ವದಂತಿ ನಂಬಿ ಬ್ಯಾಂಕ್‌ಗೆ ಬಂದ್ರು ಜನ
Team Udayavani, Apr 18, 2020, 4:38 PM IST
ನಾಯಕನಹಟ್ಟಿ: ಬ್ಯಾಂಕ್‌ಗೆ ಆಗಮಿಸಿದ್ದ ಜನರನ್ನು ಪೊಲೀಸರು ಸರತಿ ಸಾಲಿನಲ್ಲಿ ನಿಲ್ಲಿಸಿ ನಿಯಂತ್ರಿಸಿದರು.
ನಾಯಕನಹಟ್ಟಿ : ವದಂತಿ ನಂಬಿಕೊಂಡು ಪಟ್ಟಣದ ಕೆನರಾ ಬ್ಯಾಂಕ್ ಮುಂದೆ ಗುರುವಾರ ಭಾರೀ ಪ್ರಮಾಣದಲ್ಲಿ ಜನರು ಜಮಾಯಿಸಿದ್ದರು. ಸಾಮಾಜಿಕ ಅಂತರ ಕಾಪಾಡಲು ಪೊಲೀಸರು ಹರಸಾಹಸ ಪಡಬೇಕಾಯಿತು. ಲಾಕ್‌ಡೌನ್ ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೂಲಿ ಕಾರ್ಮಿಕರು, ಕಟ್ಟಡ ಕಾರ್ಮಿಕರು ಸೇರಿದಂತೆ ನಾನಾ ಜನರ ಖಾತೆಗೆ ನಗದು ವರ್ಗಾಯಿಸಿದೆ. ಈ ನಡುವೆ ಹಲವಾರು ವದಂತಿಗಳು ಜನರ ನಡುವೆ ಹರಿದಾಡುತ್ತಿವೆ.
ಸಾಮಾಜಿಕ ಭದ್ರತಾ ಯೋಜನೆಯಡಿ ಸರ್ಕಾರ ಜನರ ಖಾತೆಗೆ ಹಾಕಿರುವ ಹಣವನ್ನು ಬಿಡಿಸದೇ ಇದ್ದಲ್ಲಿ ಹಣ ವಾಪಸ್ ಹೋಗುತ್ತದೆ, ಗ್ರಾಹಕರು ಹಣ ಬಿಡಿಸಿಕೊಳ್ಳದೇ ಇದ್ದಲ್ಲಿ ಗ್ರಾಹಕರ ಸಾಲದ ಖಾತೆಗೆ ಸರ್ಕಾರ ನೀಡಿದ ಹಣ ಜಮಾ ಆಗುತ್ತದೆ. ತಕ್ಷಣ ಈ ಹಣವನ್ನು ಪಡೆಯದೇ ಇದ್ದಲ್ಲಿ ಬ್ಯಾಂಕ್‌ನವರು ಹಣ ನೀಡುವುದಿಲ್ಲ ಎಂಬ ಸುಳ್ಳು ಸುದ್ದಿ ಹರಿದಾಡಿದ್ದರಿಂದ ಮಹಿಳೆಯರು, ವೃದ್ಧರು ಸೇರಿದಂತೆ ಹಲವಾರು ಜನರು ಬ್ಯಾಂಕ್‌ಗೆ ದೌಡಾಯಿಸಿದ್ದರು. ಜನಧನ್ ಖಾತೆ, ವಿಧವಾ ವೇತನ, ಕಾರ್ಮಿಕರು ಸೇರಿದಂತೆ ನಾನಾ ಜನರು ಬ್ಯಾಂಕ್‌ಗೆ ಬಂದಿದ್ದರು.
300ಕ್ಕೂ ಹೆಚ್ಚು ಜನರು ಒಮ್ಮೆಲೆ ಜಮಾಯಿಸಿದ್ದರಿಂದ ಜನರನ್ನು ನಿಯಂತ್ರಿಸುವುದು ಬ್ಯಾಂಕ್ ಸಿಬ್ಬಂದಿಗೆ ಕಷ್ಟವಾಯಿತು. ಸ್ಥಳಕ್ಕೆ ಭೇಟಿ ನೀಡಿದ ಪಿಎಸ್‌ಐ ರಘುನಾಥ್ ಮಾತನಾಡಿ, ಜನರು ವೈಜ್ಞಾನಿಕವಾಗಿ ಅಂತರ ಕಾಪಾಡಿಕೊಳ್ಳಬೇಕು. ಬಿಸಿಲಿನಿಂದಾಗಿ ಗ್ರಾಹಕರಿಗೆ ಶಾಮಿಯಾನ ಹಾಕುವಂತೆ ಸಲಹೆ ನೀಡಿದರು. ಪೊಲೀಸ್ ಸಿಬ್ಬಂದಿ ಗ್ರಾಹಕರನ್ನು ಸಾಮಾಜಿಕ ಅಂತರದಲ್ಲಿ ಸರದಿ ಸಾಲಿನಲ್ಲಿ ನಿಲ್ಲಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chitradurga: ನಿವೃತ್ತ ಶಿಕ್ಷಕಿ ಬಳಿ ಲಂಚ ಸ್ವೀಕರಿಸುತ್ತಿದ್ದ ವೇಳೆ ಲೋಕಾಯುಕ್ತ ರೇಡ್
Challakere: ಗೆಳೆಯನ ವಿವಾಹದಲ್ಲಿ ಕುಣಿವಾಗ ಕುಸಿದು ಬಿದ್ದು ಯುವಕ ಸಾವು
Bharamasagara: 3 ತಿಂಗಳ ಹಿಂದೆ ಮದುವೆಯಾಗಿ ಊರಿಗೆ ವಾಪಸ್ ಆದ ಯುವಕನ ಹತ್ಯೆ
Chitradurga: ಒಟ್ಟು 6 ಜನ ಅಕ್ರಮ ಬಾಂಗ್ಲಾ ವಲಸಿಗರ ಪತ್ತೆ
Chitradurga: ಪತಿ ಸಾವು: ಜಿಗುಪ್ಸೆಯಿಂದ ಪತ್ನಿ, ಪುತ್ರಿ ನೇಣಿಗೆ ಶರಣು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Video: ನ್ಯಾಯ ಕೇಳಲು ಬಂದ ವ್ಯಕ್ತಿಗೆ ಖಾಕಿಯಿಂದ 41 ಸೆಕೆಂಡ್‌ಗಳಲ್ಲಿ 31 ಬಾರಿ ಕಪಾಳ ಮೋಕ್ಷ
Atlee Kumar; ಸಲ್ಮಾನ್ ಖಾನ್ ಜತೆಗೆ ಅಟ್ಲಿ ಸಿನಿಮಾ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.