ದೇಣಿಗೆ ಸ್ವೀಕೃತಿ ಕೇಂದ್ರಕ್ಕೆ ದಾನಿಗಳ ಕೊರತೆ
ಸ್ವೀಕೃತಿ ಕೇಂದ್ರಕ್ಕೆ ತೆರಳಲು ಮಾರ್ಗಸೂಚಿಗಳಿಲ್ಲ
Team Udayavani, Apr 19, 2020, 5:31 PM IST
ಸಾಂದರ್ಭಿಕ ಚಿತ್ರ
ಹುಬ್ಬಳ್ಳಿ: ಜಿಲ್ಲಾಡಳಿತ ವಿದ್ಯಾನಗರ ಬನಶಂಕರಿ ಬಡಾವಣೆ ಸಿದ್ದೇಶ್ವರ ಪಾರ್ಕ್ ಈಶ್ವರ ಗುಡಿ ಬಳಿ ಇರುವ ಬಸವ ಭವನದಲ್ಲಿ ಆರಂಭಿಸಿರುವ ಆಹಾರ ಧಾನ್ಯಗಳ ಸ್ವೀಕೃತಿ ಕೇಂದ್ರಕ್ಕೆ ದಾನಿಗಳೇ ಬರುತ್ತಿಲ್ಲ. ಅದಲ್ಲದೇಬೆಳಿಗ್ಗೆ 10-ಮಧ್ಯಾಹ್ನ 1 ಗಂಟೆಯವರೆಗೆ ಮಾತ್ರ ಕೇಂದ್ರ ತೆರೆದಿರುತ್ತದೆ. ಅಲ್ಲಿಗೆತೆರಳಲು ಸರಿಯಾದ ಮಾರ್ಗ ಸೂಚಿಗಳೇ ಇಲ್ಲ. ಹೀಗಾಗಿ ನಗರದ ಮಧ್ಯಭಾಗ ಹಾಗೂ ವಿವಿಧ ಭಾಗಗಳಲ್ಲಿ ಕೇಂದ್ರಗಳನ್ನುಆರಂಭಿಸಿದರೆ ಸೂಕ್ತ ಎಂಬುದು ಹಲವರ ಅನಿಸಿಕೆ.
ಕಾರ್ಮಿಕರಿಗೆ, ಬಡವರಿಗೆ, ನಿರ್ಗತಿಕರಿಗೆ ವಿವಿಧ ದಾನಿಗಳು ನೇರವಾಗಿ ಹೋಗಿ ಊಟ, ಆಹಾರಧಾನ್ಯಗಳನ್ನು ಹಂಚುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಗೆ ತೊಂದರೆ ಆಗಲಿದೆ ಎಂಬ ಉದ್ದೇಶದಿಂದ ಜಿಲ್ಲಾಡಳಿತ, ದೇಣಿಗೆ ಸಂಗ್ರಹ ಕೇಂದ್ರ ಆರಂಭಿಸಿತ್ತು. ಕೇಂದ್ರಕ್ಕೆ ದೇಣಿಗೆ ನೀಡಿದರೆ, ದಾನಿಗಳು ಸೂಚಿಸುವ ಪ್ರದೇಶ ಅಥವಾ ವ್ಯಕ್ತಿಗಳಿಗೆ ನೀಡಲಾಗುವುದೆಂದು ಜಿಲ್ಲಾಡಳಿತ ತಿಳಿಸಿತ್ತು. ಆದರೆ, ನಿರೀಕ್ಷಿತ ಪ್ರಮಾಣದಲ್ಲಿ ದೇಣಿಗೆ ಬರುತ್ತಿಲ್ಲ.
ಕಳೆದ 10 ದಿನಗಳಲ್ಲಿ 125ಕೆಜಿ ಅಕ್ಕಿ, 15 ಕೆಜಿ ತೊಗರಿ ಬೆಳೆ, 20 ಕೆಜಿ ಚಹಾ ಪುಡಿ, 10 ಕೆಜಿ ವೆಂಕಟೇಶ ರವಾ, 10 ಎಣ್ಣೆ ಪಾಕೀಟ್, 10 ಕೆಜಿ ಸಕ್ಕರೆ, 2 ಕೆಜಿ ಬೆಲ್ಲ, ಕಾರಪುಡಿ 200 ಗ್ರಾಂ 2 ಪಾಕೀಟ್, 10 ಪಾಕೀಟ್ ಚಹಾಪುಡಿ ಸಂಗ್ರಹವಾಗಿದೆ. ಅಕ್ಕಿ, ಖಾರಾ, ಉಪ್ಪು, ಎಣ್ಣೆ, ಚಹಾಪುಡಿ, ಸಕ್ಕರೆ, ಬೆಲ್ಲ ಸೇರಿ ಒಂದು ಕಿಟ್ ಸಿದ್ಧಪಡಿಸಬಹುದು. ಆದರೆ ಸ್ವೀಕೃತಿ ಕೇಂದ್ರದಲ್ಲಿ ಸಂಗ್ರಹವಾದ ದಾಸ್ತಾನು ನೋಡಿದರೆ ಒಂದು ಕಿಟ್ ಸಹ ಸಂಪೂರ್ಣ ಆಗಲ್ಲ.
ಚುನಾವಣೆ ವಾಸನೆ: ಈ ಹಿಂದೆ ಬಡಾವಣೆಗಳಲ್ಲಿ ಹಂಚುತ್ತಿದ್ದ ವಿವಿಧ ಯುವಕರ ತಂಡಗಳು ಇಂದು ಕಾಣುತ್ತಿಲ್ಲವಾಗಿವೆ. ಹು-ಧಾ ಮಹಾನಗರ ಪಾಲಿಕೆ ಚುನಾವಣೆ ದೃಷ್ಟಿಯಿಂದ ಕೆಲವರು ಪೈಪೋಟಿಗೆ ಬಿದ್ದವರಂತೆ ಹಂಚಿಕೆ ಮಾಡಿದರೆ ಎಂಬ ಅನುಮಾನ ಮೂಡಿಸುವಂತಿದೆ.
