ನಗರಾದ್ಯಂತ ಡಿಸಿ, ಎಸ್ಪಿ ದಿಢೀರ್ ಕಾರ್ಯಾಚರಣೆ
ಸುಶಿಕ್ಷಿತ ಜಿಲ್ಲೆಯಲ್ಲೂ ವಾಹನ ಓಡಾಟ; ಜನರಿಗೆ ಬೇಕಿದೆ ಸ್ವಯಂ ಪ್ರಜ್ಞೆ
Team Udayavani, Apr 19, 2020, 5:51 AM IST
ಉಡುಪಿ: ಕೇಂದ್ರ ಸರಕಾರ ಎ. 14ರ ವರೆಗೆ ಇದ್ದ ಲಾಕ್‌ಡೌನ್ ಅನ್ನು ಮೇ 3ರ ವರೆಗೆ ವಿಸ್ತರಿಸುವ ಮೂಲಕ ಕೋವಿಡ್-19 ಮಹಾಮಾರಿಗೆ ಕಡಿವಾಣ ಹಾಕಿ ದೇಶದ ಆರ್ಥಿಕತೆಗಿಂತ ಜನರ ಆರೋಗ್ಯ ಮುಖ್ಯ ಎಂದು ತಿಳಿಸಿವೆ.
ಈ ನಡುವೆ ಕೇಂದ್ರ ರಾಜ್ಯಗಳ ನಿರ್ದೇಶನದಂತೆ ಪ್ರತಿ ಜಿಲ್ಲೆಗಳಲ್ಲೂ ನಿಯಮಗಳನ್ನು ಜಾರಿ ಮಾಡಿಲಾಗಿದೆ.ಅಗತ್ಯ ವಸ್ತುಗಳನ್ನು ಹೊತ್ತು ತರುವ ವಾಹನಗಳನ್ನು ಹೊರತು ಪಡಿಸಿ ಜಿಲ್ಲೆಗಳ ಒಳಬರುವ ಎಲ್ಲ ಇತರ ವಾಹನಗಳನ್ನು ನಿರ್ಬಂಧಿಸಲಾಗಿದೆ. ಜತೆಗೆ ಬೆಳಗ್ಗೆ 7ರಿಂದ 11ರ ವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಿಲಾಗಿದೆ. ಅಗತ್ಯ ಇದ್ದರೆ ಮಾತ್ರ ಜನ ಮನೆಯಿಂದ ಹೊರಬರಲು ನಿರ್ದೇಶನ ನೀಡಲಾಗಿದೆ.
ಕಾರ್ಯಾಚರಣೆ
ಕೆಲವು ಸಾಮಾಜಿಕ ಮಾಧ್ಯಮಗಳು ಉಡುಪಿ ಜಿಲ್ಲೆಯಲ್ಲಿ ಯಾವುದೇ ಕೋವಿಡ್-19 ಸಂಬಂಧಿ ಸಮಸ್ಯೆಗಳಿಲ್ಲ ಎಂದು ಅಪಪ್ರಚಾರ ಮಾಡುವ ಮೂಲಕ ಜನರ ಮನಸ್ಸನ್ನು ವಿಚಲಿತ ಮಾಡುವ ಘಟನೆಗಳು ಹಾಗೂ ನಗರ ಭಾಗದಲ್ಲಿ ಹೆಚ್ಚಿನ ಓಡಾಟವನ್ನು ನಡೆಸುತ್ತಿರುವ ಮಾಹಿತಿಯ ಮೆರೆಗೆ ಶುಕ್ರವಾರ ನಗರದ ಪ್ರಮುಖ ಭಾಗವಾದ ಕಲ್ಸಂಕ, ಕಲ್ಮಾಡಿ, ಮಲ್ಪೆ ಭಾಗಗಳಿಗೆ ಜಿಲ್ಲಾಧಿಕಾರಿ ಹಾಗೂ ಎಸ್ಪಿ ದಿಢೀರ್ ಕಾರ್ಯಾಚರಣೆ ನಡೆಸಿ ಪಾಸ್ ಇಲ್ಲದೆ ಓಡಾಡುತ್ತಿದ್ದ ವಾಹನಗಳನ್ನು ವಶಪಡಿಸಿ ಎಚ್ಚರಿಕೆ ನೀಡಿದ್ದರು.
