ಡಿಸಿ ಅನುಮತಿಯೊಂದಿಗೆ ಮೆಷಿನರಿ ಕಾಮಗಾರಿ ಪ್ರಾರಂಭ
ಬಿ.ಸಿ.ರೋಡ್-ಪುಂಜಾಲಕಟ್ಟೆ ಹೆದ್ದಾರಿ
Team Udayavani, Apr 19, 2020, 5:11 AM IST
ಬಂಟ್ವಾಳ: ಲಾಕ್‌ಡೌನ್ ಹಿನ್ನೆಲೆಯಲ್ಲಿ ಬರೋಬ್ಬರಿ ಒಂದು ತಿಂಗಳ ಕಾಲ ನಿಂತುಹೋಗಿದ್ದ ಬಿ.ಸಿ. ರೋಡ್- ಪುಂಜಾಲಕಟ್ಟೆ ಹೆದ್ದಾರಿಯ ಕಾಮಗಾರಿ ಜಿಲ್ಲಾಧಿಕಾರಿಗಳ ಅನುಮತಿಯೊಂದಿಗೆ ಆರಂಭಗೊಂಡಿದೆ. ಸೀಮಿತ ಸಂಖ್ಯೆಯ ಕಾರ್ಮಿಕರ ಸಹಿತ ಮೆಷಿನರಿ ಕಾಮಗಾರಿ ಗಳು ಈಗ ನಡೆಯುತ್ತಿವೆ.
ಈ ವರ್ಷದ ಅಂತ್ಯಕ್ಕೆ ಕಾಮಗಾರಿ ಮುಗಿಸುವ ಗುರಿ ಇರುವ ಜತೆಗೆ ಮಳೆಗಾಲಕ್ಕೆ ಮುಂಚಿತವಾಗಿ ಹೆದ್ದಾರಿಯಲ್ಲಿ ಸರಾಗವಾಗಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವ ಉದ್ದೇಶ ಹೊಂದಲಾಗಿದೆ. ಈಗಾಗಲೇ ಬಹುತೇಕ ಕಡೆ ಜಲ್ಲಿ ಹಾಕಲಾಗಿದ್ದು, ಒಂದು ವೇಳೆ ಮಳೆ ಬಂದರೂ ಸಂಚಾರಕ್ಕೆ ತೊಂದರೆಯಾಗದ ಸ್ಥಿತಿಗೆ ತರಬೇಕಿದೆ.
ಸೇತುವೆಗೆ ಸಂಪರ್ಕ ರಸ್ತೆ
ಬಿ.ಸಿ.ರೋಡಿನಿಂದ ಜಕ್ರಿಬೆಟ್ಟುವರೆಗೆ ಈ ರಸ್ತೆಯಲ್ಲಿ ಒಟ್ಟು 3 ಕಿರುಸೇತುವೆಗಳು ನಿರ್ಮಾಣಗೊಂಡಿದ್ದು, ಭಂಡಾರಿಬೆಟ್ಟು- ಅಜೆಕಲ ಮಧ್ಯೆ, ಬೈಪಾಸ್ ಬಳಿಯ ಸೇತುವೆಗಳಿಗೆ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಜಕ್ರಿಬೆಟ್ಟು ಬಳಿ ಕಿರು ಸೇತುವೆಗೆ ಇನ್ನೂ ಸಂಪರ್ಕ ಕಲ್ಪಿಸಲಾಗಿಲ್ಲ. ಪ್ರಸ್ತುತ ತೋಡಿಗೆ ಅಡ್ಡಲಾಗಿ ಮಣ್ಣು ಹಾಕಿ ರಸ್ತೆ ಮಾಡಲಾಗಿದ್ದು, ಮಳೆ ಬಂದು ತೋಡಿನಲ್ಲಿ ನೀರು ಬರುವುದಕ್ಕಿಂತ ಮುಂಚಿತವಾಗಿ ಸೇತುವೆಗೆ ಸಂಪರ್ಕ ರಸ್ತೆಯಾಗಬೇಕಿದೆ.
