ಸೇವೆಗೆ ಸಿದ್ಧರಿರುವ ನಮ್ಮ ವೈದ್ಯರ ಸೇವೆ ಬಳಸಿಕೊಳ್ಳಲು ಜಿಲ್ಲಾ ಧಿಕಾರಿಗೆ ತಿಳಿಸಿದ್ದೇನೆ ಎಂದರು.
ಪಟ್ಟಣ ಪ್ರದೇಶದ ಬಡವರು ಲಾಕ್‌ಡೌನ್‌ನಿಂದ ತೊಂದರೆಯಲ್ಲಿರುವುದನ್ನು ಮನಗಂಡು ತಾಲೂಕಿನ ಮೂರು ಪಟ್ಟಣಗಳ 15-20 ಸಾವಿರ ಕಡುಬಡವರಿಗೆ ಸೋಮವಾರದಿಂದ ಆಹಾರ ಸಾಮಗ್ರಿ ಕಿಟ್ ವಿತರಿಸುತ್ತಿದ್ದೇನೆ. ಕಿಟ್ ದೊರಕದ ನಿಜವಾದ ಬಡವರು ನನ್ನ ಗಮನಕ್ಕೆ ತಂದಲ್ಲಿ ಅಂಥವರ ಮನೆಗೇ ಕಿಟ್ ತಲುಪಿಸಲಾಗುತ್ತದೆ ಎಂದರು.
ಡಾ| ವೀರೇಶ ಪಾಟೀಲ ಅವರು ರೋಗಿಗಳ ಚಿಕಿತ್ಸೆಗೆ ಶಾಸಕರು ನೀಡಿದ ಸಲಹೆ ಪಾಲಿಸಿ ಆಸ್ಪತ್ರೆ ಪ್ರಾರಂಭಿಸುವಂತೆ ಮನವಿ ಮಾಡಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಿರಾದಾರ ಕವಡಿಮಟ್ಟಿ, ಡಾ| ಉತ್ಕರ್ಷ ನಾಗೂರ, ಡಾ| ಡಿ.ಬಿ. ಓಸ್ವಾಲ್, ಡಾ| ಸಿ.ಎಚ್.ನಾಗರಬೆಟ್ಟ, ಡಾ| ಎಂ.ಎಂ. ಹಿರೇಮಠ, ಡಾ| ವೀರೇಶ ಇಟಗಿ, ಡಾ| ವಿಜಯಕುಮಾರ ನಾಯಕ, ಡಾ| ಶಿವಯೋಗಿಮಠ ಸೇರಿದಂತೆ ಪಟ್ಟಣದ ಖಾಸಗಿ ವೈದ್ಯರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vijayapura: ಸಿದ್ದರಾಮಯ್ಯ ಈಗ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ: ಯತ್ನಾಳ್ ಟೀಕೆ
ಬಾಯಿ ಮುಚ್ಚಿ ಕುಳಿತರೆ ಒಳ್ಳೆಯದು, ಇಲ್ಲದಿದ್ದರೆ.. ಸ್ವಪಕ್ಷೀಯರ ವಿರುದ್ಧವೇ ಯತ್ನಾಳ್ ಕಿಡಿ
Panchamasali;ಈಗಲೂ ಮೀಸಲಾತಿ ಹೋರಾಟ ಮಾಡುತ್ತಿದ್ದೇನೆ: ಲಕ್ಷ್ಮೀ ಹೆಬ್ಬಾಳಕರ್
Vijayapura: 6ರ ಬಾಲಕನ ಮೇಲೆ ಅನೈಸರ್ಗಿಕ ಲೈಂಗಿಕ ದೌರ್ಜನ್ಯ: ಅಪರಾಧಿಗೆ 20 ವರ್ಷ ಜೈಲು
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.