ಜನರ ಸಹಕಾರವಿಲ್ಲದೆ ಕೋವಿಡ್-19 ಕಡಿವಾಣ ಅಸಾಧ್ಯ
ಸುಶಿಕ್ಷಿತರ ಜಿಲ್ಲೆ ಎಂದು ಕರೆಸಿಕೊಂಡಿರುವ ಉಡುಪಿಯಲ್ಲಿ ಲಾಕ್‌ಡೌನ್ ಆದ ದಿನದಿಂದ ಇಲ್ಲಿಯವರೆಗೆ 550ಕ್ಕೂ ಹೆಚ್ಚಿನ ವಾಹನಗಳನ್ನು ವಶಪಡಿಸಲಾಗಿದೆ. ಜನರು ನಿಗದಿ ಪಡಿಸಿದ ಸಮಯ ಹೊರತಾಗಿಯು ಒಂದೆರಡು ವಸ್ತುಗಳನ್ನು ಪಡೆಯಲೆಂದು ನಗರದಲ್ಲಿ ಸುತ್ತಾಡುತ್ತಿದ್ದಾರೆ. ನಗರ ಸೇರಿದಂತೆ ಎಲ್ಲ ಚೆಕ್ ಪೊಸ್ಟ್‌ಳಲ್ಲಿ ಪೊಲೀಸರು ಕಾವಲಿದ್ದು ತಪಾಸಣೆ ಮಾಡುತ್ತಿದ್ದಾರೆ. ಜನ ಸಹಕಾರವಿಲ್ಲದೆ ಯಾವುದೇ ಮುಂಜಾಗ್ರತೆ ಸಾಧ್ಯವಿಲ್ಲ. ಸದ್ಯ ಸುಶಿಕ್ಷಿತ ಜಿಲ್ಲೆಯೆಂದು ಗುರುತಿಸಿರುವ ಉಡುಪಿ ಜಿಲ್ಲೆಯಲ್ಲಿ ಜನರು ಸ್ವಯಂಪ್ರಜ್ಞೆ ಮೆರೆದು ಚಾಚು ತಪ್ಪದೆ ಆಡಳಿತ ವ್ಯವಸ್ಥೆ ಸೂಚಿಸುವ ನಿಯಮ, ಮಾರ್ಗ ಸೂಚನೆಯನ್ನು ಪಾಲಿಸಿ ಈ ಮಹಾ ಮಾರಿಯನ್ನು ತೊಡೆದು ಓಡಿಸುವುದಕ್ಕೆ ಕೈಜೋಡಿಸಬೇಕಿದೆ.
ಚೆಕ್‌ಪೋಸ್ಟ್‌ಗಳಲ್ಲಿ ತಾರತಮ್ಯಕ್ಕೆ ಅವಕಾಶವಿಲ್ಲ: ಜಿಲ್ಲಾಧಿಕಾರಿ
ಉಡುಪಿ: ಜಿಲ್ಲೆಯ ಗಡಿಭಾಗಗಳ ಚೆಕ್‌ಪೋಸ್ಟ್‌ಗಳಲ್ಲಿ ಜನಸಾಮಾನ್ಯರಿಗೊಂದು ಮತ್ತು ಪ್ರಭಾವಿಗಳಿಗೊಂದು ನ್ಯಾಯ ಅನುಸರಿಸುತ್ತಿಲ್ಲ. ಇದೆಲ್ಲ ಊಹಾಪೋಹಗಳಾಗಿದ್ದು, ಸತ್ಯಕ್ಕೆ ದೂರ ವಾದುದು. ಚೆಕ್‌ಪೋಸ್ಟ್‌ಗಳಲ್ಲಿ ತಾರತಮ್ಯಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಸ್ಪಷ್ಟಪಡಿಸಿದ್ದಾರೆ.
