ತೂಗುಗತ್ತಿಯಲ್ಲಿ ಮಧ್ಯಪ್ರಾಚ್ಯದ ವಲಸೆ ಕಾರ್ಮಿಕರು : ವೇತನವೂ ಅನುಮಾನ
Team Udayavani, Apr 18, 2020, 7:04 PM IST
ಮಣಿಪಾಲ: ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಕೋವಿಡ್ 19 ಸಂಬಂಧ ಲಾಕ್‌ಡೌನ್ ಜಾರಿಯಾಗಿದ್ದು ಬಹುತೇಕ ವ್ಯವಹಾರಗಳು ಸ್ತಬ್ಧವಾಗಿವೆ. ಈ ರಾಷ್ಟ್ರಗಳಿಗೆ ಉದ್ಯೋಗ ಕಾರಣಕ್ಕೆ ತೆರಳಿದ ಬಹುತೇಕರು ಬರೀ ಕೈಯಲ್ಲಿ ಕುಳಿತಿದ್ದಾರೆ. ಈ ಕುರಿತಂತೆ ಸಿರಿಯಾ ದೇಶದ ಪಕ್ಕದಲ್ಲಿರುವ ಲೆಬನಾನ್ ಕಾರ್ಮಿಕರ ರಕ್ಷಣೆ ಮುಂದಾಗಬೇಕು ಎಂದು ಎನ್‌ಜಿಒಗಳು ಮನವಿ ಮಾಡಿವೆ. ಮಧ್ಯಪ್ರಾಚ್ಯಾದ್ಯಂತ ವಲಸೆ ಕಾರ್ಮಿಕರು ಉದ್ಯೋಗ ಕಳೆದು ಕೊಳ್ಳುವ ಭೀತಿಯಲ್ಲಿದ್ದಾರೆ.
ಕೊಲ್ಲಿ ರಾಜ್ಯಗಳು ಮತ್ತು ಸೌದಿ ಅರೇಬಿಯಾದ ಕೆಲವು ಭಾಗಗಳಲ್ಲಿ ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮುಚ್ಚಿದ ವಿಮಾನ ನಿಲ್ದಾಣಗಳು ಕಾರ್ಮಿಕರನ್ನು ಕಟ್ಟಿಹಾಕಿವೆ. ಅತ್ತ ತಾಯ್ನಾಡಿಗೆ ತೆರಳಲು ಸಾಧ್ಯವಾಗುತ್ತಿಲ್ಲ, ಇತ್ತ ದುಡಿಯಲೂ ಸಾಧ್ಯವಾಗುತ್ತಿಲ್ಲ. ಲಾಕ್‌ಡೌನ್ ಪ್ರಾರಂಭವಾಗುವ ಮೊದಲೇ ಲೆಬನಾನ್‌ನ ಆರ್ಥಿಕ ಪರಿಸ್ಥಿತಿ ಕುಸಿದಿತ್ತು. ಬಹುತೇಕ ಆದಾಯದ ಮೂಲಗಳನ್ನು ಛಿದ್ರಗೊಳಿಸಿದ್ದವು.
ಇದರ ಜತೆಗೆ ಈಗ ಕೋವಿಡ್-19 ವೈರಸ್ ಹಾನಿಯೂ ಬಹುದೊಡ್ಡ ಸಮಸ್ಯೆಯಾಗಿದೆ. ಮನೆಯಲ್ಲಿ ಕೆಲಸ ಮಾಡುವ ಹೊರ ದೇಶದ ಕಾರ್ಮಿಕರಿಗೆ ಸಂಬಳ ಸಿಗಲಾರದೆಂಬ ಭಯ ಆರಂಭವಾಗಿದೆ.
