ಕೋವಿಡ್ ಮುಕ್ತ ಜಿಲ್ಲೆಯಾಗಿ ಉಡುಪಿ :ಸೋಂಕು ಪೀಡಿತ ಮೂರನೇ ವ್ಯಕ್ತಿಯೂ ಬಿಡುಗಡೆ
Team Udayavani, Apr 19, 2020, 11:07 AM IST
ಉಡುಪಿ: ಕೋವಿಡ್ ಸೋಂಕು ತಗಲಿದ ಉಡುಪಿ ಜಿಲ್ಲೆಯ ಮೂರನೆಯ ವ್ಯಕ್ತಿಯೂ ಗುಣಮುಖರಾಗಿ ಶನಿವಾರ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಸೋಂಕಿನ ಹಾವಳಿ ಬಳಿಕ ಇದೇ ಮೊದಲ ಬಾರಿಗೆ ಉಡುಪಿ ಜಿಲ್ಲೆ ಯಾರೊಬ್ಬರೂ ಕೊರೊನಾ ಸೋಂಕಿತರಿಲ್ಲದ ಜಿಲ್ಲೆಯಾಗಿ ಮೂಡಿಬಂದಿದೆ.
ಉಡುಪಿ ಬಡಗಬೆಟ್ಟಿನವರಾದ ಸೋಂಕಿತರು ವೃತ್ತಿಯಲ್ಲಿ ಎಲೆಕ್ಟ್ರೀಶಿಯನ್. ಇವರು 31 ಜನರೊಂದಿಗೆ ಕೇರಳದ ತಿರುವನಂತಪುರಕ್ಕೆ ಎಲೆಕ್ಟ್ರಿಕಲ್ ಕೆಲಸಕ್ಕೆ ಹೋಗಿ ವಾಪಸಾಗುವಾಗ ಕೇರಳದಲ್ಲಿ ಕೋವಿಡ್ ಹಾವಳಿ ಜಾಸ್ತಿ ಇತ್ತು. ಹೀಗಾಗಿ ಇವರಿಗೆ ದ.ಕ. ಜಿಲ್ಲೆಯ ತಲಪಾಡಿಯಲ್ಲಿ ಬರಲು ಬಿಡಲಿಲ್ಲ. ಕೊನೆಗೆ ಉಡುಪಿಯಿಂದ ಆ್ಯಂಬುಲೆನ್ಸ್ ಕಳುಹಿಸಿ ತಂಡದಲ್ಲಿದ್ದ ಎಲ್ಲರನ್ನೂ ನೇರವಾಗಿ ಜಿಲ್ಲಾಸ್ಪತ್ರೆಗೆ ಮಾ. 27ರಂದು ಕ್ವಾರಂಟೈನ್‌ನಲ್ಲಿ ದಾಖಲಿಸಲಾಗಿತ್ತು. ಮಾ. 29ರಂದು ಇವರ ಗಂಟಲ ದ್ರವದ ವರದಿ ಪಾಸಿಟಿವ್ ಆಗಿ ಬಂದಿತ್ತು. ಬಳಿಕ ಇವರನ್ನು ಮಣಿಪಾಲ ಆಸ್ಪತ್ರೆಗೂ, ಎ. 1ರಿಂದ ಉಡುಪಿ ಡಾ| ಟಿಎಂಎ ಪೈ ಆಸ್ಪತ್ರೆಗೂ ದಾಖಲಿಸಲಾಯಿತು. ಇತ್ತೀಚೆಗೆ ಇವರ ಗಂಟಲ ದ್ರವ ಮತ್ತೂಮ್ಮೆ ಪಾಸಿಟಿವ್ ಆಗಿ ವರದಿ ಬಂದಿತ್ತು. ಶನಿವಾರ ಎರಡೂ ಗಂಟಲ ದ್ರವ ಪರೀಕ್ಷೆ ನೆಗೆಟಿವ್ ಆಗಿ ಬಂದ ಕಾರಣ ಜಿಲ್ಲಾಡಳಿತ ಅಪರಾಹ್ನ 2.55ಕ್ಕೆ ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಮತ್ತೆ 14 ದಿನಗಳ ಕ್ವಾರಂಟೈನ್‌ನಲ್ಲಿರುವಂತೆ ಸೂಚಿಸಿತು.
ಇವರೊಡನೆ ಇದ್ದ ಇತರರೆಲ್ಲರ ಗಂಟಲ ದ್ರವದ ಮಾದರಿ ನೆಗೆಟಿವ್ ವರದಿ ಬಂದಿತ್ತು. ಈಗಾಗಲೇ ಇಬ್ಬರು ಸೋಂಕಿತರು ಸೋಂಕುಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದರು. ಭಟ್ಕಳದ ಗರ್ಭಿಣಿಯೊಬ್ಬರು ಡಾ| ಟಿಎಂಎ ಪೈ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅವರ ಗಂಟಲ ದ್ರವದ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು ವರದಿಯನ್ನು ನಿರೀಕ್ಷಿಸಲಾಗುತ್ತಿದೆ.