ದೂರವಾಯ್ತು ಕೇಂದ್ರ: ದೇಣಿಗೆ ಸ್ವೀಕೃತಿ ಕೇಂದ್ರ ದೂರವಾಗಿದೆ, ಯಾವುದೋ ಮೂಲೆಯಲ್ಲಿದೆ ಎಂಬ ಅನಿಸಿಕೆಗಳು ಕೇಳಿ ಬರುತ್ತಿವೆ. ಅದರ ಬದಲು ಜಿಲ್ಲಾಡಳಿತ ಪಾಲಿಕೆ ಮುಖ್ಯ ಕಚೇರಿಯ ಯಾವುದಾದರೂ ಒಂದು ಕೋಣೆ ಇಲ್ಲವೆ ಮಿನಿ ವಿಧಾನಸೌಧದ ಒಂದು ಕೋಣೆ ಬಳಸಿದರೆ ಅದು ಮಧ್ಯವರ್ತಿ ಸ್ಥಳವಾಗಲಿದೆ. ಅದೇ ರೀತಿ ಒಂದೇ ಕಡೆ ಮಾಡುವ ಬದಲು ಕೆಲ ಪ್ರದೇಶಗಳಲ್ಲಿ ಕೇಂದ್ರಗಳನ್ನು ಆರಂಭಿಸಿದರೆ, ದೇಣಿಗೆ ನೀಡುವವರಿಗೆ ಸುಲಭವಾಗಲಿದೆ. ಸಂಗ್ರಹ ಹೆಚ್ಚಲಿದೆ ಎಂಬ ಅಭಿಪ್ರಾಯವೂ ಇದೆ.
ಜಿಲ್ಲಾಡಳಿತದಿಂದ ತೆರೆದಿರುವ ಸ್ವೀಕೃತಿ ಕೇಂದ್ರಕ್ಕೆ ದಾನಿಗಳು ಬರದೇ ಇರುವುದು ಬೇಸರ ಮೂಡಿಸಿದೆ. ದಾನಿಗಳು ಸ್ವೀಕೃತಿ ಕೇಂದ್ರಕ್ಕೆ ಬರಲು ಸಮಸ್ಯೆ ಇದ್ದವರು ದೂ:0836-2358035, ಮೊ: 9945346340, 9535351887, 9484798367 ಈ ದೂರವಾಣಿ ಮೂಲಕ ಸಂಪರ್ಕಿಸಿದ್ದಲ್ಲಿ ನಮ್ಮವರೇ ಅವರ ಬಳಿ ಹೋಗಿ ವಸ್ತುಗಳನ್ನು ಸಂಗ್ರಹಿಸಿ ಅವಶ್ಯಕತೆ ಇರುವವರಿಗೆ ಅಥವಾ ಅವರು ಹೇಳಿದ ಸ್ಥಳಗಳಿಗೆ ವಿತರಿಸಲಾಗುತ್ತದೆ. -ಶಶಿಧರ ಮಾಡ್ಯಾಳ, ಶಹರ ತಹಶೀಲ್ದಾರ್
-ಬಸವರಾಜ ಹೂಗಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
CID Inquiry: ಪರಿಷತ್‌ನಲ್ಲಿ ನಡೆದ ಘಟನೆ ಎಂದು ಉಲ್ಲೇಖಿಸಿದ್ದು ತಪ್ಪು: ಬಸವರಾಜ ಹೊರಟ್ಟಿ
ಜೋಶಿ ಅವರಿಗೆ ನನ್ನ ಸಾಮರ್ಥ್ಯ ಗೊತ್ತಿಲ್ಲ… ಅಸಮರ್ಥ ಹೇಳಿಕೆಗೆ ತಿರುಗೇಟು ನೀಡಿದ ಪರಮೇಶ್ವರ್
Alnavar: ಟಿಟಿ- ಕ್ಯಾಂಟರ್ ನಡುವೆ ಭೀಕರ ಅಪಘಾತ; ಸ್ಥಳದಲ್ಲಿಯೇ ಮೂವರ ಸಾವು
Hubli: ಕಾಂಗ್ರೆಸ್‌ನಲ್ಲಿ ಈಗ ಇರುವವರೆಲ್ಲ ನಕಲಿ ಗಾಂಧಿಗಳು..: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಪದವು ಜಂಕ್ಷನ್- ಶರ್ಬತ್ ಕಟ್ಟೆ ರಸ್ತೆಗೆ ಅಗತ್ಯವಿದೆ ಫುಟ್‌ಪಾತ್
Padil: ಡಿಸಿ ಕಚೇರಿ ಸಂಕೀರ್ಣಕ್ಕೆ ಚಿನ್ನದ ಬಣ್ಣದ ರಾಷ್ಟ್ರ ಲಾಂಛನ
Uppunda: ಪಾಳು ಕೆರೆ ಈಗ ಈಜುಕೊಳ!; ಚೌಂಡಿ ಕೆರೆಗೆ ಊರಿನ ಯುವಕರಿಂದ ಕಾಯಕಲ್ಪ
Bajpe: ತಂಗುದಾಣ ತೆರವು, ಪ್ರಯಾಣಿಕರು ಅನಾಥ!
Perfect: ಎಡ್ ಶಿರನ್ ಹಾಡಿನಿಂದ ರಾಷ್ಟ್ರೀಯ ಸೆನ್ಸೇಶನ್ ಆದ ಉಡುಪಿಯ ಹುಡುಗ | Video
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.