ಕೆಲವು ಮನೆಗಳಲ್ಲಿ ಕಾರ್ಮಿಕರನ್ನು ತೀವ್ರವಾಗಿ ಹಿಂಸಿಸ ಲಾಗುತ್ತಿದ್ದು, ಅಪಾಯಕಾರಿ ಕೆಲಸಕ್ಕೆ ಒತ್ತಾಯಿಸಲಾಗುತ್ತಿದೆ. ಮನೆಗಳ ಒಳಗೆ ಸ್ವತ್ಛಗೊಳಿಸುವಿಕೆಗೆ ಬಳಸುತ್ತಿದ್ದಾರೆ. ಈಗ ಆರ್ಥಿಕ ಪರಿಸ್ಥಿತಿ ಸರಿ ಇಲ್ಲದೇ ಇರುವ ಕಾರಣ ವೇತನವೂ ಸಿಗುವುದು ಅನುಮಾನವಾಗಿದ್ದು, ಅವರ ಭವಿಷ್ಯ ಕತ್ತಲೆಯಲ್ಲಿದೆ.
ಲೆಬನಾನ್‌ನಲ್ಲಿ 2.50 ಲಕ್ಷ ವಲಸೆ ಕಾರ್ಮಿಕರಿದ್ದಾರೆ. ಇವರಲ್ಲಿ ಮುಖ್ಯವಾಗಿ ಗೃಹ ಕಾರ್ಮಿಕರು ಹೆಚ್ಚಿದ್ದಾರೆ. ತಮ್ಮ ಉದ್ಯೋಗದಾತರ ಮನೆಗಳಲ್ಲಿ ಕೆಲಸ ಮಾಡಿ ಸಾಮಾನ್ಯವಾಗಿ ಅಲ್ಲೇ ವಾಸಿಸುತ್ತಾರೆ.
ಕೋವಿಡ್ 19 ಪೀಡಿತ ರಾಷ್ಟ್ರವಾದ ಇರಾನ್‌ನ ಸಮೀಪದಲ್ಲೇ ಈ ರಾಷ್ಟ್ರ ಇದೆ. ಅದಕ್ಕೆ ಹೋಲಿಸಿದರೆ ಕೊಲ್ಲಿ ರಾಜ್ಯಗಳಲ್ಲಿನ ಅಧಿಕೃತ ಕೊರೊನಾ ವೈರಸ್ ಸಂಖ್ಯೆಗಳು ತುಲನಾತ್ಮಕವಾಗಿ ಕಡಿಮೆ ಇದೆ. ಮೇ ತಿಂಗಳ ಕೊನೆಯಲ್ಲಿ ರಂಜಾನ್ ಅಂತ್ಯದ ವೇಳೆಗೆ ಈ ಪ್ರದೇಶದ ವಿಮಾನ ನಿಲ್ದಾಣಗಳು ತೆರೆಯುವ ಸಾಧ್ಯತೆ ಇದೆ. ಈ ಸಂದರ್ಭದಲ್ಲಿ ಒಂದಿಷ್ಟು ಮಂದಿ ತಮ್ಮ ದೇಶಗಳಿಗೆ ತೆರಳುವ ಸಾಧ್ಯತೆ ಇದೆ. ಕೋವಿಡ್ 19 ಬಿಕ್ಕಟ್ಟು ಕೊಲ್ಲಿಯಾದ್ಯಂತ ಉದ್ಯೋಗವನ್ನು ಕುಂಠಿತಗೊಳಿಸಿದೆ. ಇದರಿಂದ ನಿರ್ಮಾಣ ವಲಯ, ಚಿಲ್ಲರೆ ವ್ಯಾಪಾರ ಮತ್ತು ಇತರ ಕ್ಷೇತ್ರಗಳಿಗೆ ಸಮಸ್ಯೆ ಆಗಿದೆ. ದೇಶಗಳ ಆರ್ಥಿಕ ಸ್ಥಿತಿಯ ಮೇಲೂ ಹೊಡೆತ ಬೀಳುವ ಆತಂಕ ಎದುರಾಗಿದೆ.