8 ಮಂದಿ ದಾಖಲು
ಶನಿವಾರ ಒಟ್ಟು ಎಂಟು ಮಂದಿಯನ್ನು ಆಸ್ಪತ್ರೆ ಐಸೊಲೇಶನ್ ವಾರ್ಡ್‌ಗೆ ಸೇರಿಸಲಾಗಿದೆ. ಇವರಲ್ಲಿ ತೀವ್ರ ಉಸಿರಾಟ ಸಮಸ್ಯೆಯ ನಾಲ್ವರು ಪುರುಷರು, ಕೊರೊನಾ ಶಂಕಿತ ಒಬ್ಬ ಪುರುಷ, ಫೂÉ é ಜ್ವರದ ಇಬ್ಬರು ಪುರುಷರು, ಓರ್ವ ಮಹಿಳೆ ಇದ್ದಾರೆ. ಪ್ರಸ್ತುತ 56 ಮಂದಿ ಐಸೊಲೇಶನ್ ವಾರ್ಡ್‌ನಲ್ಲಿದ್ದಾರೆ. ಶನಿವಾರ ಒಂಬತ್ತು ಮಂದಿ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದು ಇದುವರೆಗೆ 213 ಮಂದಿ ಬಿಡುಗಡೆಗೊಂಡಿದ್ದಾರೆ.
ಶನಿವಾರ 29 ಮಂದಿಯ ಗಂಟಲ ದ್ರವದ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಇವರಲ್ಲಿ ಏಳು ಮಂದಿ ತೀವ್ರ ಉಸಿರಾಟದ ಸಮಸ್ಯೆಯವರು, ಫೂÉ é ಜ್ವರದ ನಾಲ್ವರು, ಹಾಟ್‌ಸ್ಪಾಟ್ ಸಂಪರ್ಕದ 18 ಮಂದಿ ಇದ್ದಾರೆ. ಇದು ವರೆಗೆ 868 ಜನರ ಮಾದರಿಗಳನ್ನು ಸಂಗ್ರ ಹಿಸಲಾಗಿದೆ. ಶನಿವಾರ ಬಂದ ಎಲ್ಲ 44 ವರದಿಗಳು ನೆಗೆಟಿವ್ ಆಗಿವೆ. 187 ಜನರ ವರದಿ ಬರಬೇಕಾಗಿದೆ.
ಶನಿವಾರ 231 ಜನರು ನೋಂದಣಿ ಮಾಡಿ ಕೊಂಡಿದ್ದು 116 ಮಂದಿ 28 ದಿನ ಗಳ, 76 ಜನರು 14 ದಿನಗಳ ನಿಗಾ ಪೂರೈಸಿದ್ದಾರೆ. 488 ಮಂದಿ ಹೋಂ ಕ್ವಾರಂಟೈನ್‌ನಲ್ಲಿದ್ದಾರೆ. ಶನಿವಾರ ನಾಲ್ವರು ಆಸ್ಪತ್ರೆ ಕ್ವಾರಂಟೈನ್‌ಗೆ ಸೇರಿದ್ದು ಪ್ರಸ್ತುತ 36 ಮಂದಿ ಕ್ವಾರಂಟೈನ್‌ನಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಆದಿ ಉಡುಪಿ: ಜುಗಾರಿ ಅಡ್ಡೆಗೆ ಪೊಲೀಸ್ ದಾಳಿ
Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ
Karkala: ನಿಟ್ಟೆಯಲ್ಲಿ ಬಾವಿಗೆ ಬಿದ್ದ ಒಂದು ವರ್ಷದ ಮರಿ ಚಿರತೆ ರಕ್ಷಣೆ
Mumbai: ಭಾಗವತಿಕೆ ಮಾಡುತ್ತಿದ್ದಾಗಲೇ ಎದೆನೋವು: ಅಸುನೀಗಿದ ಕುಕ್ಕೆಹಳ್ಳಿ ವಿಟ್ಠಲ ಪ್ರಭು
Udupi:ಗೀತಾರ್ಥ ಚಿಂತನೆ 103: ಪಂಡಿತರೆಂದರೇನು?ಅಥವ ಪಂಡಿತರೆಂದರೆ ಯಾರು?
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
India: ಅರ್ಮೇನಿಯಾಗೆ ದೇಶಿ ನಿರ್ಮಿತ ಪಿನಾಕಾ ರಾಕೆಟ್ ಪೂರೈಕೆ ಶುರು
Singapore: ಇಂದಿನಿಂದ ವಿಶ್ವ ಚೆಸ್: ಗುಕೇಶ್-ಲಿರೆನ್ ಮುಖಾಮುಖಿ
Mangaluru: ಅಕ್ರಮ ಮರಳುಗಾರಿಕೆ; ಪ್ರಶ್ನಿಸಿದ ಯುವಕನಿಗೆ ಗಂಭೀರ ಹಲ್ಲೆ
Congress Government: ಮೇಲ್ಮನೆ ನಾಮನಿರ್ದೇಶನ: ಕಾಂಗ್ರೆಸ್‌ನಲ್ಲಿ ಲಾಬಿ ಆರಂಭ
Maharashtra Election: ಅಘಾಡಿ ಸೋಲಿಗೆ ಉದ್ಧವ್,ಶರದ್ ಕಾರಣ: ಕಾಂಗ್ರೆಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.