ಚೆಕ್‌ಪೋಸ್ಟ್‌ಗಳು ಸಾರ್ವಜನಿಕರಿಗೆ ಮಾತ್ರ ತಡೆ ನೀಡಿ ಶಿಫಾರಸು ಇದ್ದವರಿಗೆ ಅವಕಾಶ ನೀಡಲಾಗುತ್ತಿದೆ ಅನ್ನುವ ವಿಚಾರವಾಗಿ ನಾಗರಿಕರೊರ್ವರು “ಜಿಲ್ಲಾಧಿಕಾರಿಗಳಿಗೆ ಬಹಿರಂಗ ಪತ್ರ” ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆಹವೊಂದನ್ನು ಬರೆದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಜಿಲ್ಲೆಯ ಚೆಕ್‌ಪೋಸ್ಟ್‌ಗಳಲ್ಲಿ ಅಂತಹ ಯಾವುದೇ ಘಟನೆಗಳು ನಡೆಯುತ್ತಿಲ್ಲ. ಇಂತಹ ಹೇಳಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುವುದರಿಂದ ಜನರಲ್ಲಿ ತಪ್ಪು ಅಭಿಪ್ರಾಯಗಳು ಮೂಡಲು ಕಾರಣವಾಗುತ್ತವೆ. ರಾಜ್ಯದ ಯಾವುದೇ ಜಿಲ್ಲೆಗಳ ಚೆಕ್‌ಪೋಸ್ಟ್‌ಗಳಲ್ಲಿ ನಮ್ಮ ಜಿಲ್ಲೆಯ ಚೆಕ್‌ಪೋಸ್ಟ್‌ಗಳಲ್ಲಿ ಇರುವಷ್ಟು ಬಿಗಿ ನಿಯಮಗಳು ಜಾರಿಯಲ್ಲಿಲ್ಲ. ಜಿಲ್ಲಾಡಳಿತ ಎಸ್‌ಪಿ ಅವರ ನೇತೃತ್ವದಲ್ಲಿ ಬಹಳಷ್ಟು ಕಠಿನ ನಿರ್ಧಾರಗಳನ್ನು ತೆಗೆದುಕೊಂಡು ಪೊಲೀಸರು ಗಡಿ ಕಾಯುತ್ತಿದ್ದಾರೆ. ಮಹಾರಾಷ್ಟ್ರ, ಮುಂಬಯಿ ಭಾಗದ ಜನರು ಅನೇಕ ಜಿಲ್ಲೆಗಳ ಚೆಕ್‌ಪೋಸ್ಟ್ ದಾಟಿ ಬಂದಿದ್ದರೂ ಅವರನ್ನು ನಮ್ಮ ಜಿಲ್ಲೆಯ ಚೆಕ್‌ಪೋಸ್ಟ್‌ಗಳಲ್ಲಿ ತಡೆದಿ ದ್ದೇವೆ. ಜನರ ಆರೋಗ್ಯ ದೃಷ್ಟಿಯಿಂದ ಬಿಗು ನಿಯಮಗಳನ್ನು ಕಟ್ಟು ನಿಟ್ಟಾಗಿ ಪಾಲಿಸಲಾಗುತ್ತಿದೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಮನೆಯಲ್ಲಿಯೇ ಉಳಿದುಕೊಂಡು ಲಾಕ್‌ಡೌನ್ ಆದೇಶ ಗಳನ್ನು ಪಾಲಿಸಬೇಕು. ಸೋಂಕು ಹೊಡೆದೋಡಿಸಲು ಜಿಲ್ಲಾಡಳಿತದ ಜತೆ ಎಲ್ಲರೂ ಸಹಕರಿಸಬೇಕು ಎಂದು ಅವರು ಮನವಿ ಮಾಡಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Medical Asist: ಪತ್ರಿಕಾ ವಿತರಕರಿಗೆ ವೈದ್ಯ ನೆರವು: 70 ವರ್ಷಕ್ಕೆ ವಯೋಮಿತಿ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.