ಟೀಕೆಗೆ ಗುರಿ
ಲೆಬನಾನ್‌ಗೆ ವಲಸೆ ಬಂದ ಗೃಹ ಕಾರ್ಮಿಕರನ್ನು ಶೋಷಿಸುವ ಅಥವಾ ನಿಂದಿಸುವ ಉದ್ಯೋಗದಾತರರ ಮೇಲೆ ಕಾನೂನು ಕ್ರಮ ಜರುಗಿಸುವುದಾಗಿ ಸರಕಾರ ಸ್ಪಷ್ಟವಾಗಿ ಎಚ್ಚ ರಿಸದಿರುವುದು ಟೀಕೆಗೆ ಗುರಿಯಾಗಿದೆ. ಕೋವಿಡ್-19ನಂತಹ ಸಾಂಕ್ರಾಮಿಕ ರೋಗ ಹರಡುವ ಸಮಯದಲ್ಲಿ ಕಾರ್ಮಿಕರಿಗೂ ಆರೋಗ್ಯ ಸೇವೆಗೆ ಅವಕಾಶವಿದೆ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಅಮ್ನೆಸ್ಟಿ ಇಂಟರ್‌ನ್ಯಾಶನಲ್‌ನ ಮಧ್ಯಪ್ರಾಚ್ಯ ಮತ್ತು ಉತ್ತರ ಆಫ್ರಿಕಾ ಘಟಕ ಮಾಧ್ಯಮಗಳಿಗೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Assam Coal Mine Tragedy: ಅಸ್ಸಾಂ ಗಣಿ ದುರಂತ… ಒಬ್ಬನ ಮೃತ ದೇಹ ಪತ್ತೆ
ತಿಮ್ಮಪ್ಪನ ಸನ್ನಿಧಾನದಲ್ಲಿ ನೂಕುನುಗ್ಗಲು ಕಾಲ್ತುಳಿತ… 6 ಸಾ*ವು, ಹಲವರ ಸ್ಥಿತಿ ಗಂಭೀರ
Sheesh Mahal Row: ಶೀಶ್‌ಮಹಲ್ ವರ್ಸಸ್ ರಾಜ್ ಮಹಲ್: ದಿಲ್ಲೀಲಿ ಬಿಜೆಪಿ, ಆಪ್ ಹೈಡ್ರಾಮ
Foundation: ಆಂಧ್ರ ಅಭಿವೃದ್ಧಿಗೆ ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುವೆವು: ಮೋದಿ
Delhi: ಜ.15ಕ್ಕೆ ಹೊಸ ಕಟ್ಟಡಕ್ಕೆ ಕಾಂಗ್ರೆಸ್ ಪ್ರಧಾನ ಕಚೇರಿ ಸ್ಥಳಾಂತರ
MUST WATCH
ಹೊಸ ಸೇರ್ಪಡೆ
Naxal Package: “ಮೊದಲೇ ಪ್ಯಾಕೇಜ್ ನೀಡಿದ್ದರೆ ವಿಕ್ರಂಗೌಡ ಪ್ರಾಣ ಉಳಿಯುತ್ತಿತ್ತು’: ಸಹೋದರ
Belagavi: ಜೀವಂತ ವ್ಯಕ್ತಿ ಹೆಸರಿನಲ್ಲಿ ಮರಣ ಪ್ರಮಾಣ ಪತ್ರ ನೀಡಿದ ಅಧಿಕಾರಿಗಳು!
Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ
Mangaluru; ಹಳೆ ನಾಣ್ಯ ಖರೀದಿ ಹೆಸರಲ್ಲಿ 58 ಲಕ್ಷ ರೂ. ವಂಚನೆ!
Mangaluru: ಮುಡಾ ಕಚೇರಿಯಲ್ಲಿ ಮಧ್ಯವರ್ತಿಯಿಂದ ಕಡತ ತಿದ್ದುಪಡಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.