ಕಾಂಕ್ರೀಟ್ ಪ್ರಾರಂಭವಾಗಿತ್ತು
ಬಿ.ಸಿ.ರೋಡ್-ಪುಂಜಾಲಕಟ್ಟೆ ಹೆದ್ದಾರಿ ಕಾಮಗಾರಿಯಲ್ಲಿ ಬಿ.ಸಿ.ರೋಡ್‌ನಿಂದ ಜಕ್ರಿಬೆಟ್ಟುವರೆಗೆ (3.85 ಕಿ.ಮೀ.) ಹೆದ್ದಾರಿಗೆ ಕಾಂಕ್ರೀಟ್ ಸಹಿತ ಚತುಷ್ಪಥಗೊಳ್ಳಲಿದ್ದು, ಗಾಣದಪಡು ನಾರಾಯಣ ಗುರು ಮಂದಿರದ ಬಳಿಯಿಂದ ಕಾಂಕ್ರೀಟ್ ಕಾಮಗಾರಿಯೂ ಪ್ರಾರಂಭಗೊಂಡಿತ್ತು. ಆದರೆ ಮಾ. 23ರ ವೇಳೆಗೆ ಲಾಕ್‌ಡೌನ್ ಘೋಷಣೆಯಾದ ಪರಿಣಾಮ ಕಾಮಗಾರಿ ಸ್ಥಗಿತಗೊಂಡಿತ್ತು. ಮಣ್ಣು ಹಾಕಿ ಹೆದ್ದಾರಿಯನ್ನು ಎತ್ತರಗೊಳಿಸಿರುವ ಭಾಗಗಳಲ್ಲಿ ತಡೆಗೋಡೆಯ ಕಾಮ ಗಾರಿಯೂ ನಡೆಯಬೇಕಿದೆ.
ಅನುಮತಿಯೊಂದಿಗೆ ಕಾಮಗಾರಿ
ಮಳೆ ಬರುವುದಕ್ಕೆ ಮುಂಚಿತವಾಗಿ ಹೆದ್ದಾರಿಯನ್ನು ಸಂಚಾರಕ್ಕೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಜಿಲ್ಲಾಧಿಕಾರಿಗಳ ಅನುಮತಿಯೊಂದಿಗೆ ಮೆಷಿನರಿ ಕಾಮಗಾರಿ ಪ್ರಾರಂಭಗೊಂಡಿದೆ. ಜತೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಸೀಮಿತ ಸಂಖ್ಯೆಯ ಕಾರ್ಮಿಕರು ಕೂಡ ಕೆಲಸ ನಿರ್ವಹಿಸುತ್ತಿದ್ದಾರೆ. ಮುಂದೆ ಅರ್ಧಕ್ಕೆ ನಿಂತಿರುವ ಎಲ್ಲ ಹೆದ್ದಾರಿ ಕಾಮಗಾರಿಗಳನ್ನು ಪ್ರಾರಂಭಿಸುವುದಕ್ಕೆ ಜಿಲ್ಲಾಧಿಕಾರಿಗಳ ಅನುಮತಿ ಕೇಳಲಿದ್ದೇವೆ.
- ರಮೇಶ್ , ಎಇಇ, ರಾ.ಹೆ. ವಿಭಾಗ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ
Udupi: ಮಲ್ಪೆಯಲ್ಲಿ ಮೀನುಗಾರಿಕೆ ಪೂರಕ ಯೋಜನೆ ಅನುಷ್ಠಾನಕ್ಕೆ ಕ್ರಮ: ಸಚಿವ ವೈದ್ಯ
Dharmasthala: ಎರಡನೇ ದಿನದ ಕೆರೆಕಟ್ಟೆ ಉತ್ಸವ ಸಂಪನ್ನ
Moodbidri: ಬಾಂಗ್ಲಾದಲ್ಲಿ ಕೃಷ್ಣದಾಸ ಪ್ರಭು ಸೆರೆ: ಮೂಡುಬಿದಿರೆ ಭಟ್ಟಾರಕ ಶ್ರೀ ಖಂಡನೆ
Mangaluru: ಪೌರಕಾರ್ಮಿಕರ ವಿಮೆ 5 ಲಕ್ಷ ರೂ.ಗೆ ಏರಿಕೆ: ಜಿಲ್ಲಾಧಿಕಾರಿ ಸೂಚನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.